ಗ್ರಾಹಕರಿಗೆ 'ಪೆಟ್ರೋಲ್' ಬಾಂಬ್: ದಿನೇ ದಿನೇ ಏರುತ್ತಿದೆ ಕಚ್ಚಾ ತೈಲದ ಬೆಲೆ


Updated:September 4, 2018, 2:08 PM IST
ಗ್ರಾಹಕರಿಗೆ 'ಪೆಟ್ರೋಲ್' ಬಾಂಬ್: ದಿನೇ ದಿನೇ ಏರುತ್ತಿದೆ ಕಚ್ಚಾ ತೈಲದ ಬೆಲೆ

Updated: September 4, 2018, 2:08 PM IST
ನ್ಯೂಸ್​ 18 ಕನ್ನಡ

ಬೆಂಗಳೂರು(ಸೆ.04): ಪೆಟ್ರೋಲ್​, ಡೀಸೆಲ್​ ಬೆಲೆ ದಿನೇ ದಿನೇ ಹೆಚ್ಚಾಗುತ್ತಿದ್ದು, ವಾಹನ ಸವಾರರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ರಾಜ್ಯದಲ್ಲಿ ಇಂದು ಮತ್ತೆ ಪೆಟ್ರೋಲ್​ ಬೆಲೆಯಲ್ಲಿ ಏರಿಕೆಯಾಗಿದೆ. ಇಂದು ಪೆಟ್ರೋಲ್ ಬೆಲೆ ಲೀಟರ್‌ಗೆ 81.98 ರೂ ಹಾಗೂ ಡೀಸೆಲ್‌ ಬೆಲೆ ಲೀಟರ್‌ಗೆ 73.72 ರೂ ಗಡಿ ತಲುಪಿದೆ. ಇನ್ನು ಇದಕ್ಕೆ ಕಚ್ಛಾ ತೈಲದಲ್ಲಾದ ಬೆಲೆ ಏರಿಕೆಯೇ ಕಾರಣ ಎಂದು ಕೇಂದ್ರ ಪೆಟ್ರೋಲಿಯಂ ಸಚಿವಾಲಯದಿಂದ ಮಾಹಿತಿ ನೀಡಿದೆ.

ನವದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 79.40 ಮತ್ತ ಡೀಸೆಲ್ 71.43 ಇದೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ 86.80ರೂ. ಇದ್ದು 15 ಪೈಸೆ ಹೆಚ್ಚಳವಾಗಿದೆ. ಆಗಸ್ಟ್​ 16ರ ನಂತರ ಪೆಟ್ರೋಲ್​ ಮತ್ತು ಡೀಸೆಲ್ ದರದಲ್ಲಿ ನಿರಂತರ ಏರಿಕೆಯಾಗುತ್ತಲೇ ಇದೆ.

ಬೆಂಗಳೂರಿನಲ್ಲಿ ಪೆಟ್ರೋಲ್-ಡೀಸೆಲ್ ದರ ಏರಿಕೆ
Loading...
ದಿನಾಂಕ ಪೆಟ್ರೋಲ್ (ಪ್ರತಿ ಲೀಟರ್) ಡೀಸೆಲ್ (ಪ್ರತಿ ಲೀಟರ್)
ಆಗಸ್ಟ್ 1 78 ರೂ 77 ಪೈಸೆ 69 ರೂ.97 ಪೈಸೆ
ಆಗಸ್ಟ್ 8 79 ರೂ.57 ಪೈಸೆ 70 ರೂ.69 ಪೈಸೆ
ಆಗಸ್ಟ್ 15 79 ರೂ.65 ಪೈಸೆ 70 ರೂ.92 ಪೈಸೆ
ಆಗಸ್ಟ್ 20 80 ರೂ.00 ಪೈಸೆ 71 ರೂ.25 ಪೈಸೆ
ಆಗಸ್ಟ್ 25 80 ರೂ.24 ಪೈಸೆ 71 ರೂ.39 ಪೈಸೆ
ಆಗಸ್ಟ್ 30 80 ರೂ.89 ಪೈಸೆ 72 ರೂ.17 ಪೈಸೆ
ಆಗಸ್ಟ್ 31 81 ರೂ.07 ಪೈಸೆ 72 ರೂ.46 ಪೈಸೆ
ಸೆಪ್ಟೆಂಬರ್ 1 81 ರೂ.12 ಪೈಸೆ 72 ರೂ.68 ಪೈಸೆ
ಸೆಪ್ಟೆಂಬರ್ 2  81 ರೂ.82 ಪೈಸೆ 72 ರೂ.71 ಪೈಸೆ
ಸೆಪ್ಟೆಂಬರ್ 4  81. ರೂ.98 ಪೈಸೆ 73 ರೂ.44 ಪೈಸೆ

ಶೀಘ್ರದಲ್ಲೇ ಪೆಟ್ರೋಲ್​ ಬೆಲೆ 100 ರೂಪಾಯಿ:

ಪೆಟ್ರೋಲ್​ ದರ ಏರಿಲಕೆ ಕುರಿತಾಗಿ ಆಂಧ್ರಪ್ರದೆಶ ಸಿಎಂ ಚಂದ್ರಬಾಬು ನಾಯ್ಡು ಮಾತನಾಡಿದ್ದಾರೆ. ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾಋಎ. ದೇಶದ ಅರ್ಥವ್ಯವಸ್ಥೆ ಬಹಳಷ್ಟು ಹದಗೆಡುತ್ತಿದೆ. ಡಾಲರ್​ ಎದುರು ರೂಪಾಯಿ ಮೌಲ್ಯ ನಿರಂತರ ಕುಸಿಯುತ್ತಿದೆ. ಹೀಗಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ನಿರಂತವಾಗಿ ಏರಿಕೆಯಾಗುತ್ತಿದೆ. ದೇಶದಲ್ಲಿ ಮುಂದಿನ ದಿನಗಳಲ್ಲಿ ಪೆಟ್ರೋಲ್ ಬೆಲೆ 100 ರೂಪಾಯಿ ಆದರೂ ಅಚ್ಚರಿಪಡಬೇಕಿಲ್ಲ. ಇದಕ್ಕೆ ಅಸಮರ್ಪಕ ಆರ್ಥಿಕ ನೀತಿಗಳೇ ಕಾರಣ ಎಂದಿದ್ದಾರೆ.
First published:September 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ