• Home
  • »
  • News
  • »
  • state
  • »
  • Hindu-Muslim: ಧರ್ಮ ದಂಗಲ್ ನಡುವೆ ಭಾವೈಕ್ಯತೆಯ ಜಾತ್ರೆ! ಫಕೀರೇಶ್ವರನಿಗೆ ಶರಣು ಎಂದ ಹಿಂದೂ-ಮುಸ್ಲಿಮರು

Hindu-Muslim: ಧರ್ಮ ದಂಗಲ್ ನಡುವೆ ಭಾವೈಕ್ಯತೆಯ ಜಾತ್ರೆ! ಫಕೀರೇಶ್ವರನಿಗೆ ಶರಣು ಎಂದ ಹಿಂದೂ-ಮುಸ್ಲಿಮರು

ಭಾವೈಕ್ಯತೆ ಸಾರುವ ಫಕೀರೇಶ್ವರನ ಜಾತ್ರೆ

ಭಾವೈಕ್ಯತೆ ಸಾರುವ ಫಕೀರೇಶ್ವರನ ಜಾತ್ರೆ

ಮನಸುಗಳ ಮಧ್ಯೆ ಕೊಳ್ಳಿ ಇಟ್ಟು ಸೌಹಾರ್ದ ಪರಂಪರೆಗೆ ಕೊಡಲಿ ಪೆಟ್ಟು ಹಾಕೋರೆ ಹೆಚ್ಚು. ಇಂಥದ್ರಲ್ಲಿ ದ್ವೇಷ ಬೀಡು, ಪ್ರೀತಿ ಮಾಡು ಅನ್ನೋ ಸಂದೇಶದ ಮೂಲಕ ಪ್ರತಿ ಮನದಲ್ಲೂ ಸೌಹಾರ್ಧತೆಯ ದೀಪ ಹಚ್ಚುತ್ತಿರೋ ಫಕೀರೇಶ್ವರ ಮಠದ ಕಾರ್ಯ ಶ್ಲಾಘನೀಯವಾಗಿದೆ.

  • Share this:

ಗದಗ: ಹಿಂದೂ‌ (Hindu) ಮುಸ್ಲಿಂ (Muslim) ಒಂದಾಗಿ ಅದ್ದೂರಿ ಜಾತ್ರೆ (Jatre) ಮಾಡಿದ್ರು. ಕಾರಣ, ಅಲ್ಲಿ ಹಿಂದೂ-ಮುಸ್ಲಿಮರ ಭಾವೈಕ್ಯತೆಯ ಸಂಗಮವಾಗಿರುತ್ತೆ. ಎರಡು ಧರ್ಮದ (Religion) ಸೌಹಾರ್ದ ಸಂಕೇತವಾಗಿರೋ ಆ ಮಠ (Math) ಫಕೀರೇಶ್ವರ ಮಠ (Phakireshwara Math) ಅಂತ ಪ್ರಸಿದ್ಧಿ ಪಡೆದಿದೆ. ಇಂತಹ ಇತಿಹಾಸವಿರೋ ಫಕೀರೇಶ್ವರ ಮಠದ ಜಾತ್ರೆ ಸಂಭ್ರಮ ಸಡಗರದಿಂದ ನಡೆಯಿತು. ಗದಗ (Gadag) ಜಿಲ್ಲೆ ಶಿರಹಟ್ಟಿ ಪಟ್ಟಣದ ಐತಿಹಾಸಿಕ ಫಕೀರೇಶ್ವರ ಮಠದ ಜಾತ್ರೆ ದೇಶದ ಸೌಹಾರ್ದ ಪರಂಪರೆಯ ಇತಿಹಾಸದಲ್ಲಿ ಅಗ್ರಗಣ್ಯ ಸ್ಥಾನದಲ್ಲಿ ನಿಲ್ಲುತ್ತದೆ. ಪ್ರತಿ ವರ್ಷದಂತೆ ಆಗಿ ಹುಣ್ಣಿಮೆಯಂದು ಜಾತ್ರೆ ಸಂಭ್ರಮದಿಂದ ನಡೆಯಿತು.


ಒಂದೇ ಕಡೆ ಹಿಂದೂ, ಮುಸ್ಲಿಂ ಆಚರಣೆ


ಮಠದ ಅಂಗಳದಲ್ಲಿಯೇ ಒಂದು ಭಾಗದಲ್ಲಿ ಗರ್ಭಗುಡಿಯಲ್ಲಿ ಹಿಂದೂ ಧರ್ಮದ ಪ್ರಕಾರ ಪೂಜೆ, ಪುನಸ್ಕಾರಗಳು ನಡಿತಿದ್ರೆ, ಮತ್ತೊಂದೆಡೆ ದರ್ಗಾ ಕೂಡ ನಿರ್ಮಿಸಲಾಗಿದ್ದು, ಇಸ್ಲಾಂ ಧರ್ಮದ ಪ್ರಕಾರ ಸಾಂಪ್ರದಾಯಿಕ ಆಚರಣೆ ಮಾಡ್ತಾರೆ.


ಸೂಫಿ ಸಂತನ ಅನುಗ್ರಹದಿಂದ ಜನಿಸಿದ ಮಗು


ಈ ಹಿಂದೆ ಬಿಜಾಪುರದ ಸೂಫಿಸಂತ ಖಾಜಾ ಅಮೀನುದ್ದೀನ್ ಅವರ ಅನುಗ್ರಹದಿಂದ ಜಂಗಮ ದಂಪತಿಗಳಾದ ಶಿವಯ್ಯ ಅವರಿಗೆ ಗಂಡು ಮಗು ಜನಿಸಿರುತ್ತೆ. ಖ್ವಾಜಾ ಅವರ ಆದೇಶದಂತೆ ಹುಟ್ಟಿದ ಮಗುವನ್ನು ದರ್ಗಾಕ್ಕೆ ಬಿಡುತ್ತಾರೆ. ಆ ಮಗುವಿಗೆ ಚನ್ನವೀರನೆಂದು ನಾಮಕರಣಮಾಡಿ, ಮುಂದೆ ಫಕ್ಕೀರ ಚನ್ನವೀರನೆಂಬ ಅಭಿದಾನ ನೀಡಿದ್ರು.


ಇದನ್ನೂ ಓದಿ: Hubli: ಈ ದರ್ಗಾಕ್ಕೆ ಹಿಂದೂ ಮಹಿಳೆಯೇ ಪೂಜಾರಿ: ಕೋಮು ದಳ್ಳುರಿ ಎಬ್ಬಿಸೋರಿಗೆ ಸೆಡ್ಡು ಹೊಡೆದ ದೂದ್ ಪೀರ್


ಬಾಲ್ಯದಲ್ಲೇ ಪವಾಡ ಮಾಡಿದ ಫಕೀರೇಶ್ವರ


ತಮ್ಮ ಸೌಹಾರ್ದ ಸಂದೇಶದ ಜೊತೆಗೆ ಹಲವು ಪವಾಡಗಳನ್ನು ಮಾಡಿ ಫಕ್ಕಿರೇಶ್ವರರೆಂದು ಪ್ರಸಿದ್ಧಿ ಪಡೆದು ಫಕ್ಕಿರ ಚನ್ನವೀರರು ಶಿರಹಟ್ಟಿಗೆ ಬಂದು ನೆಲಸಿದ್ರು ಅನ್ನೋದು ಶ್ರೀಮಠದ ಇತಿಹಾಸ. ಹೀಗಾಗಿ ಸಧ್ಯ ಎಂಟನೇ ಪೀಠಾಧಿಪತಿಗಳಿದ್ರು, ಮಠದ ಪರಂಪರೆಯಂತೆ ಒಂದೇ ಅಂಗಳದಲ್ಲಿ ಎರಡು ಧರ್ಮದ ಆಚರಣೆ ಮಾಡುತ್ತ ಜೀವನ ಸಾಗಿಸೋದ್ರ ಜೊತೆಗೆ ಜಾತ್ರಾ ಮಹೋತ್ಸವವನ್ನು ವಿಶಿಷ್ಟವಾಗಿ ಆಚರಿಸ್ತಾರೆ.


ಧರ್ಮ ದಂಗಲ್ ನಡುವೆ ಭಾವೈಕ್ಯತೆಯ ಜಾತ್ರೆ


ಶ್ರೀಮಠದ ಇತಿಹಾಸ 15 ನೇ ಶತಮಾನದಲ್ಲೆ ಆರಂಭವಾಗಿದೆ. ಶತಮಾನಗಳು ಉರುಳಿದ್ರು ಪರಂಪರೆ ಮಾತ್ರ ಈ ಭಾಗದ ಜನ್ರು ಜೀವಂತವಾಗಿ ಜೋಪಾನ ಉಳಿಸಿಕೊಂಡಿದ್ದಾರೆ. ಇಂದು ಜಾತಿಯ ವಿಷಯವಾಗಿ ಮನಸುಗಳ ಮಧ್ಯೆ ಕಂದಕ ನಿರ್ಮಾಣವಾಗ್ತಿದೆ. ಹಿಜಾಬ್ ಪ್ರಕರಣದ ಬಳಿ ನಿತ್ಯವೂ ಒಂದಿಲ್ಲೊಂದು ವಿಷಯದಲ್ಲಿ ಧರ್ಮ ಯುದ್ದ ನಡೆಯುತ್ತಿದೆ. ಈ ಧರ್ಮ ದಂಗಲ್ ಮಧ್ಯೆಯೂ ಇಂದು ನಡೆದ ಫಕೀರೇಶ್ವರ ಜಾತ್ರೆಯಲ್ಲಿ ಹಿಂದೂ ಮುಸ್ಲಿಂ ಸಮುದಾಯದ ಜನ್ರು ಒಂದಾಗಿ ಜಾತ್ರೆ ಆಚರಣೆ ಮಾಡಿದ್ರು.


ಸರ್ವ ಜನಾಂಗದ ಜನರು ಭಾಗಿ


ಎಲ್ಲಿ ಏನೇ ನಡೆದ್ರೂ ಶಿರಹಟ್ಟಿ ಫಕೀರೇಶ್ವರ ಮಠದ ಜಾತ್ರೆಯಲ್ಲಿ ಮಾತ್ರ ಹಿಂದೂ ಮುಸ್ಲಿಂ ಜಾತಿ ಬೇಧವಿಲ್ಲದೇ ಸರ್ವಜನಾಂಗದ ಜನ್ರು ಜಾತ್ರೆ ಸಡಗರದಲ್ಲಿ ತೊಡಗಿದ್ರು. ಇಂತಹ ಜಾತಿಯ ಕಂದಕಕ್ಕೆ ಫಕ್ಕಿರೇಶ್ವರ ಮಠದ ಕಾರ್ಯ ಮಾದರಿಯಾಗಿದೆ. ಇಂದು ಸಾವಿರಾರು ಜನ್ರು ಫಕ್ಕಿರೇಶ್ವರ ಮಠದ ಜಾತ್ರೆಯ ಭಕ್ತಿಯಲ್ಲಿ ಮಿಂದೆದ್ರು.


ಬಾಳೆ ಹಣ್ಣು, ಉತ್ತತಿ ಎಸೆದು ಪ್ರಾರ್ಥನೆ


ವಿಜ್ರಂಭಣೆಯಿಂದ ನಡೆದ ರಥೋತ್ಸವಕ್ಕೆ ಬಾಳೆಹಣ್ಣು, ಉತ್ತತ್ತಿ ಎಸೆದು ಭಕ್ತಿ ಮೆರೆದ್ರು. ಕಾಯಿ ಕರ್ಪುರ ನೈವೇದ್ಯ ನೀಡಿ ಪೂಜೆ ಒಂದೆಡೆಯಾದ್ರೆ, ಸಕ್ಕರೆ, ಊದಬತ್ತಿ ಬೆಳಗೋ ಸಂಪ್ರದಾಯ ಒಂದೆಡೆ. ಎರಡು ಸಂಪ್ರದಾಯಗಳು ಒಂದೇ ಮಠದ ಅಂಗಳದಲ್ಲಿ ಅನಾವರಣಗೊಳ್ಳುತ್ತಿರೋದು ಸಾಮರಸ್ಯ ಬಯಸೋ ಪ್ರತಿ ಜೀವದ ಹಿಗ್ಗಿಗೆ ಕಾರಣವಾಗಿದೆ.


ಇದನ್ನೂ ಓದಿ: Kollegala: ದೇವಿಗೆ ಮನುಷ್ಯರ ಬಲಿ, ಸತ್ತವರು ಮರುದಿನ ಬದುಕಿ ಬರುತ್ತಾರೆ! ಇಲ್ಲಿ ನಡೆಯುತ್ತೆ ವಿಚಿತ್ರ ಆಚರಣೆ


ಮನಸುಗಳ ಮಧ್ಯೆ ಕೊಳ್ಳಿ ಇಟ್ಟು ಸೌಹಾರ್ದ ಪರಂಪರೆಗೆ ಕೊಡಲಿ ಪೆಟ್ಟು ಹಾಕೋರೆ ಹೆಚ್ಚು. ಇಂಥದ್ರಲ್ಲಿ ದ್ವೇಷ ಬೀಡು, ಪ್ರೀತಿ ಮಾಡು ಅನ್ನೋ ಸಂದೇಶದ ಮೂಲಕ ಪ್ರತಿ ಮನದಲ್ಲೂ ಸೌಹಾರ್ಧತೆಯ ದೀಪ ಹಚ್ಚುತ್ತಿರೋ ಫಕ್ಕೀರೇಶ್ವರ ಮಠದ ಕಾರ್ಯ ಶ್ಲಾಘನೀಯವಾಗಿದೆ. ಹಿಂದು ಮುಸ್ಲಿಂ ಒಟ್ಟಾಗಿ ಜಾತ್ರೆ ಮಾಡುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ.

Published by:Annappa Achari
First published: