• Home
  • »
  • News
  • »
  • state
  • »
  • Davanagere: ಮುಸ್ಲಿಂರ ದರ್ಗಾದಲ್ಲಿ ಹಿಂದೂಗಳ ಪೂಜೆ; ಭಾವೈಕ್ಯತೆ ಸಾರುವ ಹಬ್ಬ

Davanagere: ಮುಸ್ಲಿಂರ ದರ್ಗಾದಲ್ಲಿ ಹಿಂದೂಗಳ ಪೂಜೆ; ಭಾವೈಕ್ಯತೆ ಸಾರುವ ಹಬ್ಬ

ದರ್ಗಾದಲ್ಲಿ ಹಿಂದೂಗಳ ಪೂಜೆ

ದರ್ಗಾದಲ್ಲಿ ಹಿಂದೂಗಳ ಪೂಜೆ

ನಾಗೇನಹಳ್ಳಿ ದೇಶಕ್ಕೆ ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುವಂತಿದೆ. ಈ ಗ್ರಾಮದಲ್ಲಿ ಹಿಂದೂಗಳು ಮಾತ್ರ ಇದ್ದಾರೆ. ಇಲ್ಲಿ ಜಮಾಲ್ ಎಂಬ ಮುಸ್ಲಿಂ ಮೌಲ್ವಿಯೊಬ್ಬನ ಸಮಾಧಿ ಇದ್ದು, ಆ ಸಮಾಧಿಯನ್ನ ಹಿಂದುಗಳೇ ಸಂಪ್ರದಾಯದಂತೆ ಪೂಜೆ ಮಾಡುತ್ತಿದ್ದಾರೆ.

  • Share this:

ದಾವಣಗೆರೆ (ಏ.26) : ಈಗ ಎಲ್ಲೆಡೆ ಕೋಮು ಗಲಭೆಗಳದ್ದೆ (Communal Riot) ಮಾತು, ಹಿಜಾಬ್-ಕೇಸರಿ ವಾರ್ (Hijab- Kesari) , ಹಲಾಲ್  ಕಟ್, (Halal Cut) ಜಟ್ಕಾ ಕಟ್, ಹುಬ್ಬಳ್ಳಿ ಗಲಭೆ, ಕಲ್ಲಂಗಡಿ ಅಂಗಡಿ ಧ್ವಂಸ, ಹರ್ಷ ಮರ್ಡರ್ ಒಂದಾ ಎರಡ, ಹೇಳ್ತಾ ಹೋದ್ರೆ ಮುಗಿಯೋದೇ ಇಲ್ಲ, ಈ ಗಲಾಟೆ ನಡುವೆ ಇಲ್ಲೊಂದು ಹಳ್ಳಿಯಲ್ಲಿನ (Village) ಸಾಮರಸ್ಯ ದೇಶಕ್ಕೆ ಮಾದರಿ ಎನ್ನುವಂತಿದೆ. ಇಲ್ಲಿ ಮುಸ್ಲಿಂರಿಲ್ಲ  ಹಿಂದುಗಳೇ (Hindu) ಮುಸ್ಲಿಂ ದೇವರನ್ನ ಪೂಜೆ ಮಾಡಿ ತಮ್ಮ ಕಷ್ಟ ಕಾರ್ಪೂಣ್ಯಗಳನ್ನ ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ, ಎಲ್ಲರೂ ಒಂದೇ, ಎಲ್ಲ ದೇವರು ಒಂದೇ ಎನ್ನುವ ಸಾಮರಸ್ಯದ ಸಂದೇಶ ಸಾರುತ್ತಿದ್ದಾರೆ.


ಮುಸ್ಲಿಂ ದರ್ಗಾಕ್ಕೆ ಹಿಂದೂಗಳ ನಮನ


ಮುಸ್ಲಿಂ ದರ್ಗಾಕ್ಕೆ ನಮಿಸುತ್ತಿರುವ ಹಿಂದೂ ಭಕ್ತರು, ಮತ್ತೊಂದೆಡೆ ದೇವರಿಗೆ ಪ್ರಸಾದ ಹೊತ್ತು ನಿಂತಿರುವ ಭಕ್ತರು.  ಹಿಂದು ಮುಸ್ಲಿಂರ ಮಧ್ಯೆ ಸಾಮರಸ್ಯ ಸಾರುವ ಜಾತ್ರೆಯೊಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ನಾಗೇನಹಳ್ಳಿಯಲ್ಲಿ ನಡೆಯುತ್ತಿದೆ. ಇಂದು   ಕೋಮು ದ್ವೇಷವೇ ಬೆಳೆಯುವ ಬದಲಾಗಿಧರ್ಮ, ಜಾತಿಗಳ ನಡುವೆ ಸೌಹಾರ್ದತೆ ಬೆಳಯುತ್ತದೆ.


ಈ ನಾಗೇನಹಳ್ಳಿ ದೇಶಕ್ಕೆ ಹಿಂದು ಮುಸ್ಲಿಂ ಭಾವೈಕ್ಯತೆ ಸಾರುವಂತಿದೆ. ಕಾರಣ, ಈ ಗ್ರಾಮದಲ್ಲಿ ಹಿಂದುಗಳು ಮಾತ್ರ ಇದ್ದಾರೆ. ಆದರೆ, ಇಲ್ಲಿ ಜಮಾಲ್ ಎಂಬ ಮುಸ್ಲಿಂ ಮೌಲ್ವಿಯೊಬ್ಬನ ಸಮಾಧಿ ಇದ್ದು, ಆ ಸಮಾಧಿಯನ್ನ ಹಿಂದುಗಳೇ ಹಿಂದು ಸಂಪ್ರದಾಯದಂತೆ ಪೂಜೆ ಮಾಡುತ್ತಿದ್ದಾರೆ. ಅಲ್ಲದೇ, ಆ ದರ್ಗಾಗೆ ಪಕ್ಕದಲ್ಲಿಯೇ ದೇವಸ್ಥಾನವನ್ನು ನಿರ್ಮಾಣ ಮಾಡಿದ್ದು, ಅದಕ್ಕೆ ಗುಡಿ, ಗೋಪುರ ಕಟ್ಟಿಸಿ ಜಮಾಲ್ ಸ್ವಾಮಿ ಪ್ರಸನ್ನ ಎಂದು ಹೆಸರನ್ನು ಇಟ್ಟಿದ್ದಾರೆ.


ಮುಸ್ಲಿಂರ ಹಬ್ಬ ಆಚರಿಸುವ ಹಿಂದೂಗಳು


ಹಲವು ಶತಮಾನಗಳ ಹಿಂದೆ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ನಾಗೇನಹಳ್ಳಿ ಗ್ರಾಮಕ್ಕೆ ಜಮಾಲ್ ಸಾಬ್ ಎಂಬ ಪವಾಡ ಪುರುಷನೊಬ್ಬ ಕೇರಳದಿಂದ ಆಗಮಿಸಿದ್ದ. ಬಹುಕಾಲ ವರ್ಷ ಇಲ್ಲಿಯೇ ತಂಗಿದ್ದ ಆ ಜಮಾಲ್ ಸಾಬ್ ಸ್ಥಳೀಯರಿಗೆ ಹಲವಾರ ಪವಾಡಗಳನ್ನು ಮಾಡಿ ತೋರಿಸಿದ್ದ. ಆನಾರೋಗ್ಯ ಪೀಡಿತ ಜನ ಮತ್ತು ಜಾನುವಾರುಗಳ ರೋಗ ರುಜಿಗಳನ್ನು ತನ್ನ ಪವಾಡದಿಂದ ಹೋಗಲಾಡಿಸಿದ್ದ. ಹೀಗಾಗಿ, ಆಗಿನ ಜನರು ಜಮಾಲ್ ನನ್ನು ಸ್ವಾಮಿ ಎಂದೇ ನಂಬಿದ್ದರು.


ಅಲ್ಲದೇ, ಆತ ಕಾಲಾನಂತರ ಆತನ ಸಮಾಧಿಯನ್ನು ಅಂದಿನಿಂದ ಇಂದಿನವರೆಗೂ ಪೂಜೆ ಮಾಡುತ್ತಿದ್ದಾರೆ. ಇನ್ನು, ಪ್ರತಿ ವರ್ಷ ಜಮಾಲ್ ಸ್ವಾಮಿ ಉರುಸ್ ಕೂಡ ನಡೆಯುತ್ತಿದ್ದು, ಅದನ್ನು ಸ್ಥಳೀಯ ಹಿಂದುಗಳೇ ಆಚರಿಸುತ್ತಿದ್ದಾರೆ. ನಿನ್ನೆ ರಾತ್ರಿ ಕೂಡ ಉರುಸ್ ನಡೆದಿದ್ದು, ಇಲ್ಲಿಯ ಹಿಂದು ಜನರೇ ಆತನಿಗೆ ಮಾಂಸದೂಟವನ್ನು ಪ್ರಸಾದವನ್ನಾಗಿ ಅರ್ಪಿಸುವ ಮೂಲಕ ಶ್ರದ್ಧಾ ಭಕ್ತಿಯಿಂದ ಉರುಸ್ ಕಾರ್ಯವನ್ನು ಅದ್ಧೂರಿಯಾಗಿ ನೆರವೇರಿಸಿದ್ದಾರೆ.


ಇದನ್ನೂ ಓದಿ: Mysuru: ಕಾಡಾನೆಗಳ ಉಪಟಳ, ನಂಜನಗೂಡಿನಲ್ಲಿ ವಿಷದ ಬಾಟೆಲ್ ಹಿಡಿದು ರೈತರ ಪ್ರತಿಭಟನೆ


ಇಷ್ಟಾರ್ಥ ಸಿದ್ಧಿಗಾಗಿ ಹರಕೆ


ಇನ್ನು, ಜಮಾಲ್ ಹೆಸರಲ್ಲಿ ಈಗಲೂ ಹಲವಾರು ಪವಾಡಗಳು ನಡೆಯುತ್ತವೆ ಅಂತೆ. ಹೀಗಾಗಿ, ದಾವಣಗೆರೆ ಜಿಲ್ಲೆಯ ನಾನಾ ಭಾಗಗಳ ಹಿಂದು, ಮುಸ್ಲಿಂ, ಜನರು ಈ ಜಮಾಲ್ ಸ್ವಾಮಿ ಸನ್ನಿಧಿಗೆ ಬಂದು ಆರೋಗ್ಯ, ಕೌಟುಂಬಿಕ ಸಮಸ್ಯೆ, ವಿವಾಹ ಪ್ರಾಪ್ತಿ ಸೇರಿದಂತೆ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊತ್ತುಕೊಳ್ಳುತ್ತಾರೆ. ಜಮಾಲ್ ಸ್ವಾಮಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿದರೆ ಇಷ್ಟಾರ್ಥಗಳು ಸಿದ್ದಿಸುತ್ತವೆ ಎನ್ನುವುದು ಇಲ್ಲಿನ ಭಕ್ತರ ನಂಬಿಕೆ. ಹೀಗಾಗಿ, ಇದೀಗ ಜಮಾಲ್ ಸ್ವಾಮಿ ಶ್ರೀ ಕ್ಷೇತ್ರ ದಾವಣಗೆರೆ ಸೇರಿದಂತೆ ಸುತ್ತಲಿನ ಜಿಲ್ಲೆಗಳಲ್ಲಿ ಪ್ರಸಿದ್ಧಿ ಪಡೆದಿದೆ. ಇಂದು ಧರ್ಮ, ಜಾತಿಗಳ ನಡುವೆ ಕೋಮು ಸೌಹಾರ್ದತೆ ಬೆಳೆಯುವ ಬದಲಾಗಿ ಕೋಮು ದ್ವೇಷ ಹೆಚ್ಚಿ ದೇಶದಲ್ಲಿ ಕೋಮು ಗಲಭೆಗಳು ಉಂಟಾಗುತ್ತಿವೆ. ಅಲ್ಲದೆ ಇಂದಿನ ರಾಜಕಾರಣಿಗಳು ತಮ್ಮ ರಾಜಕೀಯ ಹಸ್ತ್ರವನ್ನಾಗಿ ಮಾಡಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ.


ಇದನ್ನೂ ಓದಿ:  Corona Vaccine: ಮುಂದಿನ ದಿನಗಳಲ್ಲಿ ವರ್ಷಕ್ಕೊಂದು ಡೋಸ್ ಪಡೆಯಬೇಕಾ? ಸಚಿವ ಸುಧಾಕರ್ ಹೇಳಿದ್ದು ಹೀಗೆ


ದರ್ಗಾಕ್ಕೆ ಹೋಗಿ ಗ್ರಾಮದಲ್ಲಿ ಹಬ್ಬ


ಆದರೆ ಈ ಗ್ರಾಮದಲ್ಲಿ ಹಿಂದುಗಳು ಮಾತ್ರ ಇದ್ದು ದ್ವೇಷ, ಅಸೂಹೆ ತೋರದೆ  ಮುಸ್ಲಿಂ ಧರ್ಮದ ದರ್ಗಾಕ್ಕೆ ಹೋಗಿ ಗ್ರಾಮದಲ್ಲಿ ಹಬ್ಬ ಮಾಡುತ್ತಾರೆ.. ನಾಗೇನಹಳ್ಳಿ ಗ್ರಾಮದಲ್ಲಿ ಹಿಂದುಗಳೇ ಇದ್ದಾರೆ,  ದರ್ಗಾವನ್ನು ನಿರ್ಮಾಣ ಮಾಡಿಸಿದವರು ಹಿಂದುಗಳು. ಈ ಗ್ರಾಮದಲ್ಲಿ ಹೇಳಿಕೊಳ್ಳಲು ಒಂದು ಮುಸ್ಲಿಂ ಕುಟುಂಬ ಇಲ್ಲ. ಜಮಾಲ್ ಸ್ವಾಮಿ ಬಂದು ಇಲ್ಲಿ ಪವಾಡ ಮಾಡಿದ್ದರಿಂದ ಹಿಂದುಗಳು ಇಲ್ಲಿ ಪ್ರತಿನಿತ್ಯ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಈ ಸನ್ನಿಧಿಯಲ್ಲಿ ಇಷ್ಟಾರ್ಥಗಳು ಸಿದ್ದಿಸುತ್ತವೆ ಎನ್ನುವುದು ಇಲ್ಲಿನ ಭಕ್ತರ ನಂಬಿಕೆಯಾಗಿದೆ..


ಒಟ್ಟಾರೆಯಾಗಿ ದೇಶದಲ್ಲಿ ಹಿಂದು ಮುಸ್ಲಿಂ ಎಂದು ಕೋಮುಗಲಭೆ ಸೃಷ್ಠಿಯಾಗಿ ಎಷ್ಟೋ ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಈ ಮಧ್ಯೆ ನಾಗೇನಹಳ್ಳಿಯ ಹಿಂದು ಮುಸ್ಲಿಂರ ಸಾಮರಸ್ಯ ದೇಶಕ್ಕೆ ಮಾದರಿ ಎನ್ನುವಂತಿದೆ.


ವರದಿ : ಎ.ಪಿ. ಸಂಜಯ್ ಕುಂದುವಾಡ

Published by:ಪಾವನ ಎಚ್ ಎಸ್
First published: