Second PU Exam: ಪರೀಕ್ಷಾ ಕೇಂದ್ರದಿಂದ ಹೊರ ನಡೆದ ಹಿಜಾಬ್ ತೆಗೆಯಲು ಒಪ್ಪದ ಇಬ್ಬರು ವಿದ್ಯಾರ್ಥಿನಿಯರು

ಹಿಜಾಬ್ ಪರ ಹೋರಾಟಗಾರ್ತಿಯರಾದ ಅಲಿಯಾ ಅಸಾದಿ ಮತ್ತು ರೇಷ್ಮಾ ಪರೀಕ್ಷೆಗೆ ಗೈರಾಗಿದ್ದಾರೆ. ಇಬ್ಬರು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಪರೀಕ್ಷೆ ಬರೆಯೋದಗಿ ಹಠಕ್ಕೆ ಬಿದ್ದಿದ್ದರು. ಆದ್ರೆ ಅಧಿಕಾರಿಗಳು ಅನುಮತಿ ನೀಡದ ಹಿನ್ನೆಲೆ ಪರೀಕ್ಷಾ ಕೇಂದ್ರವನ್ನ ತೊರೆದಿದ್ದಾರೆ.

ವಿದ್ಯಾರ್ಥಿನಿ

ವಿದ್ಯಾರ್ಥಿನಿ

  • Share this:
ಇಂದು ರಾಜ್ಯಾದ್ಯಂತ ದ್ವಿತೀಯ ಪಿಯು ಪರೀಕ್ಷೆಗಳು (Second PU Exams) ಆರಂಭವಾಗಿವೆ. ತರಗತಿಗಳಲ್ಲಿ ಧರ್ಮವನ್ನು ಸಂಕೇತಿಸುವ ಯಾವುದೇ ವಸ್ತ್ರ ಧರಿಸುವಂತಿಲ್ಲ ಎಂದು  ಕರ್ನಾಟಕ ಹೈಕೋರ್ಟ್ (Karnataka High court) ತೀರ್ಪು ನೀಡಿದೆ. ಕರ್ನಾಟಕ ಹೈಕೋರ್ಟ್ ತೀರ್ಪು ಪ್ರಶ್ನಿಸಿ ವಿದ್ಯಾರ್ಥಿನಿಯರು (Students) ಸುಪ್ರೀಂಕೋರ್ಟ್ (Supreme Court) ಮೆಟ್ಟಿಲೇರಿದ್ದಾರೆ. ಇತ್ತ ಹಿಜಾಬ್ (Hijab) ನಿರ್ಬಂಧದ ನಡುವೆ ರಾಜ್ಯದಲ್ಲಿ SSLC ಪರೀಕ್ಷೆಗಳು ಸುಗಮವಾಗಿ ನಡೆದಿವೆ. ಇಂದಿನಿಂದ ದ್ವಿತೀಯ ಪಿಯು ಪರೀಕ್ಷೆ ಆರಂಭಗೊಂಡಿದ್ದು, ಹಿಜಾಬ್ ಧರಿಸಿ ಎಕ್ಸಾಂಗೆ ಹಾಜರಾಗುವಂತಿಲ್ಲ ಎಂದು ಸಚಿವ ಬಿ.ಸಿ.ನಾಗೇಶ್ (Minister BC Nagesh) ಹೇಳಿದ್ದರು. ಇಂದು ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿನಿಯರು ಹಿಜಾಬ್ / ಬುರ್ಖಾವನ್ನ ನಿರ್ದಿಷ್ಟ ಕೋಣೆಯಲ್ಲಿ ತೆಗೆಸಿದ್ದರು. ಆದ್ರೆ ಉಡುಪಿಯ (Udupi) ವಿದ್ಯೋದಯ ಪದವಿ ಪೂರ್ವ ಕಾಲೇಜು ಕೇಂದ್ರದಲ್ಲಿ ಇಬ್ಬರು ವಿದ್ಯಾರ್ಥಿನಿಯರು, ಹಿಜಾಜ್ ತೆಗೆಯಲು ನಿರಾಕರಿಸಿ ಪರೀಕ್ಷೆಗೆ ಗೈರಾಗಿದ್ದಾರೆ.

ಹಿಜಾಬ್ ಪರ ಹೋರಾಟಗಾರ್ತಿಯರಾದ ಅಲಿಯಾ ಅಸಾದಿ ಮತ್ತು ರೇಷ್ಮಾ ಪರೀಕ್ಷೆಗೆ ಗೈರಾಗಿದ್ದಾರೆ. ಇಬ್ಬರು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಪರೀಕ್ಷೆ ಬರೆಯೋದಗಿ ಹಠಕ್ಕೆ ಬಿದ್ದಿದ್ದರು. ಆದ್ರೆ ಅಧಿಕಾರಿಗಳು ಅನುಮತಿ ನೀಡದ ಹಿನ್ನೆಲೆ ಪರೀಕ್ಷಾ ಕೇಂದ್ರವನ್ನ ತೊರೆದಿದ್ದಾರೆ.

ಸಮವಸ್ತ್ರ ಪಾಲನೆ ಕಡ್ಡಾಯ

ಇನ್ನು ಎಸ್​ಎಸ್​ಎಲ್​​ ಸಿ ರೀತಿಯಲ್ಲಿ ಪಿಯು ಪರೀಕ್ಷೆಗೂ ಸಮವಸ್ತ್ರ ನಿಯಮ ಜಾರಿಯಾಗಿದೆ. ಎಲ್ಲ ವಿದ್ಯಾರ್ಥಿಗಳು ಇದರ ಕಡ್ಡಾಯ ಪಾಲನೆ ಮಾಡುವಂತೆ ಈಗಾಗಲೇ ಮಾರ್ಗಸೂಚಿ ಹೊರಡಿಸಲಾಗಿದೆ.  ಹಿಜಾಬ್ ಧರಿಸಿ ಬಂದರೆ ಪರೀಕ್ಷೆಗೆ ಅವಕಾಶ ಇಲ್ಲ. ಹೀಗಾಗಿ ಪರೀಕ್ಷಾರ್ಥಿಗಳಿಗೆ ಸಮವಸ್ತ್ರ ಪಾಲನೆ ನಿಯಮ ಪಾಲನೆ ಮಾಡುವುದು ಅವಶ್ಯ ಆಗಿದೆ.

ಈ ಸಂಬಂಧ ಈಗಾಗಲೇ ಆಯಾ ಕಾಲೇಜುಗಳ  ಅಭಿವೃದ್ಧಿ ಕಮಿಟಿಗಳಿಗೆ ಸೂಚನೆ ನೀಡಿದೆ. ಕೋರ್ಟ್ ಅದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಆರ್. ರಾಮಚಂದ್ರನ್ ತಿಳಿಸಿದ್ದಾರೆ.

ಇದನ್ನೂ ಓದಿ:  Warrant to DK Shivakumar: ಕೊರೊನಾ ನಿಯಮ ಉಲ್ಲಂಘಿಸಿ ಪ್ರತಿಭಟನೆ; ಡಿಕೆ ಶಿವಕುಮಾರ್​ಗೆ ವಾರೆಂಟ್

ಹಿಜಾಬ್ ತೆಗೆದಿಡಲು ಪ್ರತ್ಯೇಕ ಕೋಣೆಯ ವ್ಯವಸ್ಥೆ

ಪರೀಕ್ಷೆಗೆ ವಿದ್ಯಾರ್ಥಿನಿಯರು (Students) ಹಿಜಾಬ್ (Hijab) ಧರಿಸಿ ಹಾಜರಾಗುವಂತಿಲ್ಲ ಎಂದರು. SSLC ಪರೀಕ್ಷೆಯಂತೆ ಮಕ್ಕಳು ಪ್ರತ್ಯೇಕ ಕೊಠಡಿಗೆ ತೆರಳಿ ಹಿಜಾಬ್ ಅಥವಾ ಬುರ್ಕಾ (Burqua) ತೆಗೆದು ಪರೀಕ್ಷಾ ಕೊಠಡಿಗೆ ತೆರಳಬೇಕು. ಪರೀಕ್ಷಾ ಕೇಂದ್ರದಲ್ಲಿ (Exams Centre) ವಿದ್ಯಾರ್ಥಿನಿಯರಿಗೆ ಹಿಜಾಬ್ ತೆಗೆದಿಡಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ ಎಂದು ಬಿ.ಸಿ.ನಾಗೇಶ್ ಮೂರು ದಿನಗಳ ಹಿಂದೆಯೇ ಮಾಹಿತಿ ನೀಡಿದ್ದರು.

ಪಿಯು ಪರೀಕ್ಷೆ ವೇಳೆ ಉಚಿತ ಪ್ರಯಾಣ

ಪಿಯು ಪರೀಕ್ಷೆ ವೇಳೆ ವಿದ್ಯಾರ್ಥಿಗಳು ಸಾರಿಗೆ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಪ್ರಯಾಣದ ವೇಳೆ ವಿದ್ಯಾರ್ಥಿಗಳು ಹಾಲ್ ಟಿಕೆಟ್ ತೋರಿಸಬೇಕು. ಹಳ್ಳಿಯಿಂದ ಬರುವ ಮಕ್ಕಳಿಗೆ KSRTC ಇರಲಿದೆ.

ಒಟ್ಟು 81 ಮೌಲ್ಯಮಾಪನ ಕೇಂದ್ರ ಇರಲಿದ್ದು. ಎಲ್ಲಾ ಕೇಂದ್ರಗಳಲ್ಲಿ ಸಿಸಿಟಿವಿ ಇರಲಿವೆ. ಪರೀಕ್ಷೆ ಮೌಲ್ಯಮಾಪನ ವೇಳೆ ಮೊಬೈಲ್‌ ನಿಷೇಧ ಮಾಡಲಾಗಿದೆ.  ಎಸ್ ಒಪಿ ಈಗಿನದೇ ಅನ್ವಯವಾಗಲಿದೆ. ಪರೀಕ್ಷಾ ಕೇಂದ್ರದ ಸುತ್ತ 144 ಸೆಕ್ಷನ್ ಇರಲಿದೆ . ಹೊಸದಾಗಿ ತುಮಕೂರು, ಹಾಸನ,ಬಳ್ಳಾರಿ ಜಿಲ್ಲೆಗಳಲ್ಲಿ ಮೌಲ್ಯಮಾಪನ ಕೇಂದ್ರ ತೆರೆಯಲಾಗಿದೆ.

ಇದನ್ನು ಓದಿ:  Crime news: ಭೀಕರ ಅಪಘಾತ, ಮದುವೆ ಮನೆಯಿಂದ ಒಟ್ಟಿಗೇ ಮಸಣ ಸೇರಿದ 7 ಸ್ನೇಹಿತರು

ಮೊದಲ ಪರೀಕ್ಷೆಗೆ ಒಟ್ಟು 6 ಲಕ್ಷದ 84 ಸಾವಿರ 255 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದು, ಈ ಪೈಕಿ 3 ಲಕ್ಷ 46 ಸಾವಿರ 936 ಬಾಲಕರು ಹಾಗೂ 3 ಲಕ್ಷ 37 ಸಾವಿರ 319 ಬಾಲಕಿಯರು ಪರೀಕ್ಷೆ ಬರೆಯಲಿದ್ದಾರೆ. ರಾಜ್ಯಾದ್ಯಂತ ಒಟ್ಟು 1,076 ಕೇಂದ್ರಗಳಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಿದ್ದು, ರೆಗ್ಯುಲರ್ ವಿದ್ಯಾರ್ಥಿಗಳು 6,00,519, ಪುನರಾವರ್ತಿತ ಅಭ್ಯರ್ಥಿಗಳು- 61,808 ಹಾಗೂ ಖಾಸಗಿ ಅಭ್ಯರ್ಥಿಗಳ ಸಂಖ್ಯೆ 21,928 ಪರೀಕ್ಷೆ ಬರೆಯಲಿದ್ದಾರೆ.
Published by:Mahmadrafik K
First published: