ಪುತ್ತೂರು(ಮೇ.23): ರಾಜ್ಯದಲ್ಲಿ ಚುನಾವಣಾ (Karnataka Elections) ಭರಾಟೆ ಮುಗಿದಿದೆ. ಬಹುಮತ ಪಡೆದ ಕಾಂಗ್ರೆಸ್ ಸಿದ್ದರಾಮಯ್ಯರನ್ನು (Siddaramaiah) ಸಿಎಂ ಹಾಗೂ ಡಿಕೆಶಿಯನ್ನು (DK Shivakumar) ಡಿಸಿಎಂ ಆಗಿ ಮಾಡಿದ್ದು, ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿದಿದೆ. ಆದರೀಗ ಸೋಲನುಭವಿಸಿದ ಬಿಜೆಪಿ ಒಂದಾದ ಬಳಿಕ ಮತ್ತೊಂದರಂತೆ ಹಿನ್ನಡೆ ಅನುಭವಿಸುತ್ತಿದೆ. ಎಲೆಕ್ಷನ್ನಲ್ಲಿ ಸೋಲನುಭವಿಸಿದ ಕಮಲ ಪಾಳಯಕ್ಕೀಗ ಹಿಂದೂ ಮಹಾಸಭಾ ವಾರ್ನಿಂಗ್ ಕೊಟ್ಟಿದೆ. ಹಿಂದುತ್ವವನ್ನು ಅಜೆಂಡಾವಾಗಿಟ್ಟುಕೊಂಡು ಅನೇಕ ಚುನಾವಣೆಗಳನ್ನು ಗೆದ್ದಿದ್ದ ಬಿಜೆಪಿ ಹಿಂದೂ ಪಕ್ಷ ಎಂದೇ ಗುರುತಿಸಿಕೊಂಡಿತ್ತು. ಆದರೀಗ ಕರ್ನಾಟಕದ ಕರಾವಳಿಯ ಜಿಲ್ಲೆಯಲ್ಲಿ ಬಿಜೆಪಿಗೆ ಹಿಂದುತ್ವವೇ (Hindutva)ಶತ್ರುವಾಗಿ ಕಾಡಲಾರಂಭಿಸಿದೆ.
ಹೌದು ಬಿಜೆಪಿಯ ಭದ್ರಕೋಟೆ ಎನಿಸಿಕೊಂಡಿದ್ದ ದಕ್ಷಿಣ ಕನ್ನಡ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅರುಣ್ ಕುಮಾರ್ ಪುತ್ತಿಲರವರಿಗೆ ಟಿಕೆಟ್ ನೀಡದೆ ಆಶಾ ತಿಮ್ಮಪ್ಪ ಅವರಿಗೆ ಟಿಕೆಟ್ ಕೊಟ್ಟು ಕೈ ಸುಟ್ಟುಕೊಂಡಿದ್ದ ಬಿಜೆಪಿ ಬಳಿಕ ಹಿಂದೂಗಳ ಕೋಪಕ್ಕೆ ಗುರಿಯಾಗಿತ್ತು. ಹಿಂದುತ್ವ ವರ್ಸಸ್ ಬಿಜೆಪಿ ಎಂಬಂತೆಯೇ ಕಂಡು ಬಂದ ಈ ಕ್ಷೇತ್ರದ ಚುನಾವಣೆಯಲ್ಲಿ ಹಿಂದೂ ಮತಗಳ ಧ್ರುವೀಕರಣದಿಂದಷ್ಟೇ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲು ಸಾಧ್ಯವಾಯಿತು ಎಂಬುವುದು ರಾಜಕೀಯ ವಿಶ್ಲೇಷಕರ ಮಾತಾಗಿದೆ.
ಇದನ್ನೂ ಓದಿ: Arun Kumar Puthila: ಕರಾವಳಿಯಲ್ಲಿ ಬಿಜೆಪಿಗೆ ಕಂಟಕವಾಗುತ್ತಾ ಪುತ್ತಿಲ ನಡೆ? RSSಗೇ ಶಾಕ್ ಕೊಟ್ಟ ಹಿಂದೂ ಮುಖಂಡ
ಇದರ ಬೆನ್ನಲ್ಲೇ ಹಿಂದೂ ನಾಯಕ ಅರುಣ್ ಕುಮಾರ್ ಪುತ್ತಿಲ ತಮ್ಮದೇ ಆದ 'ಪುತ್ತಿಲ ಪರಿವಾರ' ಆರಂಭಿಸಿದ್ದು ಮತ್ತೊಂದು ಏಟು ಕೊಟ್ಟಂತಾಗಿತ್ತು. ಆದರೀಗ ಮತ್ತೆ ಪ್ರವೀಣ್ ನೆಟ್ಟಾರು ವಿಚಾರವಾಗಿ ಹಿಂದೂ ಮಹಾಸಭಾ ಬಿಜೆಪಿ ವಿರುದ್ಧ ಕೆಂಡ ಕಾರಿದೆ. ಬಿಜೆಪಿ ವಿರುದ್ಧ ಕೆಂಡಾಮಂಡಲವಾದ ಹಿಂದೂ ಮಹಾಸಭಾ ದಿವಂಗತ ಪ್ರವೀಣ್ ನೆಟ್ಟಾರ್ ಕುಟುಂಬಕ್ಕೆ ಸಹಾಯಹಸ್ತ ಮಾಡಿದ್ದು ಹಿಂದೂ ಸಂಘಟನೆ ಕಾರ್ಯಕರ್ತರೇ ಹೊರತು ಬಿಜೆಪಿಗರಲ್ಲ ಎಂದಿದೆ.
ಹಿಂದೂ ಮಹಾಸಭಾದ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಪುನೀತ್ ಸುವರ್ಣ ಮಾತನಾಡಿ ನೆಟ್ಟಾರ್ ಕುಟುಂಬಕ್ಕೆ ನಳಿನ್ ಕುಮಾರ್ ಕಟೀಲ್ ಮನೆಕಟ್ಟಿಕೊಟ್ರು ಅಂತ ಹೇಳ್ತಾರೆ, ನಳಿನ್ ಅವ್ರ ಕಾರು ಅಲುಗಾಡಿಸಿದ್ದಕ್ಕೆ ಮನೆ ಕಟ್ಟಿಕೊಟ್ಟರು. ನಿಜವಾಗಿ ನಳಿನ್ ಅವರ ಕಾರನ್ನೇ ಅಲುಗಾಡಿಸಬಾರದಿತ್ತು, ಅವರನ್ನೇ ಅಲುಗಾಡಿಸಬೇಕಿತ್ತು ಎಂದಿದ್ದಾರೆ. ಹಿಂದೂ ಮಹಾಸಭಾ ತತ್ವ ಸಿದ್ಧಾಂತವನ್ನ ಅನುಸರಿಸಿಕೊಂಡು ಬರುವವರು. ನಮ್ಮ ತತ್ವ ಸಿದ್ಧಾಂತ ವೀರ ಸಾವರ್ಕರ್, ನಾಥೂರಾಂ ಗೋಡ್ಸೆ ಅವರದ್ದು. ನಾನು ಎದೆತಟ್ಟಿ ಹೇಳ್ತೆನೆ ನಾನು ಗಾಂಧಿವಾದಿ ಅಲ್ಲ, ಗೋಡ್ಸೆವಾದಿ. ಅಖಂಡ ಭಾರತದ ಹಿಂದೂ ರಾಷ್ಟ್ರದ ಮುನ್ನುಡಿ ಬರೆದವರೇ ಗೋಡ್ಸೆ ಎಂದಿದ್ದಾರೆ.
ನಳಿನ್ ಕುಮಾರ್ ವಿರುದ್ಧವೂ ಕೆಂಡ
ಇನ್ನು ನಳಿನ್ ಕುಮಾರ್ ಕಟೀಲ್ ಅವರಿಗೆ ನೇರ ಸವಾಲೆಸೆದಿರುವ ಹಿಂದೂ ಮಹಾಸಭಾ ನಳಿನ್ ಅವರು ತಾಕತ್ತಿದ್ರೆ ಮೋದಿ, ಯೋಗಿ ಹೆಸರು ಎತ್ತದೆ ಪಕ್ಷೇತರರಾಗಿ ಚುನಾವಣೆ ಎದುರಿಸಲಿ. ಅರುಣ್ ಪುತ್ತಿಲ ಪಡೆದ ಶೇ 10ರಷ್ಟು ಮತವನ್ನ ಪಡೆದು ತಾಕತ್ತು ಪ್ರದರ್ಶಿಸಲಿ ಎಂದಿದ್ದಾರೆ.
ಹರೀಶ್ ಪೂಂಜಾ ವಿರುದ್ಧವೂ ಗರಂ
ಇನ್ನು ಬೆಳ್ತಂಗಡಿ ಶಾಸಕ ಪೂಂಜಾ ವಿರುದ್ಧವೂ ಕಿಡಿ ಕಾರಿದ ಹಿಂದೂ ಮಹಾಸಭಾ ಹರೀಶ್ ಪೂಂಜಾನಂತ ಓರ್ವ ಶಾಸಕ ಸತ್ಯಜಿತ್, ತಿಮರೋಡಿ ಬಗ್ಗೆ ಮಾತಾಡ್ತಾರೆ. ಅವ್ರ ಬಗ್ಗೆ ಮಾತಾಡಲು ಯಾವ ನೈತಿಕತೆ ಇದೆ ಬಿಜೆಪಿ ಶಾಸಕರಿಗೆ? ಅಧಿಕಾರ ಸಿಕ್ಕಿದ ಕೂಡಲೇ ಬಾಯಿಗೆ ಬಂದ ಹಾಗೆ ಮಾತಾಡೋದು ತಪ್ಪು, ಹೇಗೆ ಪೀಠದಲ್ಲಿ ಕೂರಿಸಿದ್ದೇವೋ, ಹಾಗೆಯೇ ಇಳಿಸೋದು ಗೊತ್ತು ಎಂದು ಹಿಂದೂ ಮಹಾಸಭಾ ಎಚ್ಚರಿಕೆ ಕೊಡ್ತಿದೆ. ನೈತಿಕತೆ ಇದ್ರೆ ಬಿಜೆಪಿ ಶಾಸಕರು ಮೌನವಾಗಿರಿ ಎಂದು ವಾರ್ನಿಂಗ್ ಕೊಟ್ಟಿದೆ.
ಸಾಧ್ಯವಾದ್ರೆ ಹಿಂದೂ ಕಾರ್ಯಕರ್ತರಿಗೆ ಹಿಂದುತ್ವವಾದಿಗಳಿಗೆ ಸಹಾಯ ಮಾಡಿ, ಅದು ಬಿಟ್ಟು ಹಿಂಬಾಗಿಲಿನಲ್ಲಿ ಅಧಿಕಾರ ಬಳಸಿ ದೌರ್ಜನ್ಯ ಎಸೆಗೋದು ಮಾಡಿದ್ರೆ ನಾವು ಸುಮ್ಮನಿರಲ್ಲ. ಎಲ್ಲ ಹಿಂದೂ ಸಂಘಟನೆಗಳನ್ನ ಜೊತೆ ಸೇರಿಸಿಕೊಂಡು ಬಿಜೆಪಿ ವಿರುದ್ಧ ಹೋರಾಟದ ಹಾದಿ ಹಿಡಿಯುತ್ತೇವೆ ಎಂದೂ ಕಮಲ ಪಾಳಯಕ್ಕೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: Karnataka Election Results: ಬಿಎಸ್ಪಿ ಸಾಲಿಗೆ ಸೇರ್ತಿದೆಯಾ ಜೆಡಿಎಸ್? ದಳಪತಿಗಳ ಮುಂದಿನ ಭವಿಷ್ಯ ಏನು?
ಮೋದಿ ಮುಖ ನೋಡಿ ಸೈಲೆಂಟ್ ಆಗಿದ್ದೇವೆ
2024 ಲೋಕಸಭಾ ಚುನಾವಣೆ ಇದೆ. ನಾವು ಮೋದಿ ನೋಡಿಕೊಂಡು ಸುಮ್ಮನಿದ್ದೇವೆಯೇ ಹೊರತು ನಿಮ್ಮ ಮುಖ ನೋಡಿ ಸುಮ್ಮನಿರಲ್ಲ. ಇದಕ್ಕೆ ಉತ್ತರ ಕೊಡೋದಕ್ಕೂ ಬರುತ್ತೆ. ಯಾವಾನಾದ್ರೂ ಒಬ್ಬ ಶಾಸಕನ ಮಗನಾಗಲಿ ಮಂತ್ರಿಯ ಮಗನಾಗಲಿ ಹೋರಾಟದ ಹಾದಿಯಲ್ಲಿದ್ದಾರಾ? ಹಾಗಾಗಿ ಎಚ್ಚರಿಕೆ ಕೊಡ್ತಾ ಇದ್ದೇವೆ ಎಂದಿದ್ದಾರೆ
ಇನ್ನು ಪುತ್ತೂರಿನ ಪೊಲೀಸ್ ದೌರ್ಜನ್ಯ ಪ್ರಕರಣದ ಬಗ್ಗೆಯೂ ಉಲ್ಲೇಖಿಸಿದ್ದು, ಸರಿಯಾದ ನ್ಯಾಯ ಸಿಕ್ಕಿಲ್ಲ. ಈ ಕೂಡಲೇ ಡಿವೈಎಸ್ಪಿ ಅವರನ್ನ ಅಮಾನತು ಮಾಡ್ಬೇಕು. ಇಲ್ಲದಿದ್ದಲ್ಲಿ ನಾವು ಕೋರ್ಟ್ ಮೆಟ್ಟಿಲೇರುತ್ತೇವೆ ಎಂದು ಸುದ್ದಿಗೋಷ್ಟಿಯಲ್ಲಿ ಹಿಂದೂ ಮಹಾಸಭಾ ಚಾಲಕ್ ಧರ್ಮೇಂದ್ರ ಅಮೀನ್ ಹೇಳಿಕೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ