Hindu Muslim Religious Harmony: ಭಟ್ಕಳದಲ್ಲಿ ಹಿಂದೂ ಮುಸ್ಲಿಂ ಸಾಮರಸ್ಯ; ಹನುಮಂತ ದೇವರ ಜಾತ್ರೆಗೆ ಮುಸ್ಲಿಂ ಕುಟುಂಬಕ್ಕೆ ಆಹ್ವಾನ
ಬ್ರಿಟಿಷರ ಕಾಲದಲ್ಲಿ ರಥೋತ್ಸವ ನಡೆಯಲು ಜಾಮೀನು ಬೇಕಾದಾಗ ಶಾಬಾಂದ್ರಿ ಕುಟುಂಬದ ಹಿರಿಯರು ಮುಂದೆ ಬಂದು ಜಾಮೀನು ಕೊಟ್ಟು ಜಾತ್ರೆ ಸುಗಮವಾಗಿ ನಡೆಯಲು ಅನುವು ಮಾಡಿ ಕೊಟ್ಟಿದ್ದರಂತೆ. ಹೀಗಾಗಿ ಪ್ರತಿ ವರ್ಷ ಜಾತ್ರೆಗೆ ಚಾಚೂ ತಪ್ಪದೇ ಆಹ್ವಾನ ನೀಡಲಾಗುತ್ತದೆ.
ಕಾರವಾರ: ಕೋಮು ಸಾಮರಸ್ಯದ ದ್ಯೋತಕವಾದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ (Bhatkal) ಚೆನ್ನಪಟ್ಟಣ ಶ್ರೀ ಹನುಮಂತ ದೇವರ ಜಾತ್ರೋತ್ಸವ (Hanuman Fair) ಅದ್ದೂರಿಯಾಗಿ ಆರಂಭವಾಯಿತು. ಸಂಪ್ರದಾಯದಂತೆ ಜೈನ (Jain) ಹಾಗೂ ಮುಸ್ಲಿಂ ಕುಟುಂಬಕ್ಕೆ (Muslim Family) ಆಹ್ವಾನ ನೀಡುವುದರ ಮೂಲಕ ಜಾತ್ರೆಗೆ ಚಾಲನೆ ನೀಡಲಾಯಿತು. ಸಹಸ್ರಾರು ಭಕ್ತರ ಹರ್ಷೋದ್ಘಾರದ ನಡುವೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಥವನ್ನು ಎಳೆದು ಭಕ್ತರು ಪುನೀತರಾದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ (Police Department) ಬಿಗಿ ಬಂದೋಬಸ್ತ್ ಏರ್ಪಡಿಸಿತ್ತು. ಈಮೂಲಕ ಉತ್ತರ ಕನ್ನಡದ ಭಟ್ಕಳ ರಾಜ್ಯಕ್ಕೆ ಮಾದರಿ ಎನಿಸಿಕೊಂಡಿದೆ.
ಉತ್ತರಕನ್ನಡ ಜಿಲ್ಲೆಯ ಭಟ್ಕಳದ ಪ್ರಸಿದ್ದ ಚೆನ್ನಪಟ್ಟಣ ಹನುಮಂತ ದೇವರ ಜಾತ್ರೆ ಅದ್ದೂರಿಯಿಂದ ಆರಂಭವಾಯಿತು. ಪ್ರತಿವರ್ಷ ರಾಮನವಮಿಯಂದು ಜರುಗುವ ಜಾತ್ರೆಯಲ್ಲಿ ಪರಸ್ಪರ ಸೌಹಾರ್ಧತೆ ಎದ್ದುಕಾಣುತ್ತದೆ.
ಜೈನ ಮತ್ತು ಇಸ್ಲಾಂ ಧರ್ಮಿಯರಿಗೆ ಆಹ್ವಾನ ಜಾತ್ರೆ ಆರಂಭಿಸುವ ಮುಂಚೆ ಶ್ರೀ ಹನುಮಂತ ದೇವರ ಆಡಳಿತ ಮಂಡಳಿಯಿಂದ ಜೈನ ಮತ್ತು ಇಸ್ಲಾಂ ಧರ್ಮಿಯರಿಗೆ ಆಹ್ವಾನ ನೀಡುವ ಸಂಪ್ರದಾಯವಿದೆ. ಅದರಂತೆ ವಾದ್ಯಗಳ ಮೂಲಕ ದೇವಾಲಯ ಆಡಳಿತ ಮಂಡಳಿ ನಗರದಲ್ಲಿ ನೆಲೆಸಿರುವ ಅನ್ಸಾರಿ ಶಾಬಾಂದ್ರಿ ಕುಟುಂಬದವರಿಗೆ ಕರೆ ಕೊಟ್ಟು ಬರುವುದು ವಾಡಿಕೆ.
ವೀಳ್ಯದೆಲೆ ಮತ್ತು ಹಾರ ಹಾಕಿ ಕರೆ ಬ್ರಿಟಿಷರ ಕಾಲದಲ್ಲಿ ರಥೋತ್ಸವ ನಡೆಯಲು ಜಾಮೀನು ಬೇಕಾದಾಗ ಶಾಬಾಂದ್ರಿ ಕುಟುಂಬದ ಹಿರಿಯರು ಮುಂದೆ ಬಂದು ಜಾಮೀನು ಕೊಟ್ಟು ಜಾತ್ರೆ ಸುಗಮವಾಗಿ ನಡೆಯಲು ಅನುವು ಮಾಡಿ ಕೊಟ್ಟಿದ್ದರಂತೆ. ಹೀಗಾಗಿ ಪ್ರತಿ ವರ್ಷ ಜಾತ್ರೆಗೆ ಚಾಚೂ ತಪ್ಪದೇ ಆಹ್ವಾನ ನೀಡಲಾಗುತ್ತದೆ. ವೀಳ್ಯದೆಲೆ ಮತ್ತು ಹಾರ ಹಾಕಿ ಕರೆ ನೀಡ್ತಾರೆ. ಕರೆ ಕೊಡಲು ಬಂದ ಹಿಂದೂ ಬಾಂಧವರಿಗೂ ಕೂಡ ಮುಸಲ್ಮಾನ ಕುಟುಂಬದವರು ಗೌರವಿಸೋದು ವಾಡಿಕೆ. ಇದೇ ರೀತಿ ಪ್ರತಿ ವರ್ಷವೂ ಹಿಂದು-ಮುಸ್ಲಿಂ, ಜೈನರಾದಿಯಾಗಿ ಎಲ್ಲರೂ ಪಾಲ್ಗೊಳ್ಳುವುದು ವಿಶೇಷವಾಗಿದೆ. ಮುಸಲ್ಮಾನ ಬಾಂಧವರು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.
ಕಳೆದ ಕೆಲ ತಿಂಗಳಲ್ಲಿ ಎಲ್ಲೆಡೆ ಹಿಂದು ಮುಸ್ಲಿಂ ತ್ವೇಷಮಯ ವಾತಾವರಣ ನಿರ್ಮಿಸಲಾಗುತ್ತಿದೆ. ಆದ್ರೆ ಸೌಹಾರ್ದತೆಗೆ ಹೆಸರಾದ ಭಟ್ಕಳದಲ್ಲಿ ಹಿಂದೂ -ಮುಸ್ಲಿಂ ಧರ್ಮೀಯರು ಪರಸ್ಪರ ಒಗ್ಗಟ್ಟಾಗಿ ಹಬ್ಬ ಆಚರಿಸೋದು ವಿಶೇಷ. ಇನ್ನು ಸಿದ್ದವಾಗಿರುವ ಬ್ರಹ್ಮರಥಕ್ಕೆ ಭಟ್ಕಳದ ಸಮಸ್ತ ಸಮಾಜದ ಮುಖಂಡರು ದೇವರ ರಥಕ್ಕೆ ಈಡುಗಾಯಿ ಒಡೆಯುತ್ತಾರೆ. ಭಕ್ತರಿಗೆ ಪ್ರಸಾದವಾಗಿ ನಾಣ್ಯವನ್ನ ಚೆಲ್ಲಲಾಗುತ್ತದೆ.
ಜಾತ್ರೆಯ ಆಕರ್ಷಣೆ ಹೀಗಿತ್ತು.. ನಂತರ ಹೂವಿನ ಪೇಟೆ, ಮುಖ್ಯ ರಸ್ತೆ ಮಾರ್ಗ, ರಥಬೀದಿಯ ಮೂಲಕ ರಥವನ್ನು ದೇವಾಲಯದ ಮುಂಭಾಗದವರೆಗೂ ಏಳೆಯಲಾಗುತ್ತದೆ. ಜಾತ್ರೆಯಲ್ಲಿ ಪಾಲ್ಗೊಳ್ಳುವ ಸಹಸ್ರಾರು ಸಂಖ್ಯೆಯ ಭಕ್ತರು ರಥವನ್ನ ಏಳೆದು ಪುನೀತರಾದರು. ಹಾಗೆಯೇ ಹುಲಿ ವೇಷ, ಡಿಜೆ ನೃತ್ಯ ಆಕರ್ಷಣೆಯಾಗಿತ್ತು. ಜಾತ್ರೆಯನ್ನ ನೋಡಲು ಸಹಸ್ರಾರು ಸಂಖ್ಯೆಯಲ್ಲಿ ಜನ ಸೇರ್ತಾರೆ.
1993ರಂದು ಭಟ್ಕಳದ ಜಾತ್ರೆಯಲ್ಲಿ ಅಹಿತಕರ ಘಟನೆಯೊಂದು ನಡೆದು ನಾಗರಿಕರು ಆತಂಕಗೊಂಡಿದ್ದರು. ಈ ಕಾರಣಕ್ಕೆ ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಆಯಕಟ್ಟಿನ ಸ್ಥಳದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ಪ್ರತಿವರ್ಷ ಜರುಗುವ ಜಾತ್ರೆಗೆ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಭಕ್ತರು ಆಗಮಿಸ್ತಾರೆ. ಒಟ್ಟಿನಲ್ಲಿ ರಾಜ್ಯದಲ್ಲಿ ಹಿಂದೂ ಮುಸ್ಲಿಂ ಧರ್ಮದ ನಡುವೆ ಸಮರವೇ ಶುರವಾಗಿದೆ. ಈ ನಡುವೆ ರಾಮನ ಭಕ್ತ ಹನುಮನ ಜಾತ್ರೆ ಅದ್ದೂರಿಯಾಗಿ ನಡೆಯೋದು ಕೂಡ ಮಾದರಿಯಾಗಿದೆ.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ