• Home
  • »
  • News
  • »
  • state
  • »
  • Mangaluru: ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್​ಗಿರಿ; ಯುವತಿ ಜೊತೆ ಓಡಾಟ, ಅನ್ಯಕೋಮಿನ ಯುವಕನಿಗೆ ಥಳಿತ

Mangaluru: ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್​ಗಿರಿ; ಯುವತಿ ಜೊತೆ ಓಡಾಟ, ಅನ್ಯಕೋಮಿನ ಯುವಕನಿಗೆ ಥಳಿತ

ಅನ್ಯಕೋಮಿನ ಯುವಕನಿಗೆ ಥಳಿತ

ಅನ್ಯಕೋಮಿನ ಯುವಕನಿಗೆ ಥಳಿತ

ಶೃಂಗೇರಿ ಮೂಲದ ಯುವತಿ ಮತ್ತು ಬಂಟ್ವಾಳದ ಮುಸ್ಲಿಂ ಯುವಕ ಜೊತೆಯಾಗಿ ಕೆಲಸ ಮಾಡುತ್ತಿದ್ದರು. ಇವರಿಬ್ಬರೂ ಜೊತೆಯಾಗಿ ಬೈಕ್​ನಲ್ಲಿ ಸುತ್ತಾಡುತ್ತಿದ್ದರು ಎನ್ನಲಾಗುತ್ತಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಬಜರಂಗದಳ ಕಾರ್ಯಕರ್ತರು ಅಂಗಡಿಗೆ ಬಂದು ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. 

ಮುಂದೆ ಓದಿ ...
  • Share this:

ಮಂಗಳೂರು (ಡಿ.06): ಮಂಗಳೂರಿನಲ್ಲಿ (Mangaluru) ಮತ್ತೆ ನೈತಿಕ ಪೊಲೀಸ್​ಗಿರಿ ನಡೆದಿದ್ದು, ನಗರದ ಕಂಕನಾಡಿಯ ಜ್ಯುವೆಲರಿ ಶಾಪ್​ನಲ್ಲಿ (Jewellery shop) ಉದ್ಯೋಗಿಯಾಗಿರುವ ಮುಸ್ಲಿಂ ಯುವಕ ತನ್ನ ಸಹೋದ್ಯೋಗಿ ಹಿಂದೂ ಯುವತಿಯ ಜೊತೆ ಸಲುಗೆಯಿಂದ ಇದ್ದ ಎಂಬ ಕಾರಣಕ್ಕೆ ಆತನ ಮೇಲೆ ಹಲ್ಲೆ ನಡೆಸಲಾಗಿದೆ.  ಏಕಾಏಕಿ ಅಂಗಡಿಗೆ ನುಗ್ಗಿದ ಬಜರಂಗದಳದ ಕಾರ್ಯಕರ್ತರು (Bajrang Dal Activists) ಮಂಗಳವಾರ ಸಂಜೆ ಹಲ್ಲೆ ನಡೆಸಿದ್ದಾರೆ.


ಜೊತೆಯಾಗಿ ಬೈಕ್​ನಲ್ಲಿ ಸುತ್ತಾಡುತ್ತಿದ್ದರು


ನಗರದ ಕಂಕನಾಡಿ ಬಳಿಯ ಸುಲ್ತಾನ್ ಚಿನ್ನಾಭರಣ ಅಂಗಡಿಯಲ್ಲಿ ಅನ್ಯಕೋಮಿನ ಶೃಂಗೇರಿ ಮೂಲದ ಯುವತಿ ಮತ್ತು ಬಂಟ್ವಾಳದ ಮುಸ್ಲಿಂ ಯುವಕ ಜೊತೆಯಾಗಿ ಕೆಲಸ ಮಾಡುತ್ತಿದ್ದರು. ಇವರಿಬ್ಬರೂ ಜೊತೆಯಾಗಿ ಬೈಕ್​ನಲ್ಲಿ ಸುತ್ತಾಡುತ್ತಿದ್ದರು ಎನ್ನಲಾಗುತ್ತಿದೆ.


ಯುವಕನಿಗೆ ಹಿಗ್ಗಾಮುಗ್ಗಾ ಥಳಿತ


ಈ ವಿಷಯವನ್ನು ತಿಳಿದ ಯುವತಿಯ ತಾಯಿ ಇಂದು (ಡಿ.6) ರಂದು ಆಭರಣದ ಅಂಗಡಿಗೆ ಬಂದು ಯುವತಿಯೊಂದಿಗೆ ಜಗಳ ತೆಗೆದು, ಥಳಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಬಜರಂಗದಳ ಕಾರ್ಯಕರ್ತರು ಅಂಗಡಿಗೆ ಬಂದು ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.


ಅನ್ಯಕೋಮಿನ ಯುವಕನಿಗೆ ಥಳಿತ


ಕಂಕನಾಡಿಯಲ್ಲಿ ಜ್ಯುವೆಲರಿ ಶಾಪ್​ನಲ್ಲಿ ಹಲ್ಲೆ


ವಿಷಯ ತಿಳಿಯುತ್ತಿದ್ದಂತೆ ಕದ್ರಿ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಘಟನೆ ಬಗ್ಗೆ ಮಳಿಗೆಯ ಸಿಬ್ಬಂದಿಯಿಂದ ಮಾಹಿತಿ ಕಲೆ ಹಾಕಿದ್ದಾರೆ.  ಕಂಕನಾಡಿಯಲ್ಲಿ ಚಿನ್ನಾಭರಣಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಯ ಉದ್ಯೋಗಿ ಮೇಲೆ ಹಲ್ಲೆ ನಡೆದಿರುವ ಬಗ್ಗೆ ಮಾಹಿತಿ ಬಂದಿದೆ. ಈ ಬಗ್ಗೆ ನಾವೂ ವಿಚಾರಣೆ ನಡೆಸುತ್ತಿದ್ದೇವೆ. ಘಟನೆ ಬಗ್ಗೆ ಇನ್ನೂ ಯಾರೂ ದೂರು ನೀಡಿಲ್ಲ. ದೂರು ನೀಡಿದರೆ, ಹಲ್ಲೆ ನಡೆಸಿದವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದು ಕದ್ರಿ ಠಾಣೆಯ ಪೊಲೀಸರು ತಿಳಿಸಿದರು.


ಯುವತಿ ತಾಯಿಯೇ ಸಂಘಟನೆಗೆ ದೂರು


ಯುವಕನ ಮೇಲೆ ಹಲ್ಲೆ ನಡೆಸಿರುವ ವಿಚಾರವನ್ನು ಬಜರಂಗ ದಳವು ಅಲ್ಲಗೆಳೆದಿದೆ. ಚಿನ್ನಾಭರಣ ಮಳಿಗೆಯಲ್ಲಿ ಕೆಲಸಕ್ಕಿದ್ದ ಯುವತಿ ಮತ್ತು ಸಹೋದ್ಯೋಗಿ ಮುಸ್ಲಿಂ ಯುವಕನನ್ನು ಪ್ರೀತಿಸಿರುವ ಬಗ್ಗೆ ಆಕೆಯ ತಂದೆ ತಾಯಿ ನಮ್ಮ ಸಂಘಟನೆಗೆ ದೂರು ನೀಡಿದ್ದರು ಎಂದಿದ್ದಾರೆ.


ಯುವಕನಿಗೆ ಬುದ್ಧಿವಾದ ಹೇಳುವ ವೇಳೆ ಮಾತಿನ ಚಕಮಕಿ


ನಮ್ಮ ಸಂಘಟನೆಯ ಕಾರ್ಯಕರ್ತರು ಆ ಯುವತಿಯ ತಂದೆ–ತಾಯಿ ಜೊತೆಗೆ ಮಳಿಗೆಗೆ ತೆರಳಿದ್ದರು. ಮುಸ್ಲಿಂ ಯುವಕನಿಗೆ ಬುದ್ಧಿವಾದ ಹೇಳುವಾಗ ಮಾತಿನ ಚಕಮಕಿ ನಡೆದಿದೆ ಎಂದು ಬಜರಂಗ ದಳದ ಜಿಲ್ಲಾ ಸಂಚಾಲಕ ಪುನೀತ್‌ ಅತ್ತಾವರ ತಿಳಿಸಿದರು.


ಇದನ್ನೂ ಓದಿ: Belagavi Dispute: ಬೆಳಗಾವಿ ಗಡಿ ವಿವಾದ; ಸಿಎಂ ಬೊಮ್ಮಾಯಿ ಜೊತೆ ಮಹಾರಾಷ್ಟ್ರ ಸಿಎಂ ಏಕನಾಥ್​ ಶಿಂಧೆ ಮಾತುಕತೆ


ಮತ್ತೊಂದು ಪ್ರಕರಣ


ನಗರದ ನಂತೂರಿನಲ್ಲಿ ಇದೇ ಮಾದರಿಯ ಮತೀಯ ಗೂಂಡಾಗಿರಿ ಪ್ರಕರಣ ನ.24 ರಂದು ನಡೆದಿತ್ತು. ಹಿಂದೂ ಯುವತಿಯ ಜೊತೆಗೆ ಪ್ರಯಾಣಿಸುತ್ತಿದ್ದ ಮುಸ್ಲಿಂ ಯುವಕನನ್ನು ಕೆಳಗಿಳಿಸಿ ಆತನ ಮೇಲೆ ಸಂಘ ಪರಿವಾರದ ಸಂಘಟನೆಗೆ ಸೇರಿದ ಸದಸ್ಯರು ಹಲ್ಲೆ ನಡೆಸಿದ್ದರು. ಕದ್ರಿ ಠಾಣೆಯ ವ್ಯಾಪ್ತಿಯಲ್ಲೇ ನಡೆದ ಈ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
Published by:ಪಾವನ ಎಚ್ ಎಸ್
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು