• Home
  • »
  • News
  • »
  • state
  • »
  • Gummalapura: ಬೆಂಗಳೂರಿನ ಸನಿಹದಲ್ಲೇ ಇದೆ ಪಾರ್ವತಿಯ ತವರು, ವರ್ಷಕ್ಕೊಮ್ಮೆ ಬರುತ್ತಾಳೆ ಗೌರಮ್ಮ!

Gummalapura: ಬೆಂಗಳೂರಿನ ಸನಿಹದಲ್ಲೇ ಇದೆ ಪಾರ್ವತಿಯ ತವರು, ವರ್ಷಕ್ಕೊಮ್ಮೆ ಬರುತ್ತಾಳೆ ಗೌರಮ್ಮ!

ಗುಮ್ಮಳಾಪುರದ ಗೌರಮ್ಮ

ಗುಮ್ಮಳಾಪುರದ ಗೌರಮ್ಮ

ಬೆಂಗಳೂರು (Bengaluru) ಹೊರವಲಯ ಆನೇಕಲ್ (Anekal) ತಾಲ್ಲೂಕಿನ ಗಡಿಯಲ್ಲಿರುವ ಗ್ರಾಮವೇ ಕಲಿಯುಗದ ಭೂ ಕೈಲಾಸ ಖ್ಯಾತಿಯ ಶ್ರೀಮದ್ ರಂಭಾಪುರಿ (Rambapuri) ಗುಮ್ಮಳಾಪುರ. ಇದೊಂದು ಪವಿತ್ರ ಸ್ಥಳ. ನೂರೊಂದು ಬಾವಿ, ಕೆರೆ, ಕುಂಟೆ, ಕಲ್ಪವೃಕ್ಷ, ಗುಡಿ, ಗೋಪುರ, ದೇಗುಲಗಳನ್ನು ಹೊಂದಿರುವ ಶಕ್ತಿದೇವತೆ ಗುಮ್ಮಳಾಪುರ ಗೌರಮ್ಮನ ತವರುಮನೆ. ಈ ಬಗ್ಗೆ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಮುಂದೆ ಓದಿ ...
  • Share this:

ಆನೇಕಲ್: ಅದು ಕಲಿಯುಗದ (Kaliyug) ಭೂ ಕೈಲಾಸ (Bhoo Kailasa). ಅಲ್ಲಿ ನೂರೊಂದು ಬಾವಿ, ಕೆರೆ, ಕುಂಟೆ, ಕಲ್ಪವೃಕ್ಷ, ಗುಡಿ, ಗೋಪುರ, ದೇಗುಲಗಳು (Temple) ಇವೆ. ಅದು ಸಾಕ್ಷಾತ್ ಶಿವನ (Shiva) ಸತಿ ಪಾರ್ವತಿಯ (Parvati) ತವರೂರು. ವರುಷಕ್ಕೊಮ್ಮೆ ಅಲ್ಲಿಗೆ ಬರ್ತಾಳೆ ಗಜಗೌರಿ. ತವರಲ್ಲಿ ತಿಂಗಳು ಉಳಿದು ಮರಳುತ್ತಾಳೆ ಕೈಲಾಸಕ್ಕೆ.. ಇಷ್ಟಕ್ಕೂ ಅಂತಹ ಪುರಾಣ ಪ್ರಸಿದ್ದ ಊರಿನ ಹೆಸರು ಗುಮ್ಮಳಾಪುರ (Gummalapur). ಬೆಂಗಳೂರು (Bengaluru) ಹೊರವಲಯ ಆನೇಕಲ್ (Anekal) ತಾಲ್ಲೂಕಿನ ಗಡಿಯಲ್ಲಿರುವ ಗ್ರಾಮವೇ ಕಲಿಯುಗದ ಭೂ ಕೈಲಾಸ ಖ್ಯಾತಿಯ ಶ್ರೀಮದ್ ರಂಭಾಪುರಿ (Rambapuri) ಗುಮ್ಮಳಾಪುರ. ಇದೊಂದು ಪವಿತ್ರ ಸ್ಥಳ. ನೂರೊಂದು ಬಾವಿ, ಕೆರೆ, ಕುಂಟೆ, ಕಲ್ಪವೃಕ್ಷ, ಗುಡಿ, ಗೋಪುರ, ದೇಗುಲಗಳನ್ನು ಹೊಂದಿರುವ ಶಕ್ತಿದೇವತೆ ಗುಮ್ಮಳಾಪುರ ಗೌರಮ್ಮನ ತವರುಮನೆ. ಈ ಬಗ್ಗೆ ಕುತೂಹಲಕಾರಿ ಮಾಹಿತಿ ಇಲ್ಲಿದೆ.


ಅಕ್ಕನಿಗಾಗಿ ಹಂಬಲಿಸಿದ ತಮ್ಮ


ಪುರಾಣದ ಪ್ರಕಾರ ನೂರಾರು ವರ್ಷಗಳ ಹಿಂದೆ ಇಲ್ಲಿ ಶರಣರು ವಾಸವಿದ್ರು. ಅದರಲ್ಲಿ ತಾಯಿಗೆ ಒಬ್ಬನೇ ಮಗ. ಆತ ಗುರುಕುಲದಲ್ಲಿ ಗೌರಿ ಹಬ್ಬಕ್ಕೆ ರಜೆ ಕೇಳಿದಕ್ಕೆ ನಿನಗೆ ಅಕ್ಕತಂಗಿಯಿಲ್ಲ ಏತಕ್ಕೆ ರಜೆ ಎಂದು ಸಹಪಾಠಿಗಳು ಹಂಗಿಸಿದರಂತೆ. ಇದರಿಂದ ನೊಂದ ಬಾಲಕ ಮನೆಗೆ ಬಂದವನೇ ತನಗೆ ಅಕ್ಕ ಬೇಕು ಎಂದು ಹಠ ಹಿಡಿಯುತ್ತಾನೆ. ಇಲ್ಲದ ಅಕ್ಕ ಎಲ್ಲಿ ತರುವುದು ಎಂದಾಗ, ಹಠ ತೊಟ್ಟು ಅಕ್ಕನನ್ನು ಕರೆತರದ ಹೊರತು ಮನೆಗೆ ಬರುವುದಿಲ್ಲ ಎಂದು ತಾಯಿ ಬಳಿ ತಂಗಳು ಬುತ್ತಿ ಕಟ್ಟಿಸಿಕೊಂಡು ಕಾಡುಮೇಡು ಅಲೆಯುತ್ತಾನೆ.


ಪಾರ್ವತಿಯನ್ನೇ ಅಕ್ಕ ಎಂದುಕೊಂಡ ಬಾಲಕ


ಕೊನೆಗೆ ನಿತ್ರಾಣಗೊಂಡು ಮೂರು ಬಾರಿ ಕೂಗುತ್ತೆನೆ ಬರದಿದ್ದರೆ ಬೆಟ್ಟದಿಂದ ಬಿದ್ದು ಸಾಯುತ್ತೆನೆ ಎಂದು ಜೋರಾಗಿ ಅಕ್ಕ... ಅಕ್ಕ ಎಂದು ಕೂಗುತ್ತಿರುತ್ತಾನೆ. ಇದೆ ಸಮಯದಲ್ಲಿ ಕಲಿಯುಗದ ಸಂಚಾರದಲ್ಲಿದ್ದ ಶಿವಪಾರ್ವತಿ ಬೆಟ್ಟದಿಂದ ಬೀಳುತ್ತಿದ್ದ ಬಾಲಕನನ್ನು ಕಂಡು ಪಾರ್ವತಿ ತನ್ನ ಸೆರಗಿನಲ್ಲಿ ಹಿಡಿದು ರಕ್ಷಿಸುತ್ತಾಳೆ. ರಕ್ಷಿಸಿದ ಪಾರ್ವತಿಯನ್ನೇ ಬಾಲಕ ತನ್ನ ಅಕ್ಕ ಎಂದು ಮನೆಗೆ ಕರೆದೊಯ್ಯುತ್ತಾನೆ ಎಂಬ ಪುರಾಣ ಕಥೆ ಇದೆ.


ಇದನ್ನೂ ಓದಿ: Miracle: ಅನಂತಶಯನನ ಪಾದದಡಿ ಉದ್ಭವಿಸುತ್ತಾಳೆ ಗಂಗೆ! ಲಕ್ಷ್ಮೀವೆಂಕಟೇಶ್ವರನ ಪವಾಡಕ್ಕೆ ಕೈಮುಗಿದ ಭಕ್ತರು


ಅಂದಿನಿಂದ ಪಾರ್ವತಿ ಗೌರಿ ರೂಪದಲ್ಲಿ ಗುಮ್ಮಳಾಪುರಕ್ಕೆ ಬರುತ್ತಾಳೆ. ತಿಂಗಳು ಕಾಲ ತವರುಮನೆಯಲ್ಲಿ ಉಪಚಾರ ಪಡೆದು ಕೈಲಾಸಕ್ಕೆ ಹಿಂದಿರುಗುತ್ತಾಳೆ ಎಂಬ ಪ್ರತೀತಿ ಇದೆ. ಎಂದು ದೇವಾಲಯದ ಕುಲಸ್ಥ ಮಹಾದೇವಯ್ಯ ತಿಳಿಸಿದ್ದಾರೆ.


ವರ್ಷಕ್ಕೊಮ್ಮೆ ಆಗಮಿಸುವ ಗೌರಿ


ಇನ್ನು ವರ್ಷಕ್ಕೊಮ್ಮೆ ತವರಿಗೆ ಆಗಮಿಸುವ ಗೌರಿಗೆ ಪ್ರತಿದಿನವು ಇಷ್ಟವಾದ ಫಲಪುಷ್ಪಗಳನ್ನು ನೀಡಿ ಉಪಚರಿಸುವುದರಿಂದ ಗಂಡನ ಮನೆಗೆ ತಿಂಗಳಾದ್ರು ಹೋಗಲಿಲ್ಲ ಎಂದು ಕೋಪಗೊಂಡ ಶಿವ ಗಣೇಶ, ನಂದಿ,ವೀರಭಧ್ರನನ್ನು ಕಳುಹಿಸುತ್ತಾನೆ. ಯಾರು ಬಾರದ ಕಾರಣ ಕೊನೆಗೆ ತಾನೇ ಗುಮ್ಮಳಾಪುರಕ್ಕೆ ಆಗಮಿಸಿ ಗೌರಿಯನ್ನು ಕರೆದೊಯ್ಯುತ್ತಾನೆ. ಜೊತೆಗೆ ವರ್ಷಕ್ಕೊಮ್ಮೆ ಗೌರಿ ತವರು ಮನೆಗೆ ಆಗಮಿಸುವುದನ್ನು ಸಹಿಸದ ಶಿವ ಎರಡು ಬಾರಿ ಗಮ್ಮಳಾಪುರನ್ನು ಕೈಲಾಸಕ್ಕೆ ಹೊತ್ತೊಯ್ದಿದ್ದ ಎಂಬ ಪ್ರತೀತಿಯು ಜನಜನಿತವಾಗಿದೆ.


ಹೊರ ರಾಜ್ಯದಿಂದಲೂ ಭಕ್ತರ ಆಗಮನ


ಅಂದಹಾಗೇ ಇಲ್ಲಿ ಮನೆ ಮಗಳಂತೆ ಗೌರಿಯನ್ನು ತಿಂಗಳಿಗು ಹೆಚ್ಚು ಕಾಲ ಸುತ್ತಮುತ್ತಲ ಹಳ್ಳಿ ಸೇರಿದಂತೆ ಕರ್ನಾಟಕ ತಮಿಳುನಾಡು ಆಂದ್ರಪ್ರದೇಶದಿಂದ ಬರುವ ಭಕ್ತರು ಅದ್ರಲ್ಲು ವಿಶೇಷವಾಗಿ ಮಹಿಳೆಯರು ಪೂಜಿಸುತ್ತಾರೆ. ಮಾತ್ರವಲ್ಲದೆ ಸೀರೆ, ಕುಪ್ಪಸ, ಅಕ್ಕಿ ಸೇರಿದಂತೆ ಸಿರಿದಾನ್ಯಗಳನ್ನು ಮಡಿಲು ತುಂಬಿ ತಮ್ಮ ಇಷ್ಟಾರ್ಥಗಳನ್ನು ಸಿದ್ಧಿಸು, ಕಷ್ಟಕಾರ್ಪಣ್ಯಗಳನ್ನು ದೂರ ಮಾಡು ಎಂದು ಬೇಡಿಕೊಳ್ಳುತ್ತಾರೆ. ಕೊನೆಗೆ ತಿಂಗಳು ಕಳೆದು ಆರು ದಿನಕ್ಕೆ ಅದ್ದೂರಿಯಾಗಿ ಜಾತ್ರೆ ಮಾಡಿ ಅಂದು ಸಾವಿರಾರು ಭಕ್ತರ ಸಮ್ಮುಖದಲ್ಲಿ ಗೌರಿಯನ್ನು ಜಲಾಧಿವಾಸ ಮಾಡುವ ಮೂಲಕ ತವರಿಗೆ ಕಳುಹಿಸುತ್ತಾರೆ.


ಗೌರಮ್ಮನ ವಿಸರ್ಜಿಸಿದ ಸ್ಥಳದಲ್ಲೇ ಸಿಗುತ್ತೆ ಮೂಗುತಿ


ಅಂದಹಾಗೇ ಜಲಾಧಿವಾಸಗೊಂಡ ಕೆರೆಯಲ್ಲಿ ಶ್ರವಣಮಾಸದ ಹೊತ್ತಿಗೆ ತಾಯಿ ಮೂರ್ತಿಯ ಪೀಠ, ಮೂಗುತಿ, ತಾಳಿ ಊರಿನ ಆಗಸನಿಗೆ ದೊರೆಯಬೇಕು. ಇಲ್ಲವಾದ್ರೆ ಗೌರಮ್ಮನ ಹಬ್ಬ ಮತ್ತು ಜಾತ್ರೆ ಮಾಡುವುದಿಲ್ಲ ಎನ್ನುತ್ತಾರೆ ಗ್ರಾಮದ ಹಿರಿಯ ನಂಜುಂಡಸ್ವಾಮಿ ತಿಳಿಸಿದ್ದಾರೆ. ಕಳೆದ ವರ್ಷ ಗೌರಮ್ಮನನ್ನು ವಿಸರ್ಜಿಸಿದ ಸ್ಥಳದಲ್ಲೇ ಪೀಠ ಸಮೇತ ಮೂಗುತಿ, ತಾಳಿ ಸಿಕ್ಕ ಬಳಿಕ ಕೆರೆಯಿಂದ ಮಣ್ಣನ್ನು ತಂದು ಸುಂದರವಾದ ಗೌರಮ್ಮನನ್ನು ತಯಾರಿಸಿ ಅಲಂಕಾರಿಸುತ್ತಾರೆ.


ಮಹಿಳೆಯರಿಂದ ಮಡಿಲಕ್ಕಿ ಅರ್ಪಣೆ


ಹರಕೆ ಹೊತ್ತುಕೊಂಡು ಇಲ್ಲಿಗೆ ಬರುವ ಮಹಿಳೆಯರು ತಮ್ಮ ಮನೆ ಮಗಳಂತೆ ತಾಯಿ ಗೌರಿಗೆ ಮಡಿಲಕ್ಕಿ ಅರ್ಪಿಸುತ್ತಾರೆ. ಆನಾದಿ ಕಾಲದಿಂದಲು ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ಜೊತೆಗೆ ಇಲ್ಲಿ ಹೊತ್ತ ಹರಕೆ ಈಡೇರುತ್ತದೆ. ಬಂದಂತಹ ಭಕ್ತರಿಗೆ ಶುಭವಾಗುತ್ತದೆ. ಗೌರಿ ಮಹಿಮೆ ಅಪಾರ ಎನ್ನುತ್ತಾರೆ ಇಲ್ಲಿಗೆ ಆಗಮಿಸಿದ್ದ ಭಕ್ತೆ ಸರಸ್ವತಮ್ಮ.
ಒಟ್ಟಿನಲ್ಲಿ ತಾಯಿ ಗೌರಮ್ಮ ಗಂಡನ ಮನೆಗೆ ವಾಪಸ್ ಹೊರಡುವ ದಿನ ದುಖಃದ ಸಂಕೇತವಾಗಿ ಮಳೆ ಬರುತ್ತದೆ.


ಇದನ್ನೂ ಓದಿ: Temple: ದೇವಸ್ಥಾನಕ್ಕೆ ಹೇಗೆ ಹೋಗಬೇಕು? ಮಾಂಸಾಹಾರ ತಿಂದು ದೇವರ ದರ್ಶನ ಮಾಡಬಹುದೇ?


ಜೊತೆಗೆ ಇಲ್ಲಿಯವರಗೆ ಮಳೆ ಬಾರದ ಇತಿಹಾಸವೇ ಇಲ್ಲ ಎನ್ನುವ ಇಲ್ಲಿನ ಜನ ಆಗಿಂದಾಗ್ಗೆ ಇಲ್ಲಿ ಕೆಲವೊಂದು ಪವಾಡಗಳು ಇಂದಿಗು ನಡೆಯುತ್ತಿರುವುದಕ್ಕೆ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದು ಗುಮ್ಮಳಾಪುರ ಗೌರಮ್ಮನ ಮಹಿಮೆಯೆಂದರೇ ಅತಿಶಯೋಕ್ತಿಯಲ್ಲ.ಇಲ್ಲಿಗೆ ತಾಯಿ ಎಂದು ಬರುವ ಎಲ್ಲರಿಗು ದೇವಿ ಅವರ ಇಷ್ಟಾರ್ಥ ಈಡೇರಿಸುತ್ತಾಳೆ ಎಂಬುದು ಇಂದಿಗು ಇಲ್ಲಿನ ಭಕ್ತರಲ್ಲಿರುವ ಆಪಾರ ನಂಬಿಕೆ.

Published by:Annappa Achari
First published: