Hijab: ವರದಿಗಾರ ಶಾಲು ಎಳೆದ ಅಂತಾ ಸುಳ್ಳು ದೂರು ನೀಡಿದ ಹಿಜಾಬ್ ವಿದ್ಯಾರ್ಥಿನಿ; ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

ವರದಿಗಾರರು ನೀಡಿದ ದೂರಿಗೆ ಹಿಜಾಬ್ ವಿದ್ಯಾರ್ಥಿನಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ನೀಡಿದ್ದಾಳೆ. ಈ ವೇಳೆ ಮೂವರು ಪತ್ರಕರ್ತರ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ.

ಪತ್ರಕರ್ತ ಸಂಘದ ಪ್ರತಿಭಟನೆ

ಪತ್ರಕರ್ತ ಸಂಘದ ಪ್ರತಿಭಟನೆ

  • Share this:
ಉಪ್ಪಿನಂಗಡಿ ಸರಕಾರಿ ಪದವಿ ಕಾಲೇಜಿನಲ್ಲಿ (Government Degree College, Uppinangadi) ನಡೆದ ಹಿಜಾಬ್ ಪ್ರಕರಣಕ್ಕೆ (Hijab Row) ಸಂಬಂಧಿಸಿದಂತೆ ಉಪ್ಪಿನಂಗಡಿ ಠಾಣಾ ಪೊಲೀಸರು (Police) ಪತ್ರಕರ್ತರ (Journlist) ವಿರುದ್ಧ ಸುಳ್ಳು ಕೇಸು ದಾಖಲಿಸಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಜೂನ್ ಎರಡನೇ ತಾರೀಕು ಉಪ್ಪಿನಂಗಡಿ ಪದವಿ ಕಾಲೇಜಿನಲ್ಲಿ ಹಿಜಾಬ್ ವಿವಾದ ಜೋರಾದ ಹಿನ್ನೆಲೆಯಲ್ಲಿ ಸ್ಥಳೀಯ ವರದಿಗಾರರು (Local Reporters) ಕಾಲೇಜ್ ಹೋಗಿದ್ದರು. ಪ್ರಾಂಶುಪಾಲರ ಅಧಿಕೃತವಾದ ಮಾಹಿತಿಯನ್ನು ಪಡೆದು ಹೊರಗೆ ಬರುವಂತೆ ಸಂದರ್ಭದಲ್ಲಿ ಒಂದು ಸಮುದಾಯದ ಸುಮಾರು 25ಕ್ಕೂ ಹೆಚ್ಚು ವಿದ್ಯಾರ್ಥಿಗಳು (Students)ವರದಿಗಾರರನ್ನು ತಡೆದು ಹಲ್ಲೆಗೆ ಮುಂದಾಗಿದ್ದಾರೆ. ಕಾಲೇಜಿನ ಯಾವುದೇ ವಿಡಿಯೋಗಳನ್ನು (Video) ತೆಗೆಯಬಾರದು ವಿದ್ಯಾರ್ಥಿನಿಯರ ದಾಖಲೀಕರಣ ಮಾಡಬಾರದು ಅಂತ ತಾಕೀತು ಮಾಡಿದ್ದಾರೆ.

ಈ ವೇಳೆ ಆಕ್ರೋಶಭರಿತರಾಗಿ ವಿದ್ಯಾರ್ಥಿಗಳ ಗುಂಪು ವರದಿಗಾರರ ಕ್ಯಾಮೆರಾಗಳನ್ನು ಕಿತ್ತು ಬಲವಂತವಾಗಿ ವಿಡಿಯೋವನ್ನು ಡಿಲೀಟ್ ಮಾಡಿದ್ದಾರೆ. ಎಲ್ಲ ಘಟನೆಗಳಿಗೆ ಉಪ್ಪಿನಂಗಡಿ ಠಾಣಾ ಪೊಲೀಸರು ಸಾಕ್ಷರಾಗಿದ್ದು ವರದಿಗಾರರು ಸಂಕಷ್ಟಕ್ಕೆ ಸಿಲುಕಿದ್ದರೂ ರಕ್ಷಣೆ ಮಾಡದೆ ಕಾಲೇಜ್ ಒಳಭಾಗಕ್ಕೆ ಪೊಲೀಸರು ಪ್ರವೇಶ ಮಾಡುವಂತಿಲ್ಲ ಅಂತ ಅಸಹಾಯಕತೆ ತೋರಿದ್ದರು. ಬಳಿಕ ವರದಿಗಾರರು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರನ್ನು ನೀಡಿದ್ದರು.

ವಿದ್ಯಾರ್ಥಿನಿಯಿಂದ ಪ್ರತಿ ದೂರು

ವರದಿಗಾರರು ನೀಡಿದ ದೂರಿಗೆ ಹಿಜಾಬ್ ವಿದ್ಯಾರ್ಥಿನಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ನೀಡಿದ್ದಾಳೆ. ಈ ವೇಳೆ ಮೂವರು ಪತ್ರಕರ್ತರ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ. ಜೂನ್ ಎರಡನೆಯ ತಾರೀಕು ಸುಮಾರು ಹನ್ನೊಂದು ಗಂಟೆಗೆ ಬಂದ ಮೂವರು ವರದಿಗಾರರ ಪೈಕಿ ಒರ್ವ ಕಾಲೇಜ್ ಒಳಗೆ ಬಂದು ನನ್ನ ನನ್ನ ಶಾಲನ್ನು ಎಳೆಯಲು ಪ್ರಯತ್ನಪಟ್ಟರು.

ಈ ವೇಳೆ ಇನ್ನೋರ್ವ ವರದಿಗಾರ ಆಕೆಯ ಶಾಲನ್ನು ತೆಗೆಯಿರಿ ಅಂತಾ ಹೇಳಿದ. ಈ  ಸಂದರ್ಭದಲ್ಲಿ ನಾನು ಓಡಿಹೋಗಿ ಪ್ರಾಂಶುಪಾಲರ ಬಳಿ ದೂರನ್ನು ನೀಡಿದೆ. ಈ ವೇಳೆ ವರದಿಗಾರರನ್ನು ಪ್ರಾಂಶುಪಾಲರು ಕರೆಸಿದ ಸಂದರ್ಭದಲ್ಲಿ ಅವರು ಪತ್ರಕರ್ತರೆಂದು ತಿಳಿದಿದೆ. ಹೀಗಾಗಿ ಜೀವಭಯದಿಂದ ಮನೆಯಲ್ಲಿ ವಿವರಿಸಿ ಒಂದು ದಿನ ತಡವಾಗಿ ದೂರು ನೀಡಿದ್ದೇನೆ ಅಂತ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ:  Success Story: ಕಷ್ಟಗಳನ್ನೇ ಎದುರಿಸಿ ಸ್ವಂತ ಬ್ರಾಂಡ್ ಕಟ್ಟಿದ ಕರ್ನಾಟಕದ ಮಹಿಳೆ!

ಪೊಲೀಸರ ವಿರುದ್ಧ ಪತ್ರಕರ್ತರ ಆಕ್ರೋಶ

ದ್ವಿತೀಯ ಬಿಕಾಂ ವಿದ್ಯಾರ್ಥಿನಿ ದೂರು ಆಧಾರ ರಹಿತ ದೂರಾಗಿದ್ದು ಉಪ್ಪಿನಂಗಡಿ ಪೊಲೀಸರು ಕರ್ತವ್ಯ ಲೋಪ ಮೆರೆದಿದ್ದಾರೆ ಅಂತ ಪತ್ರಕರ್ತರು ಆರೋಪಿಸಿದ್ದಾರೆ. ದೂರು ನೀಡಿದ ತಕ್ಷಣವೇ ಯಾವುದೇ ಪೂರ್ವಾಪರ ವಿಚಾರಿಸದೆ ಆಧಾರರಹಿತವಾಗಿ ಜಾಮೀನುರಹಿತ ಪ್ರಕರಣವನ್ನು ದಾಖಲಿಸಿದ್ದಾರೆ ಅಂತ ಪತ್ರಕರ್ತರು ಆರೋಪಿಸಿದ್ದಾರೆ.

ಕಾಲೇಜಿನ ಸಿಸಿಟಿವಿಯಲ್ಲಿ ಎಲ್ಲವೂ ಸ್ಪಷ್ಟವಾಗಿ ದಾಖಲಾಗಿದ್ದರೂ ಕೂಡಾ ಸಿಸಿಟಿವಿಯನ್ನು ಪರಿಶೀಲನೆ ಮಾಡದೆ ಬಾಹ್ಯ ಶಕ್ತಿಗಳ ಒತ್ತಡದಿಂದ ಉಪ್ಪಿನಂಗಡಿ ಪೊಲೀಸರು ಪ್ರಕರಣವನ್ನು ದಾಖಲು ಮಾಡಿದ್ದಾರೆ ಅಂತ ಪತ್ರಕರ್ತರು ಆರೋಪಿಸಿದ್ದಾರೆ.

Hijab Student filed complaint against reporters in uppinagadi Dakshina Kannada kkm mrq
ಪತ್ರಕರ್ತ ಸಂಘದ ಪ್ರತಿಭಟನೆ


ಪತ್ರಕರ್ತರ ಸಂಘದಿಂದ ಬೃಹತ್ ಪ್ರತಿಭಟನೆ

ಪತ್ರಕರ್ತರ ವಿರುದ್ಧ ಸುಳ್ಳು ಕೇಸು ದಾಖಲಿಸಿದ ಉಪ್ಪಿನಂಗಡಿ ಪೊಲೀಸ್ ಠಾಣೆ ಅಧಿಕಾರಿಗಳ ವಿರುದ್ಧ ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ ಮಾಡಲಾಗಿದೆ. ನಗರದ ಸುಮಾರು ನೂರಕ್ಕೂ ಅಧಿಕ ಪತ್ರಕರ್ತರು ಪ್ರತಿಭಟನೆಯನ್ನು ಮಾಡಿದ್ದು ತಕ್ಷಣವೇ ರಾಜ್ಯ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಾಯ ಮಾಡಿದ್ದಾರೆ.

ಇದೊಂದು ಸುಳ್ಳು ಕೇಸ್

ಈ ಸಂದರ್ಭದಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ, ಪುತ್ತೂರಿನ ಪತ್ರಕರ್ತರ ಮೇಲೆ ಪೊಲೀಸರು ಒತ್ತಡಕ್ಕೆ ಮಣಿದು ಸುಳ್ಳು ಕೇಸು ದಾಖಲು ಮಾಡಿದ್ದಾರೆ. ಇದು ಸುಳ್ಳು ಕೇಸು ಅನ್ನೋದು ಸ್ಪಷ್ಟವಾಗಿ ತಿಳಿದುಬಂದಿದೆ

ಯಾಕೆಂದರೆ ಕಾಲೇಜಿನಲ್ಲಿ ಬಗ್ಗೆ ಪೊಲೀಸರಿಂದ ಸುಮಾರು ಹತ್ತು ಮೀಟರ್ ದೂರದಲ್ಲಿ ಘಟನೆಗಳ ಹಿನ್ನೆಲೆಯಲ್ಲಿ ಪೊಲೀಸರು ಸಾಕ್ಷಿಗಳಾಗಿದ್ದರು. ಉಪ್ಪಿನಂಗಡಿ ಪೊಲೀಸ್ ಠಾಣಾಧಿಕಾರಿ ವಿದ್ಯಾರ್ಥಿನಿಯರು ದೂರು ನೀಡಿದ ತಕ್ಷಣವೇ ಸುಮಾರು ಐದು ಸೆಕ್ಷನ್ ಗಳ ಪ್ರಕರಣವನ್ನು ದಾಖಲಿಸಿರುವುದು ಖಂಡನೀಯವಾಗಿದೆ. ಯಾವುದೇ ಆಧಾರವನ್ನು ಪಡೆಯದೆ ಈ ರೀತಿ ಕೇಸು ದಾಖಲಿಸಿರುವುದು ಖಂಡನೀಯ ಅಂತ ಶ್ರೀನಿವಾಸ ಇಂದಾಜೆ ಹೇಳಿದ್ದಾರೆ.

ಪತ್ರಕರ್ತರ ಮನವಿ ಸ್ವೀಕರಿಸಿದ ಎಸ್ ಪಿ

ಕ್ಲಾಕ್ ಟವರ್ ಬಳಿ ಪ್ರತಿಭಟನೆಯ ಬಳಿಕ ಪತ್ರಕರ್ತರು ಎಸ್ಪಿ ಕಚೇರಿ ಮಾರ್ಚ್ ನಡೆಸಿದ್ದಾರೆ ಸುಮಾರು ನೂರಕ್ಕೂ ಅಧಿಕ ಪತ್ರಕರ್ತರು ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿ ಎಸ್ಪಿ ಆಫೀಸ್ ಚಲೋ ದಲ್ಲಿ ಭಾಗವಹಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಸೋನಾವಣೆ ಪತ್ರಕರ್ತರ ಮನವಿಯನ್ನ ಸ್ವೀಕಾರ ಮಾಡಿದ್ದಾರೆ.

ಇದನ್ನೂ ಓದಿ:  KCET 2022: ಸಿಇಟಿ ಪರೀಕ್ಷೆಯ ಹಾಲ್ ಟಿಕೆಟ್​ ಬಿಡುಗಡೆ; ಇಲ್ಲಿದೆ ಪ್ರವೇಶ ಪತ್ರ ಡೌನ್​ಲೋಡ್ ಮಾಡುವ ವಿಧಾನ

ಈ ವೇಳೆ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಸೋನಾವಣೆ ವಿದ್ಯಾರ್ಥಿನಿಯರು ನೀಡಿದ ದೂರನ್ನು ಆಧರಿಸಿ ಪ್ರಕರಣವನ್ನು ದಾಖಲು ಮಾಡಿದ್ದೇವೆ. ಪತ್ರಕರ್ತರು ನೀಡಿದ ಮನವಿಯನ್ನು ಸ್ವೀಕರಿಸಿ ಈ ಕುರಿತು ತನಿಖೆ ನಡೆಸುತ್ತೇವೆ ಸತ್ಯಾಸತ್ಯತೆ ಹೊರಬೀಳಲಿ ಅಂತ ಹೇಳಿದ್ದಾರೆ.
Published by:Mahmadrafik K
First published: