Hijab ಧರಿಸಿ​ ಬಂದ್ರೆ ದ್ವಿತೀಯ ಪಿಯು ಪರೀಕ್ಷೆ ನೋ ಎಂಟ್ರಿ: ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ

ಆಡಳಿತ ಮಂಡಳಿ ಸಮವಸ್ತ್ರ ನಿಗದಿಪಡಿಸದೇ ಇದ್ದಲ್ಲಿ ಸಮಾನತೆ, ಐಕ್ಯತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ಬರದಂತೆ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ   ಉಡುಪುಗಳನ್ನು ಧರಿಸುವಂತೆ ಪ್ರವೇಶ ಪತ್ರದೊಂದಿಗೆ ಪರೀಕ್ಷೆಗೆ ಹಾಜರಾಗುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚನೆಯಲ್ಲಿ ತಿಳಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಏಪ್ರಿಲ್ 22 ರಿಂದ 18ರವರೆಗೆ ನಡೆಯಲಿರುವ ದ್ವಿತೀಯ ಪಿಯೂಸಿ ಪರೀಕ್ಷೆಗೆ (2nd PU Exam) ಹಿಜಾಬ್ ಧರಿಸಿ ಬಂದರೆ  ಪರೀಕ್ಷೆ ಬರೆಯಲು ಅವಕಾಶ ಒದಗಿಸುವುದಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸ್ಪಷ್ಟನೆ ನೀಡಿದೆ. ಈಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ (Hijab Ban) ಬಂದ್ರೆ ದ್ವಿತೀಯ ಪಿಯುಸಿ ಪರೀಕ್ಷೆಗೆ ನೋ ಎಂಟ್ರಿ ಎಂದು ಖಚಿತಪಡಿಸಿದೆ. ಈಮೂಲಕ SSLC ಪರೀಕ್ಷೆ ಮಾದರಿಯಲ್ಲೇ ದ್ವಿತೀಯ ಪಿಯು ಪರೀಕ್ಷೆಯನ್ನು (Exam) ನಡೆಸುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಪರೀಕ್ಷೆಗೂ ಕೆಲವೇ ದಿನಗಳ ಮುನ್ನ ಖಚಿತಪಡಿಸಿದೆ.

    ಸಮವಸ್ತ್ರ ಇರುವ ಕಾಲೇಜುಗಳಲ್ಲಿ ಪಾಲನೆ ಕಡ್ಡಾಯ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಕಟಣೆಯಲ್ಲಿ ಸ್ಪಷ್ಟನೆ ನೀಡಲಾಗಿದೆ.  ಕಾಲೇಜು ಅಭಿವೃದ್ಧಿ ಸಮಿತಿ (CDC) ಅಥವಾ ಆಡಳಿತ ಮಂಡಳಿಯ ಮೇಲ್ವಿಚಾರಣ ಸಮಿತಿ ನಿರ್ಧರಿಸಿರುವ ಸಮವಸ್ತ್ರ ಪಾಲಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.

    ನಿಯಮ 1995ರ ನಿಯಮ 11ರಲ್ಲಿ ಪ್ರದತ್ತವಾಗಿರುವ ಅಧಿಕಾರದನ್ವಯ ಸಮವಸ್ತ್ರ ಜಾರಿಗೊಳಿಸಲಾಗಿದೆ.  ಆಡಳಿತ ಮಂಡಳಿ ಸಮವಸ್ತ್ರ ನಿಗದಿಪಡಿಸದೇ ಇದ್ದಲ್ಲಿ ಸಮಾನತೆ, ಐಕ್ಯತೆ ಮತ್ತು ಸಾರ್ವಜನಿಕ ಸುವ್ಯವಸ್ಥಿತ ಭಂಗ ಬರದಂತೆ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ   ಉಡುಪುಗಳನ್ನು ಧರಿಸುವಂತೆ ಪ್ರವೇಶ ಪತ್ರದೊಂದಿಗೆ ಪರೀಕ್ಷೆಗೆ ಹಾಜರಾಗುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚನೆಯಲ್ಲಿ ತಿಳಿಸಿದೆ.

    Hijab ಧರಿಸಿ SSLC ಪರೀಕ್ಷೆ ಬರೆಯಲು ಅವಕಾಶ; ಏಳು ಶಿಕ್ಷಕರ ಅಮಾನತು
    ಎಸ್​ಎಸ್​​ಎಲ್​ಸಿ ಪರೀಕ್ಷೆಯಲ್ಲಿ (SSLC Exam) ವಿದ್ಯಾರ್ಥಿಗಳು ವಸ್ತ್ರ ಸಂಹಿತೆ ನೀತಿ ಪಾಲಿಸುವುದು ಕಡ್ಡಾಯ ಎಂದು ಪರೀಕ್ಷೆಗೆ ಮುನ್ನವೇ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿತು. ಈ ನಡುವೆಯೂ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರದಲ್ಲಿ ಹಿಜಾಬ್ (Hijab)​ ಧರಿಸಲು ಶಿಕ್ಷಕರು ಅನುಮತಿ ನೀಡಿದ ಘಟನೆ ಗದಗದಲ್ಲಿ ನಡೆದಿದೆ.

    ಇದನ್ನೂ ಓದಿ:Muslim Cabs: ಹಿಜಾಬ್, ಹಲಾಲ್ ಆಯ್ತು.. ಈಗ ಮುಸ್ಲಿಮರ ವಾಹನ ಬಾಡಿಗೆಗೆ ಪಡೆಯದಂತೆ ಕರೆ!

    ಈ ಪ್ರಕರಣ ಸಂಬಂಧ ಕ್ಷೇತ್ರ ಶಿಕ್ಷಣಾಧಿಕಾರಿಗಳ ವರದಿ ಹಿನ್ನೆಲೆ ಐವರು ಮೇಲ್ಚಿಚಾರಕರು, ಇಬ್ಬರು ಅಧೀಕ್ಷಕರು ಸೇರಿ 7 ಜನರ ಅಮಾನತು ಮಾಡಲಾಗಿದೆ.

    Al-Qaeda ಹೊಗಳಿಕೆ- ಯಾವುದೇ ತನಿಖೆಗೆ ನಾವು ಸಿದ್ಧ ಎಂದ ಹುಸೇನ್ ಖಾನ್

    ಹಿಜಾಬ್‌ ವಿವಾದದ (Hijab Controversy) ಪ್ರೊಟೆಸ್ಟ್ (Protest) ನಡೆಯುವ ವೇಳೆ ಮಂಡ್ಯದ (Mandya) ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು (Muslim Student) ಭಾರೀ ಸುದ್ದಿ ಮಾಡಿದ್ದಳು. ಆಕೆಯ ಹೆಸರು ಮುಸ್ಕಾನ್ (Muskan). ಇದೀಗ ಇದೇ ವಿದ್ಯಾರ್ಥಿನಿ ಹೆಸರು ಮತ್ತೆ ಮುನ್ನೆಲೆಗೆ ಬಂದಿದೆ.

    ಅದು ಜಗತ್ತಿನ ಮೋಸ್ಟ್ ವಾಟೆಂಡ್‌ (Most Wanted) ಉಗ್ರ ಸಂಘಟನೆ ಆಲ್ ಖೈದಾದ (AL-Qaeda) ಉಗ್ರನೊಬ್ಬ ಈ ವಿದ್ಯಾರ್ಥಿನಿ ಮುಸ್ಕಾನ್‌ಳನ್ನು ಹಾಡಿ ಹೊಗಳಿದ್ದಾನೆ. ಅಲ್ ಖೈದಾ ಮುಖ್ಯಸ್ಥ ಅಮನ್-ಅಲ್-ಜವಾಹಿರಿಯು ಮುಸ್ಕಾನ್ ಬಗ್ಗೆ ಮೆಚ್ಚುಗೆ ಮಾತವನ್ನಾಡಿದ್ದಾನೆ. ಇದೀಗ ಮತ್ತೆ ಚರ್ಚೆಗೆ ಗ್ರಾಸವಾಗಿದ್ದು, ಅಲ್ ಖೈದಾ ಉಗ್ರನ ಹೇಳಿಕೆಗೆ ವಿದ್ಯಾರ್ಥಿನಿ ಮುಸ್ಕಾನ್ ತಂದೆ (Father) ಹುಸೇನ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ.

    ವಿದ್ಯಾರ್ಥಿನಿ ತಂದೆ ಪ್ರತಿಕ್ರಿಯೆ
    ಇನ್ನು ಉಗ್ರನ ಹೇಳಿಕೆ ಬಗ್ಗೆ ವಿದ್ಯಾರ್ಥಿನಿ ಹುಸೇನ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ. ಅಲ್‌ಖೈದಾ ಏನು ಅಂತ ನಮಗೆ ಗೊತ್ತಿಲ್ಲ, ಮಾಧ್ಯಮದ ಮೂಲಕವೇ ನನಗೂ ಗೊತ್ತಾಗಿದ್ದು. ಈ ರೀತಿ ಮಾಡುತ್ತಿರುವುದು ತಪ್ಪು. ನಮ್ಮ ನಮ್ಮಲ್ಲಿ ತಂದು ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಮುಸ್ಕಾನ್‌ ತಂದೆ ಹುಸೇನ್‌ ಖಾನ್‌ ಹೇಳಿದ್ದಾರೆ.

    ಇದನ್ನೂ ಓದಿ: HDK, ಸಿದ್ದರಾಮಯ್ಯ ಸೇರಿ 61 ಮಂದಿಗೆ ಜೀವ ಬೆದರಿಕೆ ಪತ್ರ! ಅಪರಿಚಿತರು ಬರೆದ ಲೆಟರ್‌ನಲ್ಲಿ ಏನಿದೆ ಗೊತ್ತಾ?

    "ಅವರು ಯಾರು ಅಂತ ಗೊತ್ತಿಲ್ಲ"
    ನಮಗೆ ಅವರು ಯಾರು ಅಂತಾನೇ ಗೊತ್ತಿಲ್ಲ. ನಾವು ಅವರ ಬಗ್ಗೆ ಏನು ಹೇಳೋದು? ಇದೇ ಫಸ್ಟ್ ಟೈಮ್ ನಾವು ನೋಡಿದ್ದು ಅವರನ್ನು. ಅವರು ಏನೋ ಏನೋ ಮಾತನಾಡ್ತಾರೆ. ನಾವು ಮಂಡ್ಯದಲ್ಲಿ ಹಿಂದೂ ಮುಸ್ಲಿಮರು ಅಣ್ಣ-ತಮ್ಮಂದಿರ ರೀತಿ ಪ್ರೀತಿಯಿಂದ ಇದ್ದೇವೆ. ಈ ವಿಚಾರವಾಗಿ ನಮಗೆ ತೊಂದರೆಯಾಗುತ್ತಿದೆ ಎಂದು ಹೇಳುತ್ತಿದ್ದೇನೆ ಎಂದಿದ್ದಾರೆ.
    Published by:guruganesh bhat
    First published: