• Home
  • »
  • News
  • »
  • state
  • »
  • Muharram: ಬೆಳಗಾವಿ ಈ ಗ್ರಾಮದಲ್ಲಿ ಹಿಂದೂಗಳಿಂದಲೇ ನಡೆಯುತ್ತೆ ವೈಭವದ ಮೊಹರಂ

Muharram: ಬೆಳಗಾವಿ ಈ ಗ್ರಾಮದಲ್ಲಿ ಹಿಂದೂಗಳಿಂದಲೇ ನಡೆಯುತ್ತೆ ವೈಭವದ ಮೊಹರಂ

ಮೊಹರಂ

ಮೊಹರಂ

2012ರಲ್ಲಿ ಅದಕ್ಕೆ ಹೊಂದಿಕೊಂಡೇ ದರ್ಗಾ ತಲೆ ಎತ್ತಿದೆ. ಆದರೆ, ಫಕೀರ ಅವರ ಬಗ್ಗೆ ಹೆಚ್ಚಿನ ಮಾಹಿತಿ ಯಾರಿಗೂ ತಿಳಿದಿಲ್ಲ. ಫಕೀರ ಅವರು ಊರಿನ ಜನರಿಗೆ ಮಾರ್ಗದರ್ಶಿ ಆಗಿದ್ದರು.

  • Share this:

ಬೆಳಗಾವಿ: ಅದು ಸವದತ್ತಿ ತಾಲ್ಲೂಕಿನ ಚಿಕ್ಕ ಗ್ರಾಮ ಹರ್ಲಾಪುರ (Harlapura, Savadatti). ಆದರೆ ಧರ್ಮ ಸೌಹಾರ್ದದಲ್ಲಿ ಈ ಜನರ ಮನಸ್ಸು ಬಹಳ ದೊಡ್ಡದು. ಈ ಊರಲ್ಲಿ ಒಂದೂ ಮುಸ್ಲಿಂ ಕುಟುಂಬವಿಲ್ಲ (Muslim Family). ಹಾಗಾಗಿ ಹಿಂದೂಗಳೇ ಇಲ್ಲಿ ಫಕೀರಸ್ವಾಮಿ ದರ್ಗಾ (Dargah) ಕಟ್ಟಿಸಿ, ಮೊಹರಂ (Muharam Celebration) ಆಚರಿಸುತ್ತಿದ್ದಾರೆ. ತುಂತುರು ಮಳೆ (Rain) ಮಧ್ಯೆಯೂ‌ ಮೊಹರಂ ಆಚರಣೆ ನಡೆಯಿತು. ಇಲ್ಲಿ ಪ್ರತಿ ವರ್ಷ ವೈಭವದಿಂದ ಮೊಹರಂ ಆಚರಿಸಲಾಗುತ್ತದೆ. ಪಂಜಾಗಳನ್ನು ಪ್ರತಿಷ್ಠಾಪನೆ ಮಾಡುವುದು, ಪೂಜೆ, ಡೋಲಿಗಳ ನಿರ್ಮಾಣ ಹಾಗೂ ಅವುಗಳನ್ನು ಮೆರವಣಿಗೆ ಮಾಡಿ ಹೊಳೆಗೆ ಸೇರಿಸುವವರೆಗೆ ಮುಸ್ಲಿಂ ಧರ್ಮದ ಎಲ್ಲ ಆಚರಣೆಗಳನ್ನೂ ಇಲ್ಲಿ ಹಿಂದೂಗಳೇ ಮಾಡುತ್ತಾರೆ.


ಹಿರಿಯರಿಗೆ ಗೊತ್ತಿರುವ ಹಾಗೆ ನಾಲ್ಕು ತಲೆಮಾರುಗಳಿಂದ ಇಲ್ಲಿ ಮೊಹರಂ, ಉರುಸ್‌ ಆಚರಿಸಲಾಗುತ್ತಿದೆ. ದಶಕದ ಹಿಂದೆ ಗುರು– ಹಿರಿಯರು, ಯುವಜನರು ದೇಣಿಗೆ ಸಂಗ್ರಹಿಸಿ, 8 ಲಕ್ಷ ವೆಚ್ಚದಲ್ಲಿ ಫಕೀರಸ್ವಾಮಿ ದರ್ಗಾ ನಿರ್ಮಿಸಿದ್ದಾರೆ. ಈ ದರ್ಗಾದಲ್ಲಿ ಹಿಂದೂ, ಬೌದ್ಧ, ಕ್ರೈಸ್ತ, ವೀರಶೈವ ಲಿಂಗಾಯತ ಧರ್ಮಗಳ ದೇವರು, ಮಹಾತ್ಮರ ಫೋಟೋಗಳನ್ನೂ ಪೂಜಿಸಲಾಗುತ್ತಿದೆ.


ಗ್ರಾಮದ ಇತಿಹಾಸ


ಹಿಂದೆ ಮುಸ್ಲಿಂ ಸಮುದಾಯದ ಫಕೀರರೊಬ್ಬರು ಈ ಊರಿನಲ್ಲಿ ನಾಲ್ಕು ದೇವರ ಮೂರ್ತಿಗಳನ್ನು ಪೂಜೆ ಮಾಡುತ್ತಿದ್ದರು. ಅವರು ನಿಧನರಾದ ನಂತರ ರಾಮಚಂದ್ರ ನಿಂಬಾಳಕರ ಎನ್ನುವವರ ಹೊಲದಲ್ಲಿ ದಫನ್‌ ಮಾಡಲಾಯಿತು. ಅಲ್ಲಿಂದ ಹಿಡಿ ಮಣ್ಣು ತಂದು ಊರಿನ ಮುಖ್ಯಭಾಗದಲ್ಲಿ ಗೋರಿ ಕಟ್ಟಿದರು.


ಇದನ್ನೂ ಓದಿ: Raichur: ಮೊಹರಂಗೆ ಧರ್ಮ ಬೇಧವಿಲ್ಲ! ಬೇಕಾದ್ರೆ ಇಲ್ಲಿ ನೋಡಿ


2012ರಲ್ಲಿ ಅದಕ್ಕೆ ಹೊಂದಿಕೊಂಡೇ ದರ್ಗಾ ತಲೆ ಎತ್ತಿದೆ. ಆದರೆ, ಫಕೀರ ಅವರ ಬಗ್ಗೆ ಹೆಚ್ಚಿನ ಮಾಹಿತಿ ಯಾರಿಗೂ ತಿಳಿದಿಲ್ಲ. ಫಕೀರ ಅವರು ಊರಿನ ಜನರಿಗೆ ಮಾರ್ಗದರ್ಶಿ ಆಗಿದ್ದರು. ಮುಸ್ಲಿಮರಿಗೆ ಫಕೀರ ಹಿಂದೂಗಳಿಗೆ ಈಶ್ವರ ಎಂದು ಪರಿಗಣಿಸಿ ಅವರಿಗೆ ಫಕೀರೇಶ್ವರ ಎಂದು ಹಿರಿಯರು ಕರೆದಿದ್ದಾರೆ.


ಇದುವೇ ನಂಬಿಕೆ


ದರ್ಗಾ ಪಕ್ಕದಲ್ಲೇ ದೊಡ್ಡ ಬೇವಿನಮರವಿದೆ. ಹಾವು ಕಚ್ಚಿದವರಿಗೆ ಈ ಬೇವಿನ ಮರದ ಎಲೆ ಹಾಗೂ ದರ್ಗಾದ ಪ್ರಸಾದ ಸೇರಿಸಿ ತಿನ್ನಿಸುತ್ತೇವೆ. ತಕ್ಷಣ ವಾಂತಿಯಾಗಿ, ಹಾವು ಕಚ್ಚಿದ ವ್ಯಕ್ತಿ ಪ್ರಾಣ ಉಳಿಯುತ್ತದೆ. ಹಲವು ವರ್ಷಗಳಿಂದ ಈ ನಂಬಿಕೆ ಮುಂದುವರೆದಿದೆ.


Hindu Community people celebrate muharrma in belagavi csb mrq
ಸಾಂದರ್ಬಿಕ ಚಿತ್ರ


ಗ್ರಾಮಸ್ಥರು ಹೇಳೋದೇನು?


ದೇವಸ್ಥಾನದಲ್ಲಿ ದರ್ಗಾ ಇದೆಯೋ, ದರ್ಗಾದಲ್ಲಿ ದೇವರ ಮೂರ್ತಿ ಇದೆಯೋ ಎಂಬುದು ನಮಗೆ ಬೇಕಿಲ್ಲ. ಎಲ್ಲರೂ ಒಂದೇ ಎಂಬುದು ನಾವು ನಂಬಿದ ತತ್ವ ಒಂದೇ ಆಗಿದೆ. ಗ್ರಾಮದಲ್ಲಿ ಹಿಂದೂ, ಲಿಂಗಾಯತ, ಪರಿಶಿಷ್ಟ, ಮರಾಠಾ ಎಲ್ಲ ಸಮಾಜದವರೂ ಇದ್ದೇವೆ. ಜಾತ್ರೆ ಬಂದರೂ, ಸಾವು ಆಗಿದ್ದರೂ ಎಲ್ಲರೂ ಸೇರಿ ಕಾರ್ಯ ಮಾಡುವುದು ರೂಢಿಯಲ್ಲಿ ಇದೆ ಎನ್ನುತ್ತಾರೆ ಗ್ರಾಮಸ್ಥ ಬಸಪ್ಪ ಒಕ್ಕುಂದ ಎಂದು ಹೇಳುತ್ತಾರೆ.


ವಿಜಯಪುರ ಜಿಲ್ಲೆಯಲ್ಲಿಯೂ ಇದೇ ಗ್ರಾಮ


ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲಿ (Vijayapura) ನಿಡಗುಂದಿಯ ಮಣಗೂರು ಅತಿ ಚಿಕ್ಕ ಗ್ರಾಮ. ಸರಿ ಸುಮಾರು ಈ ಗ್ರಾಮದಲ್ಲಿ 2 ಸಾವಿರ ಜನಸಂಖ್ಯೆಯನ್ನ ಹೊಂದಿದ ಗ್ರಾಮ ಇದಾಗಿದೆ. ಈ ಹಿಂದೆ 2 ಸಾವಿರದ ಇಸವಿಯ ಪೂರ್ವದಲ್ಲಿ ಈ ಗ್ರಾಮ ಬಾಗಲಕೋಟೆ ಜಿಲ್ಲೆಗೆ (Bagalkote) ಒಳಪಟ್ಟಿತ್ತು,


Hindu Community people celebrate muharrma in belagavi csb mrq
ಸಾಂದರ್ಭಿಕ ಚಿತ್ರ


ಕೃಷ್ಣಾ ನದಿ (Krishna River) ಪ್ರವಾಹದಿಂದ ಮುಳುಗಡೆಗೊಂಡು ನಿಡಗುಂದಿಗೆ ಈ ಮಣಗೂರು ಗ್ರಾಮ ಸ್ಥಳಾಂತರಗೊಂಡಿದೆ.ಈ ಮನಗೂರು ಪುನರ್ವಸತಿಯಲ್ಲಿ ಅಸಲಿಗೆ ಮುಸ್ಲಿಂಮರಿಲ್ಲ (Muslim Community) ಈ ಗ್ರಾಮದಲ್ಲಿ ಇರುವವರು ಎಲ್ಲರೂ ಹಿಂದುಗಳೇ.


ಇದನ್ನೂ ಓದಿ: Belagavi Rains: ಕುಂದಾ ನಗರಿಯಲ್ಲಿ ಮಳೆಯ ಅಬ್ಬರಕ್ಕೆ ಮನೆ ಕುಸಿತ; ಅದೃಷ್ಟವಶಾತ್ ಉಳಿಯಿತು 7 ಜನರ ಪ್ರಾಣ


ಮೊಹರಂ ಆಚರಿಸುವ ಹಿಂದೂಗಳು


ಈ ಗ್ರಾಮಸ್ಥರು ಮೂಲತ ಎಲ್ಲರೂ ರೈತ ಕುಟುಂಬದವರೆ ಎಂಬುವುದು ಸೋಜಿಗದ ಸಂಗತಿ. ಧರ್ಮ, ಜಾತಿ, ಭೇದವನ್ನ ಮರೆತು ನಾವೆಲ್ಲ ಸಮಾನರು, ನಾವೆಲ್ಲ ಒಂದೇ ಎಂದು ಬದುಕುತ್ತಿರುವ ಗ್ರಾಮವಿದು

Published by:Mahmadrafik K
First published: