Muslim Shops: ಮುಸ್ಲಿಮರ ಅಂಗಡಿಗಳಲ್ಲಿ ವಸ್ತುಗಳ ಖರೀದಿಗೆ ಬ್ರೇಕ್ ಹಾಕಲು ಹಿಂದೂ ಸಂಘಟನೆಗಳ ಚಿಂತನೆ

ಮುಸ್ಲಿಂ ಅಂಗಡಿಗಳಲ್ಲಿ ಯಾವುದೇ ಕಾರಣಕ್ಕೂ ವಸ್ತುಗಳ ಖರೀದಿ ಮಾಡಬಾರದು ಅಂತ  ಹಿಂದೂ ಪರ ಸಂಘಟನೆಗಳು ಕರೆ ನೀಡಲು ಪ್ಲಾನ್ ಮಾಡಿಕೊಳ್ಳುತ್ತಿವೆ ಎನ್ನಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕರಾವಳಿ ಭಾಗದ (Coastal Karnataka) ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ (Muslim Traders) ನಿರ್ಬಂಧ ಹಾಕಲಾಗಿದೆ. ಈಗ ಈ ವಿವಾದ  ಬೆಂಗಳೂರಿಗೆ (Bengaluru) ಕಾಲಿಡುವ ಸುಳಿವು ಸಿಗ್ತಿದೆ. ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಸ್ಲಿಂ ಅಂಗಡಿಯಲ್ಲಿ (Muslims Shops) ಖರೀದಿ ನಿಷೇಧದ ಕುರಿತ ಹೇಳಿಕೆಗಳು ಸೋಶಿಯಲ್ ಮೀಡಿಯಾ(Social Media)ದಲ್ಲಿ ವೈರಲ್ ಆಗ್ತಿವೆ. ಜಾತ್ರೆ, ಮಹೋತ್ಸವ ಇತರೆ ಸಮಾರಂಭಗಳಲ್ಲಿ ಮುಸ್ಲಿಂ ಅಂಗಡಿಗಳಿಗೆ ನಿಷೇಧದ ಕುರಿತು ಹಿಂದೂ ಸಂಘಟನೆಗಳಲ್ಲಿ (Hindu Organization) ಚರ್ಚೆಗಳು ನಡೆಯುತ್ತಿರುವ ಮಾಹಿತಿ ಲಭ್ಯವಾಗಿದೆ. ಮುಸ್ಲಿಂ ಅಂಗಡಿಗಳಲ್ಲಿ ಯಾವುದೇ ಕಾರಣಕ್ಕೂ ವಸ್ತುಗಳ ಖರೀದಿ ಮಾಡಬಾರದು ಅಂತ  ಹಿಂದೂ ಪರ ಸಂಘಟನೆಗಳು ಕರೆ ನೀಡಲು ಪ್ಲಾನ್ ಮಾಡಿಕೊಳ್ಳುತ್ತಿವೆ ಎನ್ನಲಾಗಿದೆ.

ಬೆಂಗಳೂರಿನ ಬಹುತೇಕ ಮಾಲ್, ಅಂಗಡಿಗಳಲ್ಲಿ ಮುಸ್ಲಿಂ ಸಿಂಬಲ್ ಇರೋ ಹಲಾಲ್ ವಸ್ತುಗಳನ್ನು ಖರೀದಿಗೆ ಬ್ರೇಕ್ ಹಾಕುವ ಕುರಿತು ಹಿಂದೂ ಸಂಘಟನೆಗಳು ಕರೆ ನೀಡುವ ಸಾಧ್ಯತೆಗಳಿವೆ. ಮುಖ್ಯವಾಗಿ ಮಾಂಸ, ಕೋಳಿ ಅಂಗಡಿಗಳಲ್ಲಿ ಖರೀದಿಗೆ ಹೇಗೆ ಬ್ರೇಕ್ ಹಾಕಬೇಕು ಎಂಬುವದರ ಕುರಿತು ಚರ್ಚೆಗಳು ನಡೆಯುತ್ತಿವೆ.

ಹಲಾಲ್ ಮುದ್ರೆ ಇರೋ ವಸ್ತುಗಳನ್ನು ಬಳಸದಂತೆ ಕರೆ

ಮುಸ್ಲಿಂ ವ್ಯಾಪಾರಿಗಳು ಕೋಳಿ ಅಥವಾ ಕುರಿ ಬಲಿ ಕೊಡುವಾಗ ಹಲಾಲ್ ಸೂತ್ರವನ್ನು ಅನುಸರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಹಲಾಲ್ ಮಾಂಸ, ಕೋಳಿ ಕೊಳ್ಳದಿರಲು ಕರೆ ನೀಡುವುದು.ಇನ್ನೂ ಮುಸ್ಲಿಂ ಹೋಟೆಲ್ ಗಳ ಮುಂದೆ ಹಲಾಲ್ ಅಂತ ಬೋರ್ಡ್ ಹಾಕಿರುತ್ತಾರೆ. ಅಂತಹ ಹೊಟೇಲ್ ಗಳಿಗೆ ಹಿಂದೂಗಳು ಹೋಗಬಾರದು ಅಂತ ಅಗ್ರಹ ಮಾಡಲು ಹಿಂದೂ ಸಂಘಟನೆಗಳು ಮುಂದಾಗಿವೆ.

ಮುಸ್ಲಿಮರು ಹಲಾಲ್ ಅಂತ ಹೋಟೆಲ್ ಮುಂದೆ ಬೋರ್ಡ್ ಇದ್ರೆ ಮಾತ್ರ ಹೋಟೆಲ್ ಗೆ ಹೋಗ್ತಾರೆ,. ಇಲ್ಲವಾದರೆ ಹೋಗಲ್ಲ. ಅದೇ ರೀತಿ ನಾವು ನಮ್ಮ ಹಿಂದೂ ನಿಯಮಗಳನ್ನು ಪಾಲಿಸಬೇಕು ಎಂಬ ಕರೆ ನೀಡುವ ಸಾಧ್ಯತೆಗಳಿವೆ.

ಇದನ್ನೂ ಓದಿ:  Nithyananda: ಕೈಲಾಸದಲ್ಲಿ ಕಳ್ಳಾಟ ಆಡ್ತಿದ್ದಾನಾ ಸ್ವಾಮಿ ನಿತ್ಯಾನಂದ? ಇಮೇಲ್‌ ಮೂಲಕವೇ ಶಿಷ್ಯೆಯಿಂದ ದೂರು!

ಮಾಂಸ ಖರೀದಿಗೆ ಮುಸ್ಲಿಂ ಅಂಗಡಿಗೆ ಹೋಗದಿರಲು ಪ್ಲಾನ್!

ಮುಂದಿನ ತಿಂಗಳು ಯುಗಾದಿ ಹಬ್ಬ ಇದೆ. ಹಬ್ಬ ಮುಗಿದ ಮರು ದಿನ ಬಹುತೇಕ ಎಲ್ಲರ ಮನೆಯಲ್ಲಿ ನಾನ್ ವೆಜ್ ಊಟ ಇರುತ್ತದೆ. ಇನ್ನೂ ಬಹುತೇಕ ಹಿಂದುಗಳು ನಾನ್ ವೆಜ್ ಕೊಳ್ಳೋದಕ್ಕೆ ಮುಸ್ಲಿಂ ಅಂಗಡಿಗಳಿಗೆ ಹೋಗ್ತಾರೆ. ಈ ಬಾರಿ ಮುಸ್ಲಿಂ ಅಂಗಡಿಗಳಿಗೆ ಮಾಂಸ, ಕೋಳಿ ಖರೀದಿ  ಮಾಡಬಾರದು.

ಇನ್ನೂ ಬಹುತೇಕ ಪ್ಯಾಕೇಜ್ ಪದಾರ್ಥಗಳ ಮೇಲೆ ಹಲಾಲ್ ಚಿತ್ರ ಇರುತ್ತದೆ. ಚಾಕಲೇಟ್, ಗೋಧಿ, ಅಕ್ಕಿ ಮೂಟೆ,‌ ಅಡುಗೆ ಎಣ್ಣೆ, ಮ್ಯಾಗಿ ಸೇರಿದಂತೆ ಹಲವು ಪ್ಯಾಕೇಜ್ ವಸ್ತುಗಳ ಮೇಲೆ ಹಲಾಲ್ ಮುದ್ರೆ ಹಾಕಲಾಗಿರುತ್ತದೆ. ಅಂತಹ ವಸ್ತುಗಳ ಖರೀದಿಗೂ ಬ್ರೇಕ್ ಹಾಕಲು ಹಿಂದು ಸಂಘಟನೆಗಳು ಚಿಂತನೆ ನಡೆಸಿವೆ.

ಸರ್ಕಾರದ ವಿರುದ್ಧ ಯು.ಟಿ.ಖಾದರ್ ಆಕ್ರೋಶ

ಭಾರತ ದೇಶ ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶವಾಗಿದೆ. ಇಲ್ಲಿ ಎಲ್ಲಾ ಧರ್ಮೀಯರು ಸಹಬಾಳ್ವೆಯಿಂದ ಬದುಕುತ್ತಿದ್ದಾರೆ. ಆದರೆ, ಕೆಲವರು ಧರ್ಮಗಳ ನಡುವೆ ಕಂದಕವನ್ನ ಸೃಷ್ಟಿಸುತ್ತಿದ್ದಾರೆ. ಕರಾವಳಿ ಭಾಗದಲ್ಲಿ (Karnataka Coastal Area) ಕೆಲ ಹಿತಾಸಕ್ತಿಗಳು ಭಿತ್ತಿ ಪತ್ರಗಳನ್ನ ಹಾಕುತ್ತಿದ್ದಾರೆ. ಸಮಾಜದಲ್ಲಿ ಅಶಾಂತಿ, ದ್ವೇಷ ಸೃಷ್ಟಿಸಲು ಹೊರಟಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.

ಇದನ್ನೂ ಓದಿ: Viral News: ಈ ಮುಸ್ಲಿಂ ದೇಶದಲ್ಲಿ ಮನೆಯ ಗೋಡೆಯ ಮೇಲೆ ಪತ್ನಿ ಫೋಟೋ ಹಾಕಲೇಬೇಕು!

ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಹಾಕಿರುವ ಬಗ್ಗೆ ಮುಲ್ಕಿ ಸೇರಿದಂತೆ ಕೆಲವೆಡೆ ಭಿತ್ತಿ ಪತ್ರಗಳನ್ನ ಹಾಕಲಾಗಿದೆ. ಇದೊಂದು ಅಸಹ್ಯ ಕೃತ್ಯ. ಇದಕ್ಕೆ ಹಿಂದೂ ಸಹೋದರರು ಬೆಂಬಲ ಕೊಡಬಾರದು.  ಬಿಜೆಪಿ ಸರ್ಕಾರ ಈ ವಿಚಾರವಾಗಿ ಮೌನವಾಗಿದ್ದು, ಒಳಗೊಳಗೆ ಖುಷಿ ಪಡುತ್ತಿದೆ. ಜನರ ಗಮನ ಬೇರೆಡೆ ಸೆಳೆಯಲು ಸರ್ಕಾರ‌ ಕುಮ್ಮಕ್ಕು ನೀಡುತ್ತಿದೆ ಎಂದು ವಿಪಕ್ಷ ಉಪನಾಯಕ ಯು.ಟಿ.ಖಾದರ್ ಆರೋಪಿಸಿದರು.
Published by:Mahmadrafik K
First published: