Chikkamagaluru: ತರಗತಿಯಲ್ಲಿ ಹಿಜಾಬ್ ಖಂಡಿಸಿ, ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳು

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಬಾಳಗಡಿ (Balagadi, Chikkmagaluru) ಗ್ರಾಮದ ಪ್ರಥಮ ದರ್ಜೆ ಕಾಲೇಜು (Government Degree College) ಮತ್ತೊಮ್ಮೆ ಮುನ್ನಲೆಗೆ ಬಂದಿದೆ. ತರಗತಿಯೊಳಗೆ ಹಿಜಬ್ (Hijab) ಧರಿಸೋದನ್ನು ವಿರೋಧ ಮಾಡಿರುವ ಕೆಲ ವಿದ್ಯಾರ್ಥಿಗಳು ಕೇಸರಿ ಶಾಲು (Saffron Scarves) ಧರಿಸಿ ಮಂಗಳವಾರ ಕಾಲೇಜಿಗೆ ಬಂದಿದ್ದರು.

ಕೇಸರಿ ಶಾಲು ಧರಿಸಿರುವ ವಿದ್ಯಾಶರ್ಥಿಗಳು

ಕೇಸರಿ ಶಾಲು ಧರಿಸಿರುವ ವಿದ್ಯಾಶರ್ಥಿಗಳು

  • Share this:
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಬಾಳಗಡಿ (Balagadi, Chikkmagaluru) ಗ್ರಾಮದ ಪ್ರಥಮ ದರ್ಜೆ ಕಾಲೇಜು (Government Degree College) ಮತ್ತೊಮ್ಮೆ ಮುನ್ನಲೆಗೆ ಬಂದಿದೆ. ತರಗತಿಯೊಳಗೆ ಹಿಜಬ್ (Hijab) ಧರಿಸೋದನ್ನು ವಿರೋಧ ಮಾಡಿರುವ ಕೆಲ ವಿದ್ಯಾರ್ಥಿಗಳು ಕೇಸರಿ ಶಾಲು (Saffron Scarves) ಧರಿಸಿ ಮಂಗಳವಾರ ಕಾಲೇಜಿಗೆ ಬಂದಿದ್ದರು. ಸೋಮವಾರ ಸಹ ವಿದ್ಯಾರ್ಥಿಗಳು (Students) ಕೇಸರಿ ಶಾಲು ಹಾಕಿಕೊಂಡು ತರಗತಿಗೆ ಹಾಜರಾಗಿದ್ದರು. ಸದ್ಯ ಕಾಲೇಜಿನ ಪ್ರಾಂಶುಪಾಲರಾದ ಅನಂತಮೂರ್ತಿ ಪ್ರತಿಭಟನಾಕಾರ ವಿದ್ಯಾರ್ಥಿಗಳ ಮನವೊಲಿಸಿದ್ದು, ಜನವರಿ 10 ರಂದು ಪೋಷಕರ ಸಭೆ ನಡೆಸುವ ಭರವಸೆ ನೀಡಿದ್ದಾರೆ. ಸದ್ಯ ಪರಿಸ್ಥಿತಿ ತಿಳಿಗೊಳಿಸಲು ಕಾಲೇಜಿಗೆ ರಜೆ ನೀಡಿದ್ದಾರೆ. ಮೂರು ವರ್ಷದ ಹಿಂದೆ ಇದೇ ವಿವಾದಕಕ್ಕೆ ಕಾಲೇಜು ರಾಜ್ಯದಲ್ಲಿ ಸದ್ದು ಮಾಡಿತ್ತು. 

ಆರಂಭದಲ್ಲಿ ಕೇಸರಿ ಸ್ಕಾರ್ಫ್ ಧರಿಸಿದ ವಿದ್ಯಾರ್ಥಿಗಳ ಬೇಡಿಕೆಗೆ ಮಣಿದ ಬಳಗಡಿಯ ಸರ್ಕಾರಿ ಪದವಿ ಕಾಲೇಜು, ಮಹಿಳೆಯರು ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾಗಬಾರದು ಎಂದು ಹೇಳಿತ್ತು. ಇದೀಗ ಜನವರಿ 10 ರವರೆಗೆ ಎಲ್ಲರಿಗೂ ಅವರು ಇಷ್ಟಪಟ್ಟದ್ದನ್ನು ಧರಿಸಲು ಅವಕಾಶ ನೀಡಲು ನಿರ್ಧರಿಸಿದೆ.

ಜನವರಿ 10 ರಂದು ಪಾಲಕರ ಸಭೆ

ನಾವು ಪಾಲಕರ ಸಭೆಯನ್ನು ಕರೆಯುತ್ತಿದ್ದೇವೆ. ಈ ಸಭೆಯಲ್ಲಿ ಜನವರಿ 10 ರಂದು ಸಾರ್ವಜನಿಕ ಪ್ರತಿನಿಧಿಗಳು ಸಹ ಭಾಗವಹಿಸಲಿದ್ದಾರೆ.  ಜನವರಿ 10ರಂದು ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತೇವೆ. ಅಂದು ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲರೂ ಬದ್ಧವಾಗಿರಬೇಕು  ಎಂದು ಪ್ರಾಂಶುಪಾಲ ಅನಂತಮೂರ್ತಿ ಹೇಳಿದ್ದಾರೆ.

ಇದನ್ನೂ ಓದಿ:  Udupi ಸರ್ಕಾರಿ ಕಾಲೇಜಿನಲ್ಲಿ ಹಿಜಬ್ V/S ಕೇಸರಿ ಶಾಲು..ವಿವಾದ Twitterನಲ್ಲಿ No.1ಆಗಿದ್ದೇಕೆ?

ಮೂರು ವರ್ಷದ ಹಿಂದೆ ಏನಾಗಿತ್ತು ತೀರ್ಮಾನ?

ಮೂರು ವರ್ಷಗಳ ಹಿಂದೆ ನಡೆದ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಇಲ್ಲಿಯವರೆಗೂ ಎಲ್ಲರೂ ಆ ನಿಯಮಗಳನ್ನು ಪಾಲಿಸಿಕೊಂಡು ಬಂದಿದ್ದರು. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿತ್ತು .ಆದರೆ ನಿನ್ನೆ ಕೆಲವು ವಿದ್ಯಾರ್ಥಿಗಳು ಇದ್ದಕ್ಕಿದ್ದಂತೆ ಸ್ಕಾರ್ಫ್ ಧರಿಸಿ ತರಗತಿಯಲ್ಲಿ ಕಾಣಿಸಿಕೊಂಡರು. ಅವರು ಕೆಲವು ವಿದ್ಯಾರ್ಥಿನಿಯರ ಡ್ರೆಸ್ ಕೋಡ್ ಬಗ್ಗೆ ಆಕ್ಷೇಪಿಸುತ್ತಿದ್ದರು ಎಂದು ಅನಂತ ಮೂರ್ತಿ ಹೇಳುತ್ತಾರೆ.

ಮುಸ್ಲಿಂ ವಿದ್ಯಾರ್ಥಿನಿಯರು ಹಿಜಬ ಧರಿಸಿ ಕಾಲೇಜಿಗೆ ಬರುತ್ತಿದ್ದಾರೆ ಎಂದು ಬಿಕಾಂ ದ್ವಿತೀಯ ವರ್ಷದ ವಿದ್ಯಾರ್ಥಿ ವಿನಯ್ ಕೊಪ್ಪದ ಆರೋಪಿಸಿದ್ದಾರೆ.

ಕೆಲ ದಿನಗಳಿಂದ ಹಿಜಾಬ್ ಧರಿಸುವಿಕೆ ಆರಂಭ

ಮೂರು ವರ್ಷಗಳ ಹಿಂದೆ ಕಾಲೇಜಿನಲ್ಲಿ ಇದೇ ರೀತಿಯ ವಿವಾದವು ಸ್ಫೋಟಗೊಂಡಿತ್ತು. ಯಾರೂ ಹಿಜಾಬ್ ಧರಿಸಿ ಕಾಲೇಜಿಗೆ ಬರಬಾರದು ಎಂದು ನಿರ್ಧರಿಸಲಾಗಿತ್ತು. ಆದರೆ ಕಳೆದ ಕೆಲ ದಿನಗಳಿಂದ ಕೆಲವು ಮಹಿಳೆಯರು ಹಿಜಾಬ್ ಧರಿಸಿ ಕಾಲೇಜಿಗೆ ಬರುತ್ತಿದ್ದಾರೆ. ಹೀಗಾಗಿ ನಿನ್ನೆಯಿಂದ ಕೇಸರಿ ಸ್ಕಾರ್ಫ್ ಧರಿಸಿ ಕಾಲೇಜಿಗೆ ಬರಲು ನಿರ್ಧರಿಸಿದ್ದೇವೆ ಎಂದು ವಿದ್ಯಾರ್ಥಿನಿ ಹೇಳಿದ್ದಾಳೆ.

ಇದನ್ನೂ ಓದಿ:  ಜನವರಿ 14 ರಂದೇ Panchamasali ಸಮುದಾಯದ 2ಎ ಮೀಸಲಾತಿ ಘೋಷಣೆ ಮಾಡ್ತಾರಾ CM Bommai?

ವಿದ್ಯಾರ್ಥಿಗಳ ಕೋರಿಕೆಯ ಮೇರೆಗೆ ಕಾಲೇಜು ಆಡಳಿತವು ಮುಸ್ಲಿಂ ಮಹಿಳೆಯರಿಗೆ ಕ್ಯಾಂಪಸ್‌ನಲ್ಲಿ ಹಿಜಾಬ್ ಹಾಕದಂತೆ ಹಲವಾರು ಬಾರಿ ಕೇಳಿಕೊಂಡರೂ ಅವರು ಒಪ್ಪಿಲ್ಲ ಎಂದು ತಿಳಿದು ಬಂದಿದೆ.

ಉಡುಪಿಯಲ್ಲೂ ಹಿಜಾಬ್ ವರ್ಸಸ್ ಕೇಸರಿ ಶಾಲು ವಿವಾದ

ತರಗತಿಯೊಳಗೆ ಹಿಜಾಬ್ (Hijab) ಧರಿಸಿ ಬರಲು ಆರು ಮಂದಿ ಮುಸ್ಲಿಂ ವಿದ್ಯಾರ್ಥಿನಿಯರು (Students) ನಡೆಸುತ್ತಿರುವ ಹೋರಾಟ ನಿರ್ಣಾಯಕ ಘಟ್ಟ ತಲುಪಿದೆ. ಸಮವಸ್ತ್ರ ಧರಿಸಿ ಬಂದು ತರಗತಿಯೊಳಗೆ (Classroom) ಕೂರಲು ಅವಕಾಶವಿಲ್ಲ ಎಂದು ಕಾಲೇಜು ( College) ಆಡಳಿತ ಮಂಡಳಿ ಸ್ಪಷ್ಟವಾಗಿ ತಿಳಿಸಿದೆ. ಹಠಕ್ಕೆ ಬಿದ್ದಿರುವ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವಿದ್ಯಾರ್ಥಿ ಸಂಘಟನೆ, ಈ ವಿವಾದವನ್ನು ಟ್ವಿಟ್ಟರ್ ನಲ್ಲಿ  ಟ್ರೆಂಡಿಂಗ್ ಮಾಡಿ  ರಾಷ್ಟ್ರದ ಗಮನ ಸೆಳೆಯಲು ಪ್ರಯತ್ನಿಸಿದೆ.

ಕಳೆದ ಮೂವತ್ತೇಳು ವರ್ಷಗಳಿಂದ, ಉಡುಪಿಯ ಪದವಿಪೂರ್ವ ಮಹಿಳಾ ಕಾಲೇಜಿ ನಲ್ಲಿ ಸರ್ವಧರ್ಮದ ವಿದ್ಯಾರ್ಥಿನಿಯರು ಸಮವಸ್ತ್ರವನ್ನು ಮಾತ್ರ ಧರಿಸಿ ತರಗತಿಗೆ ಹಾಜರಾಗುತ್ತಿದ್ದರು. ಹಿಜಾಬ್ ಧರಿಸಿ ಬಂದವರು, ತರಗತಿ ಪ್ರವೇಶಿಸುವಾಗ ಅದನ್ನು ತೆಗೆದಿರಿಸಿ ಪಾಠ ಕೇಳುತ್ತಿದ್ದರು. ನೂರಕ್ಕೂ ಅಧಿಕ ಮುಸ್ಲಿಂ ವಿದ್ಯಾರ್ಥಿನಿಯರು ಇಲ್ಲಿ ಪಿಯುಸಿ ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ಇವರ ಪೈಕಿ ಕೇವಲ ಹನ್ನೆರಡು ಮಂದಿ ವಿದ್ಯಾರ್ಥಿನಿಯರು ಇದೀಗ ತಗಾದೆ ತೆಗೆದಿದ್ದಾರೆ.
Published by:Mahmadrafik K
First published: