ಯಾದಗಿರಿ(ಏ.13): ರಾಜ್ಯದಲ್ಲಿ ಧರ್ಮ ದಂಗಲ್ ವಿವಾದ ತಲೆದೊರಿದ್ದು ಇಂತಹ ವಿವಾದದ ನಡುವೆ ಕರ್ನಾಟಕ ಉತ್ತರ ಪ್ರಾಂತ ಧರ್ಮ ಜಾಗರಣದ ಸಹಸಂಚಾಲಕ ಡಾ. ಹಣಮಂತ ಮಳಲಿ (Dr Hanamanta Malali) ಅವರು ವಿವಾದಾತ್ಮಕ ಮಾತನಾಡಿದ್ದಾರೆ. ಯಾದಗಿರಿ (Yadgiri) ಜಿಲ್ಲೆಯ ಸೈದಾಪುರ ಪಟ್ಟಣದಲ್ಲಿ ಶ್ರೀ ರಾಮ ಸಮಿತಿವತಿಯಿಂದ ಶ್ರೀ ರಾಮೋತ್ಸವ ಹಾಗೂ ಹಿಂದು ಜಾಗೃತಿ ಸಮಾವೇಶ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ಹಿಜಾಬ್ (Hijab) ಪ್ರಕರಣದ ಬಗ್ಗೆ ಮಾತನಾಡಿದ ಅವರು, ಸಿನಿಮಾ ನಟಿಯರಿಗೆ, ಶಾರುಖ್ ಖಾನ್ ಮಗಳಿಗೆ ಹಿಜಾಬ್ ತೋಡಿಸೋಕೆ ಗಂಡಸ್ತನ ಇಲ್ವಾ..! ಬಡವರ ಮಕ್ಕಳಿಗೆ ಹಿಜಾಬ್ ಹಾಕಿ ಶಿಕ್ಷಣದಿಂದ ವಂಚಿತರನ್ನಾಗಿ ಮಾಡ್ತಿದ್ದಿರಾ, ಕಾನೂನು ಪಾಲನೆ ಮಾಡಿ ಅಂತ ಕೋರ್ಟ್ ಆದೇಶ ಮಾಡಿದೆ. ಶಾಲೆಯಲ್ಲಿ ಸಮವಸ್ತ್ರ ಪಾಲನೆ ಮಾಡಬೇಕೆಂದು ಕೋರ್ಟ್ ಹೇಳಿದೆ ಎಂದಿದ್ದಾರೆ.
ಹಿಜಾಬ್ ವಿವಾದ ಸೃಷ್ಟಿ ಮಾಡಿದ ಮುಸ್ಲಿಂ ಅವರಿಂದ ಹಿಂದುಗಳು ಎಚ್ಚರ ಆಗಿದ್ದಾರೆ.ಹಿಜಾಬ್ ಮನೆ ಅಥವಾ ಅವರ ಅಪ್ಪನ ಮುಂದೇನಾದರೂ ಹಾಕಿಕೊಳ್ಳಲಿ. ತಾಕತ್ ಇದ್ರೆ ನಿಮ್ಮ ಎಲ್ಲಾ ಮಹಿಳೆಯರಿಗೆ ಹಿಜಾಬ್ ಹಾಕಿಸಿ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ವ್ಯಾಪಾರ ಬಂದ್:
ಮಾರ್ಕೆಟ್ ಬಂದ್ ಮಾಡಿ ಹಿಂದೂಗಳಿಗೆ ತೊಂದ್ರೆ ಕೊಡೋದು ಇನ್ನುಂದೆ ನಡೆಯಲ್ಲ.ಇದರಿಂದ ನಿಮ್ಮ ವ್ಯಾಪಾರ ನಿರಂತರ ಬಂದ್ ಆಗುತ್ತದೆ. ಮುಸ್ಲಿಂ ಸಮುದಾಯದವರೇ ಹಿಂದುಗಳ ಹತ್ತಿರ ಖರೀದಿ ಮಾಡಬೇಡಿ ಅಂತ ನೀವೆ ಮೊದಲು ಹೇಳಿ ವಿವಾದ ಮಾಡಿದ್ದಿರಿ.
ಏಕರೂಪ ನಾಗರಿಕ ಸಂಹಿತೆ ಕಾನೂನು
ಈ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಕಾನೂನು ಬರುವವರೆಗೂ ನಾವು ಜನಸಂಖ್ಯೆ ನಿಯಂತ್ರಣ ಮಾಡಬಾರದು. ಎರಡು ಮಕ್ಕಳು ಇದ್ದವರು,ಮೂರು,ಮೂರು ಮಕ್ಕಳಿದ್ದವರು ನಾಲ್ಕು ಮಕ್ಕಳನ್ನು ಮಾಡಬೇಕೆಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಕ್ಕಳನ್ನು ಹಡೆಯುವ ತಾಕತ್ ಇಲ್ಲದವರು ಮತಾಂತರ ಮಾಡ್ತಿದ್ದಾರೆ.ಲವ್ ಜಿಹಾದ್ ,ಲ್ಯಾಂಡ್ ಜಿಹಾದ್ ಇನ್ನೂ ಮುಂದೆ ನಡೆಲ್ಲವೆಂದು ಕೆಲ ಮುಸ್ಲಿಂ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: Kodagu: ಬಸವೇಶ್ವರ ದೇವರಿಗೆ ಹಣ್ಣು ಕಾಯಿ ಅರ್ಪಿಸಿ ಭಾವೈಕ್ಯತೆ ಮೆರೆದ ಮುಸಲ್ಮಾನರು
ಎಚ್ ಡಿಕೆ ವಿರುದ್ಧ ವಾಗ್ದಾಳಿ...!
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಡಾ.ಹಣಮಂತ ಮಳಲಿ ವಾಗ್ದಾಳಿ ನಡೆಸಿದರು. ಕಲ್ಲಂಗಡಿ ಹಣ್ಣು ಒಡೆದು ಹಾಕಿದ್ದಾರೆಂದು 10 ಸಾವಿರ ರೂಪಾಯಿ ಹಣ ಕೊಟ್ಟಿದ್ದಾನೆಂದು ಮಾಜಿ ಸಿಎಂ ಎಚ್.ಡಿ.ಕೆ ಹೇಸರು ಹೇಳದೆ ಎಚ್ ಡಿಕೆ ವಿರುದ್ಧ ಕಿಡಿಕಾರಿದರು.
ಅವರೇನು ಅವರ ಅಕ್ಕನ ಮಕ್ಕಳಾ..?
ನಿಮಗೆ ಗಂಡಸ್ತನ ಇದ್ರೆ ಕಲ್ಲಂಗಡಿ ಅಷ್ಟೇ ಅಲ್ಲ. ಕಾಶ್ಮೀರದಲ್ಲಿ ನಮ್ಮ ಹಿಂದೂಗಳ ತಲೆ ಹೊಡೆದಿದ್ದಾರಲ್ಲೋ ಬಕ್ರಾ ನಿನಗೆ ಗೊತ್ತಲೇನೋ ನಾಚಿಕೆಗೇಡಿ ಎಂದು ಎಚ್ ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: Santosh Patil: ಉಡುಪಿಯಲ್ಲಿ FIR ದಾಖಲು; ಮೊದಲ ಆರೋಪಿ ಸ್ಥಾನದಲ್ಲಿ ಸಚಿವ KS Eshwarappa ಹೆಸರು
ನಮ್ಮ ದೇಶದಲ್ಲಿ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ .ಅಬ್ದಲ್ ಕಲಾಂ,ಇಬ್ರಾಹಿಂ ಸುತಾರ ಹೀಗೆ ಅನೇಕರು ನಮಗೆ ಆದರ್ಶವಾಗಿದ್ದಾರೆ. ಆದರೆ, ಮುಸ್ಲಿಂರು ಇಂತಹವರನ್ನು ಮೆಚ್ಚುವದಿಲ್ಲ. ದೇಶದಲ್ಲಿ ಮುಸ್ಲಿಂರು ಹಿಜಾಬ್, ಇನ್ನಿತರ ವಿಷಯದ ವಿಚಾರವಾಗಿ ವಿವಾದ ಸೃಷ್ಟಿ ಮಾಡುವದು ಸರಿಯಲ್ಲ. ದೇಶದ ಕಾನೂನು ಹಾಗೂ ಸಂವಿಧಾನ ಗೌರವ ನೀಡಬೇಕೆಂದರು.
ಕೊಡಗಿನಲ್ಲಿ ಸಾಮರಸ್ಯ
ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಕರಡಿಗೋಡಿನ ಶ್ರೀ ಬಸವೇಶ್ವರ ಜಾತ್ರೆಯಲ್ಲಿ (Basaveshwara) ಹಿಂದೂ ಮುಸನ್ಮಾನ, ಕ್ರೈಸ್ತರು ಭಾಗವಹಿಸುವ ಮೂಲಕ ಭಾವೈಕ್ಯತೆ ಮೆರೆದಿದ್ದಾನೆ. ಬಸವೇಶ್ವರ ಜಾತ್ರೆಯಲ್ಲಿ ಹಿಂದೂ, ಮುಸಲ್ಮಾನರು ಮತ್ತು ಕ್ರಿಶ್ಚಿಯನ್ನರು ನಿರಾತಂಕವಾಗಿ ವ್ಯಾಪಾರ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ