• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Bajrang Dal: ಬಜರಂಗದಳ ನಿಷೇಧ ಪ್ರಸ್ತಾಪಿಸಿದ್ದ 'ಕೈ' ವಿರುದ್ಧ ಕಿಡಿಕಿಡಿ! ಬಿಜೆಪಿ-ಹಿಂದೂ ನಾಯಕರಿಂದ 'ನಾನೂ ಬಜರಂಗಿ' ಅಭಿಯಾನ

Bajrang Dal: ಬಜರಂಗದಳ ನಿಷೇಧ ಪ್ರಸ್ತಾಪಿಸಿದ್ದ 'ಕೈ' ವಿರುದ್ಧ ಕಿಡಿಕಿಡಿ! ಬಿಜೆಪಿ-ಹಿಂದೂ ನಾಯಕರಿಂದ 'ನಾನೂ ಬಜರಂಗಿ' ಅಭಿಯಾನ

ಕಾಂಗ್ರೆಸ್​ ಬಜರಂಗದಳ ನಿಷೇಧ ಪ್ರಸ್ತಾಪಕ್ಕೆ  ಭಾರಿ ವಿರೋಧ

ಕಾಂಗ್ರೆಸ್​ ಬಜರಂಗದಳ ನಿಷೇಧ ಪ್ರಸ್ತಾಪಕ್ಕೆ ಭಾರಿ ವಿರೋಧ

ಕಾಂಗ್ರೆಸ್​ ಪ್ರಣಾಳಿಕೆಯಲಿ ಬಜರಂಗದಳ ನಿಷೇಧ ಮಾಡುವುದಾಗಿ ಘೋಷಿಸಿರುವುದಕ್ಕೆ ಬಿಜೆಪಿ ನಾಯಕರು ಹಾಗೂ ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ಯಪಡಿಸಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ನಾನು ಬಜರಂಗಿ ಎಂದು ಟ್ರೆಂಡ್​ ಮಾಡುತ್ತಿದ್ದಾರೆ.

  • Share this:

ಬೆಂಗಳೂರು: ವಿಧಾನಸಭಾ ಚುನಾವಣೆಗೂ (Assembly Election) ಮುನ್ನ ಮಂಗಳವಾರ ಕಾಂಗ್ರೆಸ್ ಪ್ರಣಾಳಿಕೆ (Congress manifesto) ಬಿಡುಗಡೆ ಮಾಡಿದ್ದು, ಇದರಲ್ಲಿ ಬಜರಂಗದಳ (Bajrang Dal) ಸೇರಿದಂತೆ ಭಯೋತ್ವಾದನಾ ಚಟುವಟಿಕೆಗಳಿಗೆ ಬೆಂಬಲ ನೀಡುವ ಎಲ್ಲಾ ಸಂಘಟನೆಗಳನ್ನು ನಿಷೇಧಿಸಲಾಗುವುದು ಎಂದು ತಿಳಿಸಿದೆ. ಕಾಂಗ್ರೆಸ್​ ಪ್ರಣಾಳಿಕೆ ಬಿಡುಗಡೆ ಮಾಡುತ್ತಿದ್ದಂತೆ ಬಿಜೆಪಿ ನಾಯಕರು ಹಾಗೂ ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ಯಪಡಿಸಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ನಾನು ಬಜರಂಗಿ (Nanu Bajarangi) ಎಂದು ಟ್ರೆಂಡ್​ ಮಾಡುವ ಮೂಲಕ ಕಾಂಗ್ರೆಸ್​ ಪಕ್ಷದ ವಿರುದ್ಧ ಅಭಿಯಾನ ಮಾಡುತ್ತಿದ್ದಾರೆ. ಈಗಾಗಲೇ ಪಿಎಂ ನರೇಂದ್ರ ಮೋದಿ, ಸಿಎಂ ಬಸವರಾಜ ಬೊಮ್ಮಾಯಿ, ಆರ್​ಎಸ್​ ಮುಖಂಡ ಸಂತೋಷ್​ ಬಿಎಲ್ ಹಾಗೂ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕೂಡ ಕಾಂಗ್ರೆಸ್ ವಿರುದ್ಧ ಕೆಂಡ ಕಾರಿದ್ದಾರೆ.


ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ಬ್ಯಾನ್ ಪ್ರಸ್ತಾಪಿಸಿರುವುದರ ವಿರುದ್ಧ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್​, ಮೈಸೂರು ಸಂಸದ ಪ್ರತಾಪ್ ಸಿಂಹ, ಬೆಂಗಳೂರು ದಕ್ಷಿಣ ಸಂಸದ ಹಾಗೂ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಸೇರಿದಂತೆ ಅನೇಕರು ನಾನೊಬ್ಬ ಬಜರಂಗಿ ಅಭಿಯಾನ ಆರಂಭಿಸಿದ್ದಾರೆ. ಇವರೆಲ್ಲರೂ ಸಾಮಾಜಿಕ ಜಾಲತಾಣದಲ್ಲಿ " ನಾನೊಬ್ಬ ಕನ್ನಡಿಗ, ನನ್ನ ನಾಡು ಹನುಮ ಜನಿಸಿದ ನಾಡು, ನಾನು ಬಜರಂಗಿ ಎಂದು ಬರೆದುಕೊಂಡಿದ್ದಾರೆ.


ಇದನ್ನೂ ಓದಿ: Bajrang Dal: ಬಜರಂಗದಳ ನಿಷೇಧಿಸ್ತೇವೆ ಎಂದ ಕಾಂಗ್ರೆಸ್ ವಿರುದ್ಧ ಬೊಮ್ಮಾಯಿ ಆಕ್ರೋಶ, ತಾಕತ್ತಿದ್ದರೆ ಬ್ಯಾನ್ ಮಾಡುವಂತೆ ಸಚಿವೆ ಶೋಭಾ ಸವಾಲು


ಪ್ರೊಫೈಲ್​ ಫೋಟೋ ಬದಲಾವಣೆ


ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ, ಕೆಜಿ ಬೋಪಯ್ಯ ಸೇರಿದಂತೆ ಹಲವಾರು ಬಿಜೆಪಿ ನಾಯಕರು ತಮ್ಮ ಫೇಸ್​ಬುಕ್​ ಪ್ರೊಫೈಲ್ ಫೋಟೋ ಆಗಿ ಮಾಡಿಕೊಂಡಿದ್ದಾರೆ. ಜೊತೆಗೆ ಸಾವಿರಾರು ಬಜರಂಗದಳ ಕಾರ್ಯಕರ್ತರು ಕೂಡ ಶೇರ್ ಮಾಡಿಕೊಂಡು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.




ತಾಕತ್​ ಇದ್ದರೆ ಬ್ಯಾನ್ ಮಾಡಿ ಎಂದು ಸವಾಲ್​ ಎಸೆದ ಮುತಾಲಿಕ್


ಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧಿಸುವುದಾಗಿ ಉಲ್ಲೇಖಿಸಿರುವುದರಿಂದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾದ್ಯಮದೊಂದಿಗೆ ಮಾತನಾಡಿರುವ ಪ್ರಮೋದ್ ಮುತಾಲಿಕ್, ಪಿಎಫ್​​ಐ ಸಂಘಟನೆಯನ್ನ ಮುಸ್ಲಿಂ ಸಂಘಟನೆ ಎಂದು ನಿಷೇಧ ಮಾಡಿಲ್ಲ. ದೇಶದ್ರೋಹಿ ಸಂಘಟನೆ ಎಂದು ನಿಷೇಧಿಸಲಾಗಿದೆ. ಆದರೆ ಕಾಂಗ್ರೆಸ್​ನವರು ದೇಶದ್ರೋಹಿ ಸಂಘಟನೆ ಜೊತೆ ಬಜರಂಗದಳ ಹೋಲಿಸಿದ್ದಾರೆ. ಅವರಿಗೇನು ಬುದ್ದಿ ಇದಿಯಾ ಎಂದು ಹರಿಹಾಯ್ದರು.




ರಾಜ್ಯದಲ್ಲಿ ಆಗಿರುವ 30 ಕೊಲೆಗಳಲ್ಲಿ 11 ಕೊಲೆಗಳು ಪಿಎಫ್ಐ ಕೈವಾಡವಿದೆ. ಅಂತಹ ದೇಶದ್ರೋಹ ಸಂಘಟನೆಯ ಜೊತೆ ಬಜರಂಗದಳ ಹೋಲಿಸ್ತೀರಾ ? ಏನೆಂದು ಕೊಂಡಿದ್ದೀರಾ? ರಾಮಮಂದಿರ ಹೋರಾಟದಲ್ಲಿ ಹುಟ್ಟಿದ ಸಂಘಟನೆ ಇದು. ಇಂತಹ ಸಂಘಟನೆ ಬ್ಯಾನ್​​ ಮಾಡುತ್ತೇವೆ ಎನ್ನುವುದು ಹಿಂದೂಗಳಿಗೆ ಮಾಡಿದ ದ್ರೋಹವಾಗಿದೆ. ನಿಮಗೆ ತಾಕತ್ತಿದ್ದರೆ ನಿಷೇಧ ಮಾಡಿ ತೋರಿಸಿ ಎಂದು ಸವಾಲ್ ಎಸೆದಿದ್ದು, ಈ ಹೇಳಿಕೆಯನ್ನು ವಾಪಸ್​ ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.


ಡಿಕೆಶಿ ಸಮರ್ಥನೆ


ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ನಿಷೇಧಿಸುವುದಾಗಿ ತಿಳಿಸಿರುವ ಕಾಂಗ್ರೆಸ್​ಗೆ ಹಿಂದೂ ಕಾರ್ಯಕರ್ತರು ಹಾಗೂ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿರುವುದರ ಕುರಿತು ಮಾತನಾಡಿದ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ತಮ್ಮ ಪ್ರಣಾಳಿಕೆಯನ್ನ ಸಮರ್ಥಿಸಿಕೊಂಡಿದ್ದಾರೆ. ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಹಾಳುಮಾಡುವ, ನೆಮ್ಮದಿ ಕದಡುವ ಸಂಘಟನೆಗಳನ್ನ ಬ್ಯಾನ್ ಮಾಡುವ ಕುರಿತು ಹೇಳಿದ್ದೇವೆ ಎಂದು ಮುಳಬಾಗಿಲಿನಲ್ಲಿ ಹೇಳಿದ್ದಾರೆ.

First published: