ಕೆ ಸುಧಾಕರ್​ ಸಚಿವರಾಗುತ್ತಿದ್ದಂತೆ ಕಂದವಾರ ಕರೆಗೆ ಹರಿದ ಎಚ್​ಎನ್​ ವ್ಯಾಲಿ ನೀರು; ಜಿಲ್ಲೆಯ ಜನರಲ್ಲಿ ಸಂತಸ

ಅಂತರ್ಜಲ ಮಟ್ಟ ವೃದ್ಧಿಸುವ ಉದ್ದೇಶದಿಂದಾಗಿ ಬೆಂಗಳೂರಿನ ಹೆಬ್ಬಾಳ-ನಾಗವಾರ ತ್ಯಾಜ್ಯ ನೀರನ್ನು ಸಂಸ್ಕರಿಸಿ, ಜಿಲ್ಲೆಯ 44 ಕೆರೆಗಳಿಗೆ ನೀರು ಹರಿಸಲು ಸಿದ್ದರಾಮಯ್ಯ ಸರ್ಕಾರ ಮುಂದಾಗಿತ್ತು. ಈ ಮೂಲಕ ಜಿಲ್ಲೆಯ ಜನರ ನೀರಿನ ದಾಹ ತಣಿಸಲು ನಿರ್ಧರಿಸಲಾಗಿತ್ತು. 

ಕೆರೆಗೆ ಪೂಜೆ ಸಲ್ಲಿಸಿದ ನೂತನ ಸಚಿವ ಕೆ ಸುಧಾಕರ್​​

ಕೆರೆಗೆ ಪೂಜೆ ಸಲ್ಲಿಸಿದ ನೂತನ ಸಚಿವ ಕೆ ಸುಧಾಕರ್​​

  • Share this:
ಚಿಕ್ಕಬಳ್ಳಾಪುರ (ಫೆ.06): ಇಲ್ಲಿನ ಜನರ ಬಹುದಿನದ ಕನಸು ನನಸಾಗಿದೆ. ಹೆಬ್ಬಾಳ-ನಾಗವಾರದ  ಸಂಸ್ಕರಿಸಿದ ನೀರು ಕಂದವಾರ ಕೆರೆ ತಲುಪಿದ್ದು ಜಿಲ್ಲೆಯ ಜನರಲ್ಲಿ ಹರ್ಷ ಮೂಡಿದೆ. ವಿಶೇಷ ಎಂದರೇ ಜಿಲ್ಲೆಯ ಶಾಸಕ ಕೆ. ಸುಧಾಕರ್​ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸದ ದಿನವೇ ಈ ಕರೆಗೆ ನೀರು ಹರಿದಿರುವುದು. 

ಅಂತರ್ಜಲ ಮಟ್ಟ ವೃದ್ಧಿಸುವ ಉದ್ದೇಶದಿಂದಾಗಿ ಬೆಂಗಳೂರಿನ ಹೆಬ್ಬಾಳ-ನಾಗವಾರ ತ್ಯಾಜ್ಯ ನೀರನ್ನು ಸಂಸ್ಕರಿಸಿ, ಜಿಲ್ಲೆಯ 44 ಕೆರೆಗಳಿಗೆ ನೀರು ಹರಿಸಲು ಸಿದ್ದರಾಮಯ್ಯ ಸರ್ಕಾರ ಮುಂದಾಗಿತ್ತು. ಈ ಮೂಲಕ ಜಿಲ್ಲೆಯ ಜನರ ನೀರಿನ ದಾಹ ತಣಿಸಲು ನಿರ್ಧರಿಸಲಾಗಿತ್ತು.

k sudhakar 1
ಕೆರೆಗೆ ಹರಿಯುತ್ತಿರುವ ನೀರು

883 ಕೋಟಿ ವೆಚ್ಚದ ಈ ಯೋಜನೆ ಮೂಲಕ 114 ಪೈಪ್​ ಲೈನ್​ ಅಳವಡಿಕೆ ಮಾಡುವ ಮೂಲಕ ಇಲ್ಲಿನ ಕೆರೆಗೆ ನೀರು ಹರಿಸಲು ಯೋಜನೆ ರೂಪಿಸಲಾಗಿತ್ತು. ಈ ಪೈಪ್​ ಲೈನ್​ ಮೂಲಕ ಜಿಲ್ಲೆಯ 44 ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ಈ ಹಿಂದೆ ಸಿಎಂ ಆಗಿದ್ದ ಸಿದ್ದರಾಮಯ್ಯ ತಿಳಿಸಿದ್ದರು.

ಈ ಯೋಜನೆ ಪೂರ್ಣಗೊಂಡು ಇಂದು ಮೊದಲಬಾರಿ ಕಂದವಾರ ಕೆರೆಗೆ ನೀರು ಹರಿದಿದ್ದು, ಜಿಲ್ಲೆಯ ಜನರಲ್ಲಿ ಸಂತಸ ಮೂಡಿದೆ. ಈ ಮೂಲಕ ಅಂತರ್ಜಲ ಕುಸಿದಿರುವ ಜಿಲ್ಲೆಯಲ್ಲಿ ರೈತರ ಕೃಷಿ ಚಟುವಟಿಕೆಗೆ ಅನುಕೂಲವಾಗಲಿದೆ. ಇನ್ನು ಕರೆಗೆ ನೀರು ಹರಿಯುತ್ತಿರುವ ವಿಷಯ ತಿಳಿದಾಕ್ಷಣ ರೈತರು ಇಲ್ಲಿಗೆ ತಂಡೋಪತಂಡವಾಗಿ ಆಗಮಿಸಿ, ಈ ಸಂತಸದ ಕ್ಷಣ ಕಣ್ತುಂಬಿಕೊಂಡರು.

ಇದನ್ನು ಓದಿ: ಕಾಡಂಚಿನ ಗ್ರಾಮಕ್ಕೆ ಬಂದ ತಾಯಿಯಿಂದ ಬೇರ್ಪಟ್ಟ ಮರಿಆನೆ; ಗ್ರಾಮಸ್ಥರಿಂದ ಆರೈಕೆ

ಇನ್ನು ಇಲ್ಲಿನ ಶಾಸಕ ಕೆ ಸುಧಾಕರ್​ ಸಚಿವರಾದ ದಿನವೇ ಈ ಕರೆಗೆ ನೀರು ಹರಿಸಲು, ಬಿಜೆಪಿ ಸರ್ಕಾರದ ಮೇಲೆ ಒತ್ತಡ ಹೇರಿದ್ದರು.
First published: