Hijab Row: ಎಲ್ಲರೂ ಸಹಕಾರ ಕೊಟ್ಟು ಶಾಂತಿ ಸೌಹಾರ್ದತೆ ಕಾಪಾಡಬೇಕು: ಹೈಕೋರ್ಟ್ ಆದೇಶ ಪಾಲಿಸುವಂತೆ ಸಿಎಂ ಮನವಿ

ಮಕ್ಕಳ ಹಿತದೃಷ್ಟಿಯಿಂದ ಎಲ್ಲರೂ ಕೂಡ ನ್ಯಾಯಾಲಯದ ಆದೇಶ ಪಾಲಿಸಬೇಕು. ಕೋರ್ಟ್ ಆದೇಶವನ್ನು ಎಲ್ಲರೂ ಕೂಡ ಒಪ್ಪಿಕೊಳ್ಳಬೇಕು ಎಂದು ಸಮುದಾಯದ ನಾಯಕರಿಗೆ ಸಿಎಂ ಮನವಿ ಮಾಡಿಕೊಂಡರು.

ಸಿಎಂ ಬೊಮ್ಮಾಯಿ

ಸಿಎಂ ಬೊಮ್ಮಾಯಿ

  • Share this:
Hijab Judgement:  ಹಿಜಾಬ್ ವಿವಾದಕ್ಕೆ ಸಂಬಂಧಿಸಿದ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ (Karnataka High court) ವಜಾಗೊಳಿಸಿ, ಸರ್ಕಾರ ನೀಡಿದ್ದ ಕಡ್ಡಾಯ ಸಮವಸ್ತ್ರ (Uniform) ಆದೇಶವನ್ನು ಎತ್ತಿ ಹಿಡಿದಿದೆ. ನ್ಯಾಯಾಲಯದ ಕುರಿತು ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಸಮವಸ್ತ್ರದ ಕುರಿತು ನ್ಯಾಯಾಲಯ ಒಳ್ಳೆಯ ತೀರ್ಪು ನೀಡಿದೆ. ಇದು ಮಕ್ಕಳ (Students) ಭವಿಷ್ಯ ಶಿಕ್ಷಣ(Education)ದ ಪ್ರಶ್ನೆಯಾಗಿದೆ. ಮಕ್ಕಳಿಗೆ ವಿದ್ಯೆಗಿಂತ ಮತ್ತೊಂದು ಇಲ್ಲ.  ನ್ಯಾಯಾಲಯದ ಆದೇಶವನ್ನು ಎಲ್ಲರು ಪಾಲಿಸಬೇಕು. ಎಲ್ಲರೂ ಸಹಕಾರ ಕೊಟ್ಟು ಶಾಂತಿ ಸೌಹಾರ್ದತೆ ಕಾಪಾಡಬೇಕು ಎಂದು ಮನವಿ ಮಾಡಿಕೊಂಡರು.

ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಈ ತೀರ್ಪನ್ನು ಒಪ್ಪಿಕೊಳ್ಳಬೇಕು. ತೀರ್ಪಿನ ಅನ್ವಯ ಶಿಕ್ಷಣ ಕೊಡಲು ಎಲ್ಲರು ಸಹಕಾರ ಕೊಡಬೇಕು. ಎಲ್ಲ ವಿದ್ಯಾರ್ಥಿಗಳು ಹೈಕೋರ್ಟ್ ಆದೇಶ ಪಾಲನೆ ಮಾಡಬೇಕು. ತರಗತಿ ಬಹಿಷ್ಕಾರ ಮಾಡದೇ, ಪರೀಕ್ಷೆಗೆ ಹಾಜರಾಗಬೇಕು ಎಂದು ಹೇಳಿದರು.

ಕೋರ್ಟ್ ಆದೇಶವನ್ನು ಎಲ್ಲರೂ ಒಪ್ಪಿಕೊಳ್ಳಬೇಕು

ಈಗಾಗಲೇ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಟ್ಟು ನಿಟ್ಟಾಗಿ ಮಾಡಿದ್ದೇವೆ. ಯಾರಾದರೂ ಕಾನೂನು ಕೈಗೆತ್ತಿಕೊಂಡ್ರೆ ಗೃಹ ಇಲಾಖೆಯಿಂದ ತಕ್ಕ ಪಾಠ ಆಗಲಿದೆ ಎಂದು ಕಾನೂನು ಕದಡುವವರಿಗೆ ಸಿಎಂ ಬೊಮ್ಮಾಯಿ ಎಚ್ಚರಿಕೆ ನೀಡಿದರು.

ಇದನ್ನೂ ಓದಿ:  Hijab Judgement: ಹಿಜಾಬ್ ಧರಿಸೋದು ಇಸ್ಲಾಂನ ಅತ್ಯಗತ್ಯ ಭಾಗ ಅಲ್ಲ, ಸರ್ಕಾರದ ಆದೇಶ ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್

ಮಕ್ಕಳ ಹಿತದೃಷ್ಟಿಯಿಂದ ಎಲ್ಲರೂ ಕೂಡ ನ್ಯಾಯಾಲಯದ ಆದೇಶ ಪಾಲಿಸಬೇಕು. ಕೋರ್ಟ್ ಆದೇಶವನ್ನು ಎಲ್ಲರೂ ಕೂಡ ಒಪ್ಪಿಕೊಳ್ಳಬೇಕು ಎಂದು ಸಮುದಾಯದ ನಾಯಕರಿಗೆ ಸಿಎಂ ಮನವಿ ಮಾಡಿಕೊಂಡರು.

ಶಾಸಕ ರಘುಪತಿ ಭಟ್ ಸುದ್ದಿಗೋಷ್ಠಿ

ಹೈಕೋರ್ಟ್ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ತೀರ್ಪನ್ನು ಎಲ್ಲರೂ ಪಾಲಿಸಬೇಕು. ಎಲ್ಲಾ ಪ್ರತಿವಾದಿಗಳು ಹಾಗೂ ವಾದಿಗಳ ವಾದಗಳನ್ನು ಮಾಡಿದ್ದಾರೆ. ಸಮಗ್ರ ಆದೇಶ ಹೈಕೋರ್ಟ್ ನೀಡಿದೆ. ಎಲ್ಲಾ ನ್ಯಾಯಮೂರ್ತಿಗಳಲ್ಲಿ ಧನ್ಯವಾದ ಸಲ್ಲಿಸುತ್ತೇನೆ. ಈ ಪೀಠದಲ್ಲಿ ಮುಸ್ಲಿಂ ಮಹಿಳೆ ಕೂಡಾ ಇದ್ದರು. ಸರ್ಕಾರದ ಆದೇಶ ಸರಿ ಇತ್ತು ಅನ್ನೋದಕ್ಕೆ ಪುಷ್ಠಿ ನೀಡುತ್ತದೆ. ನಮ್ಮ ಕಾಲೇಜಿನ 6 ವಿದ್ಯಾರ್ಥಿಗಳು ಆಕ್ಷೇಪ ಸಲ್ಲಿಸಿದ್ರು ಅದನ್ನು ವಜಾ ಮಾಡಿದೆ. ಕಾಲೇಜ್ ಅಭಿವೃದ್ಧಿ ಸಮಿತಿಗೆ ನಿರ್ಧಾರ ಮಾಡಲು ಅವಕಾಶ ಇಲ್ಲ ಎಂದು ವಾದ ಮಾಡಲಾಗಿತ್ತು. ಆ ವಾದವನ್ನು ಹೈ ಕೋರ್ಟ್ ತಿರಸ್ಕರಿಸಿದೆ ಎಂದರು.

ಈ ಕ್ಷಣದಿಂದ ನಾವೆಲ್ಲರೂ ಆದೇಶದ ಪರವಾಗಿ ಇರಬೇಕು. ಬೇಕು ಎಂದರೆ ಸುಪ್ರೀಂಗೆ ಹೋಗೋ ಅವಕಾಶ ಇದೆ. ಹಿಜಾಬ್ ಧರಿಸೋದು ಕಡ್ಡಾಯವಲ್ಲ ಎಂದಿದೆ. ಈ‌ ಹಿಂದೆ ಇದ್ದ ಪದ್ಧತಿಯನ್ನು ನಮ್ಮ‌ ಕಾಲೇಜಿನಲ್ಲಿ ಅನುಸರಿಸ್ತೇವೆ. ಆ 6 ವಿದ್ಯಾರ್ಥಿನಿಯರು ನಾಳೆಯಿಂದಲೇ ಕ್ಲಾಸ್‌ ರೂಂಗೆ ಬರಬೇಕು. ನ್ಯಾಯಾಲಯದ ಆದೇಶದ ಬಳಿಕ ವಿದ್ಯಾರ್ಥಿಗಳು ಹಠದ ಧೋರಣೆ ತೋರಬಾರದು. ಕಾಲೇಜಿನ ಹೆಸರು ಕೆಡಿಸಿದ್ರು ಅನ್ನೋ ಭೇದ ಭಾವ ಮಾಡೋದಿಲ್ಲ.

ನಮ್ಮ ಪ್ರಾಂಶುಪಾಲರ‌ ಬಳಿ ಮಾತನಾಡಿದ್ದೇನೆ ಆ ವಿದ್ಯಾರ್ಥಿಗಳಿಗೆ ಸರಿಸಮನಾಗಿ ನೋಡಿಕೊಳ್ಳುತ್ತೇವೆ. ಯಾವುದೋ ಪ್ರಭಾವಕ್ಕೆ ಅವರು ಒಳಗಾಗಬಾರದು ಎಂದು ಮನವಿ ಮಾಡಿಕೊಂಡರು.

ಇದನ್ನೂ ಓದಿ:  Digital Water Bank: ಇನ್ನಿಲ್ಲ ಕುಡಿಯುವ ನೀರಿನ ಸಮಸ್ಯೆ; ಬೆಂಗಳೂರಿನಲ್ಲಿ ಸ್ಥಾಪನೆಯಾಯ್ತು ಡಿಜಿಟಲ್ ವಾಟರ್ ಬ್ಯಾಂಕ್!

ಇದು ಸಂವಿಧಾನದ ಜಯ ಆಂದ್ರು ಮುತಾಲಿಕ್

ಇವತ್ತಿನ ಹೈಕೋರ್ಟ್ ತೀರ್ಪು ಅತ್ಯಂತ ಐತಿಹಾಸಿಕವಾಗಿದೆ. ಇದು ಸಂವಿಧಾನದ ವಿಜಯ. ಸಂವಿಧಾನದ ಬದ್ಧವಾದ ಸರ್ಕಾರದ ಆದೇಶ ಎತ್ತಿ‌ ಹಿಡಿದಿದೆ. ಶಾಲಾ ಕಾಲೇಜ್‌ ಗೆ ಹಿಜಾಬ್ ಪ್ರವೇಶ ಇಲ್ಲ ಅಂತಾ ಸ್ಪಷ್ಟವಾಗಿ ಹೇಳಿದೆ. ಸಮವಸ್ತ್ರ ಅಂದರೆ ಸಮವಸ್ತ್ರವೇ. ಕೇಸರಿ ಶಾಲು, ಹಿಜಾಬ್‌ಗೆ ಅವಕಾಶ ಇಲ್ಲ ಅಂತಾ ಸಾಮಾನ್ಯರಿಗೂ ಗೊತ್ತಿತ್ತು. ಆದರೂ ವಿವಾದ ಮಾಡಿದ್ದರು. ಮುಖಕ್ಕೆ ಹೊಡೆದಂತೆ ಆದೇಶ ಆಗಿದೆ. ಮಧ್ಯಂತರ ಆದೇಶ ಬಂದಾಗ ಪಾಲಿಸಿರಲಿಲ್ಲ. ಈಗ ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಧಾರವಾಡದಲ್ಲಿ ಹೇಳಿದ್ದಾರೆ.
Published by:Mahmadrafik K
First published: