• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Hindu Mahasabha: ತಾಕತ್ತಿದ್ರೆ ಮೋದಿ, ಯೋಗಿ ಹೆಸರು ಎತ್ತದೆ ಚುನಾವಣೆ ಎದುರಿಸಿ: ಬಿಜೆಪಿ ನಾಯಕರಿಗೆ ಹಿಂದೂ ಮಹಾಸಭಾ ಸವಾಲ್

Hindu Mahasabha: ತಾಕತ್ತಿದ್ರೆ ಮೋದಿ, ಯೋಗಿ ಹೆಸರು ಎತ್ತದೆ ಚುನಾವಣೆ ಎದುರಿಸಿ: ಬಿಜೆಪಿ ನಾಯಕರಿಗೆ ಹಿಂದೂ ಮಹಾಸಭಾ ಸವಾಲ್

ಹಿಂದೂ ಮಹಾಸಭಾ ಸುದ್ದಿಗೋಷ್ಠಿ

ಹಿಂದೂ ಮಹಾಸಭಾ ಸುದ್ದಿಗೋಷ್ಠಿ

ನೈತಿಕತೆ ಇದ್ರೆ ಬಿಜೆಪಿ ಶಾಸಕರು ಮೌನವಾಗಿರಿ. ಸಾಧ್ಯವಾದ್ರೆ ಹಿಂದೂ ಕಾರ್ಯಕರ್ತರಿಗೆ ಹಿಂದುತ್ವವಾದಿಗಳಿಗೆ ಸಹಾಯ ಮಾಡಿ. ಅದು ಬಿಟ್ಟು ಹಿಂಬಾಗಿಲಿನಲ್ಲಿ ಅಧಿಕಾರ ಬಳಸಿ ದೌರ್ಜನ್ಯ ಎಸೆಗೋದು ಮಾಡಿದ್ರೆ ನಾವ್ ಸುಮ್ಮನಿರಲ್ಲ. ಎಲ್ಲ ಹಿಂದೂ ಸಂಘಟನೆಗಳನ್ನ ಜೊತೆ ಸೇರಿಸಿಕೊಂಡು ಬಿಜೆಪಿ ವಿರುದ್ಧ ಹೋರಾಟದ ಹಾದಿ ಹಿಡಿಯುತ್ತೇವೆ ಎಂದು ಹಿಂದೂ ಮಹಾಸಭಾ ಎಚ್ಚರಿಕೆ ನೀಡಿದೆ.

ಮುಂದೆ ಓದಿ ...
 • Share this:

ಪುತ್ತೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ನಾಯಕರ ವಿರುದ್ಧ ವಿರುದ್ಧ ಹಿಂದೂ ಮಹಾಸಭಾ (Hindu Mahasabha) ಕಿಡಿಕಾರಿದೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿಂದೂ ಮಹಾಸಭಾ ಚಾಲಕ್ ಧರ್ಮೇಂದ್ರ ಅಮೀನ್, (Dharmendra Amin) ನಳಿನ್ (Nalin Kumar Kateel) ಅವ್ರೆ ತಾಕತ್ತಿದ್ರೆ ಪಕ್ಷೇತರರಾಗಿ ಮೋದಿ, ಯೋಗಿ ಹೆಸರು ಎತ್ತದೆ ಚುನಾವಣೆ ಎದುರಿಸಿ. ಅರುಣ್ ಪುತ್ತಿಲ ಅವ್ರ 10% ಮತವನ್ನ ಪಡೆದು ತೋರಿಸಿ. ನಿಮ್ಗೆ ತಾಕತ್ ಇದ್ಯಾ ಅಂತ ನೋಡಿ ಬಿಡೋಣ ಎಂದು ಸವಾಲೆಸೆದಿದ್ದಾರೆ.


ಹರೀಶ್ ಪೂಂಜ ವಿರುದ್ಧ ಕಿಡಿ


ಈ ನಡುವೆ ಹರೀಶ್ ಪೂಂಜಾನಂತ ಓರ್ವ ಶಾಸಕ ಸತ್ಯಜಿತ್ ಸುರತ್ಕಲ್, ಮಹೇಶ್ ಶೆಟ್ಟು ತಿಮರೋಡಿ ಬಗ್ಗೆ ಮಾತಾಡ್ತಾರೆ ಎಂದು ಕಿಡಿಕಾರಿದ ಧರ್ಮೇಂದ್ರ ಅಮೀನ್, ಅವ್ರ ಬಗ್ಗೆ ಮಾತಾಡಲು ಯಾವ ನೈತಿಕತೆ ಇದೆ ಬಿಜೆಪಿ ಶಾಸಕರಿಗೆ? ಅಧಿಕಾರ ಸಿಕ್ಕಿದ ಕೂಡ್ಲೇ ಬಾಯಿಗೆ ಬಂದಾಗೆ ಮಾತಾಡೋದು ತಪ್ಪು. ಹೇಗೆ ಪೀಠದಲ್ಲಿ ಕೂರಿಸಿದ್ದೇವೋ, ಹಾಗೆಯೇ ಇಳಿಸೋದು ಗೊತ್ತು. ಹಿಂದೂ ಮಹಾಸಭಾ ಎಚ್ಚರಿಕೆ ಕೊಡ್ತಿದೆ ಎಂದು ಎಚ್ಚರಿಸಿದ್ದಾರೆ.


ಇದನ್ನೂ ಓದಿ: Puttur BJP: ಯತ್ನಾಳ್ ಸಮ್ಮುಖದಲ್ಲೇ ಪುತ್ತೂರಿನಲ್ಲಿ ಹಿಂದೂಪರ-ಬಿಜೆಪಿ ಕಾರ್ಯಕರ್ತರ ಮಧ್ಯೆ ತಳ್ಳಾಟ!


ನೈತಿಕತೆ ಇದ್ರೆ ಬಿಜೆಪಿ ಶಾಸಕರು ಮೌನವಾಗಿರಿ


ಅಲ್ಲದೇ, ನೈತಿಕತೆ ಇದ್ರೆ ಬಿಜೆಪಿ ಶಾಸಕರು ಮೌನವಾಗಿರಿ. ಸಾಧ್ಯವಾದ್ರೆ ಹಿಂದೂ ಕಾರ್ಯಕರ್ತರಿಗೆ ಹಿಂದುತ್ವವಾದಿಗಳಿಗೆ ಸಹಾಯ ಮಾಡಿ. ಅದು ಬಿಟ್ಟು ಹಿಂಬಾಗಿಲಿನಲ್ಲಿ ಅಧಿಕಾರ ಬಳಸಿ ದೌರ್ಜನ್ಯ ಎಸೆಗೋದು ಮಾಡಿದ್ರೆ ನಾವ್ ಸುಮ್ಮನಿರಲ್ಲ. ಎಲ್ಲ ಹಿಂದೂ ಸಂಘಟನೆಗಳನ್ನ ಜೊತೆ ಸೇರಿಸಿಕೊಂಡು ಬಿಜೆಪಿ ವಿರುದ್ಧ ಹೋರಾಟದ ಹಾದಿ ಹಿಡಿಯುತ್ತೇವೆ ಎಂದು ಎಚ್ಚರಿಕೆ ನೀಡಿದರು.


ನಾವು ಕೋರ್ಟ್ ಮೆಟ್ಟಿಲೇರುತ್ತೇವೆ


2024ರಲ್ಲಿ ಲೋಕಸಭಾ ಚುನಾವಣೆ ಇದೆ. ನಾವು ಮೋದಿ ನೋಡಿಕೊಂಡು ಸುಮ್ಮನಿದ್ದೇವೆ. ಅದು ಬಿಟ್ಟು ನಿಮ್ಮ ಮುಖ ನೋಡಿ ಸುಮ್ಮನಿರಲ್ಲ. ಇದಕ್ಕೆ ಉತ್ತರ ಕೊಡೋದಕ್ಕೂ ಬರುತ್ತೆ ಎಂದು ಎಚ್ಚರಿಸಿದ ಧರ್ಮೇಂದ್ರ ಅಮೀನ್, ಯಾವಾನಾದ್ರೂ ಒಬ್ಬ ಶಾಸಕನ‌ ಮಗನಾಗಲಿ ಮಂತ್ರಿಯ ಮಗನಾಗಲಿ ಹೋರಾಟದ ಹಾದಿಯಲ್ಲಿದ್ದಾರಾ..? ಹಾಗಾಗಿ ಎಚ್ಚರಿಕೆ ಕೊಡ್ತಾ ಇದ್ದೇವೆ. ಪುತ್ತೂರಿನ ಪೊಲೀಸ್ ದೌರ್ಜನ್ಯ ಪ್ರಕರಣದಲ್ಲಿ ಸರಿಯಾದ ನ್ಯಾಯ ಸಿಕ್ಕಿಲ್ಲ. ಈ ಕೂಡಲೇ ಡಿವೈಎಸ್ಪಿ ಅವರನ್ನ ಅಮಾನತು ಮಾಡ್ಬೇಕು. ಇಲ್ಲದಿದ್ದಲ್ಲಿ ನಾವು ಕೋರ್ಟ್ ಮೆಟ್ಟಿಲೇರುತ್ತೇವೆ ಎಂದು ಹೇಳಿದರು.


ಇದನ್ನೂ ಓದಿ: BK Hariprasad: ಬಿಕೆ ಹರಿಪ್ರಸಾದ್‌ರನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಮಂತ್ರಿ ಮಾಡಲು ಆಗ್ರಹಿಸಿದ ಅಭಯಚಂದ್ರ ಜೈನ್


ಹಿಂದೂ ಮಹಾಸಭಾದ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಪುನೀತ್ ಸುವರ್ಣ ಮಾತನಾಡಿ, ದಿ.ಪ್ರವೀಣ್ ನೆಟ್ಟಾರ್ ಕುಟುಂಬಕ್ಕೆ ಸಹಾಯಹಸ್ತ ಮಾಡಿದ್ದು ಹಿಂದೂ ಸಂಘಟನೆಯ ಕಾರ್ಯಕರ್ತರು. ನೆನಪಿಟ್ಟುಕೊಳ್ಳಿ ಬಿಜೆಪಿಯವರು ಸಹಾಯ ಮಾಡಿಲ್ಲ. ಪ್ರವೀಣ್ ನೆಟ್ಟಾರ್ ಕುಟುಂಬಕ್ಕೆ ನಳಿನ್ ಕುಮಾರ್ ಕಟೀಲ್ ಮನೆಕಟ್ಟಿಕೊಟ್ರು ಅಂತ ಹೇಳ್ತಾರೆ. ನಳಿನ್ ಅವ್ರ ಕಾರು ಅಲುಗಾಡಿಸಿದ್ದಕ್ಕೆ ಮನೆ ಕಟ್ಟಿಕೊಟ್ರು. ನಿಜವಾಗಿ ನಳಿನ್ ಅವ್ರ ಕಾರನ್ನ ಅಲುಗಾಡಿಸಬಾರ್ದಿತ್ತು, ನಳಿನ್ ಅವ್ರನ್ನೇ ಅಲುಗಾಡಿಸಬೇಕಿತ್ತು ಎಂದು ಕಿಡಿಕಾರಿದರು.


top videos  ಇನ್ನು, ನಾವು ಹಿಂದೂ ಮಹಾಸಭಾದವ್ರು ಅಲ್ಲಿ ಇರ್ತಿದ್ರೆ ನಳಿನ್ ಅವ್ರನ್ನೇ ಅಲುಗಾಡಿಸ್ತಿದ್ವಿ ಎಂದ ಪುನೀತ್, ಹಿಂದೂ ಮಹಾಸಭಾ ತತ್ವ ಸಿದ್ಧಾಂತವನ್ನ ಅನುಸರಿಸಿಕೊಂಡು‌ ಬರುವವರು. ನಮ್ಮ ತತ್ವ ಸಿದ್ಧಾಂತ ವೀರ ಸಾವರ್ಕರ್, ನಾಥೂರಾಂ ಗೋಡ್ಸೆ ಅವರದ್ದು. ನಾನು ಎದೆತಟ್ಟಿ ಹೇಳ್ತೇನೆ ನಾನು ಗಾಂಧಿವಾದಿ ಅಲ್ಲ, ಗೋಡ್ಸೆವಾದಿ. ಅಖಂಡ ಭಾರತದ ಹಿಂದೂ ರಾಷ್ಟ್ರದ ಮುನ್ನುಡಿ ಬರೆದವ್ರು ಗೋಡ್ಸೆ ಎಂದು ಹೇಳಿದರು.

  First published: