• Home
  • »
  • News
  • »
  • state
  • »
  • Hijab Controversy: ಎಲ್ಲವೂ ಶಾಂತವಾಗಿದೆ, ದಯವಿಟ್ಟು ನನ್ನನ್ನ ಕೇಳಬೇಡಿ ಅಂದ್ರು ಸಚಿವ ಕೆ.ಎಸ್.ಈಶ್ವರಪ್ಪ

Hijab Controversy: ಎಲ್ಲವೂ ಶಾಂತವಾಗಿದೆ, ದಯವಿಟ್ಟು ನನ್ನನ್ನ ಕೇಳಬೇಡಿ ಅಂದ್ರು ಸಚಿವ ಕೆ.ಎಸ್.ಈಶ್ವರಪ್ಪ

ವಿದ್ಯಾರ್ಥಿನಿಯ ಪ್ರತಿಭಟನೆ (ಫೈಲ್​​ ಫೋಟೋ)

ವಿದ್ಯಾರ್ಥಿನಿಯ ಪ್ರತಿಭಟನೆ (ಫೈಲ್​​ ಫೋಟೋ)

ನಿನ್ನೆಯಷ್ಟೇ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai), ಈ ಕುರಿತು ಹೇಳಿಕೆ ನೀಡದಂತೆ ಶಾಸಕರು, ಸಚಿವರಲ್ಲಿ ಮನವಿ ಮಾಡಿಕೊಂಡಿದ್ದರು. ಆದ್ರೆ ಇಂದು ಸಹ ಸಚಿವರ ಹಿಜಾಬ್ ಕುರಿತ ಹೇಳಿಕೆಯನ್ನು ನೀಡಿದ್ದಾರೆ. ಯಾರು ಏನು ಹೇಳಿದ್ರೂ ಎಂಬುದರ ಕುರಿತು ಮಾಹಿತಿ ಇಲ್ಲಿದೆ.

  • Share this:

ರಾಜ್ಯದಲ್ಲಿಯ ಹಿಜಾಬ್ ವಿವಾದ (Hijab Controversy) ಸುಪ್ರೀಂಕೋರ್ಟ್ (Supreme Court) ಮೆಟ್ಟಿಲೇರಿದೆ. ಇಂದು ಅರ್ಜಿಯ ವಿಚಾರಣೆ ನಡೆಸಿದ ಸುಪ್ರಿಂಕೋರ್ಟ್, ಹೈಕೋರ್ಟ್ (Karnataka Highcourt) ಆದೇಶಕ್ಕೆ ತಡೆ ನೀಡಲು ನಿರಾಕರಣೆ ಮಾಡಿತು. ಇತ್ತ ನಿನ್ನೆ ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್ ಮೌಖಿಕ ಆದೇಶ ನೀಡಿತ್ತು. ಇಂದು ಪೀಠದಿಂದ ಮಧ್ಯಂತರ ಆದೇಶ ಸಹ ಪ್ರಕಟವಾಗಿದೆ. ಅದ್ಯಾಗಿಯೂ ರಾಜಕೀಯ ಮುಖಂಡರು ಹಿಜಾಬ್ (Hijab) ಮತ್ತು ಕೇಸರಿ ಶಾಲು (Saffron Shawl) ವಿವಾದದ ಕುರಿತು ತಮ್ಮ ಅಭಿಪ್ರಾಯಗಳನ್ನು ನೀಡುತ್ತಿದ್ದಾರೆ. ನಿನ್ನೆಯಷ್ಟೇ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai), ಈ ಕುರಿತು ಹೇಳಿಕೆ ನೀಡದಂತೆ ಶಾಸಕರು, ಸಚಿವರಲ್ಲಿ ಮನವಿ ಮಾಡಿಕೊಂಡಿದ್ದರು. ಆದ್ರೆ ಇಂದು ಸಹ ಸಚಿವರ ಹಿಜಾಬ್ ಕುರಿತ ಹೇಳಿಕೆಯನ್ನು ನೀಡಿದ್ದಾರೆ. ಯಾರು ಏನು ಹೇಳಿದ್ರೂ ಎಂಬುದರ ಕುರಿತು ಮಾಹಿತಿ ಇಲ್ಲಿದೆ.


ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿಕೆ


ಹಿಜಾಬ್ ವಿಚಾರವಾಗಿ ಸದ್ಯಕ್ಕೆ ರಿಲೀಫ್ ಸಿಕ್ಕಿದೆ.  ಹೈಕೋರ್ಟ್ ತೀರ್ಪಿನ ವಿರುದ್ದ ಸುಪ್ರೀಂಗೆ ಈವರೆಗೆ ಕರ್ನಾಟಕದವರು ಹೋಗಿಲ್ಲ. ಮುಂದಿನ ವಾರದಿಂದ ಎಲ್ಲಾ ಶಿಕ್ಷಣ ಸಂಸ್ಥೆಗಳು ಆರಂಭವಾಗುತ್ತವೆ. ಸೋಮವಾರ ಸಂಜೆ ಸಿಎಂ ನೇತೃತ್ವದಲ್ಲಿ ಸಭೆ ಇದೆ. ಸಭೆಯ ನಂತರ ಎಲ್ಲವೂ ನಿರ್ಧಾರವಾಗಲಿದೆ. ಕಾಲೇಜು ಹೆಣ್ಣು ಮಕ್ಕಳು ಖ್ಯಾತ ವಕೀಲರಿಂದ ವಾದ ಮಾಡಿಸ್ತಾರೆ. ಇದರ ಹಿಂದೆ ಕಾಣದ ಕೈಗಳ ದೊಡ್ಡವರ ಷಡ್ಯಂತ್ರ ಇದೆ ಎಂದು ಆರೋಪಿಸಿದರು.


ಇದನ್ನೂ ಓದಿ:  Hijab Controversy: ಮೌಖಿಕ ಆದೇಶಕ್ಕೆ ತಡೆ ನೀಡಲು ಸುಪ್ರೀಂ ನಿರಾಕರಣೆ; ಹೈಕೋರ್ಟ್ ನಿಂದ ಮಧ್ಯಂತರ ಆದೇಶ ಪ್ರಕಟ


ಕೇರಳದಲ್ಲಿ ಹಿಜಾಬ್ ದೊಡ್ಡಮಟ್ಟದಲ್ಲಿ ವಿವಾದ ಅಗ್ಲಿಲ್ಲ. ಇವರ ಉದ್ದೇಶ ಬಿಜೆಪಿ ಸರ್ಕಾರಕ್ಕೆ ಕೆಟ್ಟ ಹೆಸರು ಬರುವಂತೆ ಮಾಡೋದಾಗಿದೆ. ಹಿಜಾಬ್ ವಿಚಾರ ಕೋರ್ಟ್ ಗೆ ಬಂದಿದೆ. ಕೋರ್ಟ್ ಆರ್ಡರ್ ಬರೋಕು ಮುನ್ನ ಶಾಲೆಗಳಲ್ಲಿ ಗಲಾಟೆ ಆಗಿದೆ. ಮಕ್ಕಳು ರಾಜಕೀಯದ ಶಕ್ತಿ ಉಪಯೋಗಿಸಬಾರದು ಅಂತ ಮೂರು ದಿನ ಶಾಲೆ ಕ್ಲೋಸ್ ಮಾಡಿದ್ದೇವೆ.


ಸರ್ಕಾರದ ಸೂಚನೆಯಂತೆ ಶಾಲೆಗಳು ಆಗಬೇಕು. ಸಮವಸ್ತ್ರ ಧರಿಸಬೇಕು ಧರ್ಮ ಸೂಚಿಸುವ ವಸ್ತ್ರ ಹಾಕುವಂತಿಲ್ಲ ಅಂದಿದ್ದಾರೆ. ಸೋಮವಾರ ಹೈ ಸ್ಕೂಲ್ ಶುರುವಾಗಲಿದೆ. ಕಾಲೇಜು ಪ್ರಾರಂಭಕ್ಕೂ ಸಿಎಂ ನೇತೃತ್ವದಲ್ಲಿ ಸಭೆ ಮಾಡಿ ತೀರ್ಮಾನ ನಡೆಸಲಾಗುವುದು ಎಂದು ಹೇಳಿದರು.


ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ


ಕೆಲ ಸಂಘಟನೆಗಳು ಕೆಲಸ ಮಾಡಿವೆ‌. ಎಳೆ ಮಕ್ಕಳ ಮೇಲೆ ವಿಷ ಬೀಜ ಬಿತ್ತಿ ಅವರನ್ನು ಕೆರಳಿಸುವ ಕೆಲಸ ಆಗಿದೆ. ಇದರ ಬಗ್ಗೆ ಪೊಲೀಸರು ಸಂಪೂರ್ಣ ಮಾಹಿತಿ ಕಲೆ ಹಾಕ್ತಿದ್ದಾರೆ. ವಿಚಾರಣೆ ಮುಗಿದ ನಂತರ ಅವರ ವಿರುದ್ದ ಸೂಕ್ತ ಕ್ರಮ ಕೈಗೊಳ್ತೇವೆ‌. ಪ್ರಕರಣ ವಿಚಾರಣೆ ಹಂತದಲ್ಲಿ ಇರೋದ್ರಿಂದ ನಾನು ಗೃಹ ಸಚಿವನಾಗಿ ಹೆಚ್ಚು ಮಾತಾಡಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.


ಅಂತಿಮವಾಗಿ ಈ ಕೋಮು ಶಕ್ತಿ ಗಳ ವಿರುದ್ಧ ಕ್ರಮ ಜರುಗಿಸುತ್ತೇವೆ. ಸೋಮವಾರ 10ನೇ ತರಗತಿ ಶಾಲೆ ಆರಂಭವಾಗ್ತಿದೆ. ಆ ಮೇಲೆ ಒಂದೆರಡು ದಿನಗಳಲ್ಲಿ ಎಲ್ಲಾ ತರಗತಿಗಳನ್ನು ಆರಂಭಿಸುತ್ತೇವೆ. ಮಕ್ಕಳು ಎಲ್ಲವನ್ನೂ ಮರೆತು ಶಾಲೆಗೆ ಬರಬೇಕು. ಕೋರ್ಟ್ ಆದೇಶದಂತೆ ಮಕ್ಕಳು ಶಾಲೆಗೆ ಬಂದು, ಶಿಕ್ಷಣ ಮುಂದುವರಿಸಬೇಕು.  ಇವತ್ತು ಮುಖ್ಯಮಂತ್ರಿ ಗಳು ವೀಡಿಯೋ ಕಾನ್ಪೆರೆನ್ಸ್ ಮಾಡ್ತಿದ್ದಾರೆ. ಸಭೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಬಗ್ಗೆ ಚರ್ಚೆ ಮಾಡ್ತೀವಿ ಎಂದರು.


ಇದನ್ನೂ ಓದಿ:  Hijab Controversy: ಹಿಜಾಬ್ ವಿವಾದ, ಪ್ರಿಯಾಂಕಾ ಗಾಂಧಿ ಟ್ವೀಟ್ ಬಗ್ಗೆ ಸಂಸದೆ Sumalatha Ambareesh ಹೇಳಿದ್ದೇನು?


ಪ್ರತಿಕ್ರಿಯೆ ನೀಡಲು ಈಶ್ವರಪ್ಪ ನಿರಾಕರಣೆ


ರಾಷ್ಟ್ರ ಧ್ವಜದ ವಿಚಾರದಲ್ಲಿ ನಾನು ‌ಮಾತನಾಡಲ್ಲ. ಈಗ ಎಲ್ಲವೂ ಶಾಂತವಾಗಿದೆ. ದಯವಿಟ್ಟು ಅದರ ಬಗ್ಗೆ ಕೇಳಬೇಡಿ. ಸಿದ್ದರಾಮಯ್ಯನವರ ನಾಲಾಯಕ್ ಹೇಳಿಕೆ ಬಗ್ಗೆ ಆಮೇಲೆ ಮಾತನಾಡ್ತೇನೆ ಎಂದರು. ಸದ್ಯ ರಾಜ್ಯ ಶಾಂತಿಯಾಗಿದೆ. ಹಿಜಾಬ್ ವಿಚಾರವಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.


ಸಮಯ ನೋಡಿ ಕಾಲೇಜು ಪ್ರಾರಂಭ


ಸಮಯ ನೋಡಿ ಹತ್ತನೇ ತರಗತಿವರೆಗೆ ಪ್ರಾರಂಭ ಮಾಡುತ್ತೇವೆ. ನಂತರ ಕಾಲೇಜು ಪ್ರಾರಂಭದ ನಿರ್ಧಾರ ಮಾಡ್ತೇವೆ. ಸ್ಥಳೀಯ ಪರಿಸ್ಥಿತಿ ನೋಡಿ, ಜಿಲ್ಲಾಧಿಕಾರಿ – ಎಸ್ ಪಿ ಜೊತೆಗೆ ಚರ್ಚೆ ಮಾಡಿ ನಿರ್ಧಾರ ಮಾಡ್ತೇವೆ. ಇದು ಡಿಜಿಟಲ್ ಯುಗ, ಕಲಿಕೆಗೂ ಬೇಕಾಗುತ್ತೆ. ಇದರಿಂದ ಸಕಾರಾತ್ಮಕವೂ ಇದೇ, ನಕಾರಾತ್ಮಕವೂ ಇದೆ.  ಕೆಲವು ಚಟುವಟಿಕೆಗಳಿಗೆ ನಿರ್ಬಂಧ ತರುವುದನ್ನ ಮಾಡ್ತೇವೆ ಎಂದು ರಾಮನಗರದ ಜಿಲ್ಲಾ ಪಂಚಾಯತ್ ನಲ್ಲಿ ಸಚಿವ ಅಶ್ವಥ್ ನಾರಾಯಣ ಹೇಳಿದರು.

Published by:Mahmadrafik K
First published: