Kolar: ಹಿಂದೂ ವ್ಯಕ್ತಿಯೇ ಆಂಜನೇಯ ದೇಗುಲದಲ್ಲಿ ದನದ ಮಾಂಸ ಹಾಕಿ, ಮುಸ್ಲಿಮರ ಮೇಲೆ ಆರೋಪ?

ಕೋಲಾರದ ಕೋಗಿಲಹಳ್ಳಿ ನಿವಾಸದ ಬಳಿ ಮಾಜಿ ಶಾಸಕ ವರ್ತೂರು ಪ್ರಕಾಶ್ ಆಯೋಜಿಸಿದ್ದ, ಬಿಜೆಪಿ ಸೇರ್ಪಡೆ ಪೂರ್ವ ಸಭೆಯಲ್ಲಿ ಮಾತನಾಡುತ್ತಾ, ಮುಸ್ಲಿಂ ಸಮುದಾಯದ ನಾಯಕರನ್ನ ಸೆಳೆಯಲು, ಹಿಂದಿ‌ನ ವಿವಾದಾತ್ಮಕ ಘಟನೆ ಮೆಲುಕು ಹಾಕಿ, ಬಿಜೆಪಿ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

BJP ಮುಖಂಡರು

BJP ಮುಖಂಡರು

  • Share this:
ಅಭ್ಯರ್ಥಿಯಾಗಿ ನಿಂತು, ಎರಡು ಬಾರಿ ಕೋಲಾರ (Kolar) ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದು ಬೀಗಿದ್ದ ಮಾಜಿ ಸಚಿವ ವರ್ತೂರು ಪ್ರಕಾಶ್ (Varthur Prakash), ಬಿಜೆಪಿ ಸೇರ್ಪಡೆ ಆಗುವುದಾಗಿ ಮುಖಂಡರ ಸಭೆಯಲ್ಲಿ ಘೋಷಿಸಿದ್ದಾರೆ, ಕೋಲಾರ ನಗರ ಹೊರವಲಯದ ಕೋಗಿಲಹಳ್ಳಿ ನಿವಾಸದ ಬಳಿ ಬೆಂಬಲಿಗರ ಸಭೆ ಕರೆದಿದ್ದ ವರ್ತೂರು ಪ್ರಕಾಶ್, ಬಿಜೆಪಿ (BJP) ಪಕ್ಷದ ಸೇರ್ಪಡೆ ಕುರಿತು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು,  ಮಾಜಿ ತಾಲೂಕು ಪಂಚಾಯಿತಿ ಸದಸ್ಯರು ಹಾಗು ಹತ್ತಾರು ಮುಖಂಡರ ಅಭಿಪ್ರಾಯವನ್ನು  ಪಡೆದುಕೊಂಡರು, ಬಿಜೆಪಿ ಸೇರಲು ಎಲ್ಲಾ ಮುಖಂಡರು ಒಪ್ಪಿಗೆ ನೀಡಿದ ಹಿನ್ನಲೆ, ಕಾರ್ಯಕ್ರಮದಲ್ಲಿ ಕಡೆಯದಾಗಿ ಮಾತನಾಡಿದ ವರ್ತೂರು ಪ್ರಕಾಶ್, ಸಿಎಂ  ಬಸವರಾಜ ಬೊಮ್ಮಾಯಿ ಹಾಗು ಉಸ್ತುವಾರಿ ಸಚಿವ ಮುನಿರತ್ನ ಅವರ ಆಹ್ವಾನ ಮೇರೆಗೆ ಬಿಜೆಪಿ ಸೇರ್ತಿರುವುದಾಗಿ ಹೇಳಿದ್ದಾರೆ.

ಬಳಿಕ ಮಾಧ್ಯಮಗಳೊಂದಿಗೆ ಮಾತಮಾಡಿದ ವರ್ತೂರು, ಮೂರು ಚುನಾವಣೆಗಳನ್ನು ಪಕ್ಷೇತರನಾಗಿ ಎದುರಿಸಿದ್ದೆ, ಮುಂದಿನ ಚುನಾವಣೆಯಲ್ಲಿ  ರಾಷ್ಟ್ರೀಯ ಪಕ್ಷದ ಸ್ಪರ್ಧಿ ಆಗಲಿದ್ದೇನೆ, ಕಾಂಗ್ರೆಸ್ ಸೇರ್ಪಡೆ ಕುರಿತು ಆ ಪಕ್ಷದ ಮುಖಂಡರನ್ನು ಭೇಟಿ ಮಾಡಿದರೂ ಪ್ರಯೋಜನ ಆಗಲಿಲ್ಲ,  ಬಿಜೆಪಿಯವರು ಪಕ್ಷ ಸೇರಲು ಆಹ್ವಾನ ಕೊಟ್ಟಿದ್ದಾರೆ, ನಮ್ಮ ಕಾರ್ಯಕರ್ತರು ಸಹ ಒಪ್ಪಿದ್ದಾರೆ,  ಬಿಜೆಪಿ ಪಕ್ಷ ಸಂಘಟನೆ ನನ್ನ ಕೆಲಸ, ನಾನೂ ಕೂಡ ಮೊದಲಿನಿಂದಲೂ ಹಿಂದುತ್ವ ಪಾಲಿಸಿಕೊಂಡು ಬಂದಿದ್ದೇನೆ. ನಮ್ಮ ಮನೆ ದೇವರೆ ಶ್ರೀರಾಮ,ನಮ್ಮ ತೋಟದಲ್ಲಿ ಆಂಜನೇಯ ನ ಮೂರ್ತಿ ಸ್ತಾಪಿಸಿದ್ದೇನೆ ಎಂದು  ಹೇಳಿಕೆ ನೀಡಿದರು.

ಹಿಂದೂ ದೇಗುಲದಲ್ಲಿ ದನದ ಮಾಂಸ ಹಾಕಿದ್ದು ಹಿಂದೂ ವ್ಯಕ್ತಿ.

ಬಿಜೆಪಿ ಸೇರ್ಪಡೆ ಪೂರ್ವಭಾವಿ ಸಭೆಯಲ್ಲಿ ವರ್ತೂರು ಪ್ರಕಾಶ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ, 2009 ರಲ್ಲಿ ನಾನು ಶಾಸಕನಾಗಿದ್ದಾಗ ಹಿಂದೂ ವ್ಯಕ್ತಿಯೇ, ಕೋಲಾರ ನಗರದ ಅಮ್ಮವಾರಿ ಪೇಟೆ ಆಂಜನೇಯ ಸ್ವಾಮಿ ದೇಗುಲದಲ್ಲಿ ಹಸುವಿನ ಮಾಂಸ ಹಾಕಿದ್ದರು,  ನಮ್ಮ ಹಿಂದೂಗಳೇ ಬೇಕಂತಲೇ ಕೃತ್ಯ ಎಸಗಿ, ಮುಸ್ಮಿಮರ ಮೇಲೆ ಆರೋಪ ಮಾಡಲಾಗಿತ್ತು, ಹಿಂದೂಗಳು ಮಾಡೊದು, ಮುಸ್ಮಿಮರ ಮೇಲೆ ಹಾಕೋದು ಎಂದು ಟೀಕಿಸಿದರು.

ಇದನ್ನೂ ಓದಿ: Morning Digest: ಜೈಭೀಮ್​ನಂತಹ ರಿಯಲ್ ಸ್ಟೋರಿ, ಸುನೇತ್ರಾ ಸ್ಕೂಟಿ ಅಪಘಾತ, 19 ಜಿಲ್ಲೆಯಲ್ಲಿ ಮಳೆ: ಬೆಳಗಿನ ಟಾಪ್ ನ್ಯೂಸ್ ಗಳು

ಇನ್ನು ಅವತ್ತಿನ ಘಟನೆ ನಂತರ ದೇಗುಲ ಶುಚಿ ಮಾಡಲು  ಮಾಂಸವನ್ನ  ಕೆರೆಗೆ ಬಿಸಾಡಿ ಎಂದು ನಾನೇ ಒಬ್ಬರಿಗೆ ಹೇಳಿದ್ದೆ ಎಂದರು, ಇನ್ನು ದೇಗುಲದಲ್ಲಿ ಮಾಂಸ ಹಾಕಿದ್ದ ವೇಳೆ  ಹಿಂದೂ ಸಂಘಟನೆ ಮುಖಂಡರು  ಪ್ರತಿಭಟನೆ ನಡೆಸಿದ್ದರು.

2009 ರ  ರಂಜಾನ್ ಹಬ್ಬದ ವೇಳೆ ನಡೆದಿದ್ದ ಘಟನೆಯಿಂದ ಕೋಲಾರ ನಗರದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿತ್ತು,  ಕೂಡಲೇ ಎಚ್ಚೆತ್ತುಕೊಂಡಿದ್ದ ಪೊಲೀಸರು, ಎರಡೂ ಕಡೆಯವರನ್ನ ಕರೆಸಿ ಶಾಂತಿ ಮಾತುಕತೆ ನಡೆಸಿ  ಸಮಾಧಾನ ಪಡಿಸಿದ್ದರು, ವಿವಾದ ಬಗೆಹರಿದ ನಂತರ ದೇಗುಲವನ್ನ ಮುಸ್ಲಿಂ ಮುಖಂಡರು ಶುಚಿಗೊಳಿಸಿದ್ದರು.

ವರ್ತೂರು ಪ್ರಕಾಶ್ ಬಿಜೆಪಿ ಸೇರ್ಪಡೆಗೆ ವಿರೋಧ

ಮಾಜಿ ಶಾಸಕ ವರ್ತೂರು ಪ್ರಕಾಶ್ ಬಿಜೆಪಿ ಸೇರ್ಪಡೆಗೆ ಜಿಲ್ಲಾ ನಾಯಕರು ತೀವ್ರ ವಿರೋದ ವ್ಯಕ್ತಪಡಿಸಿದ್ದಾರೆ, ನೆನ್ನೆ ಕಾರ್ಯಕರ್ತರಿಗೆ ಭರ್ಜರಿ ಬಾಡೂಟ ಏರ್ಪಡಿಸಿ ಬಿಜೆಪಿ ಸೇರೋದಾಗಿ ಘೋಷಿಸಿದ್ದ ವರ್ತೂರು ಪ್ರಕಾಶ್ ಸೇರ್ಪಡೆಗೆ,  ಸ್ತಳೀಯ ಬಿಜೆಪಿ ನಾಯಕರು ವಿರೋದಿಸಿದ್ದು,  ಪಕ್ಷಕ್ಕೆ ಸೇರಿಸೊಲ್ಲ ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ, ಆದರೆ ಸೇರ್ಪಡೆ ಕಾರ್ಯಕ್ರಮ ಪೂರ್ವ ನಿಗದಿಯಂತೆ ನಡೆಯಲಿದೆ ಎಂದು ಸಚಿವ ಆರ್ ಅಶೋಕ್ ಮಾಹಿತಿ ನೀಡಿದ್ದಾರೆ ಎಂದು ಮಂಜುನಾಥ್ ಗೌಡ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: PSI Recruitment Scam: ಕಿಂಗ್ ಪಿನ್ RD Patilಗೆ ಶಾಕ್; ಬಂಧಿತ CPI, DySPಗೆ ಕೈದಿ ನಂಬರ್; ಸರ್ಕಾರಕ್ಕೆ ಖರ್ಗೆ ಪಂಚ ಪ್ರಶ್ನೆ

ಇದಕ್ಕೆ ವಿರೋದ ವ್ಯಕ್ತಪಡಿಸಿರೊ ಕೋಲಾರ ಕೂಡಾ ಅಧ್ಯಕ್ಷ್ಯ ಓಂ ಶಕ್ತಿ ಚಲಪತಿ,  ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯೇ ಇಲ್ಲ ಎಂತಿದ್ದವರು, ಈಗ ಪಕ್ಷ ಸೇರ್ಪಡೆ ಆಗ್ತಿರೋದು ಹಾಸ್ಯಾಸ್ಪದ ಎಂದಿದ್ದು, ಹೊಸಬರಿಗೆ ಟಿಕೆಟ್ ನೀಡದಂತೆ ಒತ್ತಾಯ ಹೇರಿರೊದಾಗಿ ಮುಖಂಡರು ತಿಳಿಸಿದ್ದಾರೆ.
Published by:Divya D
First published: