• Home
  • »
  • News
  • »
  • state
  • »
  • Hijab Row: ರಾಜ್ಯಾದ್ಯಂತ ಪಿಯು ಕಾಲೇಜುಗಳು ಬುಧವಾರದಿಂದ ಆರಂಭ: ಯಾವೆಲ್ಲಾ ರೂಲ್ಸ್ ಇರಲಿದೆ?

Hijab Row: ರಾಜ್ಯಾದ್ಯಂತ ಪಿಯು ಕಾಲೇಜುಗಳು ಬುಧವಾರದಿಂದ ಆರಂಭ: ಯಾವೆಲ್ಲಾ ರೂಲ್ಸ್ ಇರಲಿದೆ?

ಬಿ.ಸಿ.ನಾಗೇಶ್​

ಬಿ.ಸಿ.ನಾಗೇಶ್​

ಮೊದಲ ಮತ್ತು ದ್ವಿತೀಯ ಪಿಯು ಕಾಲೇಜುಗಳು ಫೆ.16 , ಬುಧವಾರದಿಂದ (PU Colleges Reopen) ಆರಂಭಗೊಳ್ಳಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್​ ಟ್ವೀಟ್​ ಮೂಲಕ ತಿಳಿಸಿದ್ದಾರೆ.

  • Share this:

ಬೆಂಗಳೂರು: ಉಡುಪಿ ಕಾಲೇಜಿನಲ್ಲಿ ಶುರುವಾದ ಹಿಜಾಬ್​​ ವರ್ಸಸ್​​ ಕೇಸರಿ ಶಾಲು (Hijab vs Saffron shawl) ಜಟಾಪಟಿ ರಾಜ್ಯದ್ಯಂತ ಹರಡಿ ಉಗ್ರಸ್ವರೂಪ ಪಡೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ (Schools and Colleges) ರಜೆ ಘೋಷಿಸಿದ್ದ ಸರ್ಕಾರ, ಈಗ ಹಂತ ಹಂತವಾಗಿ ಶಾಲಾ ಕಾಲೇಜುಗಳನ್ನು ತೆರೆಯುತ್ತಿದೆ. ಮೊದಲ ಮತ್ತು ದ್ವಿತೀಯ ಪಿಯು ಕಾಲೇಜುಗಳು ಫೆ.16 , ಬುಧವಾರದಿಂದ (PU Colleges Reopen) ಆರಂಭಗೊಳ್ಳಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್​ ಟ್ವೀಟ್​ ಮೂಲಕ ತಿಳಿಸಿದ್ದಾರೆ. ಸಿಎಂ ನೇತೃತ್ವದ ಸಭೆಯಲ್ಲಿ ಪಿಯು ಕಾಲೇಜುಗಳನ್ನು ತೆರೆಯಲು ನಿರ್ಧಾರ ಮಾಡಲಾಗಿದೆ. ರಾಜ್ಯದ ಪರಿಸ್ಥಿತಿ ಬಗ್ಗೆಅವಲೋಕಿಸಿ ನಿರ್ಧಾರಕ್ಕೆ ಬಂದಿದ್ದು, ಬುಧವಾರದಿಂದ ಪಿಯು ಮತ್ತು ಡಿಗ್ರಿ ಕಾಲೇಜ್ ಗಳು ಓಪನ್ ಆಗಲಿವೆ ಎಂದು ಸಚಿವರು ತಿಳಿಸಿದ್ದಾರೆ. ಪೋಷಕರು, ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ಎಚ್ಚರಿಕೆ ವಹಿಸಲಾಗುವುದು. ಪೊಲೀಸ್ ಇಲಾಖೆಗೆ ಬೇಕಾದ ಬಂದೋಬಸ್ತ್ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಕೋರ್ಟ್ ನ ಸೂಚನೆ ಇದೆ, ಅದನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಿಸಲಾಗಿದೆ ಎಂದು ಸಚಿವ ನಾಗೇಶ್​ ಟ್ವೀಟ್​ ಮಾಡಿದ್ದಾರೆ.ಸಿಎಂ ನೇತೃತ್ವದಲ್ಲಿ ಸಭೆ


ಶಾಲಾ ಸಮವಸ್ತ್ರ ವಿಚಾರಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಇಂದು ಬೆಂಗಳೂರಿನಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಗೃಹ ಸಚಿವ ಅರಗ ಜ್ಞಾನೆಂದ್ರ, ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥನಾರಾಯಣ, ಶಿಕ್ಷಣ ಸಚಿವ ಬಿಸಿ ನಾಗೇಶ್ , ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್  ಸೂದ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಉಪಸ್ಥಿತರಿದ್ದರು. ಇನ್ನು ಇಂದು ಕಲಾಪ ಸಲಹಾ ಸಮಿತಿ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಉಚ್ಚ ನ್ಯಾಯಾಲಯದ ಆದೇಶವನ್ನು ಎಲ್ಲರೂ ಪಾಲಿಸಬೇಕು ಎಂದರು.


ಇದನ್ನೂ ಓದಿ: Hijab ಧರಿಸಿ ಕಲಾಪಕ್ಕೆ ಬಂದ ಶಾಸಕಿ; ಅನುಮತಿ ಸಿಗದೇ ತರಗತಿಯಿಂದ ಹೊರ ಬಂದ ವಿದ್ಯಾರ್ಥಿನಿಯರು


ಸಿಎಂ ಮನವಿ


ಇಂದು 10ನೇ ತರಗತಿಯವರೆಗೆ ಶಾಲೆಗಳು ಪ್ರಾರಂಭವಾಗಿದ್ದು, ಕೆಲವು ಜಿಲ್ಲೆಗಳಲ್ಲಿ ಬೇರೆ ಬೇರೆ ಪ್ರಕರಣಗಳು ವರದಿಯಾಗಿವೆ.  ನೂನ್ಯತೆಗಳನ್ನು ಸರಿಪಡಿಸುವ ಕುರಿತು ಹಾಗೂ  ಎಸ್.ಒ.ಪಿಗಳ ಬಗ್ಗೆ ಸಭೆ ಕರೆದು ಚರ್ಚಿಸಲಾಗುವುದು. ಉಚ್ಛ ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡುವ ಹೊಣೆಗಾರಿಕೆ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು  ಹಾಗೂ ಪೋಷಕರ ಮೇಲಿದೆ.  ಶಾಂತಿಯುತ ವಾತಾವರಣದಲ್ಲಿ ಅಂತಿಮ ತೀರ್ಪು ನೀಡಲು ಸಾಧ್ಯವಾಗಲಿದೆ. ಅಲ್ಲಿಯವರೆಗೆ ನಾವು ನಿಯಂತ್ರಣದಲ್ಲಿರಬೇಕು ಎಂದು ಸಿಎಂ ಮನವಿ ಮಾಡಿಕೊಂಡರು.


ಇಂದು ಹಿಜಾಬ್​​ ಪ್ರಕರಣ ಸಂಬಂಧ ಹೈಕೋರ್ಟ್​​ನಲ್ಲಿ ಏನಾಯ್ತು?


ತರಗತಿಯಲ್ಲಿ ಹಿಜಾಬ್​​ (Hijab) ಧರಿಸಲು ಅವಕಾಶ ನೀಡದನ್ನು ಪ್ರಶ್ನಿಸಿ ಸಲ್ಲಿಸಿರುವ ರಿಟ್​ ಅರ್ಜಿ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್​​ (Karnataka High Court) ತ್ರಿಸದಸ್ಯ ಪೀಠ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ. ಸಿಜೆ ರಿತುರಾಜ್ ಅವಸ್ಥಿ, ನ್ಯಾ, ಜೆ ಎಂ ಖಾಜಿ, ನ್ಯಾ, ಕೃಷ್ಣ ದೀಕ್ಷಿತ್ ಸೇರಿದ ತ್ರಿಸದಸ್ಯ ಪೀಠ ಹಿಜಾಬ್ ವಿಚಾರಣೆಯನ್ನು ಮುಂದೂಡಿದೆ. ಮುಂದಿನ ವಿಚಾರಣೆ ನಾಳೆ ಮಧ್ಯಾಹ್ನ 2:30ಕ್ಕೆ ನಡೆಯಲಿದೆ. ವಿಚಾರಣೆ ಪೂರ್ಣಗೊಳ್ಳುವವರೆಗೆ ವಿದ್ಯಾರ್ಥಿಗಳು ಯಾವುದೇ ಧಾರ್ಮಿಕ ಗುರುತುಗಳನ್ನು ( ಹಿಜಾಬ್​​, ಕೇಸರಿ ಶಾಲು) ಧರಿಸುವಂತಿಲ್ಲ ಎಂದು ಫೆ.10ರಂದು ಹೈಕೋರ್ಟ್​​ ನೀಡಿರುವ ಮೌಖಿಕ ಮಧ್ಯಂತರ ಆದೇಶ ಜಾರಿಯಲ್ಲಿರಲಿದೆ. ಮಾಧ್ಯಮಗಳಲ್ಲಿ ಅರ್ಜಿದಾರರ ಮಾಹಿತಿ ನೀಡದಂತೆ ನಿರ್ಬಂಧಿಸಲು ಅರ್ಜಿದಾರರ ಪರ ವಕೀಲ ಮೊಹಮ್ಮದ್ ತಾಹೀರ್ ಮನವಿ ಮಾಡಿದರು. ಅರ್ಜಿದಾರರು ಅಪ್ರಾಪ್ತ ವಿದ್ಯಾರ್ಥಿನಿಯರಾಗಿದ್ದಾರೆ. ಹೀಗಾಗಿ ಅವರ ಮಾಹಿತಿಯನ್ನು ಮಾಧ್ಯಮಗಳು ನೀಡಬಾರದು ಎಂದು ಕೋರ್ಟ್​​​​ಗೆ ಮನವಿ ಮಾಡಿದರು.

Published by:Kavya V
First published: