ಬೀದರ್ : ಅದು ಮಹಾನ್ ಪವಾಡ ಪುರುಷನ ಜಾತ್ರೆ (Fair) , ಆ ಜಾತ್ರೆಯಲ್ಲಿ ಹೋಳಿಗೆ (Holige) ತುಪ್ಪದ್ದೇ ಭರ್ಜರಿ ಮೃಷ್ಟಾನ ಭೋಜನ ಆ ಜಾತ್ರೆಗೆ ಬಂದವರು ಹೋಳಿಗೆ ತುಪ್ಪದ ಊಟ ಮಾಡದೆ ಹೋಗುವುದಿಲ್ಲ. ಹೀಗಾಗಿ ಆ ಜಾತ್ರೆಯು ಹೋಳಿಗೆ ತುಪ್ಪದ ಜಾತ್ರೆ ಎಂದೆ ಪ್ರಸಿದ್ದಿ ಪಡೆದಿದೆ. ಪವಾಡ ಪುರುಷ ರೆವಪಯ್ಯನ ಭರ್ಜರಿ ಜಾತ್ರೆ. ಖೆಡ ಗ್ರಾಮದಲ್ಲಿ(Kheda Village) ನಡೆದ ಪವಾಡ ಪುರುಷನ ಜಾತ್ರೆ. ರೆವಪಯ್ಯನ ಜಾತ್ರೆಯಲ್ಲಿ ಸಾವಿರಾರು ಭಕ್ತರ ದಂಡು ಆಗಮಿಸಿತ್ತು. ಜಾತ್ರೆಗಳೆಂದ್ರೆನೆ ಹಾಗೆ ಅಲ್ಲಿ ಏನಾದ್ರು ಒಂದು ವಿಶೇಷತೆ ಇದ್ದೆ ಇರುತ್ತದೆ. ಹಾಗೆ ಇಲ್ಲಿ ಒಂದು ವಿಶೇಷತೆ ಇದೆ ತವೆಲ್ಲರು ಹೋಳಿಗೆ, ಹುಗ್ಗಿ ಊಟದಲ್ಲಿ ಚಮಚದಿಂದ ತುಪ್ಪ ಬಡಿಸಿಕೊಂಡು ಊಟ ಮಾಡುವುದನ್ನು ನೊಡಿರುವುದು ಸರ್ವೆ ಸಾಮಾನ್ಯ.
ಹಾಲಿನಂತೆ ತುಪ್ಪವನ್ನು ಹಾಕ್ತಾರೆ
ಬಟ್ಟಲಿನಲ್ಲಿ ಹಾಲಿನಂತೆ ಧಾರಾಳವಾಗಿ ಹೋಳಿಗೆ ಊಟದ ಜೊತೆಗೆ ತುಪ್ಪ ಊಟ ಮಾಡುವುದು ಊಹೆಗೂ ಅಸಾಧ್ಯವಾಗಿದೆ. ಇಲ್ಲಿ ಮಾತ್ರ ಜನ ಹೊಟ್ಟೆ ತುಂಬ ತುಪ್ಪ-ಹೋಳಿಗೆ ಸವಿದು ಸಂತೃಪ್ತರಾಗುತ್ತಾರೆ. ಬೀದರ್ ಜಿಲ್ಲೆಯ ಬಾಲ್ಕಿ ತಾಲೂಕಿನ ಖೇಡ ಗ್ರಾಮದ ರೇವಪ್ಪಯ್ಯ ಶರಣರ ಜಾತ್ರೆಯಲ್ಲಿ ಕಂಡುಬಂದ ದೃಶ್ಯವಿದು. ನಾವದಗಿ ಗ್ರಾಮದ ರೇವಪ್ಪಯ್ಯ ಸ್ವಾಮಿಯವರು ಒಂದು ಸಲ ಜಾತ್ರೆಯಲ್ಲಿ ಊಟ ಮಾಡುವಾಗ ತುಪ್ಪ ಕಡಿಮೆ ಬಿದ್ದಿತೆಂದು ತೀಳಿದು. ಅಲ್ಲಿಯೇ ಇದ್ದ ತೆರೆದ ಬಾವಿಯ ನೀರನ್ನು ಶರಣರು ತುಪ್ಪವಾಗಿ ಪರಿವರ್ತಿಸಿ, ಭಕ್ತರಿಗೆ ಉಣ ಬಡಿಸಿದ್ದರು ಎಂಬ ಪ್ರತೀತಿಯಿದೆ. ಹೀಗಾಗಿ ಈ ಪವಾಡದಿಂದ ಜಾತ್ರೆಯಲ್ಲಿ ಹೋಳಿಗೆ ತುಪ್ಪ ಊಟದ ಪರಂಪರೆ ಮುಂದವರಿದಿದೆ ಎಂದು ಹೇಳುತ್ತಾರೆ. ಖೆಡ ಗ್ರಾಮದ ರೆವಪ್ಪಯ್ಯನ ಜಾತ್ರೆ ಅಂದ್ರೆ ಅದು ಹೋಳಿಗೆ ತುಪ್ಪದ ಊಟಕ್ಕೆ ಪ್ರಸಿದ್ದಿಯನ್ನು ಪಡೆದ ಜಾತ್ರೆಯಾಗಿದೆ.
ಇದನ್ನೂ ಓದಿ: Anjanadri Hill: ಅಂಜನಾದ್ರಿ ಬೆಟ್ಟಕ್ಕೆ 430 ಮೀಟರ್ ರೋಪ್ ವೇ ನಿರ್ಮಿಸಲು ಸಿಎಂ ಬೊಮ್ಮಾಯಿ ಸೂಚನೆ
ಕ್ವಿಂಟಲ್ ಗಟ್ಟಲೆ ತುಪ್ಪ
ಹೀಗಾಗಿ ನೆರೆದ ಭಕ್ತರು ಮನತಣಿಯುವಷ್ಟು ತಿಂದು ಸಂಭ್ರಮಿಸಿದರು. ಮನೆಯವರಿಗೆ ಹಾಗೂ ಬಂದ ಅತಿಥಿ, ನೆಂಟರಷ್ಟರಿಗೆ ಹೋಳಿಗೆ ತುಪ್ಪ ಊಟ ಬಡಿಸುವುದು ಕಷ್ಟವಾಗಿರುವಾ ಈ ಕಾಲದಲ್ಲಿಖೇಡ ಜಾತ್ರೆ ಗ್ರಾಮದ ರೆವಪಯ್ಯನ ಜಾತ್ರೆಯಲ್ಲಿ ಭಕ್ತರು ಇತಿಮಿತಿಯಿಲ್ಲದೆ ಹಾಲಿನಂತೆ ತುಪ್ಪ ಸುರಿವಿಕೊಂಡು ಊಟ ಮಾಡಿರುವುದು ವಿಶೇಷ…
ಇನ್ನು ರೇವಪ್ಪಯ್ಯ ಶರಣರಿಗೆ ತುಪ್ಪ ಬಲು ಇಷ್ಟವಂತೆ ಹೀಗಾಗಿ ಭಕ್ತರಿಗೂ ಅಡುಗೆ ಮಾಡಿಸಿ ಉಣಬಡಿಸುತ್ತಿದ್ದರಿಂದ ಶರಣರು ಬಿನ್ನಹವಾಗಿದ್ದಾರೆಂದು ಕರೆಯುತ್ತಿದ್ದರಂತೆ. ಜಾತ್ರೆಯಲ್ಲಿ ಕ್ವಿಂಟಲ್ ಗಟ್ಟಲೆ ತುಪ್ಪ, ಕಡಲೆ, ತೊಗರಿ ಬೇಳೆ ಬೆರೆಸಿ ಹೂರಣ ಸಿದ್ಧಪಡಿಸಿ ಬಂದ ಭಕ್ತರಿಗೆ ಊಟ ಬಡಿಸಲಾಯಿತು.
ಒಂದು ಕಡೆ ಹೋಳಿಗೆ ರಾಶಿ. ಸಾವಿರಾರೂ ಸಂಖ್ಯೆಯಲ್ಲಿ ಭಕ್ತರು ಹೋಳಿಗೆ ಸವೆದರೆ, ಮತ್ತೊಂದು ಕಡೆಯಲ್ಲಿ ಮಹಿಳೆಯರು ಹೋಳಿಗೆ ತಯಾರಿಸುವಲ್ಲಿ ತೊಡಗಿದ್ದರು. ಹೋಳಿಗೆ ತಯಾರಿ ದಿನವೀಡಿ ಸಾಲಲ್ಲಿ ನಿಂತೂ ಹೋಳಿಗೆ ತುಪ್ಪ ಬಡಿಸಿಕೊಂಡು ಊಟವನ್ನು ಸವಿದರು. ರೇವಪ್ಪಯ್ಯ ಶರಣರ ದೇಗುಲದಲ್ಲಿ ವಿಶೇಷ ಪೂಜೆ ನೆರವೇರಿತು. ನಸುಕಿನಿಂದಲೇ ದೇಗುಲಕ್ಕೆ ತೆರಳಿದ ಭಕ್ತರು ದಿನವೀಡಿ ಕಾಯಿ ಕರ್ಪೂರ, ಅರ್ಪಿಸಿ ದರ್ಶನ ಪಡೆದರು. ನೆರೆಯ ರಾಜ್ಯದಿಂದಲೂ ಭಕ್ತರೂ ಕೂಡಾ ಆಗಮಿಸಿದ್ದರು. ದೇಗುಲದ ಪ್ರವೇಶದ್ವಾರ ವಿವಿಧ ಬಗೆಯ ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಭಜನೆ, ಪ್ರಾರ್ಥನೆ ಹಾಗೂ ವಿವಿಧ ಕಾರ್ಯಕ್ರಮಗಳು ನೆರವೇರಿದವು… ರೆವಪಯ್ಯ ಶರಣರಿಗೆ ಹೋಳಿಗೆ ಅತಿ ಪ್ರಿಯ ಪ್ರಸಾದವಾಗಿತ್ತು. ಈ ಹಿನ್ನೆಲೆ ಜಾತ್ರೆಗೆ ಆಗಮಿಸಿದ ಭಕ್ತರಿಗೆ ಪ್ರಸಾದದ ರೂಪದಲ್ಲಿ ಹೋಳಿಗೆ ತುಪ್ಪದ ಊಟವನ್ನು ಊಣಬಡಿಸಲಾಯಿತು.
ವರದಿ: ಚಮನ್ ಹೊಸಮನಿ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ