ಬೆಳಗಾವಿ: ವಿಧಾನಸಭಾ ಚುನಾವಣೆಗೆ (Assembly Election 2023) ಇನ್ನು ಮೂರು ತಿಂಗಳು ಮಾತ್ರ ಬಾಕಿ ಇದೆ. ಅದರಲ್ಲಿಯೂ ಕರಾವಳಿ ಭಾಗದಲ್ಲಿ (Coastal Karnataka) ಕೋಮು ಸೌಹಾರ್ದ ಕದಡುವಂತಹ ಕೆಲಸಗಳು ನಡೆಯುತ್ತಿದೆ. ಇದೀಗ ಬೆಳಗಾವಿಯಲ್ಲಿಯೂ (Belagavi) ಹೊಸ ವಿವಾದವೊಂದು ಹುಟ್ಟಿಕೊಂಡಿದೆ. ಬೆಳಗಾವಿಯ ಸಾರಥಿ ನಗರದಲ್ಲಿರುವ ಮಸೀದಿ (Mosque) ಅಕ್ರಮವಾಗಿ ನಿರ್ಮಾಣ ಮಾಡಲಾಗಿದೆ ಎಂದು ಹಿಂದೂ ಸಂಘಟನೆಗಳು (Hindu Organizations) ಆರೋಪಿಸಿವೆ. ವಸತಿ ನಿವೇಶನ ಪಡೆದು ಮಸೀದಿ ನಿರ್ಮಾಣ ಮಾಡಲಾಗಿದೆ. ಹಾಗಾಗಿ ಫಾತಿಮಾ ಮಸೀದಿಯನ್ನು (Fatima Moತೆರವುಗೊಳಿಸಬೇಕು ಎಂದು ಹಿಂದೂ ಸಂಘಟನೆಗಳು ಆಗ್ರಹಿಸಿವೆ. ಸಾರಥಿ ನಗರ ಬೆಳಗಾವಿ ಗ್ರಾಮೀಣ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತದೆ.
ಮಸೀದಿ ವಿವಾದದ ಸಂಬಂಧ ಸೋಮವಾರ ರಾತ್ರಿ ಸಾರಥಿ ನಗರದಲ್ಲಿ ಹಿಂದೂಪರ ಸಂಘಟನೆಗಳು, ಬಿಜೆಪಿ ನಾಯಕರು ಸಭೆ ಸೇರಿದ್ದರು. ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್ ಪಾಟೀಲ್, ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಧನಂಜಯ್ ಜಾಧವ್, ಉಜ್ವಲಾ ಬಡವವನಾಚೆ, ದೀಪಾ ಕುಡಚಿ, ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರವಿ ಕೋಕಿತಕರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಅಧಿಕಾರಿಗಳ ಮೇಲೆ ಹೆಬ್ಬಾಳ್ಕರ್ ಒತ್ತಡ
ಅನಧಿಕೃತವಾಗಿ ಮಸೀದಿ ನಿರ್ಮಿಸಿದ್ದರೂ ತೆರವಿಗೆ ಮಹಾನಗರ ಪಾಲಿಕೆ ಹಿಂದೇಟು ಹಾಕುತ್ತಿದೆ. ಮಹಾನಗರ ಪಾಲಿಕೆ ಆಯುಕ್ತರ ಮೇಲೆ ಸ್ಥಳೀಯ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಒತ್ತಡ ಹಾಕಿದ್ದಾರೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ.
ಶಾಸಕ ಸಂಜಯ್ ಪಾಟೀಲ್ ಆಕ್ರೋಶ
ಮಸೀದಿ ನಿರ್ಮಾಣದ ಕುರಿತು ಮಾತನಾಡಿದ ಶಾಸಕ ಸಂಜಯ್ ಪಾಟೀಲ್, ಮನೆ ನಿರ್ಮಾಣ ಮಾಡುವ ಅನುಮತಿ ಪಡೆದು ಮಸೀದಿ ನಿರ್ಮಾಣ ಮಾಡಲಾಗಿದೆ. ಮಸೀದಿ ಅಕ್ರಮ ಎಂಬುದು ಪಾಲಿಕೆ ಆಯುಕ್ತರು ಹಾಗೂ ಎಲ್ಲರಿಗೂ ಗೊತ್ತು. ಒಂದು ವರ್ಷದಿಂದ ತೆರವು ಮಾಡ್ತಿವಿ ಅಂತ ಹೇಳುತ್ತಲೇ ಇದ್ದಾರೆ. ಆದ್ರೆ ತೆರವು ಕಾರ್ಯಕ್ಕೆ ಮುಂದಾಗಿಲ್ಲ ಎಂದು ಆಕ್ರೋಶ ಹೊರ ಹಾಕಿದರು.
ನಾವು ಯಾವುದೇ ವ್ಯಕ್ತಿ, ಸಮಾಜದ ವಿರುದ್ಧ ಇಲ್ಲ. ಯಾವುದು ಅಕ್ರಮ ಇದೆ ಅದನ್ನು ತೆರವು ಮಾಡಬೇಕು ಎನ್ನುವುದು ನಮ್ಮ ಬೇಡಿಕೆ. ಬಡಾವಣೆಯಲ್ಲಿ ಕೆಲವರು ಯಾವುದೇ ನಂಬರ್ ಪ್ಲೇಟ್ ಇಲ್ಲದ ವಾಹನ ತಗೊಂಡು ಓಡಾಡುತ್ತಾರೆ. ಬಡಾವಣೆಯಲ್ಲಿ ಹಿಂದೀ ಮಹಿಳೆಯರ ಬಗ್ಗೆ ಅಶ್ಲೀಲವಾಗಿ ಮಾತನಾಡುವ ಘಟನೆಗಳು ಸದ ನಡೆದಿವೆ ಎಂಬ ವಿಷಯವನ್ನು ಸಂಜಯ್ ಪಾಟೀಲ್ ತಿಳಿಸಿದರು.
ಹಿಂದೂಗಳ ಮೇಲೆ ಅನ್ಯಾಯ
ಮನೆಯಲ್ಲಿ ಒಬ್ಬರೆ ಇರ್ತಿರಾ ನೋಡುತ್ತೇವೆ ಎಂದು ಬೆದರಿಕೆ ಹಾಕ್ತಾರೆ. ಬಹುಸಂಖ್ಯಾತ ಹಿಂದೂ ರಾಷ್ಟ್ರದಲ್ಲಿ ಹಿಂದೂಗಳ ಮೇಲೆ ಅನ್ಯಾಯ ನಡೆಯುತ್ತಿರೋದನ್ನು ನೋಡಿ ಕುಳಿತುಕೊಳ್ಳುವ ಜನ ನಾವಲ್ಲ. ಅವನಿಗೂ ಗೊತ್ತಿದೆ ಯಾವಾಗ ಶಸ್ತ್ರ ತೊಗೊಬೇಕು ವಿರೋಧ ಮಾಡಬೇಕು ಎಂದು ಕಿಡಿಕಾರಿದರು.
ಮಸೀದಿ ತೆರವಿಗೆ ಮನವಿ
ನ್ಯಾಯವಾಗಿ ಇರೋದನ್ನು ತೀರ್ಮಾನ ಮಾಡಿ.ತೀರ್ಮಾನ ಕೈಗೊಳ್ಳಲು ಸಮಯ ವ್ಯರ್ಥ ಮಾಡಬೇಡಿ. ಜನರ ತಾಳ್ಮೆ ಪರೀಕ್ಷೆ ಮಾಡುವ ಸ್ವಭಾವ ನಿಲ್ಲಿಸಿ. ಜನರ ಭಾವನೆಗೆ ಸ್ಪಂದಿಸಿ, ಯಾವುದು ಅಕ್ರಮದ ಇದೆ ಅದರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಇದರಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪ ಸಹ ಆಗಬಾರದು. ಪಾಲಿಕೆ ಆಯುಕ್ತರು, ಜಿಲ್ಲಾಧಿಕಾರಿಯನ್ನು ಮತ್ತೊಮ್ಮೆ ಭೇಟಿಯಾಗಿ ವಿನಂತಿ ಮಾಡಿಕೊಳ್ಳುತ್ತೇವೆ. ಒಂದು ವಾರದಲ್ಲಿ ಕ್ರಮ ವಹಿಸಿದೇ ಇದ್ರೆ ಹೋರಾಟ ಮಾಡುವ ತೀರ್ಮಾನ ಆಗಿದೆ ಎಂದು ಹೇಳಿದರು.
ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಕಿಡಿ
ಅಧಿಕಾರಿಯೊಬ್ಬರು ಈ ಭಾಗದ ಶಾಸಕಿ ಒತ್ತಡ ಮಾಡಿದ್ದಾರೆ ಎಂದು ಹೇಳಿದ್ದಾರಂತೆ. ಅಧಿಕಾರಿಗೆ ಸುಳ್ಳು ಹೇಳುವ ಅವಶ್ಯಕತೆ ಇಲ್ಲ. ಶಾಸಕಿಗೆ ಅವರ ಮೇಲೆ ಅಷ್ಟು ಪ್ರೀತಿ ಇದ್ರೆ ಮನೆಯಲ್ಲಿ ವ್ಯವಸ್ಥೆ ಮಾಡಿ ಕೊಡಲಿ. ಜನರಿಗೆ ತೊಂದರೆ ಕೊಡುವಂತಹ ಕೆಲಸ ಯಾರು ಮಾಡಬಾರದು. ಒಂದು ಸಮಾಜದ ಮೇಲೆ ಪ್ರೀತಿ ಇನ್ನೊಂದು ಸಮಾಜದ ಮೇಲೆ ಅನ್ಯಾಯ ಸರಿಯಲ್ಲ ಎಂದು ಹೆಸರು ಹೇಳದೇ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ವಾಗ್ದಾಳಿ ನಡೆಸಿದರು.
ಏನಿದು ಸಾರಥಿ ನಗರದ ಫಾತಿಮಾ ಮಸೀದಿ ವಿವಾದ?
ಕರ್ನಾಟಕ ಸರ್ಕಾರದ ವಾಹನ ಚಾಲಕರ ಕೇಂದ್ರ ಸಂಘದ ವತಿಯಿಂದ ಖಾಸಗಿ ಲೇಔಟ್ ನಿರ್ಮಾಣ ಮಾಡಲಾಗಿದೆ. ಖಾಸಗಿ ಲೇಔಟ್ನಲ್ಲಿದ್ದ ನಿವೇಶನ ಸಂಖ್ಯೆ 19ನ್ನು ಮೂಲ ಮಾಲೀಕರು ಸೊಸೈಟಿಗೆ ಗಿಫ್ಟ್ ನೀಡಿದ್ದರು. ಸದರಿ ನಿವೇಶನ ಮೌಲಾನಾ ಅಬ್ದುಲ್ ಕಲಂ ಆಜಾದ್ ಎಜ್ಯುಕೇಶನಲ್ & ಚಾರಿಟೇಬಲ್ ಸೊಸೈಟಿಗೆ ಗಿಫ್ಟ್ ನೀಡಲಾಗಿದೆ. ಈ ನಿವೇಶನದಲ್ಲಿ ಅನಧಿಕೃತವಾಗಿ ಫಾತಿಮಾ ಮಸೀದಿ ನಿರ್ಮಾಣ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ: Hassan: ಗುಂಡಿನ ದಾಳಿಗೆ ಸಂಘ ಪರಿವಾರದ ಕಾರ್ಯಕರ್ತ ಬಲಿ, ಇಬ್ಬರು ಗಂಭೀರ
ಮಸೀದಿ ತೆರವಿಗೆ 2022ರ ಜನವರಿ 17ರಂದು ಮಹಾನಗರ ಪಾಲಿಕೆಗೆ ನಿವಾಸಿಗಳು ಮನವಿ ಮಾಡಿಕೊಂಡಿದ್ದರು. ಈ ಸಂಬಂಧ ಕಾರಣ ಕೇಳಿ ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ್ ಘಾಳಿ ನೋಟಿಸ್ ಜಾರಿ ಮಾಡಿದ್ದರು. ಮಹಾನಗರ ಪಾಲಿಕೆಯಿಂದ ನೀಡಿರುವ ಕಟ್ಟಡ ಪರವಾನಿಗೆ ಉಲ್ಲಂಘನೆ ಆರೋಪ ಕೇಳಿ ಬಂದಿದೆ.
ನಿವೇಶನ ಯಾರದ್ದು?
ವಸತಿ ಕಟ್ಟಡದಲ್ಲಿ ಧಾರ್ಮಿಕ ಚಟುವಟಿಕೆ ನಡೆಸುತ್ತಿರುವ ಹಿನ್ನೆಲೆ 7 ದಿನಗಳೊಳಗೆ ಮಸೀದಿ ತೆರವಿಗೆ ತಾತ್ಕಾಲಿಕ ಆದೇಶ ಹೊರಡಿಸಿದ್ದರು. ಈ ನಿವೇಶನ ವಕ್ಫ್ ಬೋರ್ಡ್ ಆಸ್ತಿ ಎಂದು ಮುಸ್ಲಿಂ ಮುಖಂಡರ ವಾದ ಮಾಡಿದ್ದರು. ಆದರೆ ವಸತಿ ನಿವೇಶನ ನಿಯಮ ಬಾಹಿರವಾಗಿ ವಕ್ಫ್ ಬೋರ್ಡ್ಗೆ ವರ್ಗಾವಣೆ ಆರೋಪ ಕೇಳಿ ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ