• Home
  • »
  • News
  • »
  • state
  • »
  • Police Complaint: ಭೂತಾರಾಧನೆ ಮೂಢನಂಬಿಕೆ ಎಂದ ಬಿ ಟಿ ಲಲಿತಾ ನಾಯಕ್​ ವಿರುದ್ಧ ಬಿತ್ತು ಕೇಸ್​; ದೂರು ಕೊಟ್ಟ ಹಿಂದೂ ಜಾಗರಣ ವೇದಿಕೆ

Police Complaint: ಭೂತಾರಾಧನೆ ಮೂಢನಂಬಿಕೆ ಎಂದ ಬಿ ಟಿ ಲಲಿತಾ ನಾಯಕ್​ ವಿರುದ್ಧ ಬಿತ್ತು ಕೇಸ್​; ದೂರು ಕೊಟ್ಟ ಹಿಂದೂ ಜಾಗರಣ ವೇದಿಕೆ

ಬಿ.ಟಿ. ಲಲಿತಾ ನಾಯಕ್ ವಿರುದ್ಧ ದೂರು

ಬಿ.ಟಿ. ಲಲಿತಾ ನಾಯಕ್ ವಿರುದ್ಧ ದೂರು

ಸಾಹಿತಿ ಬಿ.ಟಿ ಲಲಿತಾ ನಾಯಕ್ ದೈವಾರಾಧನೆಯ ಬಗ್ಗೆ ಬಹಳ ಕೀಳಾಗಿ ಮಾತನಾಡಿದ್ದು, ಇದು ನನ್ನ ಮನಸ್ಸಿಗೆ ಧಕ್ಕೆಯಾಗಿದೆ ಎಂದು ಹಿಂದೂ ಜಾಗರಣ ವೇದಿಕೆ ತಾಲೂಕು ಸಂಚಾಲಕ ಉಮೇಶ್ ಪಕ್ಕಲು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

  • News18 Kannada
  • Last Updated :
  • Karnataka, India
  • Share this:

ಉಡುಪಿ: ತುಳುನಾಡಿನ ಭೂತಾರಾಧನೆ ಮೂಢನಂಬಿಕೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಸಾಹಿತಿ, ಚಿಂತಕಿ ಬಿ.ಟಿ ಲಲಿತಾ ನಾಯಕ್ (BT Lalitha Nayak) ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಸಂಬಂಧಿಸಿದಂತೆ ಹಿಂದೂ ಜಾಗರಣ ವೇದಿಕೆ ಬಿ.ಟಿ ಲಲಿತಾ ನಾಯಕ್​ ವಿರುದ್ಧ ಇಂದು ಉಡುಪಿ (Udupi) ನಗರ ಠಾಣೆಗೆ (Complaint) ದೂರು ನೀಡಿದೆ. ತುಳುನಾಡಿನ ಕೋಟ್ಯಾಂತರ ಜನರ ಭಾವನೆಗೆ ಧಕ್ಕೆಯಾಗಿದೆ. ದೈವಾರಾಧಕರನ್ನು ಬಿ.ಟಿ ಲಲಿತಾ ನಾಯಕ್ ಹಿಯಾಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.


3 ವರ್ಷ ಶಿಕ್ಷೆ, ದಂಡ ವಿಧಿಸಬೇಕೆಂದು ಆಗ್ರಹ


ಸಾಹಿತಿ ಬಿ.ಟಿ ಲಲಿತಾ ನಾಯಕ್ ದೈವಾರಾಧನೆಯ ಬಗ್ಗೆ ಬಹಳ ಕೀಳಾಗಿ ಮಾತನಾಡಿದ್ದು, ಇದು ನನ್ನ ಮನಸ್ಸಿಗೆ ಧಕ್ಕೆಯಾಗಿದೆ ಎಂದು ಹಿಂದೂ ಜಾಗರಣ ವೇದಿಕೆ ತಾಲೂಕು ಸಂಚಾಲಕ ಉಮೇಶ್ ಪಕ್ಕಲು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅವರ ಹೇಳಿಕೆಯಿಂದ ಧಾರ್ಮಿಕ ನಂಬಿಕೆ ಮತ್ತು ಭಾವನೆಗೆ ಘಾಸಿಯಾಗಿದೆ. 3 ವರ್ಷ ಶಿಕ್ಷೆ, ದಂಡ ವಿಧಿಸಬೇಕು. ಭಾರತೀಯ ದಂಡಸಂಹಿತೆ ಪ್ರಕಾರ ಧಾರ್ಮಿಕ ಭಾವನೆಗೆ ಧಕ್ಕೆ ನಿಯಮದಡಿ (295 ಎ) ಪ್ರಕರಣ ದಾಖಲಿಸುವಂತೆ ಆಗ್ರಹಿಸಿದ್ದಾರೆ.




ಬಿ.ಟಿ ಲಲಿತಾ ನಾಯಕ್ ಹೇಳಿದದ್ರೂ ಏನು?


ಕಾಂತಾರ ಸಿನಿಮಾ ಮೂಡಿಸಿದ ಜಾಗೃತೆಯಿಂದಾಗಿಯೇ ಕರಾವಳಿ ಭಾಗದ ದೈವ ನರ್ತಕರಿಗೆ (Daiva Nartaka) ಸರ್ಕಾರ 2 ಸಾವಿರ ರೂಪಾಯಿ ಮಾಸಾಶನ ಮಂಜೂರು ಮಾಡಿದೆ. ಆದರೆ ಇದಕ್ಕೆ ಮಾಜಿ ಸಚಿವೆ, ಸಾಹಿತಿ ಬಿಟಿ ಲಲಿತಾ ನಾಯಕ್ (BT Lalitha Nayak) ಅವರು ವಿರೋಧ ವ್ಯಕ್ತಪಡಿಸಿದ್ದರು. ಕಾಂತಾರ ಚಿತ್ರ ವೀಕ್ಷಿಸಲು ಬಹಳ ಬುದ್ಧಿವಂತಿಕೆ ಬೇಕು. ಇನ್ನು ಭೂತಾರಾಧನೆಯ ಸಮಯದಲ್ಲಿ ದೇವರು ಬರುತ್ತಾರೆ ಅನ್ನೋದೆಲ್ಲಾ ಸುಳ್ಳು. ದೈವ ನರ್ತಕರು ಓಹೋ ಎಂದು ಚೀರಾಟ ಮಾಡುವುದು ಕುಣಿಯುವುದರ ಹಿಂದೆ ಬೇರೆಯದೇ ಆದ ಕಾರಣವಿದೆ ಅಂತ ಹೇಳಿದ್ದಾರೆ. ಅಲ್ಲದೇ ದೈವ ನರ್ತಕರಿಗೆ ಮಾಶಾಸನ ನೀಡಬಾರದು ಅಂತ ಅವರು ಹೇಳಿದ್ದಾರೆ.





“ದೈವ ನರ್ತಕರಿಗೆ ಸರ್ಕಾರ ಮಾಸಾಶನ ನೀಡಬಾರದು”

 ಗದಗದಲ್ಲಿ ಮಾತನಾಡಿದ ಅವರು, ದೈವ ನರ್ತಕರಿಗೆ ಮಾಶಾಸನ ನೀಡಬಾರದು ಎಂದು ಹೇಳಿದ್ದಾರೆ. ಯಾವುದೋ ಕಾಲದಲ್ಲಿ ನೋವಿನಿಂದ ಕೂಗಿದವರನ್ನು ದೇವರು ಎಂದ್ರು. ಈಗಿರೋ ಎಲ್ಲಾ ದೇವರುಗಳು ಮನುಷ್ಯರೇ, ಆದರೆ ನಾವು ದೇವರು ಅಂತ ಮಾಡಿಕೊಂಡಿದ್ದೇವೆ. ದೈವ ನರ್ತಕರಿಗೆ ತಿಂಗಳಿಗೆ ಎರಡು ಸಾವಿರ ರೂಪಾಯಿ ಮಾಶಾಸನ ನೀಡುವ ಬದಲಿಗೆ ಉದ್ಯೋಗ ನೀಡಿ. ಅರ್ಚಕರು ಹಾಗೂ ಮೌಲ್ವಿಗಳಿಗೆ ಕೂಡಾ ಮಾಶಾಸನ ನೀಡಬಾರದು ಎಂದಿದ್ದಾರೆ.




“ದೇವಸ್ಥಾನದ ತೀರ್ಥ ಕುಡಿಯಬಾರದು”


ಮಾನವ ಶ್ರಮವನ್ನು ಸರ್ಕಾರ ಬಳಸಿಕೊಳ್ಳಬೇಕು, ಅದನ್ನು ಬಿಟ್ಟು ದೇವರು ನಾನು ಅಂತಾ ಕುಣಿದಾಗ, ಅದಕ್ಕೆ ಎರಡು ಸಾವಿರ ಕೊಟ್ರೆ ಅದು ಸಾಲಲ್ಲ. ಮುಂದೆ ಆತ ಮೌಢ್ಯವನ್ನು ಬಿತ್ತುತ್ತಾನೆ ಅಂತ ಅವರು ಹೇಳಿದ್ದಾರೆ. ದೇವಸ್ಥಾನದಲ್ಲಿಯೂ ನಮಗೆ ಜ್ಞಾನ ಸಿಗಲ್ಲ, ನಮಗೆ ಜ್ಞಾನ ಸಿಗೋದು ಗ್ರಂಥಾಲಯ ಹಾಗೂ ಶಾಲೆಗಳಲ್ಲಿ. ದೇವಸ್ಥಾನದಲ್ಲಿ ನೀಡೋ ತೀರ್ಥವನ್ನು ಕುಡಿಯಬಾರದು. ಎಷ್ಟು ದಿನದ ಕಿಲಬು ಇರುತ್ತೇ, ಎಷ್ಟು ಜನ್ರು ವಾಂತಿ ಮಾಡಿಕೊಂಡಿದ್ದಾರೆ. ಅವೆಲ್ಲ ಅವೈಜ್ಞಾನಿಕವಾದ್ದು, ಶುದ್ಧವಾಗಿ ಕೈ ತೊಳೆಯಲ್ಲ ಅವ್ರು. ನಮ್ಮ ಮನೆಯಲ್ಲಿ ನೀರು ಇಲ್ವಾ ಎಂದು ಲಲಿತಾ ನಾಯಕ್ ಪ್ರಶ್ನಿಸಿದ್ದರು.


ಇದನ್ನೂ ಓದಿ: Kantara: ಕಾಂತಾರಕ್ಕೆ ತಪ್ಪದ ಕಂಟಕ! ಸಿನಿಮಾ ಪ್ರದರ್ಶಿಸದಂತೆ ದಲಿತ ಸಂಘಟನೆಗಳ ಆಗ್ರಹ


“ದೈವ ನರ್ತನ ಸುಳ್ಳು ಎಂಬ ಸತ್ಯವನ್ನು ಸಾರಬೇಕು”


ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಅವ್ರು ಗಂಗಾಜಲ ತಂದುಕೊಟ್ರು, ಗಂಗಾ ನದಿಯಲ್ಲಿ ಹೆಣಗಳು ತೆಲುತ್ತವೆ, ಅಲ್ಲಿ ಹೆಣ ಹೆಣ ಸುಟ್ಟು ಗಂಗಾನದಿಗೆ ಎಸೆಯುತ್ತಾರೆ ಅಂತ ಲಲಿತಾ ನಾಯಕ್ ಹೇಳಿದ್ದಾರೆ. ಇನ್ನು ಯಾರ್ಯಾರು ದೇವರ ಹೆಸರಿನಲ್ಲಿ ಕುಣಿದ್ರೆ ಅವರಿಗೆ ದುಡ್ಡು ಕೊಡಬಾರದು, ಸಾರ್ವಜನಿಕ ಹಣವನ್ನು ಪೋಲು ಮಾಡಬಾರದು, ದೈವದ ಹೆಸರಿನಲ್ಲಿ ನರ್ತನೆ ಮಾಡೋದು ಇದೊಂದು ಸುಳ್ಳು ಎಂಬ ಸತ್ಯವನ್ನು ಜನರ ಮುಂದೆ ಇಡುವ ಕೆಲಸ ಮಾಡಬೇಕು, ಮಾಸಾಶನದ ಬದಲಿಗೆ ದುಡಿಮೆಯನ್ನು ಮಾಡಿ, ಉಣುವ ವ್ಯವಸ್ಥೆಯನ್ನು ತರಬೇಕು ಅಂತ ಅವರು ಅಭಿಪ್ರಾಯಪಟ್ಟಿದ್ದಾರೆ.



Published by:ಪಾವನ ಎಚ್ ಎಸ್
First published: