Karnataka: ಕರ್ನಾಟಕದಲ್ಲೂ ಕಟ್ಟಲಾಗಿದ್ಯಾ ದೇವಾಲಯಗಳ ಮೇಲೆ ಮಸೀದಿ? ಹಿಂದೂ ಸಂಘಟನೆಗಳಿಂದ ಪಟ್ಟಿ ಬಿಡುಗಡೆ

ಕೇವಲ ಪುಸ್ತಕಗಳ ಆಧಾರ ಎಂದು ಹಿಂದೂ ಸಂಘಟನೆಗಳು ಹೇಳಿಕೊಂಡಿವೆಯಾದ್ರೂ, ಇದರ ಚಿತ್ರಣ ಸ್ಪಷ್ಟತೆ ಇಲ್ಲ. ರಾಜ್ಯದಲ್ಲಿ ಈ ರೀತಿ 191 ಮಸೀದಿಗಳಿವೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪಟ್ಟಿಯೊಂದನ್ನು ಸಂಘಟನೆಗಳು ಬಿಡುಗಡೆಗೊಳಿಸಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕರ್ನಾಟಕದಲ್ಲಿ ಮಂದಿರ, ಮಸೀದಿಗಳ ವಿವಾದದ (Temple Moque Row) ಕಿಡಿ ಒಂದೊಂದು ಜಿಲ್ಲೆಗೆ ವ್ಯಾಪಿಸಿದೆ. ದಕ್ಷಿಣ ಕನ್ನಡ, ಮಂಡ್ಯ, ಕಲಬುರಗಿ, ಬೀದರ್ ಜಿಲ್ಲೆಗಳಲ್ಲಿಯ ವಿವಾದಗಳು ದೊಡ್ಡ ಮಟ್ಟದಲ್ಲಿ ಚರ್ಚೆಗೆ ನಾಂದಿ ಹಾಡಿವೆ. ದೇವಾಲಯಗಳ ಮೇಲೆ ಮಸೀದಿ ನಿರ್ಮಾಣ ಮಾಡಲಾಗಿದೆ. ಈಗ ಅವುಗಳನ್ನು ದೇವಾಲಯಗಳಿಗೆ ಹಿಂದೂ ಸಂಘಟನೆಗಳು (Hindu Organization) ಆಗ್ರಹಿಸುತ್ತಿವೆ. ಈ ಎಲ್ಲ ಬೆಳವಣಿಗೆಗಳ ನಡುವೆ ಹಿಂದೂ ಸಂಘಟನೆಗಳು ಕರ್ನಾಟಕದಲ್ಲಿ (Karnataka) ದೇವಾಲಯದ ಮೇಲೆ ಮಸೀದಿ ನಿರ್ಮಾಣವಾಗಿದೆ ಎಂದು ಹೇಳಿ ಕೆಲ ಅಂಕಿ ಸಂಖ್ಯೆಯನ್ನು ನೀಡಿವೆ. ಆದ್ರೆ ಈ ಅಂಕಿ ಸಂಖ್ಯೆಯನ್ನು ಯಾವ ಆಧಾರದ ಮೇಲೆ ನೀಡಲಾಗಿದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ.

ಕೇವಲ ಪುಸ್ತಕಗಳ ಆಧಾರ ಎಂದು ಹಿಂದೂ ಸಂಘಟನೆಗಳು ಹೇಳಿಕೊಂಡಿವೆಯಾದ್ರೂ, ಇದರ ಚಿತ್ರಣ ಸ್ಪಷ್ಟತೆ ಇಲ್ಲ. ರಾಜ್ಯದಲ್ಲಿ ಈ ರೀತಿ 191 ಮಸೀದಿಗಳಿವೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪಟ್ಟಿಯೊಂದನ್ನು ಸಂಘಟನೆಗಳು ಬಿಡುಗಡೆಗೊಳಿಸಿವೆ.

ಯಾವ ಜಿಲ್ಲೆಯಲ್ಲಿ ಎಷ್ಟು?

ಬೆಂಗಳೂರು -2, ಬೆಳಗಾವಿ - 12 , ಬಳ್ಳಾರಿ - 9, ಬೀದರ್ - 29 , ವಿಜಯಪುರ- 43, ಚಿಕ್ಕಮಗಳೂರು -1, ದಾವಣಗೆರೆ -1, ಧಾರವಾಡ- 23, ಕಲಬುರ್ಗಿ  - 31, ಕೋಲಾರ  - 2, ಮಂಡ್ಯ - 2, ಮೈಸೂರು -1, ಉತ್ತರ ಕನ್ನಡ -2, ರಾಯಚೂರು - 26, ಶಿವಮೊಗ್ಗ - 5, ತುಮಕೂರು – 3

ಇದನ್ನೂ ಓದಿ:  Karnataka High Court: ರಾಜಕಾರಣಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣ ಬೇಗ ಬೇಗ ತನಿಖೆ ನಡೆಸಿ: ಹೈಕೋರ್ಟ್ ಖಡಕ್ ಸೂಚನೆ

ಶೃಂಗಾರ ಗೌರಿಗೆ ಪೂಜೆ

ವಾರಣಾಸಿಯ (Varanasi) ಜ್ಞಾನವಾಪಿ ಮಸೀದಿಯಲ್ಲಿ (Jyanavapi Masque) ಇದೆ ಎನ್ನಲಾಗುತ್ತಿರುವ ಶೃಂಗಾರ ಗೌರಿಗೆ ಪೂಜೆ ಸಲ್ಲಿಸುವ ವಿಚಾರವಾಗಿ ಹೂಡಲಾಗಿರುವ ಪ್ರಕರಣ ವಿಚಾರಣೆಗೆ ಯೋಗ್ಯವೋ ಇಲ್ಲವೋ ಎಂಬುದರ ಬಗ್ಗೆ ಇಂದು ವಾರಣಾಸಿ ಜಿಲ್ಲಾ ನ್ಯಾಯಾಲಯದಲ್ಲಿ (Varanasi District Court) ವಿಚಾರಣೆ ನಡೆಯಲಿದೆ.

ದೂರುದಾರರು ಶೃಂಗಾರ ಗೌರಿಗೆ ಪೂಜೆ ಸಲ್ಲಿಸುವುದು ಸೇರಿದಂತೆ ಇನ್ನೂ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ‌. ಜ್ಞಾನವಾಪಿ ಮಸೀದಿ ನಿರ್ವಹಣೆ ಮಾಡುತ್ತಿರುವ ಅಂಜುಮನ್ ಇನಾಝಾನಿಯಾ ಮಸಾಜಿದ್ ಸಮಿತಿ ಅರ್ಜಿ ವಜಾಗೊಳಿಸುವಂತೆ ಮನವಿ ಮಾಡಿದೆ. ಈ ಎಲ್ಲದರ ಬಗ್ಗೆ ಇಂದು ನ್ಯಾಯಾಲಯ ನಿರ್ಧರಿಸಲಿದೆ‌.

ಮೊದಲಿಗೆ ಅಂಜುಮನ್ ಇನಾಝಾನಿಯಾ ಮಸಾಜಿದ್ ಸಮಿತಿ ಪರ ವಕೀಲರು ವಾದ ಮಂಡಿಸಲಿದ್ದಾರೆ. ನಂತರ ಫಿರ್ಯಾದಿದಾರ ಪರ ವಕೀಲರು ಮತ್ತು ಜಿಲ್ಲಾ ಸರ್ಕಾರಿ ವಕೀಲರು ವಾದ ಮಂಡಿಸಲಿದ್ದಾರೆ‌.

ಶೃಂಗಾರ ಗೌರಿಯ ನಿಯಮಿತ ದರ್ಶನ ಮತ್ತು ಇತರ ದೇವತೆಗಳ ರಕ್ಷಣೆಗಾಗಿ ಸಲ್ಲಿಸಲಾದ ಮೊಕದ್ದಮೆಯ ನಿರ್ವಹಣೆ ಕುರಿತು ಮೇ 26 ರಂದು ಜಿಲ್ಲಾ ನ್ಯಾಯಾಧೀಶ ಡಾ. ಅಜಯ್ ಕೃಷ್ಣ ವಿಶ್ವೇಶ್ ವಿಚಾರಣೆ ನಡೆಸಿ ಮೇ 30ರಂದು ಇನ್ನಷ್ಟು ವಿಚಾರಣೆ ನಡೆಸಿ ತೀರ್ಮಾನ ಮಾಡುವುದಾಗಿ ಹೇಳಿದ್ದರು.

ಕುಂದಾನಗರಿಯಲ್ಲಿ ಶಾಸಕ ಅಭಯ್ ಪಾಟೀಲ್ ಹೇಳಿಕೆಯ ಕಿಚ್ಚು

ಬೆಳಗಾವಿಯಲ್ಲಿ (Belagavi) ಪುರಾತನ ದೇವಾಲಯ ಒಡೆದು ಮಸೀದಿ ನಿರ್ಮಿಸಿದ್ದಾರೆ  ಎಂದು ಬೆಳಗಾವಿ ದಕ್ಷಿಣ ಬಿಜೆಪಿ ಶಾಸಕ ಅಭಯ ಪಾಟೀಲ್ (BJP MLA Abhay Patil) ಹೊಸ ಬಾಂಬ್ ಸಿಡಿಸಿದ್ದು ವಿವಾದಕ್ಕೆ ಕಾರಣವಾಗಿದೆ.

ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ಮಸೀದಿ-ಮಂದಿರ ವಿವಾದ ಹೊಸ ಕಿಚ್ಚು ಹೊತ್ತಿಸಿದೆ. ಹಿಜಾಬ್ (Hijab), ಹಲಾಲ್ ಕಟ್ (Halalcut), ಅಜಾನ್ (Azan) ವಿವಾದ ರಾಜ್ಯದಲ್ಲಿ ತಣ್ಣಗಾಗುತ್ತಿದ್ದಂತೆ ಮಸೀದಿ-ಮಂದಿರ ವಿವಾದ ಹುಟ್ಟಿಕೊಂಡಿದೆ. ಬೆಳಗಾವಿಯ ರಾಮದೇವ ಗಲ್ಲಿಯಲ್ಲಿರುವ ದೇವಾಲಯವನ್ನು ಕೆಡವಿ ಅದರ ಮೇಲೆ ಮಸೀದಿ ನಿರ್ಮಾಣ ಮಾಡಲಾಗಿದೆ ಎಂದು ಬಿಜೆಪಿ ಶಾಸಕ ಅಭಯ ಪಾಟೀಲ ಬಾಂಬ್ ಸಿಡಿಸಿದ್ದು ಬೆಳಗಾವಿಯಲ್ಲಿ ಹೊಸ ಸಂಚಲನ ಮೂಡಿಸಿದೆ.

ಇದನ್ನೂ ಓದಿ:  Basavaraj Bommai: ಸಿದ್ದರಾಮಯ್ಯ ಆರ್ಯರಾ? ದ್ರಾವಿಡರಾ?; ಮೊದಲು ಸೋನಿಯಾ ಮೂಲ ಹುಡುಕಿ ಎಂದ್ರು ಪ್ರತಾಪ್ ಸಿಂಹ

ಈ ಮಸೀದಿ, ಮರಳಿ ದೇವಾಲಯ ಆಗಬೇಕು ಎಂಬುದು ಬೆಳಗಾವಿಯ ಎಲ್ಲ ಹಿಂದೂಗಳ ಭಾವನೆ, ಸ್ಥಳೀಯ ಹಿರಿಯರು ಇದು ಪುರಾತನ ಹಿಂದೂ ದೇವಾಲಯ ಎಂಬ ಭಾವನೆ ವ್ಯಕ್ತಪಡಿಸಿದ್ದಾರೆ ಎನ್ನುವ ಮೂಲಕ ಶಾಂತವಾಗಿದ್ದ ಬೆಳಗಾವಿಯಲ್ಲಿ ಕಿಚ್ಚು ಹೊತ್ತಿಸಿದ್ದಾರೆ.
Published by:Mahmadrafik K
First published: