Hindu-Muslim: ಮುಸ್ಲಿಂ ದಂಪತಿಯಿಂದ ಹಿಂದೂ ಸ್ವಾಮೀಜಿ ಪಾದಪೂಜೆ! ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಯ್ತು ಗದಗ

ಹಿಂದೂ-ಮುಸ್ಲಿಂ ಸಂಘರ್ಷದ ಸಂದಿಗ್ಧ ಪರಿಸ್ಥಿತಿಯಲ್ಲೇ ಹಿಂದೂ ಮತ್ತು ಮುಸ್ಲಿಮರ ನಡುವಿನ ಸ್ನೇಹ, ಪ್ರೀತಿ, ಬಾಂಧವ್ಯ, ಭಾವೈಕ್ಯತೆ ಸಾರುವ ಘಟನೆಗೆ ಗದಗ ನಗರ ಸಾಕ್ಷಿಯಾಗಿದೆ. ಇಲ್ಲಿ ಮುಸ್ಲಿಂ ದಂಪತಿಗಳು ಹಿಂದೂ ಸ್ವಾಮೀಜಿಯನ್ನು ಮನೆಗೆ ಕರೆಸಿ, ಅವರ ಪಾದಪೂಜೆ ಮಾಡಿದ್ದಾರೆ!

ಮುಸ್ಲಿಂ ದಂಪತಿಯಿಂದ ಹಿಂದೂ ಸ್ವಾಮೀಜಿ ಪಾದಪೂಜೆ

ಮುಸ್ಲಿಂ ದಂಪತಿಯಿಂದ ಹಿಂದೂ ಸ್ವಾಮೀಜಿ ಪಾದಪೂಜೆ

  • Share this:
ಗದಗ: ಸದ್ಯ ರಾಜ್ಯದಲ್ಲಿ ಹಿಂದೂ (Hindu), ಮುಸ್ಲಿಂಮರ (Muslim) ನಡುವೆ ಸಾಮರಸ್ಯ (harmony) ಹದಗೆಟ್ಟಿರುವ ಪರಿಸ್ಥಿತಿ ಇದೆ. ಒಂದೆಡೆ ವೀರ ಸಾವರ್ಕರ್ ಫ್ಲೆಕ್ಸ್ (Veer Savarkar Flex) ವಿಚಾರಕ್ಕೆ ಗಲಾಟೆ, ಮತ್ತೊಂದೆಡೆ ಟಿಪ್ಪು ಸುಲ್ತಾನ್ ಫ್ಲೆಕ್ಸ್ (Tipu Sultan Flex) ವಿಚಾರಕ್ಕೆ ಗಲಾಟೆ ನಡೆದಿದೆ. ಫ್ಲೆಕ್ಸ್ ವಿಚಾರಕ್ಕೆ ಶಿವಮೊಗ್ಗ (Shivamogga), ತುಮಕೂರು (Tumkur) ಸೇರಿದಂತೆ ಕೆಲವೆಡೆ ಹಿಂದೂ, ಮುಸ್ಲಿಂ ನಡುವೆ ಗಲಾಟೆ ನಡೆದಿದೆ. ಆದರೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೇ ಹಿಂದೂ ಮತ್ತು ಮುಸ್ಲಿಮರ ನಡುವಿನ ಸ್ನೇಹ, ಪ್ರೀತಿ, ಬಾಂಧವ್ಯ, ಭಾವೈಕ್ಯತೆ ಸಾರುವ ಘಟನೆಗೆ ಗದಗ ನಗರ (Gadag City) ಸಾಕ್ಷಿಯಾಗಿದೆ. ಇಲ್ಲಿ ಮುಸ್ಲಿಂ ದಂಪತಿಗಳು (Muslim Couple) ಹಿಂದೂ ಸ್ವಾಮೀಜಿಯನ್ನು (Hindi Swamiji) ಮನೆಗೆ ಕರೆಸಿ, ಅವರ ಪಾದಪೂಜೆ (Paada Pooje) ಮಾಡಿದ್ದಾರೆ. ಪಾದಪೂಜೆ ಬಳಿಕ ಮುಸ್ಲಿಂ ಮನೆಯಲ್ಲೇ ಪ್ರಸಾದ ಸ್ವೀಕರಿಸಿದ ಸ್ವಾಮೀಜಿ, ಮುಸ್ಲಿಂ ದಂಪತಿಯನ್ನು ಆಶೀರ್ವದಿಸಿದ್ದಾರೆ.

ಮುಸ್ಲಿಂ ದಂಪತಿಯಿಂದ ಹಿಂದೂ ಸ್ವಾಮೀಜಿ ಪಾದಪೂಜೆ

ಗದಗದಲ್ಲಿ ಮುಸ್ಲಿಂ ಕುಟುಂಬವೊಂದು ಹಿಂದೂ ಸ್ವಾಮೀಜಿಯನ್ನು ತಮ್ಮ ಮನೆಗೆ ಕರೆಸಿ, ಅವರ ಪಾದಪೂಜೆ ಮಾಡಿದೆ. ಗದಗ ನಗರದ ನಿವೃತ್ತ ಪ್ರಾಧ್ಯಾಪಕರಾದ ಸಿಕಂದರ್‌ ಬಡೇಖಾನ್ ಹಾಗೂ ಅವರ ಪತ್ನಿ ಅವರೇ ಹಿಂದೂ ಸ್ವಾಮೀಜಿ ಪಾದಪೂಜೆ ಮಾಡಿದವರು.

ಸ್ವರೂಪಾನಂದ ಸ್ವಾಮೀಜಿಗಳ ಪಾದಪೂಜೆ

ಸಿಕಂದರ್ ಹಾಗೂ ಅವರ ಪತ್ನಿ ಇಬ್ಬರೂ ಧಾರವಾಡದ ಕ್ಯಾರೆಕೊಪ್ಪದ ಓಂಕಾರ ಆಶ್ರಮದ ಸ್ವರೂಪಾನಂದ ಸ್ವಾಮೀಜಿಯವರನ್ನು ಮನೆಗೆ ಕರೆಸಿದ್ದಾರೆ. ಬಳಿಕ ಅವರ ಪಾದಪೂಜೆ ಮಾಡಿದ್ದಾರೆ. ಪಾದಪೂಜೆಯ ನಂತರ ಸ್ವಾಮಿಗಳು ಮತ್ತು ಭಕ್ತರು ‘ಓಂ ನಮ ಶಿವಾಯ’ ಮಂತ್ರ ಪಠಿಸಿದರು. ಇನ್ನು ದಂಪತಿಗಳಿಬ್ಬರೂ ಬಹಳ ಕಾಲದಿಂದ ಸ್ವರೂಪನಂದ ಶ್ರೀಗಳ ಭಕ್ತರಾಗಿದ್ದಾರೆ.

ಇದನ್ನೂ ಓದಿ: Ghar Wapsi: ಇಸ್ಲಾಂಗೆ ಮತಾಂತರಗೊಳ್ಳೋಕೆ ಸಜ್ಜಾಗಿದ್ದ ಅರ್ಚಕ, ಈಗ ಹಿಂದೂ ಧರ್ಮಕ್ಕೆ ಮರಳಿದ್ದೇಕೆ?

ಮುಸ್ಲಿಂ ಮನೆಯಲ್ಲಿ ಪ್ರಸಾದ ಸ್ವೀಕರಿಸಿದ ಸ್ವಾಮೀಜಿ

ಇನ್ನು ಪಾದಪೂಜೆ ಮಾಡಿದ ಸಿಕಂದರ್ ಬಡೇಖಾನ್ ಹಾಗೂ ಅವರ ಪತ್ನಿಯನ್ನು ಸ್ವರೂಪಾನಂದ ಭಾರತಿ ಸ್ವಾಮೀಜಿ ಆಶೀರ್ವದಿಸಿದ್ದಾರೆ. ಬಳಿಕ ಸ್ವಾಮೀಜಿಯವರು ಬಡೆಖಾನ್‌ ಮನೆಯಲ್ಲಿಯೇ ಪ್ರಸಾದ ಸ್ವೀಕರಿಸಿದ್ದಾರೆ.

ನೆರೆದಿದ್ದವರಿಗೂ ಪ್ರಸಾದ ವಿತರಣೆ

ಇನ್ನು ಶ್ರೀಗಳ ಆಶೀರ್ವಾದ ಪಡೆದ ದಂಪತಿ, ಅಲ್ಲಿ ನೆರೆದಿದ್ದ ಜನರಿಗೆ ಪ್ರಸಾದ ವಿತರಿಸಿದರು. ಹಿಂದೂ ಹಾಗೂ ಮುಸ್ಲಿಂ ಎರಡೂ ಸಮುದಾಯದ ಜನರು ಪೂಜೆಯಲ್ಲಿ ಪಾಲ್ಗೊಂಡು ಕುಟುಂಬವನ್ನು ಶ್ಲಾಘಿಸಿದರು. ಕಳೆದ 10 ವರ್ಷಗಳಿಂದ ಶ್ರಾವಣದ ಸಮಯದಲ್ಲಿ ಬಡೇಖಾನ್ ಕುಟುಂಬವನ್ನು ಭೇಟಿಯಾಗುತ್ತಿದ್ದರಿಂದ ನೆರೆಹೊರೆಯವರಿಗೆ ಇದು ಆಶ್ಚರ್ಯಕರ ಎನಿಸಲಿಲ್ಲ.

ನೆರೆಹೊರೆಯವರಿಂದ ಮೆಚ್ಚುಗೆ

ಇನ್ನು ಸಿರಂದರ್ ಬಡೇಖಾನ್ ಕುಟುಂಬವು ಅಲ್ಲಾಹ್‌ನ ಜೊತೆಗೆ ಶಿವನನ್ನು ಆರಾಧಿಸುತ್ತಿತ್ತು. ಬಡೇಖಾನ್ ಕುಟುಂಬ ನಮಾಜ್ ಮತ್ತು ಪೂಜೆಯನ್ನು ಮಾಡುತ್ತಾರೆ. ಮನೆಯಲ್ಲಿ ವಿಶೇಷ ಕಾರ್ಯಕ್ರಮಗಳು ಇದ್ದಾಗ ಎರಡೂ ಸಮುದಾಯದ ಜನರನ್ನು ಆಹ್ವಾನಿಸುತ್ತಾರೆ. ಇಂತಹ ಅಪರೂಪದ ಘಟನೆ ಕಂಡು ನಮಗೆ ಸಂತಸವಾಗುತ್ತಿದೆ ಅಂತ ಅಕ್ಕಪಕ್ಕದ ನಿವಾಸಿಗಳು ಹೇಳಿದ್ದಾರೆ.

ಇದನ್ನೂ ಓದಿ: Hussaini Brahmins: ಹುಸೇನಿ ಬ್ರಾಹ್ಮಣರು ಯಾರು? ಇವರು ಹಿಂದೂಗಳಾ, ಮುಸ್ಲಿಮರಾ? ಇಲ್ಲಿದೆ ಆಸಕ್ತಿಕರ ಮಾಹಿತಿ

ಸ್ವಾಮೀಜಿ ಹಾಗೂ ಮುಸ್ಲಿಂ ದಂಪತಿ ನಡೆಗೆ ಮೆಚ್ಚುಗೆ

ಹಿಂದೂ ಮುಸ್ಲಿಂ ಬಾಂಧವ್ಯಕ್ಕೆ ಪ್ರೇರಕವಾದ ಈ ನಡೆಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಪಾದ ಪೂಜೆಯ ಫೋಟೋಗಳು ಹಾಗೂ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಇದನ್ನು ನೋಡಿದ ನೆಟ್ಟಿಗರು ಸ್ವರೂಪಾನಂದ ಭಾರತಿ ಸ್ವಾಮೀಜಿ ಹಾಗೂ ಸಿಕಂದರ್ ಬಡೇಖಾನ್ ದಂಪತಿಯನ್ನು ಹೊಗಳುತ್ತಾ ಕಾಮೆಂಟ್ ಮಾಡುತ್ತಿದ್ದಾರೆ.
Published by:Annappa Achari
First published: