ಕೊಲ್ಲೂರು ಆಯ್ತು, ಈಗ ಮೇಲುಕೋಟೆಯಲ್ಲೂ ಹೊತ್ತಿಕೊಂಡ 'Salam Mangalarathi' ವಿವಾದದ 'ಬೆಂಕಿ'! ಟಿಪ್ಪು ಹೆಸರಿನ ಪೂಜೆ ನಿಲ್ಲಿಸಲು ಮನವಿ

ರಾಜ್ಯದ ಅತೀ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹಾಗೂ ಶ್ರೀಮಂತ ದೇಗುಲಗಳಲ್ಲಿ ಒಂದಾದ ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ಸಲಾಂ ಆರತಿ ನಿಲ್ಲಿಸಬೇಕು ಎಂಬ ಆಗ್ರಹ ಕೇಳಿ ಬಂದಿತ್ತು. ಇದೀಗ ಮತ್ತೊಂದು ಪ್ರಸಿದ್ಧ ದೇಗುಲದಲ್ಲೂ ಸಲಾಂ ಮಂಗಳಾರತಿ ವಿವಾದ ಶುರುವಾಗಿದೆ.

ಮೇಲುಕೋಟೆಯ ಚೆಲುವ ನಾರಾಯಣ ಸ್ವಾಮಿ ಸಂಗ್ರಹ ಚಿತ್ರ

ಮೇಲುಕೋಟೆಯ ಚೆಲುವ ನಾರಾಯಣ ಸ್ವಾಮಿ ಸಂಗ್ರಹ ಚಿತ್ರ

  • Share this:
ಮಂಡ್ಯ: ಸಹೋದರಂತಿದ್ದ (Brothers) ಹಿಂದೂ (Hindu) ಹಾಗೂ ಮುಸ್ಲಿಮರ (Muslim) ಸಂಬಂಧದ ನಡುವೆ ಹಿಜಾಬ್ ವಿವಾದದ (Hijab Controversy) ನಂತರ ಬಿರುಕು ಕಾಣಿಸುತ್ತಿದೆ. ಕೆಲ ದಿನಗಳ ಹಿಂದಷ್ಟೇ ಹಿಂದೂ ದೇಗುಲ, ಜಾತ್ರೆ, ಹಬ್ಬ, ಉತ್ಸವಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪರಕ್ಕೆ ಅವಕಾಶ ನೀಡಬಾರದು ಅಂತ ದೊಡ್ಡ ಮಟ್ಟದ ಕೂಗು ಕೇಳಿ ಬಂದಿತ್ತು. ಬಳಿಕ ಹಿಂದೂ ದೇಗುಲಗಳಲ್ಲಿ ಟಿಪ್ಪು ಸುಲ್ತಾನ್ (Tippu Sultan) ಹೆಸರಲ್ಲಿ ನಡೆಸುವ ಸಲಾಂ ಮಂಗಳಾರತಿ ನಿಲ್ಲಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ. ಮುಖ್ಯವಾಗಿ ರಾಜ್ಯದ ಅತೀ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹಾಗೂ ಶ್ರೀಮಂತ ದೇಗುಲಗಳಲ್ಲಿ ಒಂದಾದಾ ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ಸಲಾಂ ಆರತಿ ನಿಲ್ಲಿಸಬೇಕು ಎಂಬ ಆಗ್ರಹ ಕೇಳಿ ಬಂದಿತ್ತು. ಇದೀಗ ಮತ್ತೊಂದು ಪ್ರಸಿದ್ಧ ದೇಗುಲದಲ್ಲೂ ಸಲಾಂ ಮಂಗಳಾರತಿ ವಿವಾದ ಶುರುವಾಗಿದೆ.

ದೀವಟಿಗೆ ಸಲಾಂ ಆರತಿ ನಿಲ್ಲಿಸುವಂತೆ ಮನವಿ

ಮೇಲುಕೋಟೆಯ ಚೆಲುವರಾಯಸ್ವಾಮಿ ದೇವಸ್ಥಾನದಲ್ಲಿ ಪ್ರತಿನಿತ್ಯ ಸಂಜೆ 7 ಗಂಟೆಯ ವೇಳೆಯಲ್ಲಿ ದೀವಟಿಗೆ ಸಲಾಂ ಆರತಿ ಮಾಡಲಾಗುತ್ತದೆ. ಇದು ಟಿಪ್ಪು ಸುಲ್ತಾನ್ ಆದೇಶದ ಮೇರೆಗೆ ಮಾಡುತ್ತಿರುವ ಆರತಿ ಎನ್ನಲಾಗುತ್ತಿದೆ. ಹೀಗಾಗಿ ಈ ಆಚರಣೆಯನ್ನು ನಿಲ್ಲಿಸಬೇಕೆಂದು ಇದೀಗ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರೊಬ್ಬರು ಇಂದು ಮಂಡ್ಯ ಎಡಿಸಿ ಶೈಲಜಾ ಅವರಿಗೆ ಮನವಿ ಮಾಡಿದ್ದಾರೆ.

ಏನಿದು ದೀವಟಿಗೆ ಸಲಾಂ ಆರತಿ?

ಟಿಪ್ಪು ಸುಲ್ತಾನ್ ಆಡಳಿತದ ವೇಳೆ ಆತನ ಆಸ್ಥಾನದಲ್ಲಿ ಆನೆಗಳ ಸರಣಿ ಸಾವು ಆಗುತ್ತಿತ್ತು. ಈ ವೇಳೆ ಟಿಪ್ಪು ಗುರುಗಳು ಚೆಲುವರಾಯಸ್ವಾಮಿಗೆ ಕೊಡುಗೆ ನೀಡುವುದಾಗಿ ತಿಳಿಸುತ್ತಾರೆ. ನಂತರ ಟಿಪ್ಪು ಚೆಲುವರಾಯಸ್ವಾಮಿಗೆ ಚಿನ್ನದ ಆಭರಣಗಳು ಹಾಗೂ ಪಾತ್ರೆಗಳನ್ನು ಉಡುಗೊರೆಯ ರೂಪದಲ್ಲಿ ನೀಡುತ್ತಾನೆ. ಈ ವೇಳೆ ಇದರ ನೆನಪಾರ್ಥ ಇಲ್ಲಿ ದೀವಟಿಗೆ ಸಲಾಂ ಆರತಿ ಮಾಡಬೇಕೆಂಬ ಸೂಚಣೆಯನ್ನು ಟಿಪ್ಪು ನೀಡುತ್ತಾನೆ.

ಇದನ್ನೂ ಓದಿ: Vinaya Samarasya Yojana: ಅಸ್ಪೃಶ್ಯತೆ ನಿರ್ಮೂಲನೆ ಯೋಜನೆಗೆ ದೇಗುಲ ಪ್ರವೇಶಿಸಿದ್ದ ದಲಿತ ಮಗುವಿನ ಹೆಸರು

ದೀವಟಿಗೆ ಸಲಾಂ ಆರತಿ ನಿಲ್ಲಿಸಿ, ಇಲ್ಲ ಹೆಸರು ಬದಲಾಯಿಸಿ

ಪಾರಂಪರಿಕವಾಗಿ ನಡೆದು ಬಂದಿದ್ದ ಸಂಧ್ಯಾರತಿಯನ್ನೇ ದೀವಟಿಗೆ ಸಲಾಂ ಎಂದು ಬದಲಾಯಿಸಲಾಗಿದೆ ಎಂಬ ನಂಬಿಕೆಯೂ ಇದೆ. ಇದೀಗ ದೀವಟಿಗೆ ಸಲಾಂ ಆರತಿ ನಿಲ್ಲಿಸುವಂತೆ ಆಗ್ರಹಿಸಲಾಗಿದೆ. ಇಲ್ಲವೇ ಸಲಾಂ ಆರತಿ ಹೆಸರು ಬದಲಾಯಿಸುವಂತೆ ಮನವಿ ಮಾಡಲಾಗಿದೆ. ಹಿಂದೂ ಸಂಪ್ರದಾಯದಲ್ಲಿ ಸಲಾಂ ಹೆಸರಿನ ಆರತಿಗೆ ಅವಕಾಶ ಇಲ್ಲ. ಅನ್ಯಧರ್ಮದ ದೇವರು, ರಾಜನ ಹೆಸರಿನಲ್ಲಿ ಪೂಜೆ ಬೇಡ. ಹೀಗಾಗಿ ಸಲಾಂ ಆರತಿ ಹೆಸರು ಬದಲಿಸುವಂತೆ ಒತ್ತಾಯ ಮಾಡಲಾಗಿದೆ.

ದೀವಟಿಗೆ ಸಲಾಂ ನಡಿತಿರೋದು ಸತ್ಯ

ಹೀಗಂತ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಅಯ್ಯಂಗಾರ್ ಹೇಳಿದ್ದಾರೆ.  ಹಿಂದಿನಿಂದಲೂ ಈ ಪೂಜೆ ನಡೆಯುತ್ತಿದೆ. ನಾನು ಚಿಕ್ಕವನಿದ್ದಾಗಿಂದ ಈ ಪದ ಬಳಕೆ ಇದೆ. ಸಲಾಂ ಎಂಬ ಪರ್ಶಿಯನ್ ಪದ ಯಾಕೆ ಬಂತು ಗೊತ್ತಿಲ್ಲ. ದೀವಟಿಕೆ ಹಿಡಿದು ಸಂಜೆ ಸಂಧ್ಯಾರತಿ ಮಾಡುವುದು, ದೀವಟಿಗೆ ಆರತಿ ನಡೆಯುತ್ತೆ. ಆಗ ದೇವಸ್ಥನಕ್ಕೆ ಯಾರಿಗೂ ಒಳಗೆ ಪ್ರವೇಶ ಇಲ್ಲ. ಸಲಾಂ ಪೂಜೆ ವೇಳೆ ದೇವಾಲಯದ ಹೊರಗೆ ಸಿಬ್ಬಂದಿ ದೀವಟಿಗೆ ಹಿಡಿದು ಮೂರು ಬಾರಿ ಬಗ್ಗಿ ಎದ್ದೇಳುತ್ತಾರೆ. ಇದೇ ದೀವಟಿಗೆ ಸಲಾಂ ಅಂತ ಅವರು ಹೇಳಿದ್ದಾರೆ.

ಆರಂಭದ ಬಗ್ಗೆ ಲಿಖಿತ ಆಧಾರ ಇಲ್ಲ

ದೀವಟಿಗೆ ಸಲಾಂ ಆದ ನಂತರ ಮುಮ್ಮಡಿ ಕೃಷ್ಣರಾಜ ಒಡೆಯರ್ ನಂತರ ಅಧಿಕಾರಿಗಳಿಗೆ ಸಲಾಂ ಆಗುತ್ತೆ. ದೀವಟಿಗೆ ಸಲಾಂ ಯಾವಾಗ ಆರಂಭ ಆಯ್ತು ಲಿಖಿತ ಆಧಾರ ಇಲ್ಲ. ಆದರೆ ದೇವಾಲಯ ಕೈಪಿಡಿಯಲ್ಲಿ ದೀವಟಿಗೆ ಸಲಾಂ ಉಲ್ಲೇಖ ಇದೆ. ದೇವರು ಕಲ್ಯಾಣಿಗೆ ಹೋಗುವಾಗ ಕೂಡ ದೀವಟಿಗೆ ಸಲಾಂ ಪದ್ದತಿ ಇದೆ. ಜನರು ಹೇಳುವ ಪ್ರಕಾರ ಹೈದರ್, ಟಿಪ್ಪು ಕಾಲದಲ್ಲಿ ಈ ಪದ್ದತಿ ಬಂದಿದೆ ಅಂತ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Puttur: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನೋ ಎಂಟ್ರಿ

ಹೆಸರು ಬದಲಾವಣೆಗೆ ಸಲಹೆ

ದೇವಾಲಯಗಳಲ್ಲಿ ದೀವಟಿಗೆ ಸಲಾಂ ಪದ ಬದಲಾವಣೆ ಧಾರ್ಮಿಕ ದತ್ತಿ ಇಲಾಖೆ ಮಾಡಬೇಕು. ಇಲಾಖೆಯ ಆಗಮ ಪಂಡಿತರು ಈ ಸೂಕ್ಷ್ಮವನ್ನು ಬಗೆ ಹರಿಸಬೇಕು. ಇದನ್ನು ಜಿಲ್ಲಾಧಿಕಾರಿಗಳೂ ಕೂಡ ಬಗೆ ಹರಿಸಲು ಬರಲ್ಲ. ಆಯುಕ್ತರ ಮೂಲಕವೇ ಅವರು ಸಮಸ್ಯೆ ಬಗೆ ಹರಿಸಬೇಕು ಅಂತ ಇತಿಹಾಸ ತಜ್ಞ ಡಾ.ಶೆಲ್ವ ಪಿಳೈ ಅಯ್ಯಂಗಾರ್ ಹೇಳಿದ್ದಾರೆ.
Published by:Annappa Achari
First published: