Hogenakkal Dispute: ಬಿಳಿಗುಂಡ್ಲು ಜಲಮಾಪನಾ ಕೇಂದ್ರ ಸ್ಥಳಾಂತರ ಹಾಗೂ ಜಂಟಿ ಸರ್ವೆಗೆ ಹೆಚ್ಚಿದ ಒತ್ತಡ

ಕರ್ನಾಟಕಕ್ಕೆ ಸೇರಬೇಕು ಈ ನಡುಗುಡ್ಡೆಯನ್ನು  ಒತ್ತುವರಿ ಮಾಡಿಕೊಂಡಿರುವ ತಮಿಳುನಾಡು ಸರ್ಕಾರ ಇಲ್ಲಿ ಪ್ರವಾಸೋದ್ಯಮ ಚಟುವಟಿಕೆ ನಡೆಸುತ್ತಿದೆ. ಒತ್ತುವರಿ ಮಾಡಿಕೊಂಡಿರುವ ನಡುಗಡ್ಡೆಯಲ್ಲೇ ತಮಿಳುನಾಡಿನಿಂದ ವೀಕ್ಷಣಾಗೋಪುರ, ತೂಗುಸೇತುವೆ, ಸ್ನಾನಘಟ್ಟ ನಿರ್ಮಾಣ ಮಾಡಲಾಗಿದೆ ಎಂಬ ಅಪಾದನೆ ಇದೆ

ಹೊಗೇನಕಲ್

ಹೊಗೇನಕಲ್

  • Share this:
ಚಾಮರಾಜನಗರ (ಜ.25) ತಮಿಳುನಾಡು ಸರ್ಕಾರ ಹೊಗೇನಕಲ್ (Hogenakkal ) ಎರಡನೇ ಹಂತದ ಕುಡಿಯುವ ನೀರಿನ ಯೋಜನೆ ಘೋಷಿಸಿರುವ ಬೆನ್ನಲ್ಲೇ ಹೊಗೇನಕಲ್ ಬಳಿ ಇರುವ ಬಿಳಿಗುಂಡ್ಲು ಜಲಮಾಪನಾ ಕೇಂದ್ರವನ್ನು  ಕಾವೇರಿ ನದಿಯು ಮೆಟ್ಟೂರು ಜಲಾಶಯ ಪ್ರವೇಶಿಸುವ  ಕರ್ನಾಟಕದ ಗಡಿ  ಪ್ರದೇಶಕ್ಕೆ ಸ್ಥಳಾಂತರಿಸಬೇಕು ಹಾಗು ಹೊಗೆನಕಲ್ ನಲ್ಲಿ ಜಂಟೀ ಸರ್ವೆ ನಡೆಸಿ ತಮಿಳುನಾಡಿನ ಒತ್ತುವರಿ ತೆರವುಗೊಳಿಸಬೇಕು ಎಂಬ ಒತ್ತಾಯ ಹೆಚ್ಚಾಗಿದೆ

ಕಾವೇರಿ ನೀರು ಹಂಚಿಕೆ ಸಂಬಂಧ "ಸಾಮಾನ್ಯ ಜಲವರ್ಷದಲ್ಲಿ ತಮಿಳುನಾಡಿಗೆ 177.25 ಟಿಎಂಸಿ ನೀರನ್ನು ಕರ್ನಾಟಕದಿಂದ  ಬಿಡುಗಡೆ ಮಾಡಬೇಕು" ಎಂದು 2018 ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಕರ್ನಾಟಕದಿಂದ ಬಿಡುಗಡೆ ಮಾಡಲಾಗುವ  ಕಾವೇರಿ ನೀರಿನ ಪ್ರಮಾಣವನ್ನು ಹೊಗೇನಕಲ್ ಬಳಿ ಇರುವ ಬಿಳಿಗುಂಡ್ಲು  ಜಲಮಾಪನಾ ಕೇಂದ್ರದಲ್ಲಿ  ಲೆಕ್ಕಹಾಕಲಾಗುತ್ತದೆ.  ಆದರೆ ಬಿಳಿಗುಂಡ್ಲು ಜಲಮಾಪನಾ ಆದ ನಂತರವೂ  ಕಾವೇರಿ ನದಿಗೆ ಸಾಕಷ್ಟು ಪ್ರಮಾಣದ ನೀರು ಕರ್ನಾಟಕದಿಂದ ಸೇರ್ಪಡೆಯಾಗುತ್ತಿದೆ.

ಮೆಟ್ಟೂರು ಹಿನ್ನೀರಿನ ಪ್ರದೇಶಕ್ಕೆ ಜಲ ಮಾಪನ ಕೇಂದ್ರ ಸ್ಥಳಾಂತರಿಸಲು ಮನವಿ

ಕಾವೇರಿಯು ಬಿಳಿಗುಂಡ್ಲು ಜಲಮಾಪನಾ ಕೇಂದ್ರದ ನಂತರ  ತಮಿಳುನಾಡು  ಪ್ರವೇಶ ಮಾಡುವವರೆಗೆ   ಗೋಪಿನತ್ತಂ ಜಲಾಶಯ, ಕೊಕ್ಕರೆ ಹಳ್ಳ, ಪಾಲಾರ್ ಹಳ್ಳ,  ಸೇರಿದಂತೆ ಬೆಟ್ಟಗುಡ್ಡ ಗಳಿಂದ ಹರಿದು ಬರುವ  26 ಹಳ್ಳಗಳ ನೀರು ನದಿಗೆ ಸೇರ್ಪಡೆ ಯಾಗುತ್ತದೆ . ವಾರ್ಷಿಕ ವಾಗಿ ಹೀಗೆ  10 ರಿಂದ 12 ಟಿಂಎಂಸಿ ನೀರು ಲೆಕ್ಕಕ್ಕೆ ಸಿಗದೆ ತಮಿಳುನಾಡಿನ ಪಾಲಾಗುತ್ತಿದೆ. ಹಾಗಾಗಿ ಮೆಟ್ಟೂರು ಹಿನ್ನೀರಿನ ಪ್ರದೇಶಕ್ಕೆ ಜಲ ಮಾಪನ ಕೇಂದ್ರ ಸ್ಥಳಾಂತರಿಸಬೇಕು ಹೀಗೆ ಮಾಡುವುದರಿಂದ ಕರ್ನಾಟಕಕ್ಕೆ ವಾರ್ಷಿಕ ವಾಗಿ 10 ರಿಂದ 12 ಟಿಎಂಸಿ ನೀರು ಉಳಿಯಲಿದೆ ಎನ್ನುತ್ತಾರೆ ಹೊಗೇನಕಲ್ ಉಳಿಸಿ ಹೋರಾಟ ಸಮಿತಿಯ ಮುಖಂಡರೂ ಆದ ಪರಿಸರವಾದಿ ಪುಣಜನೂರು ದೊರೆಸ್ವಾಮಿ.

ತಮಿಳುನಾಡಿನಿಂದ ಭೂ ಒತ್ತುವರಿ ಆರೋಪ

ಇದಲ್ಲದೆ ಹೊಗೇನಕಲ್ ಜಲಪಾತದಲ್ಲಿ ತಮಿಳುನಾಡಿನಿಂದ ಭೂ ಒತ್ತುವರಿ ಆರೋಪ ಇದ್ದು ಜಂಟೀ ಸರ್ವೆ ಪುನರಾರಂಭಕ್ಕೆ ಮತ್ತೆ  ಒತ್ತಾಯ ಶುರುವಾಗುದೆ. ಹೊಗೇನಕಲ್ ಜಲಪಾತದಲ್ಲಿ ರುವ 400 ಎಕರೆ ವಿಸ್ತೀರ್ಣ ದ ನಡುಗುಡ್ಡೆ ಕರ್ನಾಟಕಕ್ಕೆ ಸೇರಬೇಕು ಈ ನಡುಗುಡ್ಡೆಯನ್ನು  ಒತ್ತುವರಿ ಮಾಡಿಕೊಂಡಿರುವ ತಮಿಳುನಾಡು ಸರ್ಕಾರ ಇಲ್ಲಿ ಪ್ರವಾಸೋದ್ಯಮ ಚಟುವಟಿಕೆ ನಡೆಸುತ್ತಿದೆ. ಒತ್ತುವರಿ ಮಾಡಿಕೊಂಡಿರುವ ನಡುಗಡ್ಡೆಯಲ್ಲೇ ತಮಿಳುನಾಡಿನಿಂದ ವೀಕ್ಷಣಾಗೋಪುರ, ತೂಗುಸೇತುವೆ, ಸ್ನಾನಘಟ್ಟ ನಿರ್ಮಾಣ ಮಾಡಲಾಗಿದೆ ಎಂಬ ಅಪಾದನೆ ಇದೆ

ಇದನ್ನು ಓದಿ: ಚುನಾವಣೆ ಹೊತ್ತಿನಲ್ಲಿ M.B Patilಗೆ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ!

ಎರಡು ತಂಡಗಳನ್ನು ರಚನೆ

ಹೊಗೇನಕಲ್ ಜಲಪಾತದಲ್ಲಿ ನಡುಗುಡ್ಡೆಯನ್ನು‌ ಅತಿಕ್ರಮಿಸಿಕೊಂಡಿರುವ  ತಮಿಳುನಾಡು ಕ್ರಮ ವಿರೋಧಿಸಿ 2006 ರಲ್ಲಿ ಚಾಮರಾಜನಗರ  ಜಿಲ್ಲಾಭಿವೃದ್ಧಿ ಹೋರಾಟ ಸಮಿತಿಯ ನೂರಾರು ಕಾರ್ಯ ಕರ್ತರು ಪ್ರತಿಭಟನೆ ನಡೆಸಿದ್ದರು. ಜಂಟೀ ಸರ್ವೆಗೆ ಆಗ್ರಹಿಸಿ ಹೋರಾಟ ಮಾಡಿದ್ದರು. ಈ ಹಿನ್ನಲೆಯಲ್ಲಿ ಮೈಸೂರಿನಲ್ಲಿರುವ ಭೂ ಮಾಪನದ ತರಬೇತಿ ಕೇಂದ್ರದಲ್ಲಿ ಎರಡೂ ರಾಜ್ಯಗಳ ಅಧಿಕಾರಿಗಳ ಸಭೆ ನಡೆದು  ಜಂಟೀ ಸರ್ವೆ ಮಾಡಲು ನಿರ್ಧರಿಸಲಾಗಿತ್ತು. ಇದಕ್ಕಾಗಿ ಎರಡು ತಂಡಗಳನ್ನು ರಚಿಸಲಾಗಿತ್ತು.

ಇದನ್ನು ಓದಿ: SSLC ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ; ಮಾ. 28ರಿಂದ ಪರೀಕ್ಷೆ

ಹೊಗೇನಕಲ್ ಗೆ ರಾಜ್ಯದ ಅಧಿಕಾರಿಗಳು ಸರ್ವೆಗೆ ಹೋದರೂ ಸಹ ತಮಿಳುನಾಡಿನ ಅಧಿಕಾರಿಗಳು ಸಹಕರಿಸಲಿಲ್ಲ, ಹಾಗಾಗಿ ಜಂಟೀ ಸರ್ವೆ ಕಾರ್ಯ ಸ್ಥಗಿತಗೊಂಡಿತ್ತು, ಆದರೆ ಕರ್ನಾಟಕ ಸರ್ಕಾರವೂ ಈ ಬಗ್ಗೆ ಗಂಭೀರ ಕ್ರಮ ವಹಿಸಲಿಲ್ಲ ರಾಜ್ಯ ಎಂದು ಚಾಮರಾಜನಗರ ಜಿಲ್ಲಾಭಿವೃದ್ಧಿ ಹೋರಾಟ ಸಮಿತಿಯ ಕೆ.ವೀರಭದ್ರಸ್ವಾಮಿ  ಆರೋಪಿಸಿದ್ದಾರೆ

ತಮಿಳುನಾಡು ಸರ್ಕಾರ ಜಾರಿ ಮಾಡಲು ಹೊರಟಿರುವ ಹೊಗೇನಕಲ್ ಎರಡನೇ ಹಂತದ ಕುಡಿಯುವ ನೀರಿನ ಯೋಜನೆಗೆ ಅವಕಾಶ ನೀಡಬಾರದು, ಕೂಡಲೇ ಜಂಟೀ ಸರ್ವೆ ನಡೆಸಿ ತಮಿಳುನಾಡಿನ ಅತಿಕ್ರಮಣ ತೆರವುಗೊಳಿಸಬೇಕು, ಇಲ್ಲದಿದ್ದಲ್ಲಿ ಹೊಗೇನಕಲ್ ನಲ್ಲೇ ಠಿಕಾಣಿ ಹೂಡಿ ಪ್ರತಿ ಭಟನೆ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ
Published by:Seema R
First published: