Hijab Hearing: ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ: ಹೈಕೋರ್ಟ್​​ಗೆ ಸರ್ಕಾರದ ಉತ್ತರ

ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂಬುದು ನಮ್ಮ ನಿಲುವು. ಧಾರ್ಮಿಕ ಸೂಚನೆಗಳನ್ನು ಶಿಕ್ಷಣ ಸಂಸ್ಥೆಗಳ ಹೊರಗೆ ಇಡೋಣ ಎಂದು ಸರ್ಕಾರ ಹೈಕೋರ್ಟ್​​ನಲ್ಲಿ ಹೇಳಿದೆ.

ಕರ್ನಾಟಕ ಹೈಕೋರ್ಟ್​​

ಕರ್ನಾಟಕ ಹೈಕೋರ್ಟ್​​

  • Share this:
ಬೆಂಗಳೂರು: ಹಿಜಾಬ್ (Hijab) ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ (Essential Religious Practice) ಎಂದು ಕರ್ನಾಟಕ ಸರ್ಕಾರ (Karnataka Govt) ಸೋಮವಾರ ಹೈಕೋರ್ಟ್‌ನ (High Court of Karnataka) ಪೂರ್ಣ ಪೀಠದ ಮುಂದೆ ಪುನರುಚ್ಚರಿಸಿದೆ. ಶಿಕ್ಷಣ ಸಂಸ್ಥೆಗಳ ಹೊರಗೆ ಧಾರ್ಮಿಕ ಗುರುತುಗಳನ್ನು ಇಡಬೇಕು ಎಂದು ಸರ್ಕಾರ ಹೇಳಿದೆ. ಹೈಕೋರ್ಟ್​​ ಪೂರ್ಣ ಪೀಠವು ನಾಳೆ ಮಧ್ಯಾಹ್ನ 2.30ಕ್ಕೆ ವಿಚಾರಣೆಯನ್ನು ಮುಂದೂಡಿದೆ. "ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂಬುದು ನಮ್ಮ ನಿಲುವು. ಧಾರ್ಮಿಕ ಸೂಚನೆಗಳನ್ನು ಶಿಕ್ಷಣ ಸಂಸ್ಥೆಗಳ ಹೊರಗೆ ಇಡೋಣ ಎಂದು ಹೇಳಿಕೆ ನೀಡಿದ್ದಾರೆ ಎಂದು ಕರ್ನಾಟಕ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಪೂರ್ಣ ಪೀಠಕ್ಕೆ ತಿಳಿಸಿದರು.

ಇದನ್ನೂ ಓದಿ: Hijab Row: ಹಿಜಾಬ್ ನಿಷೇಧಿಸಿ ಅಲ್ಪಸಂಖ್ಯಾತರ ಇಲಾಖೆಯಿಂದ ಸುತ್ತೋಲೆ.. ಯಾರಿಗೆಲ್ಲಾ ಇದು ಅನ್ವಯ?

ಕೆಲವು ಸ್ಪಷ್ಟೀಕರಣಗಳ ಅಗತ್ಯವಿದೆ ಎಂದ ಸಿಜೆ

ಹಿಜಾಬ್ ಪ್ರಕರಣದ ವಿಚಾರಣೆಯಲ್ಲಿ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ, ನ್ಯಾಯಮೂರ್ತಿ ಜೆ ಎಂ ಖಾಜಿ ಹಾಗೂ ನ್ಯಾಯಮೂರ್ತಿ ಕೃಷ್ಣ ಎಂ ದೀಕ್ಷಿತ್ ಅವರನ್ನು ಒಳಗೊಂಡ ಪೀಠ ನಡೆಸುತ್ತಿದೆ. ಎಜಿ ಪ್ರಕಾರ, ಅಗತ್ಯ ಧಾರ್ಮಿಕ ಆಚರಣೆಗೆ ಮಾತ್ರ ಆರ್ಟಿಕಲ್ 25 ರ ಅಡಿಯಲ್ಲಿ ರಕ್ಷಣೆ ಸಿಗುತ್ತದೆ. ಇದು ನಾಗರಿಕರು ತಮ್ಮ ಆಯ್ಕೆಯ ನಂಬಿಕೆಯನ್ನು ಆಚರಿಸಲು ಅವಕಾಶ ಮಾಡಿಕೊಡುತ್ತದೆ. ಅವರು ಆರ್ಟಿಕಲ್ 25 ರ ಭಾಗವಾಗಿ "ಧರ್ಮದಲ್ಲಿನ ಸುಧಾರಣೆಗಳನ್ನು" ಉಲ್ಲೇಖಿಸಿದ್ದಾರೆ ಎಂದರು. ವಾದ-ಪ್ರತಿವಾದ ಪ್ರಕ್ರಿಯೆಗಳು ಪ್ರಾರಂಭವಾದ ತಕ್ಷಣ, ಸಿಜೆ ಅವಸ್ತಿ ಅವರು ಹಿಜಾಬ್‌ಗೆ ಸಂಬಂಧಿಸಿದಂತೆ ಕೆಲವು ಸ್ಪಷ್ಟೀಕರಣಗಳ ಅಗತ್ಯವಿದೆ ಎಂದು ಹೇಳಿದರು.

ಹಿಜಾಬ್ ಅನ್ನು ಅನುಮತಿಸಬಹುದೇ?

ರಾಜ್ಯ ಸರ್ಕಾರವು ಹಿಜಾಬ್ ಅನ್ನು ನಿಷೇಧಿಸಿಲ್ಲ ಮತ್ತು ಅದರ ಮೇಲೆ ಯಾವುದೇ ನಿರ್ಬಂಧಗಳನ್ನು ಹಾಕಿಲ್ಲ ಎಂದು ನೀವು ವಾದಿಸಿದ್ದೀರಿ. ವಿದ್ಯಾರ್ಥಿಗಳು ನಿಗದಿತ ಸಮವಸ್ತ್ರವನ್ನು ಧರಿಸಬೇಕೆಂದು GO ಹೇಳುತ್ತದೆ. ನಿಮ್ಮ ನಿಲುವು ಏನು? ಹಿಜಾಬ್ ಅನ್ನು ಅನುಮತಿಸಬಹುದೇ ಎಂದು ಮುಖ್ಯ ನ್ಯಾಯಮೂರ್ತಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ನಾವದಗಿ, ಶಿಕ್ಷಣ ಸಂಸ್ಥೆಗಳು ಅನುಮತಿ ನೀಡಿದರೆ ಸಮಸ್ಯೆ ಉದ್ಭವಿಸಿದಾಗ ಸರ್ಕಾರವು ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

ಕಾಲೇಜು ಪ್ರಾಂಶುಪಾಲರ ಹೇಳಿಕೆ

ಜನವರಿ 1ರಂದು ಉಡುಪಿಯ ಕಾಲೇಜೊಂದರ ಆರು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗೆ ಪ್ರವೇಶ ನಿರಾಕರಿಸಿದ ಕಾಲೇಜು ಆಡಳಿತವನ್ನು ವಿರೋಧಿಸಿ ಕರಾವಳಿ ಪಟ್ಟಣದಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‌ಐ) ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು. ಅಲ್ಲಿಯವರೆಗೆ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಕ್ಯಾಂಪಸ್‌ಗೆ ಬರುತ್ತಿದ್ದರು. ಸ್ಕಾರ್ಫ್‌ಗಳನ್ನು ತೆಗೆದು ತರಗತಿಗೆ ಪ್ರವೇಶಿಸುತ್ತಿದ್ದರು ಎಂದು ಕಾಲೇಜು ಪ್ರಾಂಶುಪಾಲ ರುದ್ರೇಗೌಡ ತಿಳಿಸಿದ್ದಾರೆ. ಸಂಸ್ಥೆಯು ಹಿಜಾಬ್ ಧರಿಸುವುದರ ಬಗ್ಗೆ ಯಾವುದೇ ನಿಯಮವನ್ನು ಹೊಂದಿಲ್ಲ.  ಕಳೆದ 35 ವರ್ಷಗಳಿಂದ ಯಾರೂ ಅದನ್ನು ಧರಿಸಿ ತರಗತಿಗೆ ಹಾಜರಾಗಿಲ್ಲ. ಹಿಜಾಬ್​​​ಗೆ ಅವಕಾಶ ಕೋರಿರುವ  ವಿದ್ಯಾರ್ಥಿಗಳಿಗೆ ಹೊರಗಿನ ಶಕ್ತಿಗಳ ಬೆಂಬಲವಿದೆ ಎಂದು ರುದ್ರೇಗೌಡ ಹೇಳಿದ್ದಾರೆ.

ಇದನ್ನೂ ಓದಿ: ಇಡೀ ಕರ್ನಾಟಕದಲ್ಲಿ Hijab ಪರವಾಗಿ 100 ಜನ ಕೂಡ ಇಲ್ಲ : ಸಚಿವ R. Ashoka ವ್ಯಂಗ್ಯ

ಈ ಮಧ್ಯೆ ಅಲ್ಪಸಂಖ್ಯಾತರ ಇಲಾಖೆಯು ಶಾಲಾ-ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ ಮತ್ತು ಸ್ಕಾರ್ಫ್‌ ಧರಿಸುವುದನ್ನು ನಿಷೇಧಿಸಿ ಸುತ್ತೋಲೆ ಹೊರಡಿಸಿದೆ. ರಾಜ್ಯ ಅಲ್ಪಸಂಖ್ಯಾತ ಇಲಾಖೆಯಿಂದ ನಡೆಸಲಾಗುತ್ತಿರುವ ವಸತಿ ಶಾಲೆಗಳು ಮತ್ತು ಆಂಗ್ಲ ಮಾಧ್ಯಮದ ಮೌಲಾನಾ ಆಜಾ಼ದ್‌ ಶಾಲೆಗಳಲ್ಲಿ ಧಾರ್ಮಿಕ ಉಡುಪುಗಳನ್ನು ಧರಿಸುವುದನ್ನು ನಿಷೇಧಿಸಿ ರಾಜ್ಯ ಅಲ್ಪಸಂಖ್ಯಾತ ಇಲಾಖೆ ಕಾರ್ಯದರ್ಶಿ ಪಿ. ಮಣಿವಣ್ಣನ್‌ ಅವರು ಫೆ.16ರಂದು ಆದೇಶ ಹೊರಡಿಸಿದ್ದಾರೆ. ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್‌ ಮತ್ತು ಇತರ ಧಾರ್ಮಿಕ ಉಡುಪುಗಳನ್ನ ನಿಷೇಧಿಸುವ ಕರ್ನಾಟಕ ಹೈಕೋರ್ಟ್‌ನ ಮಧ್ಯಂತರ ಆದೇಶದ ಕಾರ್ಯಕಾರಿ ಭಾಗವನ್ನು ಅಲ್ಪಸಂಖ್ಯಾತ ಇಲಾಖೆಯ ಸುತ್ತೋಲೆ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ ಎಂದು ವರದಿಯೊಂದು ತಿಳಿಸಿದೆ.
Published by:Kavya V
First published: