• Home
  • »
  • News
  • »
  • state
  • »
  • Hindu: ಲಿಂಗಾಯತರು ಹಿಂದೂಗಳಲ್ಲ, ಆಚರಣೆಯಲ್ಲಿ ಸಾಕಷ್ಟು ವ್ಯತ್ಯಾಸ ಇದೆ: ತೋಂಟದಾರ್ಯ ಸ್ವಾಮೀಜಿ!

Hindu: ಲಿಂಗಾಯತರು ಹಿಂದೂಗಳಲ್ಲ, ಆಚರಣೆಯಲ್ಲಿ ಸಾಕಷ್ಟು ವ್ಯತ್ಯಾಸ ಇದೆ: ತೋಂಟದಾರ್ಯ ಸ್ವಾಮೀಜಿ!

ತೋಂಟದಾರ್ಯ ಮಠದ ಡಾ. ಸಿದ್ದರಾಮ ಸ್ವಾಮೀಜಿ

ತೋಂಟದಾರ್ಯ ಮಠದ ಡಾ. ಸಿದ್ದರಾಮ ಸ್ವಾಮೀಜಿ

ಲಿಂಗಾಯತರು ಹಿಂದೂಗಳು ಆಗಲ್ಲ. ಲಿಂಗಾಯತ ಧರ್ಮ ಅವೈದಿಕ ಧರ್ಮ, ವೇಗ, ಆಗಮನ, ಪುರಾಣವನ್ನು ವಿರೋಧಿಸಿದ ಧರ್ಮ. ದೇಶದಲ್ಲಿ ಜೈನ, ಬೌದ್ಧ, ಕ್ರೈಸ್ತರಂತೆ ಲಿಂಗಾಯತ ಸಹ ಒಂದು ಪ್ರತ್ಯೇಕ ಧರ್ಮ.

  • News18 Kannada
  • Last Updated :
  • Belgaum, India
  • Share this:

ಬೆಳಗಾವಿ(ನ.17)- ಹಿಂದೂ ಎನ್ನುವಂತಹದು ಒಂದು ಧರ್ಮ ಅಲ್ಲ, ಇದು ಜೀವನ ಶೈಲಿಯಾಗಿದೆ. ವೈದಿಕ ಧರ್ಮಕ್ಕೆ ಈಗ ಹಿಂದೂ ಧರ್ಮ ಎಂದು ಕರೆಲಾಗುತ್ತಿದೆ. ವೈದಿಕ ಧರ್ಮವನ್ನು ಹಿಂದೂ ಧರ್ಮ (Hindu Religion) ಎಂದು ಕರೆದಾಗ, ಲಿಂಗಾಯತರು ಹಿಂದೂಗಳು ಆಗಲ್ಲ. ಲಿಂಗಾಯತ (Lingayat) ಧರ್ಮ ಅವೈದಿಕ ಧರ್ಮ, ವೇಗ, ಆಗಮನ, ಪುರಾಣವನ್ನು ವಿರೋಧಿಸಿದ ಧರ್ಮ. ದೇಶದಲ್ಲಿ ಜೈನ, ಬೌದ್ಧ, ಕ್ರೈಸ್ತರಂತೆ ಲಿಂಗಾಯತ ಸಹ ಒಂದು ಪ್ರತ್ಯೇಕ ಧರ್ಮ. ಹಿಂದೂಗಳ ಆಚರಣೆ ಹಾಗೂ ಲಿಂಗಾಯತರ ಆಚರಣೆಗೆ ವ್ಯತ್ಯಾಸ ಇದೆ ಎಂದು ಬೆಳಗಾವಿಯಲ್ಲಿ (Bekagavi) ಗದಗಿ ತೋಂಟದಾರ್ಯ ಮಠದ ಡಾ. ಸಿದ್ದರಾಮ ಸ್ವಾಮೀಜಿ ಹೇಳಿದ್ದಾರೆ.


ಹಿಂದೂಗಳು ದೇವಸ್ಥಾನದಲ್ಲಿ ಇರೋ ದೇವರನ್ನು ಪೂಜಿಸುತ್ತಾರೆ. ಲಿಂಗಾಯತರು ಎದೆ ಮೇಲೆ ಇರೋ ಲಿಂಗವನ್ನು ಪೂಜೆ ಮಾಡುತ್ತಾರೆ. ಹಿಂದೂಗಳು ಮೃತಪಟ್ಟ ಸಂದರ್ಭದಲ್ಲಿ ದಹನ ಮಾಡುತ್ತಾರೆ. ಲಿಂಗಾಯತರು ಮಣ್ಣಲ್ಲಿ ಹೂಳುವ ಪದ್ಧತಿ ಅನುಸರಿಸುತ್ತಾರೆ. ಆಚಾರ ವಿಚಾರಗಳು ಭಿನ್ನ ಆಗಿರೋದ್ರಿಂದ ಲಿಂಗಾಯತ ಎನ್ನುವುದು ಪ್ರತ್ಯೇಕ ಧರ್ಮ. ಬ್ರಿಟಿಷರು ಸಹ ಲಿಂಗಾಯತ ಎನ್ನುವುದು ಧರ್ಮ ಎಂದೇ ಪ್ರಯೋಗ ಮಾಡಿದ್ದಾರೆ. ದೇಶದಲ್ಲಿ ಇರೋ ಎಲ್ಲಾ ಧರ್ಮೀಯರು ಭಾರತೀಯರೇ, ಧರ್ಮ ಎನ್ನುವ ಸೀಮಿತ ಅರ್ಥ ಬಳಸಬೇಕಾದ್ರೆ ಲಿಂಗಾಯತರು ಹಿಂದೂಗಳು ಅಲ್ಲ. ಪ್ರಾದೇಶಿಕವಾಗಿ ಜೈನರು, ಬೌದ್ಧರು, ಸಿಖ, ಲಿಂಗಾಯತರು ಎಲ್ಲರೂ ಹಿಂದೂಗಳೆ. ಆಚಾರ ವಿಚಾರ ಪ್ರತ್ಯೇಕವಾಗಿದ್ದರಿಂದ ಧಾರ್ಮಿಕವಾಗಿ ಎಲ್ಲರೂ ಪ್ರತ್ಯೇಕವಾಗಿದ್ದಾರೆ ಎಂದರು.


ಇದನ್ನೂ ಓದಿ:  ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬರೂ 'ಹಿಂದೂ', ಯಾರೂ ಪೂಜಾ ವಿಧಾನ ಬದಲಾಯಿಸುವ ಅಗತ್ಯವಿಲ್ಲ: ಮೋಹನ್ ಭಾಗವತ್


ರಾಜ್ಯದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ನಿಂತಿಲ್ಲ


ರಾಜ್ಯದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ನಿಂತಿಲ್ಲ, ಬೂದಿ ಮುಚ್ಚಿದ ಕೆಂಡದಂತೆ ಒಳಗಡೆ ಇದೆ. ಯಾವಾಗ ಹೊರಗೆ ಬರಲಿದೆ ಎಂಬುದು ಕಾದು ನೋಡಬೇಕು. ಲಿಂಗಾಯತ ಒಳಪಂಗಡದ ಜಾತಿಯವರು ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಪ್ರತ್ಯೇಕ ಧರ್ಮದ ಹೋರಾಟ ಸೂಕ್ತ ಅಲ್ಲ. ಎಲ್ಲಾ ಒಂದು ಹಂತಕ್ಕೆ ಬಂದ ಬಳಿಕ ಮತ್ತೆ ಹೋರಾಟ ಆರಂಭವಾಗಿದೆ. ಸೈದಾಂತಿಕವಾಗಿ, ಕಾನೂನಾತ್ಮಕವಾಗಿ ಪ್ರತಿಪಾದನೆ ಮಾಡಿ ಹೋರಾಟ ಮಾಡಲಾಗುವುದು. ಜಾಗತಿಕ ಲಿಂಗಾಯತ ಮಹಾಸಭಾ ಈ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಮಾಡುತ್ತಿದೆ. ಲಿಂಗಾಯತ ಧರ್ಮದಲ್ಲಿ 108 ಒಳಜಾತಿಗಳು ಇವೆ, ಮೀಸಲಾತಿ ಕೇಳುವುದುರಲ್ಲಿ ಯಾವುದೇ ತಪ್ಪು ಇಲ್ಲ. ಆರ್ಥಿಕವಾಗಿ, ಸಮಾಜಿಕವಾಗಿ ಹಿಂದುಳಿದವರಿಗಾಗಿ ಮೀಸಲಾತಿ ಕೇಳಲಾಗುತ್ತಿದೆ. ಯಾವುದೇ ರಾಜಕೀಯ ಲಾಭಕ್ಕಾಗಿ ಧರ್ಮವನ್ನು ಬಳಿಸಿಕೊಳ್ಳಬಾರದು ಅಧಿಕಾರ, ವೈಯಕ್ತಿಕ ಸ್ವಾರ್ಥಕ್ಕಾಗಿ ಎಂದಿಗೂ ಧರ್ಮವನ್ನು ಬಳಸಬಾರದು ಎಂದು ತೋಂಟದಾರ್ಯ ಶ್ರೀ ಹೇಳಿದ್ರು.


ಇದನ್ನೂ ಓದಿ: IMR Drops: ಹೆಣ್ಣು ಶಿಶು ಮರಣ ದರ ಇಳಿಕೆ; ಸದ್ಯದ ಶಿಶು ಮರಣ ಪ್ರಮಾಣ ಎಷ್ಟಿದೆ? ಇಲ್ಲಿದೆ ನೋಡಿ


ಹಿಂದೂ ಪದದ ರಾಜ್ಯದಲ್ಲಿ ವ್ಯಾಪಕ ಚರ್ಚೆ


ಹಿಂದೂ ಪದದ ರಾಜ್ಯದಲ್ಲಿ ವ್ಯಾಪಕ ಚರ್ಚೆ ವಿಚಾರ ನಡೆಯುತ್ತಿದ್ದು, ಈ ಬಗ್ಗೆ ಮಾತನಾಡಿದ ತೋಂಟದಾರ್ಯ ಶ್ರೀ, ಪರಿರ್ಷಿಯನ್ ಬಂದಿರೋ ಹಿಂದೂ ಪದ ಬಗ್ಗೆ ಬೇರೆ ಬೇರೆ ಅರ್ಥ ಬರುತ್ತಿದೆ. ಪರಿರ್ಷಿಯನ್ ಭಾಷೆಯಲ್ಲಿ ಸಕಾರವನ್ನು ಹಕಾರವನ್ನಾಗಿ ಉಚ್ಛಾರಣೆ ಮಾಡಲಾಗುತ್ತದೆ. ಸಿಂಧೂ ನದಿಯ ಈ ಕಡೆ ಇರೋವವರು ಜನರನ್ನು ಹಿಂದೂಗಳು ಎಂದು ಕರೆದರು. ಭಾರತೀಯರು ಎಲ್ಲರೂ ಜಾತಿ, ಧರ್ಮೀಯರು ಹಿಂದೂ. ಹಿಂದೂ ಎನ್ನುವುದು ಜಾತಿ, ಧರ್ಮಕ್ಕೆ ಸೀಮಿತಗೊಳಿಸಿದಾಗ ಇಂತಹ ಅನಾಹುತ ಸೃಷ್ಠಿ ಆಗುತ್ತದೆ. ವಿವಾದದ ವಿಷಯವೇ ಅಲ್ಲ ಹಿಂದೂ ಎನ್ನುವುದು ಸಿಂಧೂ ನದಿಯಿಂದ ಉತ್ಪತ್ತಿಯಾಗಿದೆ. ಪಾಕಿಸ್ತಾನದಲ್ಲಿಯೂ ಅನೇಕ ಜನ ಸಿಂಧುಸ್ಥಾನ ಮಾಡಿ ಎಂದು ಹೋರಾಟ ಮಾಡುತ್ತಿದ್ದಾರೆ. ಜಾತಿ, ಧರ್ಮ ಎಂದು ಬಳಸಿಕೊಂಡಾಗ ವಿವಾದ ಸೃಷ್ಠಿಯಾಗುತ್ತದೆ ಎಂದರು.

Published by:Precilla Olivia Dias
First published: