• Home
 • »
 • News
 • »
 • state
 • »
 • ಮೂಡಿಗೆರೆಯಲ್ಲಿ ಹಿಂದೂಪರ ಸಂಘಟನೆಗಳಿಂದ ಸಂಸದ ಪ್ರತಾಪ್​ ಸಿಂಹ, ತೇಜಸ್ವಿ ಸೂರ್ಯಗೆ ಮುತ್ತಿಗೆ

ಮೂಡಿಗೆರೆಯಲ್ಲಿ ಹಿಂದೂಪರ ಸಂಘಟನೆಗಳಿಂದ ಸಂಸದ ಪ್ರತಾಪ್​ ಸಿಂಹ, ತೇಜಸ್ವಿ ಸೂರ್ಯಗೆ ಮುತ್ತಿಗೆ

ಸಂಸದರಿಗೆ ಮುತ್ತಿಗೆ

ಸಂಸದರಿಗೆ ಮುತ್ತಿಗೆ

ಕಾಂಗ್ರೆಸ್‍ಗೆ ರಾತ್ರೋರಾತ್ರಿ ಮಂದಿರ, ದೈವದ ಬಗ್ಗೆ ಪ್ರೀತಿ ಬಂದಿದೆ. ಆಶಾಢ ಭೂತಿತನ ತೋರಿಸುತ್ತಿರುವ ಕಾಂಗ್ರೆಸ್ಸಿಗರ ನಾಟಕವನ್ನು ಜನ ನಂಬಲ್ಲ. ಮೂರ್ತಿಬಂಜಕ ಟಿಪ್ಪು ಜಯಂತಿ ಮಾಡಿದವರು ಯಾರು ಎಂಬ ಬಗ್ಗೆ ಜನಕ್ಕೆ ಗೊತ್ತಿದೆ

 • Share this:

  ಚಿಕ್ಕಮಗಳೂರು (ಸೆ. 16): ಮೈಸೂರಿನಲ್ಲಿ ದೇವಸ್ಥಾನ ಕೆಡವಿದ ಪ್ರಕರಣ ಸಂಬಂಧಿಸಿದಂತೆ ರಾಜ್ಯದಲ್ಲೆಡೆ ವಿರೋಧ ವ್ಯಕ್ತವಾಗುತ್ತಿದೆ. ಇದೇ ವಿಚಾರವಾಗಿ ಇಂದು ಚಿಕ್ಕಮಗಳೂರಿನಲ್ಲಿ ಹಿಂದೂಪರ ಸಂಘಟನೆ ಕಾರ್ಯಕರ್ತರು (Hindu Activist)  ಸಂಸದ ತೇಜಸ್ವಿ ಸೂರ್ಯ (MP Tejasvi surya) ಮತ್ತು ಪ್ರತಾಪ್​ ಸಿಂಹಗೆ (MP Pratap simha) ಮುತ್ತಿಗೆ ಹಾಕಿ, ಆಕ್ರೋಶ ಹೊರ ಹಾಕಿದ ಘಟನೆ ನಡೆದಿದೆ. ಮೂಡಿಗೆರೆ (Mudigere bus stand) ಬಸ್ ನಿಲ್ದಾಣದ ಮುಂಭಾಗದಲ್ಲಿ ಸಂಸದರಿಬ್ಬರಿಗೆ ಮುತ್ತಿಗೆ ಹಾಕಿದ ಕಾರ್ಯಕರ್ತರು ಕಪ್ಪುಪಟ್ಟಿ ಪ್ರದರ್ಶನ ತೋರಿ ತರಾಟೆ ತೆಗೆದುಕೊಂಡರು. ಈ ವೇಳೆ ಕಾರ್ಯಕರ್ತರನ್ನು ಸಂಸದರು ಮನವೊಲಿಸಲು ಹರಸಾಹಸ ಪಟ್ಟರು. ಬಳಿಕ ದೇವಸ್ಥಾನಗಳನ್ನು ರಕ್ಷಣೆ ಮಾಡುವಂತೆ ಹಿಂದೂಪರ ಸಂಘಟನೆ ಕಾರ್ಯಕರ್ತರು ಸಂಸದರಿಗೆ ಆಗ್ರಹಿಸಿದ್ದರು.


  ರಾತ್ರೋ ರಾತ್ರಿ ಕಾಂಗ್ರೆಸ್ಸಿಗರಿಗೆ ಮಂದಿರದ ಮೇಲೆ ಪ್ರೀತಿ ಬಂದಿದೆ


  ಇನ್ನು ಈ ವಿಚಾರವಾಗಿ ಮಾತನಾಡಿದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ದೇವಸ್ಥಾನ ತೆರವು ವಿಚಾರದಲ್ಲಿ ಕಾಂಗ್ರೆಸ್​ ರಾಜಕೀಯ ಮಾಡಲು ಮುಂದಾಗಿದೆ. ಮಂದಿರ ರಕ್ಷಣೆ ಹೆಸರಲ್ಲಿ ಶೇ. 5ರಷ್ಟಾದರೂ ಲಾಭವಾಗಲಿ ಎಂದು ಕಾಂಗ್ರೆಸ್ ಯತ್ನಿಸುತ್ತಿದೆ. ಇಷ್ಟು ವರ್ಷ ಯಾರನ್ನ ಆರಾಧಿಸಿದ್ದಾರೆ. ಪೂಜೆ ಮಾಡಿದ್ದಾರೆ ಎಲ್ಲಾ ಗೊತ್ತಿದೆ. ಕಾಂಗ್ರೆಸ್‍ಗೆ ರಾತ್ರೋರಾತ್ರಿ ಮಂದಿರ, ದೈವದ ಬಗ್ಗೆ ಪ್ರೀತಿ ಬಂದಿದೆ. ಆಶಾಢ ಭೂತಿತನ ತೋರಿಸುತ್ತಿರುವ ಕಾಂಗ್ರೆಸ್ಸಿಗರ ನಾಟಕವನ್ನು ಜನ ನಂಬಲ್ಲ. ಮೂರ್ತಿಬಂಜಕ ಟಿಪ್ಪು ಜಯಂತಿ ಮಾಡಿದವರು ಯಾರು ಎಂಬ ಬಗ್ಗೆ ಜನಕ್ಕೆ ಗೊತ್ತಿದೆ. ಮಂದಿರ ರಕ್ಷಣೆ ಹೆಸರಲ್ಲಿ ಕಾಂಗ್ರೆಸ್ ಈ ನಾಟಕ ಮಾಡುವುದನ್ನು ಮೊದಲು ನಿಲ್ಲಿಸಲಿ ಎಂದು ಕಿಡಿಕಾರಿದರು.


  ಭಕ್ತರ ನೋವಿಗೆ ಸಿಎಂ ಸ್ಪಂದನೆ


  ಈಗಾಗಲೇ ಪೂಜಾ ಸ್ಥಳಗಳನ್ನು ನೆಲಸಮ ಮಾಡುವ ಪ್ರಕ್ರಿಯೆಯನ್ನು ನಿಲ್ಲಿಸಲು ಸಿಎಂ ಹೇಳಿದ್ದಾರೆ. ತುಂಬಾ ಕಡೆ ದೇವಸ್ಥಾನದ ಏಕಾಏಕಿ ನೆಲಸಮ ಮಾಡಲಾಗಿದೆ. ಈ ಪ್ರಕ್ರಿಯೆಯಿಂದ ರಾಜ್ಯಾದ್ಯಂತ ಭಕ್ತರ ಮನಸ್ಸಿಗೆ ಘಾಸಿಯಾಗಿದೆ. ಈ ನೋವನ್ನ ಪ್ರತಿಭಟನೆ ಮೂಲಕ ವ್ಯಕ್ತಪಡಿಸುತ್ತಿದ್ದಾರೆ. ಈ ನೋವಿಗೆ ಸ್ಪಂದಿಸುವಂತಹ ಮನಸ್ಥಿತಿ ನಮ್ಮ ಮುಖ್ಯಮಂತ್ರಿಗಳಿಗಿದೆ ಎಂದು ಮೈಸೂರು- ಕೊಡಗು ಸಂಸದ ಪ್ರತಾಪ್​ ಸಿಂಹ ಕಾರ್ಯಕರ್ತರ ಮನವೊಲಿಸಿದರು.


  ಇದನ್ನು ಓದಿ: 5 ಸಾವಿರಕ್ಕೆ ಗಂಡು ಮಾರಾಟ; ಎರಡು ದಿನಗಳ ಬಳಿಕ ಮಗು ಬೇಕು ಎಂದ ತಾಯಿ


  ಈ ಹಿಂದೆ ನೆಲಸಮಕ್ಕೆ ಅವಕಾಶ ಕೊಟ್ಟವರು ಯಾರು?


  ನಾನು ಈ ವಿಚಾರ ಕುರಿತು ವ್ಯಕ್ತಿ ಕೇಂದ್ರಿತವಾಗಿ ಮಾತನಾಡಲ್ಲ, ವಿಷಯಧಾರಿತವಾಗಿ ಮಾತನಾಡುತ್ತೇನೆ. ಹಿಂದೆ ಯಾರು ವಿರೋಧಿಸಿದ್ದರು. ಯಾರು ನೆಲಸಮಕ್ಕೆ ಅವಕಾಶ ಕೊಟ್ಟಿದ್ದು ಎಂದಿದ್ದರು. ಈಗೇನೋ ಬಂದು ಮಾತನಾಡುತ್ತಾರೆ ಎಂಬುದಕ್ಕೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.


  ಇದನ್ನು ಓದಿ: ಅರಮನೆಗೆ ಆಗಮಿಸಿದ ದಸರಾ ಗಜಪಡೆಗೆ ಅದ್ದೂರಿ ಸ್ವಾಗತ


  ಇದರ ವಿಚಾರ ಬಗ್ಗೆ ಸುಪ್ರಿಂ ಕೋರ್ಟ್ 2018 ರಲ್ಲಿ ಏನೂ ತೀರ್ಪು ನೀಡಿದೆ. ಸುಪ್ರಿಂ ಕೋರ್ಟ್ ಗೆ ಪಟ್ಟಿಯನ್ನು ಸಲ್ಲಿಸಬೇಕಾದವರು ಯಾರು? ರಿವ್ಯೂವ್ ಮಾಡಬೇಕಾದರೂ ಯಾರು ಎನ್ನುವುದನ್ನು ನಾಳೆ ಮೈಸೂರಲ್ಲಿ ಮಾತನಾಡುತ್ತೇನೆ ಎಂದರು.


  ಮೋದಿ ಮೇಲೆ ದೇಶದ ಜನರಿಗೆ ವಿಶ್ವಾಸವಿದೆ.


  ಇದೇ ವೇಳೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಬೆಲೆ ಏರಿಕೆ ಸಂಬಂಧ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಅವರು ಹಾಗೆ ಮಾತನಾಡುತ್ತಲೇ ಇರಬೇಕು. ದೇಶದ ಪರಿಸ್ಥಿತಿ ಜನರಿಗೆ ಅರ್ಥವಾಗಿದೆ. ಪ್ರಧಾನಿಗಳ ಬಗ್ಗೆ ಜನರಿಗೆ ವಿಶ್ವಾಸ ಇದೆ. ಇತ್ತೀಚೆಗೆ ನಡೆದ ನಗರಪಾಲಿಕೆ ಚುನಾವಣೆ ಫಲಿತಾಂಶವೇ ಇದಕ್ಕೆ ಸಾಕ್ಷಿ ಎಂದು ಸಮಾಜಾಯಿಷಿ ನೀಡಿದರು.


  ಮೈಸೂರಿನ ಪುರಾತನ ದೇವಸ್ಥಾನ ಧ್ವಂಸ ಮತ್ತು ರಾಜ್ಯದಾದ್ಯಂತ ದೇವಸ್ಥಾನಗಳನ್ನು ತೆರವುಗೊಳಿಸುವ ಪ್ರಕ್ರಿಯೆಗೆ ಈಗಾಗಲೇ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗುತ್ತಿದೆ. ಈ ಸಂಬಂಧ ಹಿಂದೂಪರ ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿವೆ.

  Published by:Seema R
  First published: