Praveen Murder: 50 ಲಕ್ಷ ಪರಿಹಾರ ಘೋಷಣೆ ಮಾಡಲಿ, ಇದು ಕಾನೂನು, ಸರ್ಕಾರದ ವೈಫಲ್ಯ: ಮುತಾಲಿಕ್ ಕಿಡಿ

ಮೋದಿ ಮತ್ತು ಯೋಗಿ ಮಾದರಿಯಲ್ಲಿ ಗಟ್ಸ್ ಇಲ್ಲ. ಆ ಧೈರ್ಯ, ಮಾನಸಿಕತೆ ಇವರಿಗೆ ಇಲ್ಲ. ಆ ನೈತಿಕತೆಯೂ ಇವರಿಗೆ ಇಲ್ಲ. ಎಲ್ಲೋ ಒಂದು ಕಡೆ ಆತಂಕ, ಭಯ ಇದೆ. ಮುಸ್ಲಿಂ ವೋಟ್‌ಗಾಗಿ ಸ್ವಲ್ಪ ಅಲ್ಲಾಡ್ತಾ ಇದಾರೆ.

ಪ್ರವೀಣ್ ನೆಟ್ಟಾರು

ಪ್ರವೀಣ್ ನೆಟ್ಟಾರು

  • Share this:
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು (Hindu Activist Praveen Nettaru) ಕೊಲೆಗೆ (Murder) ಸಂಬಂಧಿಸಿದಂತೆ ಅವರ ಚಿಕ್ಕಪ್ಪ ಜಯರಾಮ್ ಪ್ರತಿಕ್ರಿಯೆ ನೀಡಿದ್ದಾರೆ. ಮಗ ಪ್ರವೀಣ್ ಹಿಂದೂ ಸಂಘಟನೆಯಲ್ಲಿ (Hindu Organization) ಸಕ್ರಿಯವಾಗಿ ಕೆಲಸ ಮಾಡಿಕೊಂಡಿದ್ದನು. ಜೊತೆಗೆ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದನು. ಯಾರ ಜೊತೆಯಲ್ಲಿಯೂ ಮಗ ದ್ವೇಷ ಹೊಂದಿರಲಿಲ್ಲ. ಹಿಂದೂ ಸಂಘಟನೆಯೇ ಮುಖ್ಯ ಅಂತ ನಂಬಿದ್ದ ಪ್ರವೀಣ್, ಬಿಜೆಪಿಯಲ್ಲಿಯೂ (BJP) ಯುವ ಮುಖಂಡನಾಗಿ (Youth Leader) ಗುರುತಿಸಿಕೊಂಡಿದ್ದನು. ಮಗನಿಗೆ ಯಾವುದೇ ದುಶ್ಚಟಗಳು ಇರಲಿಲ್ಲ ಎಂದು ಜಯರಾಮ್ ಕಣ್ಣೀರು ಹಾಕುತ್ತಾರೆ.

RSS ಶರತ್ ಮಡಿವಾಳ ಕೊಲೆಗೆ ಮತ್ತು ಪ್ರವೀಣ್ ಹತ್ಯೆಗೆ ಸಾಮ್ಯತೆಗಳಿವೆ ಎಂದು ಜಯರಾಮ್ ಅನುಮಾನ ವ್ಯಕ್ತಪಡಿಸಿದರು. ಈ ಕೃತ್ಯದಲ್ಲಿ ಎಕ್ಸಪರ್ಟ್ ಗಳೇ ಭಾಗಿಯಾಗಿದ್ದಾರೆ. ಸರ್ಕಾರ ಪ್ರವೀಣ್ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ಘೋಷಿಸಬೇಕೆಂದು ಒತ್ತಾಯಿಸಿದರು.

ಸುಳ್ಯದಲ್ಲಿ ಬಿಜೆಪಿ ಪ್ರತಿಭಟನೆ

ಪ್ರವೀಣ್ ನೆಟ್ಟಾರು ಕೊಲೆಗೆ ಖಂಡಿಸಿ ಸುಳ್ಯದಲ್ಲಿ ಟಯರಿಗೆ ಬೆಂಕಿ ಹಚ್ಚಿ ರಸ್ತೆ ತಡೆಗೆ ಬಿಜೆಪಿ ಕಾರ್ಯಕರ್ತರು ಪ್ರಯತ್ನಿಸಿದರು. ಈ ವೇಳೆ ಪೊಲೀಸರು ಟಯರ್ ತೆಗೆದು ರಸ್ತೆ ತಡೆಯದಂತೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಪೊಲೀಸರು  ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಏರ್ಪಟ್ಟಿತ್ತು. ಕೊನೆಗೆ ಪೊಲೀಸರು ಎಲ್ಲಾ ಪ್ರತಿಭಟನಾಕಾರರನ್ನು ಚದುರಿಸಿ ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.

ಇದನ್ನೂ ಓದಿ:  Praveen Murder: ಇದೊಂದು ವ್ಯವಸ್ಥಿತವಾದ ಸಂಚು, ಶೀಘ್ರವೇ ಕೊಲೆಗಡುಕರ ಬಂಧನ: ಸಿಎಂ ಬೊಮ್ಮಾಯಿ

Hindu Activist Praveen Murder case Pramod Mutalik slams BJP Government mrq
ಪ್ರವೀಣ್ ನೆಟ್ಟಾರು


ಇನ್ನೂ ಪ್ರವೀಣ್ ನೆಟ್ಟಾರು ಕೊಲೆಗೆ ಸಂಬಂಧಿಸಿದಂತೆ ಧಾರವಾಡದಲ್ಲಿ ಶ್ರೀರಾಮ ಸೇನೆಯ ಸ್ಥಾಪಕ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ ನೀಡಿದ್ದು, ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಈ ಕೌರ್ಯ ಹದ್ದುಬಸ್ತಿನಲ್ಲಿಡುವ ಕಾರ್ಯ ಸರ್ಕಾರ ಕೂಡಲೇ ಮಾಡಬೇಕು. ಇಲ್ಲದೇ ಹೋದಲ್ಲಿ ಇನ್ನೂ ಸಾಕಷ್ಟು ಹಿಂದೂಗಳ ಬಲಿಯಾಗುತ್ತೇ ಅನಿಸುತ್ತಿದೆ. ಸರ್ಕಾರ ಈ ವಿಷಯದಲ್ಲಿ ವಿಫಲ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದು ಕಾನೂನು, ಸರ್ಕಾರದ ವೈಫಲ್ಯ

ಕೊಲೆ, ಹಲ್ಲೆ, ಗಲಾಟೆಯಾದಾಗ ಉಗ್ರವಾದ ಹೇಳಿಕೆಗಳು ಬರುತ್ತವೆ. ಇದುವರೆಗೆ ಯಾವುದೇ ರೀತಿಯ ಕಠಿಣ ಪ್ರಕ್ರಿಯೆ ನಡೆದಿಲ್ಲ. ಇದೇ ಕಾರಣಕ್ಕೆ ಪ್ರವೀಣ ಹತ್ಯೆ ಆಗಿದೆ. ಇದು ಕಾನೂನು, ಸರ್ಕಾರದ ವೈಫಲ್ಯ ಎಂದು ಕಿಡಿಕಾರಿದರು.

ಬಿಜೆಪಿಗೆ ಹಿಂದೂಗಳ ಸುರಕ್ಷತೆ ಕಾಳಜಿಯಿದ್ದಲ್ಲಿ ಎಸ್‌ಡಿಪಿಐ, ಪಿಎಫ್‌ಐ ಬ್ಯಾನ್ ಮಾಡಬೇಕು. ಹತ್ಯೆ ಹಿಂದೆ ಕೇರಳದ ಮೂಲ ಅಂತಾ ಹೇಳುತ್ತಿದ್ದಾರೆ. ವಾರದ ಹಿಂದೆ ನಡೆದ ಹತ್ಯೆಗೆ ಸೇಡಿಗೆ ಮಾಡಿದ್ದಾರೆ ಅಂತಾನೂ ಹೇಳುತ್ತಿದ್ದಾರೆ. ಮುಸ್ಲಿಮರು ಮಾಡಿರೋ ಲಕ್ಷಾಂತರ ಕೊಲೆಗಳಿಗೆ ನಾವು ತಿರುಗಿ ಬಿದ್ರೆ ದೇಶದಲ್ಲಿ ಒಬ್ಬನೂ ಮುಸ್ಲಿಂ ಇರಬಾರದು. ಆದರೆ ಆ ಮಾನಸಿಕತೆ ಇರಬಾರದು, ಕೊಲೆಗೆ ಕೊಲೆಯೇ ಉತ್ತರ ಅಲ್ಲ ಎಂದರು.

ನ್ಯಾಯಕ್ಕೆ ನ್ಯಾಯಾಲಯ ಇದೆ, ಪೊಲೀಸ್ ಠಾಣೆ ಇದೆ. ಸಂವಿಧಾನ ಬದ್ಧವಾದ ಹೋರಾಟಕ್ಕೆ ಅವಕಾಶ ಇದೆ. ಮುಲ್ಲಾ ಮೌಲ್ವಿಗಳು ಎಸ್‌ಡಿಪಿಐ, ಪಿ‌ಎಫ್‌ಐ ಹದ್ದುಬಸ್ತಿನಲ್ಲಿಡಬೇಕು.

ಸರ್ಕಾರದ ಹದ್ದಿನ ಕಣ್ಣು ಎಲ್ಲಿದೆ?

ಶಾಂತಿ-ಸೌಹಾರ್ದತೆ ಬೇಕಾದರೆ ಹದ್ದುಬಸ್ತಿನಲ್ಲಿರಿಸಬೇಕು.  ಇಲ್ಲದೇ ಹೋದಲ್ಲಿ ಹಿಂದೂ ಸಮಾಜ ತಿರುಗಿ ಬೀಳುತ್ತೆ. ಸ್ವಯಂ ರಕ್ಷಣೆಗೆ ಹಿಂದೂ ಸಮಾಜ ಸಿದ್ಧವಾಗಬೇಕಿದೆ. ಇಲ್ಲದೇ ಹೋದಲ್ಲಿ ಸರ್ಕಾರ, ಬಿಜೆಪಿ, ಕಾನೂನು ಏನೂ ಮಾಡಲು ಆಗುವುದಿಲ್ಲ. ಸರ್ಕಾರದ ಹದ್ದಿನ ಕಣ್ಣು ಎಲ್ಲಿದೆ, ಸರ್ಕಾರದ ಬಿಗಿಯಾದ ಕ್ರಮ ಇಲ್ಲ. ಇದೇ ಕಾರಣಕ್ಕೆ ಇದೆಲ್ಲ ಆಗುತ್ತಿದೆ.

Hindu Activist Praveen Murder case Pramod Mutalik slams BJP Government mrq
ಪ್ರವೀಣ್ ನೆಟ್ಟಾರು


ಮೋದಿ ಮತ್ತು ಯೋಗಿ ಮಾದರಿಯಲ್ಲಿ ಗಟ್ಸ್ ಇಲ್ಲ. ಆ ಧೈರ್ಯ, ಮಾನಸಿಕತೆ ಇವರಿಗೆ ಇಲ್ಲ. ಆ ನೈತಿಕತೆಯೂ ಇವರಿಗೆ ಇಲ್ಲ. ಎಲ್ಲೋ ಒಂದು ಕಡೆ ಆತಂಕ, ಭಯ ಇದೆ. ಮುಸ್ಲಿಂ ವೋಟ್‌ಗಾಗಿ ಸ್ವಲ್ಪ ಅಲ್ಲಾಡ್ತಾ ಇದಾರೆ. ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿಯ ಭದ್ರಕೋಟೆ. ಶಿವಮೊಗ್ಗ ಬಿಜೆಪಿಯ ಭದ್ರಕೋಟೆ, ಈ ಭದ್ರಕೋಟೆಯಲ್ಲೇ ಹೊಕ್ಕು ಹೊಡಿತಾ ಇದಾರೆ. ಹಾಗಾದರೆ ಭದ್ರಕೋಟೆ ಛಿದ್ರವಾಗುತ್ತಿದೆಯಲ್ಲ.

ಇದನ್ನೂ ಓದಿ:  Praveen Murder: ಪ್ರವೀಣ್ ಮರಣೋತ್ತರ ಪರೀಕ್ಷೆ ಮುಕ್ತಾಯ, ಅಂತಿಮಯಾತ್ರೆಗೆ ಸಿದ್ಧತೆ; ಕರಾವಳಿಯಲ್ಲಿ ಹೈಅಲರ್ಟ್

ಸಿಎಂ ರಾಜೀನಾಮೆ ಕೊಡಬೇಕು

ಹಿಂದೂಗಳ ಕೊಲೆ‌ ಮಾಡಿದರೂ ಏನೂ ಮಾಡಲು ಆಗೋದಿಲ್ಲ ಎಂಬ ಸಂದೇಶ ಕೊಡುತ್ತಿದ್ದಾರೆ. ಎಸ್‌ಡಿಪಿಐ, ಪಿಎಫ್ಐ ಬ್ಯಾನ್ ಮಾಡಬೇಕು. ಇಲ್ಲವೇ ಸಿಎಂ ರಾಜೀನಾಮೆ ಕೊಡಬೇಕು. ಇನ್ನೂ ಅದೆಷ್ಟು ಬಲಿ ಕೊಡಬೇಕು ಮಾಡಿದೀರಿ. ಇದಕ್ಕೆ ಬಿಜೆಪಿಯೇ ಕಾರಣ ಎಂದು ಆರೋಪಿಸಿದರು.
Published by:Mahmadrafik K
First published: