Hijab Row: ತ್ರಿಸದಸ್ಯ ಪೀಠದಿಂದ 129 ಪುಟಗಳ ತೀರ್ಪು: ತೀರ್ಪಿನಲ್ಲಿ ನಾಲ್ಕು ಪ್ರಶ್ನೆಗಳನ್ನ ಗಂಭೀರವಾಗಿ ಪರಿಗಣನೆ

ಇದೇ ವೇಳೆ ನ್ಯಾಯಪೀಠ, ಫೆಬ್ರವರಿ 5ರಂದು ಸರ್ಕಾರದ (Government Order) ಏಕರೂಪ ಸಮವಸ್ತ್ರ (Uniform) ಕಡ್ಡಾಯ ಆದೇಶವನ್ನು ಎತ್ತಿ ಹಿಡಿದಿದ್ದು, ಕಾನೂನುಬದ್ಧವಾಗಿದೆ ಎಂದು ನ್ಯಾಯಾಲಯ ಹೇಳಿದೆ. ನ್ಯಾಯಾಲಯ ಒಟ್ಟು 129 ಪುಟಗಳ ತೀರ್ಪು ಪ್ರಕಟಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Hijab Judgment: ಹಿಜಾಬ್ ಪರವಾಗಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ವಜಾಗೊಳಿಸುವ ಮೂಲಕ ಶಾಲಾ-ಕಾಲೇಜುಗಳಲ್ಲಿ ಧರ್ಮವಸ್ತ್ರ ಕಡ್ಡಾಯ ಅಲ್ಲ ಎಂದು ಕರ್ನಾಟಕ ಉಚ್ಛ ನ್ಯಾಯಾಲಯ (Karnataka High court) ಮಹತ್ವದ ತೀರ್ಪನ್ನು ನೀಡಿದೆ. ಇಂದು ಬೆಳಗ್ಗೆ 10.30ಕ್ಕೆ ಹೈಕೋರ್ಟ್ ಪೂರ್ಣ ಪೀಠದಿಂದ ತೀರ್ಪು ಹೊರ ಬಂದಿದೆ. ಸಿಜೆ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್, ನ್ಯಾ.ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರ ಪೂರ್ಣ ಪೀಠ ತೀರ್ಪು ಸರ್ವಸಮ್ಮತವಾಗಿ ತೀರ್ಪನ್ನು ನೀಡಿದೆ. ಇದೇ ವೇಳೆ ನ್ಯಾಯಪೀಠ, ಫೆಬ್ರವರಿ 5ರಂದು ಸರ್ಕಾರದ (Government Order) ಏಕರೂಪ ಸಮವಸ್ತ್ರ (Uniform) ಕಡ್ಡಾಯ ಆದೇಶವನ್ನು ಎತ್ತಿ ಹಿಡಿದಿದ್ದು, ಕಾನೂನುಬದ್ಧವಾಗಿದೆ ಎಂದು ನ್ಯಾಯಾಲಯ ಹೇಳಿದೆ. ನ್ಯಾಯಾಲಯ ಒಟ್ಟು 129 ಪುಟಗಳ ತೀರ್ಪು ಪ್ರಕಟಿಸಿದೆ.

ಸುದೀರ್ಘ ವಾದ- ಪ್ರತಿವಾದ ಆಲಿಸಿದ ನ್ಯಾಯಾಲಯ ನಾಲ್ಕು ಪ್ರಶ್ನೆಗಳನ್ನು ಕೇಳಿಕೊಂಡಿತ್ತು. ಆ ಪ್ರಶ್ನೆಗಳಿಗೆ ಉತ್ತರ ಕಂಡು ಕೊಳ್ಳುವ ಮೂಲಕ ನ್ಯಾಯಾಲಯ ತನ್ನ ತೀರ್ಪು ನೀಡಿದೆ. ಆ ನಾಲ್ಕು ಪ್ರಶ್ನೆಗಳು ಮತ್ತು ನ್ಯಾಯಾಲಯ ಕಂಡುಕೊಂಡುವ ಉತ್ತರ ಇಲ್ಲಿದೆ.

ಪ್ರಶ್ನೆ 1.ಹಿಜಾಬ್ & ಹೆಡ್ ಸ್ಕಾರ್ಪ್ ಇಸ್ಲಾಂ ನಂಬಿಕೆಯಲ್ಲಿ ಅತ್ಯಗತ್ಯವೇ?

ಉತ್ತರ: ಮುಸ್ಲಿಂ ಮಹಿಳೆ ಹಿಜಾಬ್​ ಧರಿಸುವುದು ಅತ್ಯಗತ್ಯ ಆಚರಣೆಯಲ್ಲ. ಇಸ್ಲಾಂ ನಂಬಿಕೆಯ ಪ್ರಕಾರ ಹಿಜಾಬ್ ಧಾರ್ಮಿಕ ಆಚರಣೆಯಲ್ಲ.

ಪ್ರಶ್ನೆ 2: ಆರ್ಟಿಕಲ್ 19(1) ರ ಅಡಿ ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯೇ ಇದರ ಅಡಿಯಲ್ಲಿ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತಾ.?

ಉತ್ತರ: ಸಿಡಿಸಿ ವಸ್ತ್ರ ಸಂಹಿತೆ ಆದೇಶ ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಲ್ಲ. ಸರ್ಕಾರದ ಸಮವಸ್ತ್ರ ಸಂಹಿತೆ ಕಾನೂನು ಬದ್ಧವಾಗಿಯೇ ಇದೆ. ಇದನ್ನು ವಿದ್ಯಾರ್ಥಿಗಳು ಆಕ್ಷೇಪ ಮಾಡಬಾರದು.

ಪ್ರಶ್ನೆ 3: ಸರ್ಕಾರದ ಫೆ. 5ರ ಆದೇಶ ಆರ್ಟಿಕಲ್ 14 ಮತ್ತು 15ರ ಉಲ್ಲಂಘನೆಯೇ?

ಉತ್ತರ: ಸರ್ಕಾರ ಫೆ.5 ರ ಆದೇಶ ಕಾನೂನು ಬದ್ದವಾಗಿಯೇ ಇದೆ. ಸಂವಿಧಾನದಲ್ಲಿ ಸರ್ಕಾರಕ್ಕೆ ಈ ನಿರ್ಧಾರ ತೆಗೆದುಕೊಳ್ಳಲು ಅವಕಾಶವಿದೆ.

ಪ್ರಶ್ನೆ 4: ಉಡುಪಿ ಕಾಲೇಜಿನ ವಿರುದ್ದ ಶಿಸ್ತು ಕ್ರಮಕ್ಕೆ ಆದೇಶ ಮಾಡಬೇಕೇ?

ಉತ್ತರ: ಉಡುಪಿ ಕಾಲೇಜಿನ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವ ವಿಚಾರಕ್ಕೆ ಸಂಬಂಧಿಸಿದ ಈ ಅರ್ಜಿಗಳು ಇಲ್ಲಿ ಉರ್ಜಿತವಾಗುವುದಿಲ್ಲ.

ಇದನ್ನೂ ಓದಿ:  Hijab Judgement: ಹಿಜಾಬ್ ಧರಿಸೋದು ಇಸ್ಲಾಂನ ಅತ್ಯಗತ್ಯ ಭಾಗ ಅಲ್ಲ, ಸರ್ಕಾರದ ಆದೇಶ ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್

ಸಮವಸ್ತ್ರದ ಜತೆ ಹಿಜಾಬ್ಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಲಾಗಿತ್ತು

ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್​ ನಿರ್ಬಂಧಿಸಿರುವ ಕ್ರಮ ಹಾಗೂ ಈ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ 11 ದಿನಗಳ ವಿಚಾರಣೆಯನ್ನು ಪೂರ್ಣಗೊಳಿಸಿದ್ದ ಮುಖ್ಯ ನ್ಯಾಯಮೂರ್ತಿ ರಿತುರಾಜ್​ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್, ನ್ಯಾ.ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಕಾಯ್ದಿರಿಸಿತ್ತು.

ಏನಿದು ಹಿಜಾಬ್ಪ್ರಕರಣ?

ಉಡುಪಿಯ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ಹಿಜಾಬ್​ ನಿರ್ಬಂಧಿಸುವುದನ್ನು ಪ್ರಶ್ನಿಸಿ ಕಾಲೇಜಿನ ಐವರು ವಿದ್ಯಾರ್ಥಿನಿಯರು, ಸಮವಸ್ತ್ರದ ಜೊತೆ ಹಿಜಾಬ್​ ಧರಿಸಿ ತರಗತಿಗಳಿಗೆ ಹಾಜರಾಗಲು ಅನುಮತಿ ನೀಡುವಂತೆ ಕೋರಿ ಕುಂದಾಪುರದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಅರ್ಜಿಗಳನ್ನು ಸಲ್ಲಿಸಿದ್ರು. ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್​ ನಿರ್ಬಂಧಿಸಿ ರಾಜ್ಯ ಸರ್ಕಾರ ಫೆ.5ರಂದು ಹೊರಡಿಸಿದ್ದ ಆದೇಶವನ್ನೂ ಅರ್ಜಿಗಳಲ್ಲಿ ಪ್ರಶ್ನಿಸಲಾಗಿತ್ತು.

ಇದನ್ನೂ ಓದಿ: Hijab Row: ನಾವು ಸುಪ್ರೀಂಕೋರ್ಟಿಗೆ ಹೋಗುತ್ತೇವೆ: CM Ibrahim ಹೇಳಿಕೆ

ಮಧ್ಯಂತರ ಆದೇಶ ನೀಡಿದ್ದ ಕೋರ್ಟ್

ಈ ಹಿಂದೆ ಹೈಕೋರ್ಟ್‌ ತ್ರಿದಸ್ಯ ಪೀಠವು ಮೌಖಿಕ ಸಂದೇಶವನ್ನು ನೀಡಿದ್ದು, ಅಂತಿಮ ತೀರ್ಪಿನ ವರೆಗೆ ಶಾಲೆಗೆ ವಿದ್ಯಾರ್ಥಿಗಳು ಯಾವುದೇ ಧರ್ಮದ ಗುರುತುಗಳನ್ನು ಬಳಸುವಂತಿಲ್ಲ ಎಂದು ಮಧ್ಯಂತರ ಆದೇಶ ನೀಡಿತ್ತು. ಆದರೂ ಸಹ ವಿದ್ಯಾರ್ಥಿಗಳು ಹಿಜಾಬ್ ಹಾಕಿಕೊಂಡೇ ಕಾಲೇಜಿಗಳಿಗೆ ಆಗಮಿಸಿದ್ದಾರೆ. ಅಲ್ಲದೇ ಹಿಜಾಬ್‌ಗೆ ಅವಕಾಶ ನೀಡಬೇಕೆಂದು ಕಾಲೇಜುಗಳ ಮುಂದೆ ಪ್ರತಿಭಟನೆಗಳು ನಡೆದಿದ್ದವು.
Published by:Mahmadrafik K
First published: