Emission Test: ವಾಹನಗಳ ವಾಯು ಮಾಲಿನ್ಯ ತಪಾಸಣೆ ದರ ಹೆಚ್ಚಳ; ಏರಿಕೆಯಾಗಿದೆಷ್ಟು? ಇಲ್ಲಿದೆ ಮಾಹಿತಿ

ಕೋವಿಡ್ ಬಳಿಕ ಆರ್ಥಿಕ ಚಟುವಟಿಕೆಗಳು ಚೇತರಿಕೆಯತ್ತ ಸಾಗುತ್ತಿವೆ. ಇಂತಹ ಸಂದರ್ಭದಲ್ಲಿ ಬೆಲೆ ಏರಿಕೆ ಹೊಡೆತ ಜನರನ್ನು ಆರ್ಥಿಕವಾಗಿ ಕುಗ್ಗಿಸುತ್ತಿದೆ ಎಂದು ಕ್ಯಾಬ್ ಚಾಲಕರು ಸರ್ಕಾರದ ನಿರ್ಧಾರಕ್ಕೆ ಅಸಮಾಧಾನ ಹೊರ ಹಾಕಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸೋಮವಾರವಷ್ಟೇ GST ದರ (GST Rate Hike) ಏರಿಕೆಯಿಂದಾಗಿ ಜನರ ಜೇಬಿಗೆ ಕತ್ತರಿ ಬಿದ್ದಿದೆ. ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗಿದ್ದು,  ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದೀಗ ವಾಹನಗಳ ವಾಯು ಮಾಲಿನ್ಯ ತಪಾಸಣೆ ದರ (Emission Test Price Hike) ಏರಿಕೆ ಮಾಡಲಾಗಿದ್ದು, ಮಾಲೀಕರು (Vehicles Owners) ಆಕ್ರೋಶ ಹೊರಹಾಕುತ್ತಿದ್ದಾರೆ. ಪರಿಸರ ಮಾಲಿನ್ಯಕ್ಕೆ (Environment Pollution) ಅತಿ ಹೆಚ್ಚು ಹೊಗೆ ಉಗುಳುವ ವಾಹನಗಳಿಗೆ ದಂಡ ವಿಧಿಸಲಾಗುತ್ತದೆ. ಆದರಿಂದ ಎಲ್ಲಾ ವಾಹನಗಳು ವಾಯು ಮಾಲಿನ್ಯ ತಪಾಸಣೆ ಮಾಡಿಸಬೇಕು. ರಾಜ್ಯದೆಲ್ಲೆಡೆ ಖಾಸಗಿ ಸಹಭಾಗಿತ್ವದಲ್ಲಿ ತಪಾಸಣಾ ಕೇಂದ್ರಗಳನ್ನು ತೆರೆಯಲಾಗಿದೆ. ಪೊಲೀಸ್ ತಪಾಸಣೆ ವೇಳೆ ವಾಹನ ಸವಾರರು ವಾಯು ಮಾಲಿನ್ಯ ತಪಾಸಣೆ ದಾಖಲೆಯನ್ನು (Emission Test Documents) ತೋರಿಸಬೇಕು. ನಿಗಧಿತ ಸಮಯದಲ್ಲಿ ವಾಹನಗಳನ್ನು ವಾಯು ಮಾಲಿನ್ಯ ತಪಾಸಣೆಗೆ ಒಳಪಡಿಸಬೇಕಾಗುತ್ತದೆ.

ಕೋವಿಡ್ ಬಳಿಕ ಆರ್ಥಿಕ ಚಟುವಟಿಕೆಗಳು ಚೇತರಿಕೆಯತ್ತ ಸಾಗುತ್ತಿವೆ. ಇಂತಹ ಸಂದರ್ಭದಲ್ಲಿ ಬೆಲೆ ಏರಿಕೆ ಹೊಡೆತ ಜನರನ್ನು ಆರ್ಥಿಕವಾಗಿ ಕುಗ್ಗಿಸುತ್ತಿದೆ ಎಂದು ಕ್ಯಾಬ್ ಚಾಲಕರು ಸರ್ಕಾರದ ನಿರ್ಧಾರಕ್ಕೆ ಅಸಮಾಧಾನ ಹೊರ ಹಾಕಿದ್ದಾರೆ.

ಬೆಲೆ ಏರಿಕೆ ಕುರಿತು ಅಧಿಕಾರಿಗಳು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಪ್ರತಿ ಆರು ತಿಂಗಳಿಗೊಮ್ಮೆ ವಾಹನಗಳ ಎಮಿಷನ್ ಟೆಸ್ಟ್ ಮಾಡಿಸಬೇಕು. ದಿಢೀರ್ ಅಂತ ಬೆಲೆ ಏರಿಕೆ ಮಾಡಿದ್ದು ತಪ್ಪು. ಈ ಕೂಡಲೇ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ:  Jaggesh: ರಾಜ್ಯಸಭೆಯಲ್ಲಿ ಮತ್ತೊಮ್ಮೆ ಪ್ರಮಾಣ ವಚನ ಸ್ವೀಕರಿಸಿದ್ಯಾಕೆ ಜಗ್ಗೇಶ್?

ಮೂರು ತಿಂಗಳ ಹಿಂದೆಯೇ ಬೆಲೆ ಏರಿಕೆ!

ವಾಯು ಮಾಲಿನ್ಯ ತಪಾಸಣೆ ದರ ಮೂರು ತಿಂಗಳ ಹಿಂದೆಯೇ ಏರಿಕೆಯಾಗಿದೆ. ಬೆಲೆ ಇಳಿಸುವಂತೆ ಕೆಲ ವಾಹನ ಚಾಲಕರು ಮನವಿ ಸಹ ಸಲ್ಲಿಸಿದ್ದಾರೆ. ಈ ಸಂಬಂಧ ಪರಿಶೀಲನೆ ನಡೆಸಲಾಗ್ತಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿ ಹೇಳಿದ್ದಾರೆ.

ಎಷ್ಟು ದರ ಏರಿಕೆಯಾಗಿದೆ? ಹಳೆಯ ದರ ಎಷ್ಟಿತ್ತು?























ವಾಹನಗಳುಹಳೆ ದರಹೊಸ ದರ
ದ್ವಿಚಕ್ರ ವಾಹನಗಳು50 ರೂಪಾಯಿ65 ರೂಪಾಯಿ
ಕಾರ್ (ಪೆಟ್ರೋಲ್)90 ರೂಪಾಯಿ115 ರೂಪಾಯಿ
ಕಾರ್ (ಡೀಸೆಲ್)115 ರೂಪಾಯಿ160 ರೂಪಾಯಿ

ಮೊಸರು-ಮಜ್ಜಿಗೆ ಬೆಲೆ ಇಂದು ಇಳಿಕೆ

ಕೆಎಂಎಫ್ (KMF) ನಿಂದ ನೂತನ ದರ ಜಾರಿ ಮಾಡಲಾಗಿದೆ. ಹಾಲಿನ ಉತ್ಪನ್ನಗಳಾದ ಮೊಸರು, ಲಸ್ಸಿ, ಮಜ್ಜಿಗೆ ಬೆಲೆ ಮರುಪರಿಷ್ಕರಣೆ (Rate Implementation) ಮಾಡಲಾಗಿದೆ. ನಿನ್ನೆ GST 5% ನಿಂದ ಮೂರು ಉತ್ಪನ್ನಗಳ‌ ಬೆಲೆ ಏರಿಕೆ ಮಾಡಲಾಗಿತ್ತು. ಇದೀಗ ಜನರಿಗೆ ಹೆಚ್ಚು ಹೊರೆಯಾದ ಹಿನ್ನೆಲೆ KMF ಮತ್ತೆ ದರದಲ್ಲಿ ಮರುಪರಿಷ್ಕರಣೆ ಮಾಡಿದೆ. 5% ಜಿಎಸ್​ಟಿ ಸೇರಿಸಿ ನೂತನ ದರ ಪಟ್ಟಿ ಬಿಡುಗಡೆ ಮಾಡಿದೆ.

200ML ಮೊಸರಿನ ಬೆಲೆ (Curd Rate) ನಿನ್ನೆ- 10 ರೂಪಾಯಿ, ಇಂದು - 12 ರೂಪಾಯಿ, ನಾಳೆಯಿಂದ - 10.50.ಪೈಸೆ , ಮೊಸರಿನ ಬೆಲೆ 50 ಪೈಸೆ ಏರಿಕೆ ಮಾಡಲಾಗಿದೆ. ಬೆಲೆ ಏರಿಕೆ ಬಗ್ಗೆ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆ ಹಾಲಿನ ಉತ್ಪನ್ನಗಳ ಬೆಲೆಯಲ್ಲಿ ಕೊಂಚ ಇಳಿಕೆ ಮಾಡಲಾಗಿದೆ.

ಇದನ್ನೂ ಓದಿ:  Maneka Gandhi: ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮನೇಕಾ ಗಾಂಧಿ ದೂರು; ಆನೆ ದಂತ ಮಾರಾಟದ ಆರೋಪಿಗಳ ರಕ್ಷಣೆಗೆ ಒತ್ತಡದ ಆರೋಪ

ಇಂದಿನ ದರದಲ್ಲಿ ಕೊಂಚ ದರ ಕಡಿಮೆ ಮಾಡಿದ KMF

ಮೊಸರು 200 ಎಂಎಲ್
ನಿನ್ನೆ- 10 ರೂಪಾಯಿ ಇಂದು , 12 ರೂಪಾಯಿ, ನಾಳೆಯಿಂದ - 10.50 ಪೈಸೆ

ಮೊಸರು 500 ಎಂಎಲ್
ನಿನ್ನೆ- 22 ರೂಪಾಯಿ, ಇಂದು - 24 ರೂಪಾಯಿ, ನಾಳೆಯಿಂದ- 23 ರೂಪಾಯಿ

ಒಂದು ಲೀಟರ್ ಮೊಸರು
ನಿನ್ನೆ 43 ರೂಪಾಯಿ, ಇಂದು- 46 ರೂಪಾಯಿ, ನಾಳೆಯಿಂದ- 45 ರೂಪಾಯಿ

ಮಜ್ಜಿಗೆ 200 ಎಂಎಲ್
ನಿನ್ನೆ- 7 ರೂಪಾಯಿ, ಇಂದು 8 ರೂಪಾಯಿ, ನಾಳೆಯಿಂದ- 7.50 ಪೈಸೆ

ಲಸ್ಸಿ 200 ಎಂಎಲ್
ನಿನ್ನೆ- 10 ರೂಪಾಯಿ, ಇಂದು 11 ರೂಪಾಯಿ, ನಾಳೆಯಿಂದ - 10.50 ಪೈಸೆ ಇರಲಿದೆ ಎಂದು KMF ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
Published by:Mahmadrafik K
First published: