ಯಾದಗಿರಿ(ಫೆ.16): ರಾಜ್ಯದಲ್ಲಿ ಹಿಜಾಬ್(Hijab) ಹಾಗೂ ಕೇಸರಿ ಶಾಲು(Saffron Shwal) ವಿವಾದ ಸಂಘರ್ಷಕ್ಕೆ ಕೂಡ ಕಾರಣವಾಗಿ ಕೆಲ ಕಡೆ ಗಲಾಟೆ ನಡೆಯುತ್ತಿದೆ. ಈ ವಿಚಾರವಾಗಿ ಯಾದಗಿರಿ ಜಿಲ್ಲೆಯಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ವ್ಯಾಪಾಕ ಕಟ್ಟೆಚ್ಚರ ವಹಿಸಿದೆ. ಈಗಾಗಲೇ ಹೈಸ್ಕೂಲ್(High School ) ತರಗತಿ ಆರಂಭವಾಗಿದ್ದು ಗುರುಮಠಕಲ್ ಉರ್ದು ಶಾಲೆ ಸೇರಿ ಕೆಲ ಕಡೆ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ತರಗತಿಗೆ(Class) ಹಾಜರಾಗುತ್ತೇವೆಂದು ಗಲಾಟೆ ನಡೆಸಿದ್ದಾರೆ. ಬಹುತೇಕ ಕಡೆ ಯಾವುದೇ ಸಮಸ್ಯೆ ಇಲ್ಲದೇ ಪ್ರೌಢ ಶಾಲೆ ಆರಂಭವಾಗಿವೆ. ವಿದ್ಯಾರ್ಥಿಗಳು ನಮಗೆ ಶಿಕ್ಷಣ ಮುಖ್ಯವಾಗಿದ್ದು, ಹಿಜಾಬ್(Hijab) ತರಗತಿಯಲ್ಲಿ ಹಾಕಿಕೊಳ್ಳುವುದಿಲ್ಲವೆಂದು ಸಾಮರಸ್ಯ ಮೆರೆದು ಮಾದರಿಯಾಗಿದ್ದಾರೆ.
ಹೈಸ್ಕೂಲ್ ನಲ್ಲಿ ಕೆಲ ಕಡೆ ಗೊಂದಲಕ್ಕೆ ಕಾರಣವಾಗಿದೆ. ಈಗ ಮತ್ತೆ ಪಿಯು ಹಾಗೂ ಡಿಗ್ರಿ ಕಾಲೇಜ್ ಗಳು ಆರಂಭವಾಗಿದ್ದು, ಎಲ್ಲೆಡೆ ಹೈಕೋರ್ಟ್ ಆದೇಶ ಕಟ್ಟುನಿಟ್ಟಾಗಿ ಪಾಲನೆ ಮಾಡಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯು ಅಗತ್ಯ ಕಟ್ಟೆಚ್ಚರ ವಹಿಸಿದೆ. ಈಗಾಗಲೇ ಶಾಲೆಯಲ್ಲಿ ಸ್ವಲ್ಪ ಸಮಸ್ಯೆಯಾದ ಹಿನ್ನೆಲೆ ಜಿಲ್ಲಾಡಳಿತ ಯಾವುದೇ ಸಮಸ್ಯೆಯಾಗದಂತೆ ಎಚ್ಚರವಹಿಸಿದೆ.
ಇದನ್ನೂ ಓದಿ: Karnataka Weather Today: ಬೆಳಗ್ಗೆ ಚಳಿ, ಮಧ್ಯಾಹ್ನ ಬಿರು ಬಿಸಿಲು! ಹೇಗಿರಲಿದೆ ನಿಮ್ಮೂರಿನ ಹವಾಮಾನ?
ನಿಯಮ ಉಲ್ಲಂಘಿಸಿದರೆ ಕ್ರಮ
ಜಿಲ್ಲಾಡಳಿತ ಆಯಾ ಕಾಲೇಜಿನ ಪ್ರಾಂಶುಪಾಲರ ಜೊತೆ ಸಭೆ ನಡೆಸಿ ಯಾವುದೇ ಸಮಸ್ಯೆಯಾಗದಂತೆ ಸಮವಸ್ತ್ರ ವಿಚಾರವಾಗಿ ಹೈಕೋರ್ಟ್ ಆದೇಶ ಪಾಲನೆ ಮಾಡಬೇಕು. ನಿಯಮ ಉಲ್ಲಂಘಿಸಿದರೆ ಆಯಾ ಕಾಲೇಜಿನ ಪ್ರಾಂಶುಪಾಲರನ್ನೇ ಹೊಣೆಗಾರಿಕೆ ಮಾಡಿ ಅವರ ಮೇಲೆ ಕ್ರಮಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಲಾಗಿದೆ.
ಇಲ್ಲಿವರೆಊ ಯಾದಗಿರಿ ಜಿಲ್ಲೆಯಲ್ಲಿ ಯಾವುದೇ ಸಮಸ್ಯೆಯಾಗಿಲ್ಲ. ಯಾದಗಿರಿ ಜಿಲ್ಲೆಯ ಎಲ್ಲಾ ಕಾಲೇಜ್ ಮುಂಭಾಗದಲ್ಲಿ ಪೊಲೀಸ್ ಹಾಗೂ ಕಂದಾಯ ಅಧಿಕಾರಿ , ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಸೂಕ್ಷ್ಮ ಪ್ರದೇಶ ಗುರುತಿಸಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಹಾಗೂ ಪೋಷಕರು ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕಾರ ನೀಡಿ ಕಾಲೇಜ್ ನಡೆಸಲು ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿ ಡಾ.ಆರ್.ರಾಗಾಪ್ರಿಯಾ ಅವರು ಮನವಿ ಮಾಡಿದ್ದಾರೆ.
ಕೋರ್ಟ್ ಆದೇಶ ಪಾಲಿಸುವಂತೆ ವಿದ್ಯಾರ್ಥಿಗಳಿಗೆ ಸೂಚನೆ
ಈ ಬಗ್ಗೆ ಜಿಲ್ಲಾಧಿಕಾರಿ ಡಾ.ಆರ್.ರಾಗಾಪ್ರಿಯಾ ಅವರು ಮಾತನಾಡಿ, ಇಂದಿನಿಂದ ಕಾಲೇಜುಗಳು ಆರಂಭವಾಗುತ್ತಿದ್ದು, ಹೈಕೋರ್ಟ್ ಆದೇಶವನ್ನು ಯಾವುದೇ ಕಾರಣಕ್ಕೂ ಉಲ್ಲಂಘನೆ ಮಾಡಬಾರದು .ವಿದ್ಯಾರ್ಥಿಗಳು ಸಮವಸ್ತ್ರದ ನಿಯಮ ಪಾಲಿಸಬೇಕು. ಕಂದಾಯ ಅಧಿಕಾರಿಗಳನ್ನು ಕರ್ತವ್ಯ ನಿಯೋಜಿಸಲಾಗಿದೆ. ಪೋಷಕರು ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕಾರ ನೀಡಬೇಕೆಂದರು. ವಿದ್ಯಾರ್ಥಿಗಳು ಕೋರ್ಟ್ ಆದೇಶ ಪಾಲನೆ ಮಾಡಬೇಕೆಂದರು.
ಧೈರ್ಯವಾಗಿ ಶಾಲೆ ಕಾಲೇಜ್ ಗೆ ಬನ್ನಿ...!
ರಾಜ್ಯದಲ್ಲಿ ಸಮವಸ್ತ್ರ ವಿಚಾರವಾಗಿ ಸಂಘರ್ಷ ನಡೆಯುತ್ತಿದ್ದು, ಯಾದಗಿರಿ ಜಿಲ್ಲೆಯಲ್ಲಿ ಯಾವುದೇ ವಿವಾದ ನಡೆದು ಅಹಿತಕರ ಘಟನೆಗಳು ಜರುಗಿಲ್ಲ. ಶಾಲೆ ಕಾಲೇಜ್ ಮುಂದೆ ಜಿಲ್ಲೆಯಲ್ಲಿ 400 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರನ್ನು ನಿಯೋಜಿಸಲಾಗಿದೆ. ವಿದ್ಯಾರ್ಥಿಗಳು ಹೈಕೋರ್ಟ್ ಆದೇಶ ಪಾಲನೆ ಮಾಡಬೇಕು. ಎಲ್ಲಾ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ಧೈರ್ಯವಾಗಿ ಕಾಲೇಜ್ ಗೆ ಬನ್ನಿ ಎಂದು ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಅವರು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ್ದಾರೆ.
ಇದನ್ನೂ ಓದಿ: Power Cut: ಬೆಂಗಳೂರಿನ ಈ ಏರಿಯಾಗಳಲ್ಲಿ ಇಂದು ಬೆ.10ರಿಂದ ಸಂಜೆ 7ರವರೆಗೆ ಕರೆಂಟ್ ಇರೋಲ್ಲ..!
ಹಿಜಾಬ್ ಹಾಗೂ ಕೇಸರಿ ಶಾಲು ವಿಚಾರವಾಗಿ ಯಾರೂ ಪ್ರಚೋದನೆ ಮಾಡಬಾರದು. ಗಲಾಟೆ ಮಾಡಿದರೆ ಕಠಿಣ ಕ್ರಮಕೈಗೊಳ್ಳಲಾಗುತ್ತದೆ ಎಂದು ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಎಚ್ಚರಿಕೆ ನೀಡಿದ್ದಾರೆ. ಇಂದಿನಿಂದ ಕಾಲೇಜ್ ಗಳು ಆರಂಭವಾಗುತ್ತಿದ್ದು ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದೆ.
144 ಸೆಕ್ಷನ್ ಜಾರಿ
ಒಂದೆಡೆ ಇವತ್ತಿನಿಂದ ಪಿಯು ಡಿಗ್ರಿ ಕಾಲೇಜುಗಳು ಪ್ರಾರಂಭವಾಗಲಿವೆ, ಇನ್ನೊಂದೆಡೆ ಹೈಕೋರ್ಟ್ನಲ್ಲಿಂದು ಹಿಜಾಬ್ ವಿವಾದದ ವಿಚಾರಣೆ ನಡೆಯಲಿದೆ. ಹಿಜಾಬ್ ವಿಚಾರವಾಗಿ ರಾಜಧಾನಿಯಲ್ಲಿ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ. ಶಾಲಾ-ಕಾಲೇಜುಗಳ ಸುತ್ತ 200 ಮೀಟರ್ 144 ಸೆಕ್ಷನ್ ಜಾರಿಗೊಳಿಸಿದ್ದಾರೆ. ಸೂಕ್ಷ್ಮ ಪ್ರದೇಶದಲ್ಲಿನ ಕಾಲೇಜುಗಳ ಬಳಿ ಹೆಚ್ಚಿನ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಯಾವುದೇ ಪ್ರತಿಭಟನೆಗಳಿಗೆ ಆಸ್ಪದ ನೀಡದಂತೆ ಎಚ್ಚರಿಕೆ ವಹಿಸಲು ಕಮಿಷನರ್ ಸೂಚನೆ ನೀಡಿದ್ದಾರೆ.
ಶಾಲಾ-ಕಾಲೇಜುಗಳ ಬಳಿ ನಿಗಾ
ಆಯಾ ವಿಭಾಗದ ಡಿಸಿಪಿಗಳಿಂದಲೂ ಹೆಚ್ಚಿನ ನಿಗಾ ಹಾಗೂ ಶಾಲಾ ಕಾಲೇಜುಗಳ ಬಳಿ ಖುದ್ದು ಇನ್ಸ್ ಪೆಕ್ಟರ್ ಸೇರಿ ಸಿಬ್ಬಂದಿಗಳು ರೌಂಡ್ಸ್ ಮಾಡಬೇಕೆಂದು ಸೂಚನೆ ನೀಡಿದ್ದಾರೆ. ಈಗಾಗಲೇ ಆಯಾ ವಿಭಾಗದಲ್ಲಿ ಇನ್ಸ್ ಪೆಕ್ಟರ್ ಗಳಿಂದ ಶಾಲಾ ಕಾಲೇಜಿನ ಆಡಳಿತ ಮಂಡಳಿ ಜೊತೆಯೂ ಸಭೆ ನಡೆಸಲಾಗಿದೆ. ವಿಭಾಗದಲ್ಲಿ ಪರಿಸ್ಥಿತಿಯ ಬಗ್ಗೆ ಆಯಾ ವಿಭಾಗದ ಡಿಸಿಪಿ ಮಾಹಿತಿ ಪಡೆಯುತ್ತಿರಬೇಕು. ಶಾಂತಿಯುತವಾಗಿ ನಗರದಲ್ಲಿ ವ್ಯವಸ್ಥೆ ಇರಬೇಕೆಂದು ಕಮಿಷನರ್ ಸಲಹೆ ನೀಡದ್ದಾರೆ.
ಈಗಾಗ್ಲೇ ವಿದ್ಯಾಸಾಗರ್ ಶಾಲೆಯಲ್ಲಿ ನಡೆದ ಘಟನೆಯನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಹೀಗಾಗಿ ಕಾಲೇಜುಗಳ ಬಳಿಯೇ ಹೊಯ್ಸಳ ಚೀತಾ ಸಿಬ್ಬಂದಿ ಬಂದೋಬಸ್ತ್ ವಹಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ