Mango Market: ಹಿಜಾಬ್, ಹಲಾಲ್, ಅಜಾನ್ ನಂತ್ರ ಮಾವು ಮಾರುಕಟ್ಟೆಗೆ ಕಾಲಿಟ್ಟ ವಿವಾದ: ಹಿಂದೂಗಳ ಬಳಿ ಹಣ್ಣು ಖರೀಸುವಂತೆ ಅಭಿಯಾನ

ರಾಜ್ಯದಲ್ಲಿ  ಕಳೆದ ಕೆಲದಿನಗಳಿಂದ ವಿವಾದಗಳ ಸರಣಿ ಆರಂಭವಾಗಿದೆ. ಹಲಾಲ್ ಕಟ್, ಜಟಕಾ ಕಟ್ ವಿವಾದ, ಬಳಿಕ ಇದೀಗ ಅಜಾನ್ ವಿವಾದವು ಆರಂಭವಾಗಿದೆ. ಈಗ ಮ್ಯಾಂಗೋ ಧರ್ಮಯುದ್ದ ಕಥೆ ಆರಂಭವಾಗಿದೆ.

ಮಾವು

ಮಾವು

  • Share this:
ರಾಜ್ಯದಲ್ಲಿ ಕಳೆದ ಮೂರು ವಾರಗಳಲ್ಲಿ ಹಿಂದೂಪರ ಸಂಘಟನೆ(Hindu Organization)ಗಳು ನಡೆಸುತ್ತಿರುವ ಅಭಿಯಾನದಿಂದ, ಮತ್ತೊಂದು ವರ್ಗದ ಜನರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಇದೀಗ ಮಾವು ಮಾರುಕಟ್ಟೆ(Mango Market)ಯಲ್ಲಿ ಹಿಂದೂಪರ ವ್ಯಾಪಾರಿಗಳಿಗೆ (Hindu Traders) ವಹಿವಾಟು ನಡೆಸಲು ಅನುಮತಿ ನೀಡಬೇಕೆಂದು ಹಾಸನ (Hassan) ಜಿಲ್ಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ (Social Media Campaign) ಆರಂಭಿಸಲಾಗಿದೆ. ಹೀಗಾಗಿ ಏಷ್ಯಾದಲ್ಲೆ ಅತಿ ದೊಡ್ಡ ಮಾವು ಮಾರುಕಟ್ಟೆ ಹೊಂದಿರುವ ಶ್ರೀನಿವಾಸಪುರದಲ್ಲೀ (Srinivasapur) ಮ್ಯಾಂಗೋ ಕಿಚ್ಚು ಹಬ್ಬುವ ಆತಂಕ ಎದುರಾಗಿದೆ. ಶ್ರೀನಿವಾಸಪುರ ತಾಲೂಕಿನಲ್ಲಿ ದೇಶದಲ್ಲಿ ಅತೀ ಹೆಚ್ಚು ಮಾವು ಬೆಳೆಯಲಾಗುತ್ತದೆ, 55 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಇಲ್ಲಿಯ ಮಾರುಕಟ್ಟೆಯಲ್ಲಿ ವರ್ಷವೊಂದಕ್ಕೆ 5 ಲಕ್ಷ ಟನ್ ಮಾವು ವಹಿವಾಟು ನಡೆಯುತಿದ್ದು, 200  ಕೋಟಿಗಿಂತಲೂ ಹೆಚ್ಚು ಹಣದ ಮಾವು ವ್ಯಾಪಾರ ನಡೆಯುತ್ತದೆ. 

ಇದೀಗ ಮಾವು ಬೆಳೆದ ರೈತರು ಕೇವಲ ಹಿಂದೂ ವ್ಯಾಪಾರಿಗಳ ಬಳಿ ಮಾತ್ರ ಮಾರಾಟ ಮಾಡಿ, ಮುಸ್ಲಿಂ ವ್ಯಾಪಾರಿ ಬಳಿ ಹೋಗಬೇಡಿ ಎನ್ನುವ ಸಾಮಾಜಿಕ  ಜಾಲತಾಣದ ಸಂದೇಶವೊಂದು ಹರಿದಾಡುತ್ತಿದೆ. ಆದರೆ ಈ ವಿವಾದ ಇನ್ನೂ ಕೋಲಾರ ಜಿಲ್ಲೆಗೆ ಕಾಲಿಟ್ಟಿಲ್ಲ, ಆದರೂ ಜಿಲ್ಲೆಯ ಮಾವು ವ್ಯಾಪಾರಿ, ಬೆಳೆಗಾರ, ಮತ್ತು ಸಾರ್ವಜನಿಕರಲ್ಲಿ‌ ಚರ್ಚೆ ಆರಂಭವಾಗಿದ್ದು ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.

ವ್ಯಾಪಾರಿಗಳು ಹೇಳೋದೇನು?

ಶ್ರೀನಿವಾಸಪುರ ಮಾರುಕಟ್ಟೆಯಲ್ಲಿ ಮುಸ್ಲಿಂ ವ್ಯಾಪಾರಿಗಳು ಹಲವಾರು ವರ್ಷಗಳಿಂದ ವಹಿವಾಟು ನಡೆಸುತ್ತಿದ್ದಾರ., ಇಲ್ಲಿ ತಾರತಮ್ಯ ಎಂಬುದಿಲ್ಲ, ರೈತರು ಮತ್ತು ವ್ಯಾಪಾರಿಗಳು‌ ಅನ್ಯೋನ್ಯವಾಗಿದ್ದು, ಇದನ್ನು ಕೆಡಿಸಬೇಡಿ ಎಂದು ವ್ಯಾಪಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಾವು ಮಾರುಕಟ್ಟೆಯಲ್ಲಿ ಒಟ್ಟು 120 ಮಂಡಿಗಳಿದ್ದು, ಇದರಲ್ಲಿ 80 ಮಂದಿ ಮುಸ್ಲಿಮರು, ಉಳಿದ 40 ಮಂದಿ ಹಿಂದೂ ವ್ಯಾಪಾರಿಗಳಾಗಿದ್ದಾರೆ. ಮಾವು ಸುಗ್ಗಿ ವೇಳೆ ಮಾವನ್ನ ಕಟಾವು ಮಾಡಿ, ರೈತರು ಇಲ್ಲಿಗೆ ತಂದಾಕ್ಷಣ, ವ್ಯಾಪಾರಿಗಳು ದಲ್ಲಾಳಿಗಳ ಎದುರು ಮಾರಾಟ ಮಾಡಿ, ಕಮೀಷ‌ನ್ ಹಣ ಪಡೆದುಕೊಳ್ಳುತ್ತಾರೆ.

ಇದನ್ನೂ ಓದಿ:  ಉದ್ದೇಶಿತ ‘ಸರ್ಕಾರಿ ಮಾದರಿ ಶಾಲೆ’ಗಳಲ್ಲಿ ಕನ್ನಡ ಮಾಧ್ಯಮ ಜೊತೆಗೆ ಇಂಗ್ಲಿಷ್ ಭಾಷೆ ಕಲಿಕೆ: Minister BC Nagesh

ಬಳಿಕ ದೇಶದ ವಿವಿದ ರಾಜ್ಯಗಳಿಗೆ ಮಾವು ರವಾನೆ ಮಾಡುತ್ತಿದ್ದಾರೆ. ಇದರಲ್ಲಿ ಪ್ರಮುಖವಾಗಿ  ಕೋಲ್ಕತ್ತಾ, ಮಹಾರಾಷ್ಟ್ರ, ಗೋವಾ, ಗುಜರಾತ್, ಉತ್ತರ ಪ್ರದೇಶ, ದೆಹಲಿ, ಜಮ್ಮು ಕಾಶ್ಮೀರಕ್ಕೂ ಕೋಲಾರದ ಮಾವು ರವಾನೆ ಆಗುತ್ತಿದೆ.

ಶ್ರೀನಿವಾಸಪುರ ಮಾವಿಗೆ ಹೆಚ್ಚು ಬೇಡಿಕೆ

ಶ್ರೀನಿವಾಸಪುರ ಮಾವಿಗೆ ದೇಶದೆಲ್ಲೆಡೆ ಎಲ್ಲಿಲ್ಲದ ಬೇಡಿಕೆಯಿದ್ದು, ತೋತಾಪುರಿ, ರಸಗುಲ್ಲ, ಬೇನಿಶಾ, ನೀಲಂ, ಮಲ್ಲಿಕಾ, ಮಲಗುವಾ ಮಾವಿಗೆ ಹೆಚ್ಚಿನ ಬೇಡಿಕೆಯಿದೆ.

ಇನ್ನು ಶ್ರೀನಿವಾಸಪುರ ಮಾರುಕಟ್ಟೆಯಲ್ಲಿ  ಮುಸ್ಲಿಂ ವ್ಯಾಪಾರಿಗಳು ಹೆಚ್ಚಿರಲು ಕಾರಣಗಳೇನು ಎನ್ನುವುದನ್ನ ನೋಡುವುದಾದರೆ,  ದೇಶದ ವಿವಿಧ ರಾಜ್ಯಗಳಲ್ಲಿ ಹಣ್ಣು ವ್ಯಾಪಾರದಲ್ಲಿ ಮುಸ್ಲಿಂ ದಲ್ಲಾಳಿಗಳೇ ಹೆಚ್ಚು. ಹೀಗಾಗಿ  ದಲ್ಲಾಳಿಗಳ ಸುಲಭ ಸಂಪರ್ಕ  ವ್ಯಾಪಾರಿಗಳು ಹೊಂದಿದ್ದಾರೆ.

ಮಾವು ಮಾರುಕಟ್ಟೆಯಲ್ಲಿ ವ್ಯಾಪಾರಿಗಳೇ ನೇರವಾಗಿ ಕೊಳ್ಳುವ ಕಾರಣ, ಸ್ಥಳದ್ಲೇ ಹಣದ ವಹಿವಾಟು ನಡೆಯುತ್ತಿದೆ, ಮ್ಯಾಂಗೊ ಮಾರುಕಟ್ಟೆ ವಿವಾದದ ಬಗ್ಗೆ  ಮಾತನಾಡಿರೊ ಮುಸ್ಲಿಂ ವ್ಯಾಪಾರಿಗಳು, ವ್ಯಾಪಾರದಲ್ಲಿ ಧರ್ಮ ಮುಖ್ಯವಲ್ಲ. ಉತ್ತಮ ಒಡನಾಟ, ಹಣಕಾಸಿನ ವ್ಯಾಪಾರ ಮುಖ್ಯ. ಲಾಭ ನಷ್ಟದಲ್ಲೂ ರೈತರಿಗೆ ನಾವು ಹಣ  ನೀಡಿದ್ದೇವೆ ಎನ್ನುತ್ತಾರೆ.

ಇನ್ನು ಈ ಬಗ್ಗೆ ಮಾತನಾಡಿರುವ ಮಾವು ಬೆಳೆಗಾರರು, ಹಿಂದೂ ವ್ಯಾಪಾರಿಗಳು ಮಾರಾಟ ಕೇಂದ್ರ ತೆರೆಯಲಿ, ಆದರೆ ನಮಗೆ ಯಾವ ಧರ್ಮ ಬೇದಬಾವ ಇಲ್ಲ ಎಂದಿದ್ದಾರೆ, ಇನ್ನು ಹಿಂದೂಪರ ಸಂಘಟನೆಯವರು ಕೇವಲ ಪೋಸ್ಟ್ ಹಾಕೋದು ಬಿಟ್ಟು, ಸ್ಥಳಕ್ಕೆ ಬಂದು ಕೆಲಸ ಮಾಡಲಿ ಎಂದು ರೈತರಿಗೆ ಸವಾಲು ಹಾಕಿದ್ದಾರೆ.

ಮಾವು ಉತ್ಪಾದನೆಯಲ್ಲಿ ರಾಜ್ಯಕ್ಕೆ ನಂಬರ್ ಓನ್

ಒಂದು ವರ್ಷಕ್ಕೆ ಕೋಲಾರ ಜಿಲ್ಲೆಯಲ್ಲಿ ಸರಾಸರಿ 5 ಲಕ್ಷ ಟನ್ ಮಾವು ಉತ್ಪಾದನೆ ಆಗುತ್ತಿದೆ. ಅದರಲ್ಲಿ ಶ್ರೀನಿವಾಸಪುರ ತಾಲೂಕಿನ ಪಾಲು  3 ಲಕ್ಷ ಟನ್ ಆಗಿದೆ. ಕೋಲಾರ ಜಿಲ್ಲೆಯಾದ್ಯಂತ 55 ಸಾವಿರ ಹೆಕ್ಟೇರ್ ಪ್ರದೇಶಕ್ಕೂ ಹೆಚ್ಚು ಕಡೆ ಮಾವು ಬೆಳೆಯಿದೆ. ಇದರಲ್ಲಿ ಶ್ರೀನಿವಾಸಪುರ ತಾಲೂಕಿನಲ್ಲಿ 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿದೆ. ಮಾವು ಮಾರುಕಟ್ಟೆಗೆ ಚಿಕ್ಕಬಳ್ಳಾಪುರ, ಆಂದ್ರದ ಚಿತ್ತೂರು, ಮದನಪಲ್ಲಿ ಕಡೆಯಿಂದಲೂ ಮಾವು ಆವಕವಿದೆ.

ಇದನ್ನೂ ಓದಿ:  No Loud Speaker: ಮೈಕ್ ಬಳಸುವ ಮಸೀದಿ, ಮಂದಿರಗಳಿಗೆ ನೋಟಿಸ್, ಕೋರ್ಟ್ ಆದೇಶ ಉಲ್ಲಂಘಿಸಿದ್ರೆ ಶಿಕ್ಷೆ- ಕಮಲ್ ಪಂತ್

ಒಟ್ಟಿನಲ್ಲಿ ಮಾವು ಮಾರುಕಟ್ಟೆ ಆರಂಭಕ್ಕೆ ಇನ್ನೂ ಒಂದು ತಿಂಗಳಿದ್ದು ವಿವಾದ ಅಲ್ಲಿಯವರೆಗೆ ಮುಂದುವರೆವ ಸಾಧ್ಯತೆಯಿದೆ, ವಿವಾದದ ಕಹಿ ಮರೆಯಾಗಿ ಮಾವಿನ ಸಿಹಿ ಮಾತ್ರ ಇಲ್ಲಿಂದ ಹೊರಬೀಳಲಿ ಎಂಬುದು ಶ್ರೀನಿವಾಸಪುರ ಮಾವು ಬೆಳೆಗಾರರು ಹಾಗು ಮಂಡಿ ಮಾಲೀಕರ ಆಗ್ರಹ.
Published by:Mahmadrafik K
First published: