ಹುಬ್ಬಳ್ಳಿ (ಜು. O8) : ಹುಬ್ಬಳ್ಳಿಯಲ್ಲಿ ನಡೆದ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ (Chandrashekhar Guruji) ಹತ್ಯೆ ಪ್ರಕರಣದ ತನಿಖೆ ತೀವ್ರಗೊಳಿಸಲಾಗಿದೆ. ಈಗಾಗಲೇ ಬಂಧನಕ್ಕೊಳಗಾಗಿ ಪೊಲೀಸ್ ಕಸ್ಟಡಿಯಲ್ಲಿರೋ ಇಬ್ಬರೂ ಆರೋಪಿಗಳು (Accused) ಪೊಲೀಸರ ಎದುರು ತಪ್ಪೊಪಿಕೊಂಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಹುಬ್ಬಳ್ಳಿಯ ವಿದ್ಯಾನಗರ ಪೊಲೀಸರಿಂದ ಇಬ್ಬರು ಹಂತಕರಿಗೆ ಫುಲ್ ಡ್ರೀಲ್ ನಡೆದಿದೆ. ಬೇನಾಮಿ ಆಸ್ತಿ ಜೊತೆಗೆ, ಗುರೂಜಿ ತಮಗೆ ನಿರಂತವಾಗಿ ನೀಡ್ತಿದ್ದ ಕಿರುಕುಳದಿಂದ ಬೇಸತ್ತು ಈ ಕೃತ್ಯ ನಡೆಸಿರೋದಾಗಿ ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ.
ಹೋಟೆಲ್ ಸಿಬ್ಬಂದಿಗೆ ಕ್ಲಾಸ್ ತೆಗೆದುಕೊಂಡಿದ್ದ ಎಡಿಜಿಪಿ!
ಎಡಿಜಿಪಿ ಅಲೋಕ್ ಕುಮಾರ್ (ADGP Alok Kumar) ಅವರು ಹುಬ್ಬಳ್ಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಹತ್ಯೆ ನಡೆದ ಸ್ಥಳಕ್ಕೆ ಎಡಿಜಿಪಿ ಅಲೋಕ್ ಕುಮಾರ್ ಭೇಟಿ ನೀಡಿದ್ದರು. ಹುಬ್ಬಳ್ಳಿಯ ಉಣಕಲ್ ಬಳಿಯ ಪ್ರೆಸಿಡೆಂಟ್ ಹೋಟೆಲ್ ಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಹತ್ಯೆಯ ಬಗ್ಗೆ ಮಾಹಿತಿ ಪಡೆದ ಅಲೋಕ್ ಕುಮಾರ್, ಹೋಟೆಲ್ ಸಿಬ್ಬಂದಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಹೋಟೆಲ್ ನ ಭದ್ರತಾ ಲೋಪದ ಬಗ್ಗೆ ಅಲೋಕ್ ಕುಮಾರ್ ಗರಂ ಆಗಿದ್ದಾರೆ.
ಗುರೂಜಿ ಕೊನೆಯುಸಿರೆಳೆದ ಸ್ಥಳದಲ್ಲೇ ಹೋಮ, ಹವನ!
ಇನ್ನೂ ನಿನ್ನೆ ಎಡಿಜಿಪಿ ಅಲೋಕ್ ಕುಮಾರ್ ಪ್ರೆಸಿಡೆಂಟ್ ಹೋಟೆಲ್ಗೆ ಭೇಟಿ ನೀಡಿದ ಬಳಿಕ, ಇಂದು ಹೋಟೆಲ್ ಆಡಳಿತ ಮಂಡಳಿ ದೈವದ ಮೊರೆ ಹೋಗಿದ್ದಾರೆ. ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಹತ್ಯೆ ನಡೆದ ಪ್ರೆಸಿಡೆಂಟ್ ಹೋಟೆಲ್ನಲ್ಲಿ ಪೂಜೆ ನಡೆಯುತ್ತಿದೆ. ಅದು ಗುರೂಜಿ ಹತ್ಯೆ ನಡೆದ ಸ್ಥಳದಲ್ಲೇ ಹೋಮ ನಡೆಯುತ್ತಿದೆ. ಗುರೂಜಿ ಹತ್ಯೆ ಬಳಿಕ ಹೋಟೆಲ್ನಲ್ಲಿ ಭಯದ ವಾತಾವರಣ ಸೃಷ್ಟಿಯಾಗಿತ್ತು. ಈ ಭಯವನ್ನು ದೂರ ಮಾಡಲು ಈಗ ಆಡಳಿತ ಮಂಡಳಿ ಗುರೂಜಿ ಹತ್ಯೆಯಾದ ಸ್ಥಳದಲ್ಲೇ ಹೋಮ ನಡೆಸುತ್ತಿದೆ.
ಇದನ್ನೂ ಓದಿ: ಗುರೂಜಿ ಹತ್ಯೆ, ಇಬ್ಬರು ಹಂತಕರಷ್ಟೇ ಅಲ್ಲ ಮತ್ತಷ್ಟು ಶಾಮೀಲಾಗಿರೋ ಶಂಕೆ!
ಹೋಟೆಲ್ನಲ್ಲಿ ಸುದರ್ಶನ ಹೋಮ!
ಹುಬ್ಬಳ್ಳಿಯ ಖ್ಯಾತ ಪುರೋಹಿತರಿಂದ ಹೋಮ ನಡೆಯುತ್ತಿದೆ. ಸುದರ್ಶನ ಹೋಮ ಮಾಡಿಸಿ ಹೋಟೆಲ್ನಲ್ಲಿರುವ ಭಯದ ವಾತಾವರಣವನ್ನು ದೂರ ಮಾಡಲಾಗುತ್ತಿದೆ. ಇಬ್ಬರು ಪುರೋಹಿತರಿಂದ ಮಂತ್ರಘೋಷ ನಡೆದಿದೆ. ಹುಬ್ಬಳ್ಳಿಯ ಉಣಕಲ್ ಕೆರೆ ಬಳಿಯ ದಿ ಪ್ರೆಸಿಡೆಂಟ್ ಹೋಟೆಲ್ನಲ್ಲಿ ಚಂದ್ರಶೇಖರ್ ಗುರೂಜಿ ಅವರ ಬರ್ಬರ ಹತ್ಯೆ ನಡೆದಿತ್ತು.
ಮತ್ತಷ್ಟು ಜನ ಶಾಮೀಲಾಗಿರೋ ಶಂಕೆ!
ಚಂದ್ರಶೇಖರ್ ಗುರೂಜಿ (Chandrashekhar Guruji) ಹತ್ಯೆ ಪ್ರಕರಣದಲ್ಲಿ ಮೇಲ್ನೋಟಕ್ಕೆ ಇಬ್ಬರಿಂದ ಕೊಲೆ ಕೃತ್ಯ ನಡೆದಿದೆ ಎನಿಸಿದರೂ ಇದರ ಹಿಂದೆ ಮತ್ತಷ್ಟು ಜನ ಶಾಮೀಲಾಗಿರೋ ಶಂಕೆ ವ್ಯಕ್ತವಾಗಿದೆ. ಹುಬ್ಬಳ್ಳಿಯ (Hubballi) ವಿದ್ಯಾನಗರ ಠಾಣೆ ಪೊಲೀಸರು (Police) ಆರೋಪಿಗಳಾದ ಮಹಾಂತೇಶ್ ಶಿರೂರ ಮತ್ತು ಮಂಜುನಾಥನ ವಿಚಾರಣೆ ತೀವ್ರಗೊಳಿಸಿದ್ದಾರೆ. ಬೇನಾಮಿ ಆಸ್ತಿ ಕಲಹವೇ ಕೊಲೆಗೆ ಮುಖ್ಯ ಕಾರಣ ಎಂಬ ಮಾಹಿತಿ ಸಿಕ್ಕಿದೆ. ಮಹಾಂತೇಶ್ ಸೂಚಿಸಿದ್ದ ವ್ಯಕ್ತಿಗಳ ಹೆಸರಲ್ಲಿ ಚಂದ್ರಶೇಖರ್ ಗುರೂಜಿ ಬೆನಾಮಿ ಆಸ್ತಿ ಮಾಡಿದ್ದ. ಮಹಾಂತೇಶ್ ಕೆಲಸಕ್ಕಿದ್ದ ಸಂದರ್ಭದಲ್ಲಿ ಬೇನಾಮಿ ಆಸ್ತಿ ನೋಂದಣಿ ಪ್ರಕ್ರಿಯೆ ನಡೆದಿತ್ತು.
ಇದನ್ನೂ ಓದಿ: ಚಂದ್ರಶೇಖರ್ ಗುರೂಜಿ ಹಂತಕರಿಗೆ ಫುಲ್ ಡ್ರಿಲ್; ಆರೋಪಿಗಳು ಬಾಯ್ಬಿಟ್ರು ಭಯಾನಕ ಸತ್ಯ
ಹುಬ್ಬಳ್ಳಿಯ ಕೆಲ ಸ್ಟಾರ್ ಹೋಟೆಲ್ ಗಳಿಗೂ ಭೇಟಿ
ಪ್ರೆಸಿಡೆಂಟ್ ಹೋಟೆಲ್ ನಂತರ ಹುಬ್ಬಳ್ಳಿಯ ಕೆಲ ಸ್ಟಾರ್ ಹೋಟೆಲ್ ಗಳಿಗೂ ಅಲೋಕ್ ಕುಮಾರ್ ಭೇಟಿ ನೀಡಿದ್ದರು. ಸ್ಟಾರ್ ಹೋಟೆಲ್ ಗಳಲ್ಲಿ ವಿವಿಐಪಿಗಳೇ ಹೆಚ್ಚಾಗಿ ವಾಸ್ತವ್ಯ ಮಾಡುವ ಹಿನ್ನೆಲೆಯಲ್ಲಿ ಅಲ್ಲಿನ ಭದ್ರತೆಯ ಕುರಿತು ಪರಿಶೀಲನೆ ಮಾಡಿ, ಹೋಟೆಲ್ ಗಳಿಂದ ಮಾಹಿತಿ ಪಡೆದರು. ಪ್ರೆಸಿಡೆಂಟ್ ಹೋಟೆಲ್ ನಲ್ಲಿ ಆದಂತೆ ಬೇರೆ ಕಡೆ ಅಹಿತಕರ ಘಟನೆ ನಡೆಯದಿರುವಂತೆ ಅಗತ್ಯ ಭದ್ರತೆ ಕಲ್ಪಿಸುವಂತೆ ಹೋಟೆಲ್ ಆಡಳಿತ ಮಂಡಳಿಗೆ ಅಲೋಕ್ ಕುಮಾರ್ ಸೂಚನೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ