ಸಹೋದ್ಯೋಗಿಗೆ ಲೈಂಗಿಕ ಕಿರುಕುಳ: ಹಿಮಾಲಯ ಡ್ರಗ್​ ಕಂಪನಿ ಮುಖ್ಯಸ್ಥನ ವಿರುದ್ಧ ದೂರು

ನಗರದ ಉತ್ತರ ತಾಲೂಕಿನ ಮಾಕಳಿಯಲ್ಲಿರುವ ಹಿಮಾಲಯ ಡ್ರಗ್ ಕಂಪೆನಿಯಲ್ಲಿ ರಿಸರ್ಚ್​ ಅಸೋಸಿಯೇಟ್​ ಆಗಿದ್ದ ಮಹಿಳೆಗೆ ಡೇಟಿಂಗ್​ಗೆ ಬರುವಂತೆ ಈತ ನಿತ್ಯ ಕಾಡುತ್ತಿದ್ದ. ಅಲ್ಲದೇ ಮನೆಗೆ ಡ್ರಾಪ್​ ನೀಡುವ ನೆಪದಲ್ಲಿ ಸಂತ್ರಸ್ತೆಯೊಂದಿಗೂ ಅಸಭ್ಯವಾಗಿ ವರ್ತಿಸುತ್ತಿದ್ದ.

Seema.R | news18-kannada
Updated:September 13, 2019, 11:56 AM IST
ಸಹೋದ್ಯೋಗಿಗೆ ಲೈಂಗಿಕ ಕಿರುಕುಳ: ಹಿಮಾಲಯ ಡ್ರಗ್​ ಕಂಪನಿ ಮುಖ್ಯಸ್ಥನ ವಿರುದ್ಧ ದೂರು
ಹಿಮಾಲಯ ಕಂಪನಿ ಮುಖ್ಯಸ್ತ ರಾಮಚಂದ್ರ ಸುಂದರಂ
  • Share this:
ಬೆಂಗಳೂರು (ಸೆ.13):  ಲೈಂಗಿಕ ಕಿರುಕುಳ ನೀಡುತ್ತಿದ್ದ ಹಿಮಾಲಯ ಡ್ರಗ್​ ಕಂಪನಿ ಮುಖ್ಯಸ್ಥನ ವಿರುದ್ಧ ಸಹೋದ್ಯೋಗಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದು, ಆತನನ ವಿರುದ್ಧ ಮಾಕಳಿ ಪೊಲೀಸರು ಎಫ್​​ಐಆರ್​ ದಾಖಲಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ರಾಮಚಂದ್ರ ಸುಂದರಂ ಕಿರುಕುಳ ನೀಡುತ್ತಿದ್ದ ಮುಖ್ಯಸ್ಥ. ನಗರದ ಉತ್ತರ ತಾಲೂಕಿನ ಮಾಕಳಿಯಲ್ಲಿರುವ ಹಿಮಾಲಯ ಡ್ರಗ್ ಕಂಪೆನಿಯಲ್ಲಿ ರಿಸರ್ಚ್​ ಅಸೋಸಿಯೇಟ್​ ಆಗಿದ್ದ ಮಹಿಳೆಗೆ ಡೇಟಿಂಗ್​ಗೆ ಬರುವಂತೆ ಈತ ನಿತ್ಯ ಕಾಡುತ್ತಿದ್ದ. ಅಲ್ಲದೇ ಮನೆಗೆ ಡ್ರಾಪ್​ ನೀಡುವ ನೆಪದಲ್ಲಿ ಸಂತ್ರಸ್ತೆಯೊಂದಿಗೂ ಅಸಭ್ಯವಾಗಿ ವರ್ತಿಸುತ್ತಿದ್ದ.

ಗಂಡನನ್ನು ಬಿಟ್ಟು ನನ್ನ ಜೊತೆ ಬಾ. ರೆಸಾರ್ಟ್​ನಲ್ಲಿ ಖಷಿಯಿಂದ ಕಾಲ ಕಳೆಯೋಣ ಎಂದೆಲ್ಲಾ ಆಕೆಗೆ ಹಿಂದೆ ನೀಡುತ್ತಿದ್ದ.  ಈತನ ಕಿರುಕುಳದ ಧ್ವನಿ ಎತ್ತಿದ್ದಕ್ಕೆ ನೀನು ಪೊಲೀಸರಿಗೆ ದೂರು ನೀಡಿದರೆ, ನೀನೇ ಕೋರ್ಟ್​ ಕಚೇರಿ ಅಲೆಯಬೇಕಾಗುತ್ತದೆ ಎಚ್ಚರಿಕೆ ಎಂದು ಬೆದರಿಸುತ್ತಿದ್ದ.

ಇದನ್ನು ಓದಿ: ಕಾನೂನು ವಿದ್ಯಾರ್ಥಿನಿ ಅತ್ಯಾಚಾರ ಆರೋಪ; ಬಿಜೆಪಿ ನಾಯಕ ಸ್ವಾಮಿ ಚಿನ್ಮಯಾನಂದರ ಸುದೀರ್ಘ ವಿಚಾರಣೆ

 

ಕಾಮುಕ ಸುಂದರಂ ರಾಮಚಂದ್ರನ್ ವರ್ತನೆಗೆ ಬೇಸತ್ತು ಮಹಿಳೆ ಕಡೆಗೆ ಈ ಕುರಿತು ಮಹಿಳಾ  ಆಯೋಗಕ್ಕೆ ದೂರು ದಾಖಲಿಸಿದ್ದರು. ಈ ದೂರಿನ ಅನ್ವಯ ಆತನ ವಿಚಾರಣೆ ನಡೆಸಿದಾಗ ಆಯೋಗದ ಮುಂದೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಪ್ರಕರಣ ಕುರಿತು ಮಾದನಾಯಕನಹಳ್ಳಿ ಪೊಲೀಸರಿಗೂ ಸಂತ್ರಸ್ತೆ ದೂರು ನೀಡಿದ್ದು, ಎಫ್​ಐಆರ್​ ದಾಖಲಿಸಲಾಗಿದೆ.

ಕಂಪನಿಯಲ್ಲಿ ಇಷ್ಟೆಲ್ಲಾ ನಡೆದರೂ ಆರೋಪಿ ವಿರುದ್ಧ ಮಾತ್ರ ಯಾವುದೇ ಕ್ರಮಕ್ಕೆ ಕಂಪನಿ ಮುಂದಾಗಿಲ್ಲ.
First published: September 13, 2019, 11:56 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading