Chikkamagaluru: ಮಾವ, ಅಳಿಯನ ಜಗಳದಲ್ಲಿ ದಾರಿ ಕಾಣದ ಸ್ಮಶಾನ; ಇಲ್ಲಿಯ ಜನರದ್ದು ಸತ್ತ ಮೇಲೆಯೂ ಹೋರಾಟ

ಹಿರೇಕಾನವಂಗಲ ಗ್ರಾಮದ ದಲಿತ ಕುಟುಂಬಕ್ಕೆ ಸೇರಿದ ಕರಿಯಪ್ಪ ಎಂಬವರು ಮೃತಪಟ್ಟಿದ್ದು ಸ್ಮಶಾನಕ್ಕೆ ಹೋಗಲು ದಾರಿಯಿಲ್ಲದ ಪರಿಣಾಮ ಮೃತರ ಕುಟುಂಬಸ್ಥರು, ಗ್ರಾಮಸ್ಥರು ಮೊಳಕಾಲುದ್ದ ಕೆಸರಲ್ಲೇ ಶವ ಹೊತ್ತು ಸಾಗಿದ್ದು ಎಲ್ಲರ ಮನಕಲಕುವಂತೆ ಮಾಡಿದೆ.

ಟ್ರ್ಯಾಕ್ಟರ್ ಅಡ್ಡ ನಿಲ್ಲಿಸಿ ಪ್ರತಿಭಟನೆ

ಟ್ರ್ಯಾಕ್ಟರ್ ಅಡ್ಡ ನಿಲ್ಲಿಸಿ ಪ್ರತಿಭಟನೆ

  • Share this:
ಚಿಕ್ಕಮಗಳೂರು : ಸ್ಮಶಾನಕ್ಕೆ ಹೋಗುವ ದಾರಿಗಾಗಿ (Burial Ground Road) ರಸ್ತೆಯಲ್ಲಿ ಶವವಿದ್ದ ಟ್ರಾಕ್ಟರ್ ಅಡ್ಡ ನಿಲ್ಲಿಸಿ ಪ್ರತಿಭಟನೆ ನಡೆಸಿರುವ ಮನಕಲಕುವ ಘಟನೆ ಹಿರೇಕಾನವಂಗಲದಲ್ಲಿ ನಡೆದಿದೆ. ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಹಿರೇಕಾನವಂಗಲ (Hirekanavangal, Chikkamagaluru) ಗ್ರಾಮದಲ್ಲಿ ದಲಿತ ಸಮುದಾಯದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು ಸ್ಮಶಾನಕ್ಕೆ ಹೋಗುವ ದಾರಿಯಲ್ಲಿ ಖಾಸಗಿ ವ್ಯಕ್ತಿಗಳು ಉಳಿಮೆ ಮಾಡಿದ್ದು ಸ್ಮಶಾನಕ್ಕೆ ಹೋಗಲು ದಾರಿಯಿಲ್ಲದೆ ಪರದಾಡುವಂತಾಗಿದ್ದು, ಇದರಿಂದ ಮನನೊಂದ ಗ್ರಾಮಸ್ಥರು ರಸ್ತೆಯಲ್ಲೇ ಶವವಿದ್ದ (Dead Body) ಟ್ರ್ಯಾಕ್ಟರ್ (Tractor) ಅಡ್ಡ ನಿಲ್ಲಿಸಿ ಪ್ರತಿಭಟಿಸಿದರು. ತಹಶೀಲ್ದಾರ್‌ಗೆ ಕಳೆದ ಒಂದು ವರ್ಷದಿಂದಲೂ ಮನವಿ ಸಲ್ಲಿಸುತ್ತಾ ಬಂದಿದ್ದೇವೆ. ಆದರೂ ಕೂಡಾ ಏನೂ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು (Protest) ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ತಕ್ಷಣ ಅಜ್ಜಂಪುರ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರತಿಭಟನಾನಿರತರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು,  ಟ್ರಾಫಿಕ್ ಕ್ಲಿಯರ್ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಕಳೆದ 10 ವರ್ಷದಿಂದ ಸ್ಮಶಾನದ ದಾರಿಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿದ್ದರೂ ಸಹ ಇನ್ನೂ ನ್ಯಾಯ ದೊರಕಿಲ್ಲ ಎಂಬುದು ಹಿರೇಕಾನವಂಗಲ ಗ್ರಾಮಸ್ಥರ ಅಳಲಾಗಿದೆ.

ಸ್ಮಶಾನ ಇದೆ, ಆದ್ರೆ ದಾರಿ ಇಲ್ಲ

ಗ್ರಾಮದ ಸರ್ವೇ ನಂ.10 ರಲ್ಲಿ ಬರುವ 10.36 ಎಕರೆ ತುರುಮಂದೆ, ಸರ್ವೇ ನಂ. 27ರಲ್ಲಿ ಬರುವ 19.27 ಎಕರೆ ಜಾಡನ ಕಟ್ಟೆ, ಸರ್ವೇ ನಂ. 62 ರಲ್ಲಿ 3.27 ಎಕರೆ ಸ್ಮಶಾನವಿದೆ. ಈ ಎಲ್ಲಾ ಸರ್ಕಾರಿ ಜಮೀನುಗಳಿಗೆ ಹೋಗಬೇಕಾರೆ ಈ ದಾರಿಯಲ್ಲೇ ಹೋಗಬೇಕಾಗಿದೆ. ಆದರೆ ಪ್ರಮುಖವಾಗಿ ಬೇಕಾಗಿರುವ ದಾರಿಯೇ ಇಲ್ಲದಂತಾಗಿದೆ.

Hirekanavangala villagers protest for burial ground road vctv mrq
ಗ್ರಾಮಸ್ಥರ ಪ್ರತಿಭಟನೆ


ಖಾಸಗಿ ವ್ಯಕ್ತಿಗಳಿಬ್ಬರು ತಮ್ಮ ಒಳಜಗಳದಿಂದ ಸಾರ್ವಜನಿಕರಿಗೆ ದಾರಿ ಇಲ್ಲದಂತೆ ಮಾಡಿದ್ದಾರೆ. ಇಬ್ಬರ ಜಗಳದಲ್ಲಿ ಊರ ಮಂದಿಗೆ ಸ್ಮಶಾನದ ದಾರಿ ಇಲ್ಲದಂತಾಗಿದೆ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕುತ್ತಿದ್ದಾರೆ.

ಇದನ್ನೂ ಓದಿ:  BS Yediyurappa: ಇವತ್ತಿನಿಂದ ನಿಮ್ಮಾಟವೆಲ್ಲಾ ನಿಲ್ಲುತ್ತಪ್ಪ, ಸಿದ್ದರಾಮಯ್ಯ, ಡಿಕೆಶಿಗೆ ಬಿಎಸ್​​ವೈ ಟಾಂಗ್!

ಇಲ್ಲಿನ ಜನರದ್ದು ಸಾವಿನ ಬಳಿಕವೂ ಹೋರಾಟ

ಗ್ರಾಮದಲ್ಲಿ ಸರಿ ಸುಮಾರು 250 ಮನೆಗಳಿವೆ. ಲಿಂಗಾಯತರು, ಸವಿತಾ ಸಮಾಜ, ವೈಷ್ಣವ ಸಮಾಜ, ಕುಂಬಾರ, ಹಾಗೂ ದಲಿತ ಸಮುದಾಯಗಳಿವೆ. ಈ ಗ್ರಾಮಕ್ಕೆ ಇರುವುದು ಒಂದೇ ಸ್ಮಶಾನ. ಇದರಲ್ಲಿಯೂ 1 ಎಕರೆ ಒತ್ತುವರಿಯಾಗಿದೆ. ಒತ್ತುವರಿ ಒಂದು ಕಡೆಯಾದರೆ ದಾರಿ ಇಲ್ಲದಿರುವುದು ಮತ್ತೊಂದು ಸಮಸ್ಯೆಯಾಗಿದೆ.

Hirekanavangala villagers protest for burial ground road vctv mrq
ಗ್ರಾಮಸ್ಥರ ಪ್ರತಿಭಟನೆ


ಈ ಊರಿನ ಜನ ಬದುಕಿದ್ದಾಗ ಸಮಸ್ಯೆಗಳ ಜೊತೆ ಹೋರಾಡುವುದಲ್ಲದೆ ಸಾವಿನ ಬಳಿಕ ಸ್ಮಶಾನದ ದಾರಿಗಾಗಿ ಮೃತರ ಕುಟುಂಬಸ್ಥರು ಹೋರಾಟ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಉತ್ತಮ ರಸ್ತೆಗೆ ಗ್ರಾಮಸ್ಥರ ಆಗ್ರಹ

ತುರುಮಂದೆ, ಜಡಕನಕಟ್ಟೆ, ಸ್ಮಶಾನ ಹಾಗೂ ಗ್ರಾಮದ 250 ಎಕರೆಗೂ ಹೆಚ್ಚು ಕೃಷಿ ಭೂಮಿಯಿದ್ದು. ಇವೆಲ್ಲವಕ್ಕೂ ಕೂಡ ಇದೇ ಮಾರ್ಗದಲ್ಲಿ ಹೋಗಬೇಕಾಗಿರುವುದರಿಂದ ಸಂಬಂಧಪಟ್ಟ ಇಲಾಖೆಯವರು ಕೂಡಲೇ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಬೇಕು. ನಕಾಶೆಯಲ್ಲಿರುವಂತೆ ದಾರಿ ಬಿಡಿಸಿಕೊಟ್ಟು ಸ್ಮಶಾನದ ಅಭಿವೃದ್ಧಿ ಹಾಗೂ ಶಾಶ್ವತವಾಗಿ ಒಂದು ಉತ್ತಮ ರಸ್ತೆ ಮಾಡಿಕೊಡುವಂತೆ ಒತ್ತಾಯಿಸಿದ್ದಾರೆ.

ಮೊಳಕಾಲುದ್ದ ನೀರಲ್ಲಿ ಶವ ಹೊತ್ತ ಸ್ಥಳೀಯರು

ಹಿರೇಕಾನವಂಗಲ ಗ್ರಾಮದ ದಲಿತ ಕುಟುಂಬಕ್ಕೆ ಸೇರಿದ ಕರಿಯಪ್ಪ ಎಂಬವರು ಮೃತಪಟ್ಟಿದ್ದು ಸ್ಮಶಾನಕ್ಕೆ ಹೋಗಲು ದಾರಿಯಿಲ್ಲದ ಪರಿಣಾಮ ಮೃತರ ಕುಟುಂಬಸ್ಥರು, ಗ್ರಾಮಸ್ಥರು ಮೊಳಕಾಲುದ್ದ ಕೆಸರಲ್ಲೇ ಶವ ಹೊತ್ತು ಸಾಗಿದ್ದು ಎಲ್ಲರ ಮನಕಲಕುವಂತೆ ಮಾಡಿದೆ.

ರಾಜ್ಯ ಹೆದ್ದಾರಿಯಲ್ಲಿ ಪ್ರತಿಭಟನೆ ಸಂಚಾರ ಅಸ್ತವ್ಯಸ್ಥ

ಬೀರೂರು-ಅಜ್ಜಂಪುರ ಮಾರ್ಗವಾಗಿ ದಾವಣಗೆರೆಗೆ ಹೋಗುವ ರಸ್ತೆಯಲ್ಲಿ 300ಕ್ಕೂ ಹೆಚ್ಚು ಜನ ರಸ್ತೆಯಲ್ಲಿ ಶವವಿದ್ದ ಟ್ರ್ಯಾಕ್ಟರ್ ಅಡ್ಡ ನಿಲ್ಲಿಸಿ ಸಂಚರಿಸುವ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದ್ದರಿಂದ ವಾಹನಗಳು ನಿಂತಲ್ಲೇ ನಿಂತು ಟ್ರಾಫಿಕ್ ಜಾಮ್ ಆಗಿತ್ತು. ಇದರಿಂದ ವಾಹನ ಸವಾರರು ಪರದಾಡಬೇಕಾದ ಪರಿಸ್ಥಿತಿ ಉಂಟಾಗಿತ್ತು.

Hirekanavangala villagers protest for burial ground road vctv mrq
ಗ್ರಾಮಸ್ಥರ ಪ್ರತಿಭಟನೆ


ಒತ್ತುವರಿ ಜಾಗದಲ್ಲಿ ಅಡಿಕೆ ಬೆಳೆ

ಕೆರೆಯೂ ಒತ್ತುವರಿ ಹಿರೇಕಾನವಂಗಲ ಗ್ರಾಮದ ಸರ್ವೆ ನಂ. 27ರಲ್ಲಿ ಬರುವ 19.27 ಎಕರೆ ಜಾಡನ ಕಟ್ಟೆ ಕೆರೆಯು ಸುತ್ತಮುತ್ತ ಒತ್ತುವರಿಯಾಗಿದ್ದು ಅಡಿಕೆ ನೆಡಲಾಗಿದ್ದು. ಈಗಾಗಲೇ ಕಟ್ಟೆಯ ಸರ್ವೆ ಕಾರ್ಯ ನಡೆಯುತ್ತಿದ್ದು ಅರ್ಧ ತೆರವುಗೊಳಿಸಲಾಗಿದೆ. ಇನ್ನರ್ಧ ತೆರವು ಕಾರ್ಯ ಬಾಕಿಯಿದ್ದು, ತೆರವುಗೊಳಿಸಿರುವ ಜಾಗಕ್ಕೆ ಗ್ರಾ.ಪಂ.ವತಿಯಿಂದ ಜೆಸಿಬಿ ಮೂಲಕ ಫೆನ್ಸಿಂಗ್ ಮಾಡಲಾಗಿದೆ. ಬಾಕಿ ಉಳಿದಿರುವ ತೆರವು ಕಾರ್ಯಾಚರಣೆಯನ್ನು ಶೀಘ್ರದಲ್ಲಿಯೇ ಮುಗಿಸಬೇಕೆಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ಮಾವ-ಅಳಿಯನ ಒಳಜಗಳದಲ್ಲಿ ದಾರಿ ಕಾಣದ ಸ್ಮಶಾನ ಸ್ಮಶಾನಕ್ಕೆ ಹೋಗುವ ನಕಾಶೆ ದಾರಿಯು ಖಾಸಗಿ ವ್ಯಕ್ತಿಗಳ ಜಮೀನಿನಲ್ಲಿದ್ದು ಮಾವ ಅಳಿಯ ಇಬ್ಬರು ನಾ ಮುಂದು, ತಾ ಮುಂದು ಎಂದು ಪೈಪೋಟಿ ನಡೆಸುತ್ತಿದ್ದು. ಅಡಿಕೆ ಬೆಳೆದಿದ್ದಾರೆ. ದಾರಿ ಬಿಡಲು ಮೀನಮೇಷ ಎಣಿಸುತ್ತಿರುವ ಹಿನ್ನೆಲೆಯಲ್ಲಿ ಸ್ಮಶಾನಕ್ಕೆ ದಾರಿ ಇಲ್ಲವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಗ್ರಾಮಸ್ಥರ ಮನವಿಗೆ ಸ್ಪಂದಿಸದ ಅಧಿಕಾರಿಗಳು

ಸ್ಮಶಾನದ ರಸ್ತೆಗಾಗಿ ಕಳೆದ 3 ತಿಂಗಳಿಂದ ನಿರಂತರವಾಗಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುತ್ತಲೇ ಇದ್ದೇವೆ. ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ತಹಶೀಲ್ದಾರ್, ಕಂದಾಯ ನಿರೀಕ್ಷರು, ಪೊಲೀಸರು ಸೇರಿದಂತೆ ಎಲ್ಲರಿಗೂ ಫೋನ್ ಮಾಡಿದರು ಯಾರೂ ಸ್ಪಂದಿಸಿಲ್ಲ ಎಂದು ಗ್ರಾಮಸ್ಥ ಮಂಜುನಾಥ್ ಹೇಳಿದರು.

ಇದನ್ನೂ ಓದಿ: Murugesh Nirani: ಮುರುಗೇಶ್​ ನಿರಾಣಿ ಮುಂದಿನ ಮುಖ್ಯಮಂತ್ರಿ?- ಬಾಗಲಕೋಟೆಯಲ್ಲಿ ಪೋಸ್ಟರ್ ವಿವಾದ!

ಇನ್ನು ಗ್ರಾ.ಪಂ.ಸದಸ್ಯರು ಲಿಂಗರಾಜು ಮಾತಾನಾಡಿ, ಗ್ರಾಮ ಪಂಚಾಯಿತಿ ವತಿಯಿಂದ ಹಿರೇಕಾನವಂಗಲ ಗ್ರಾಮದ ಸ್ಮಶಾನದ ರಸ್ತೆ ತೆರವು ಮಾಡುವಂತೆ ತಹಶೀಲ್ದಾರ್ ಅವರಿಗೆ ಒಂದು ವರ್ಷದಿಂದ ನಿರಂತರವಾಗಿ ಮನವಿ ಮಾಡುತ್ತಿದ್ದೇವೆ. ಇಡೀ ಊರಿಗೆ ಇರುವುದು ಒಂದೇ ಸ್ಮಶಾನ. ಸತ್ತಾಗ ಹೂಳುವುದಕ್ಕೂ ಜನ ಹರಸಾಹಸ ಪಡಬೇಕಾಗಿದೆ. ಒತ್ತುವರಿ ತೆರವುಗೊಳಿಸಿದರೆ ಗ್ರಾ.ಪಂ.ನಿಂದ ರಸ್ತೆ ಮಾಡಿಕೊಡಲಾಗುವುದು.

Hirekanavangala villagers protest for burial ground road vctv mrq
ಗ್ರಾಮಸ್ಥರ ಪ್ರತಿಭಟನೆ


ತಹಶೀಲ್ದಾರ್ ಭರವಸೆ

ಇನ್ನು ಈ ಬಗ್ಗೆ ಅಜ್ಜಂಪುರ ತಹಶೀಲ್ದಾರ್ ವಿಶ್ವೇಶ್ವರ ರೆಡ್ಡಿ ಮಾತಾನಾಡಿ, ಸ್ಮಶಾನಕ್ಕೆ ಹೋಗುವ ನಕಾಶೆ ದಾರಿ ಒತ್ತುವರಿಯಾಗಿಲ್ಲ, ಅವರದ್ದೇ ಜಮೀನಿನಲ್ಲಿ ಹಾದು ಹೋಗಿದೆ. ಉಳುಮೆ ಮಾಡಿದ್ದಾರೆ, ಅವರ ಕೌಟುಂಬಿಕ ಕಲಹದ ಹಿನ್ನೆಲೆ ದಾರಿಗೆ ಸಮಸ್ಯೆಯಾಗಿದೆ. ಅವರ ಬಳಿಯೂ ಮಾತನಾಡಿದ್ದೇನೆ. ಬಿಟ್ಟುಕೊಡುವುದಾಗಿ ತಿಳಿಸಿದ್ದಾರೆ. ಸ್ಥಳ ಪರಿಶೀಲನೆ ಮಾಡಿ ಸರ್ವೆ ಕಾರ್ಯ ನಡೆಸಿ ದಾರಿ ಬಿಡಿಸಿ ಕೊಡಲಾಗುವುದು.
Published by:Mahmadrafik K
First published: