Hijab Controversy: ಮಹಿಳೆಯರು ಧರಿಸುವ ಬಟ್ಟೆ ಅತ್ಯಾಚಾರಕ್ಕೆ ಪ್ರಚೋದನೆ ನೀಡುತ್ತೆ; ವಿವಾದಾತ್ಮಕ ಹೇಳಿಕೆ ನೀಡಿದ ರೇಣುಕಾಚಾರ್ಯ

ಬಿಜೆಪಿ ರಾಜಕೀಯವನ್ನು ಕೇಸರೀಕರಣ ಮಾಡುತ್ತದೆ. ಶಿಕ್ಷಣ ಕ್ಷೇತ್ರವನ್ನು ಕೇಸರಿಕರಣ ಮಾಡುತ್ತಿಲ್ಲ' ಎಂದು ಎಂ.ಪಿ. ರೇಣುಕಾಚಾರ್ಯ ಅವರು ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಎಂ.ಪಿ.ರೇಣುಕಾಚಾರ್ಯ

ಎಂ.ಪಿ.ರೇಣುಕಾಚಾರ್ಯ

  • Share this:
ನವದೆಹಲಿ, (ಫೆ. 9): ವಿದ್ಯಾರ್ಥಿಗಳಿಗೆ ಹಿಜಾಬ್ (Hijab) ಧರಿಸಲು ಅವಕಾಶ ನಿರಾಕರಿಸಲಾಗುತ್ತಿದೆ. ವಿದ್ಯಾರ್ಥಿನಿಯರ ಹಕ್ಕಿಗೆ ಧಕ್ಕೆ ತರಲಾಗುತ್ತಿದೆ ಎಂಬ ವಿಚಾರ ರಾಜ್ಯದಲ್ಲಿ ಹೊತ್ತಿ ಉರಿಯುತ್ತಿರುವಾಗಲೇ 'ವಿದ್ಯಾರ್ಥಿಗಳು ಮೈತುಂಬಾ ಬಟ್ಟೆ ಹಾಕಿಕೊಳ್ಳಬೇಕು. ಮಹಿಳೆಯರು(Women) ತೊಡುವ ಬಟ್ಟೆ ನೋಡಿ ಪುರುಷರು ಉದ್ವೇಗಕ್ಕೆ ಒಳಗಾಗುತ್ತಾರೆ. ಮಹಿಳೆಯರು ಧರಿಸುವ ಬಟ್ಟೆಯಿಂದ ಪುರುಷರು ಉದ್ವೇಗ‌ಕ್ಕೆ ಒಳಗಾಗಿ ಅತ್ಯಾಚಾರ(Rape) ಹೆಚ್ಚಾಗುತ್ತಿವೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯೂ ಆದ ಶಾಸಕ ಎಂ.ಪಿ. ರೇಣುಕಾಚಾರ್ಯ (MP Renukacharaya) ಅವರು ವಿವಾದಾತ್ಮಕ ಹೇಳಿಕೆ  ನೀಡಿದ್ದಾರೆ.

ರೇಣುಕಾಚಾರ್ಯ ಎಡವಟ್ಟು

ಕರ್ನಾಟಕದ ಹಿಜಾಬ್ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಬಿಕಿನಿ ಇರಲಿ, ಘೂಂಗಟ್ ಇರಲಿ, ಜೀನ್ಸ್ ಅಥವಾ ಹಿಜಾಬ್ ಇರಲಿ, ಯಾವುದೇ ಆಗಲಿ ಅದು ಧರಿಸುವ ಮಹಿಳೆಯ ಹಕ್ಕು. ಭಾರತದ ಸಂವಿಧಾನ ಈ ಹಕ್ಕನ್ನು‌ ನೀಡಿದೆ. ಮಹಿಳೆಯರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಿ. #ಲಡ್ಕಿಹೂ, ಲಡ್ ಸಕ್ತಿ ಹೂ..' ಎಂದು ಟ್ವೀಟ್ ಮಾಡಿದ್ದರು.

ಪ್ರಿಯಾಂಕಾ ಗಾಂಧಿ ಟ್ವೀಟ್

‌ ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ ಎಂ.ಪಿ.‌ ರೇಣುಕಾಚಾರ್ಯ ಅವರು, 'ವಿದ್ಯಾರ್ಥಿಗಳು ಮೈತುಂಬಾ ಬಟ್ಟೆ ಹಾಕಿಕೊಳ್ಳಬೇಕು. ಮಹಿಳೆಯರ ಬಟ್ಟೆ ನೋಡಿ ಪುರುಷರು ಉದ್ವೇಗಕ್ಕೆ ಒಳಗಾಗುತ್ತಾರೆ. ಇದು ಒಳ್ಳೆಯದಲ್ಲ. ಅತ್ಯಾಚಾರ ಹೆಚ್ಚಾಗಲು ಮಹಿಳೆಯರ ಧಿರಿಸೇ ಕಾರಣ. ಮಹಿಳೆಯರು ಧರಿಸುವ ಬಟ್ಟೆಯು ಅತ್ಯಾಚಾರಕ್ಕೆ ಪ್ರಚೋದನೆ ನೀಡುತ್ತದೆ' ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಬಿಜೆಪಿಯಿಂದ ರಾಜಕೀಯ ಮಾತ್ರ ಕೇಸರೀಕರಣ, ಶಿಕ್ಷಣವಲ್ಲ

ಪ್ರಿಯಾಂಕಾ ಗಾಂಧಿ ಬಿಕಿನಿ ಪದ ಬಳಸಬಾರದಿತ್ತು. ಸಮವಸ್ತ್ರ ವಿಷಯದ ನಡುವೆ ಬಿಕಿನಿ ಪದ ಬಳಕೆ ಮಾಡಿದ್ದು ತಪ್ಪು. ಇದಕ್ಕೆ ಸಂಬಂಧಿಸಿದಂತೆ ಕೂಡಲೇ ಪ್ರಿಯಾಂಕಾ ಗಾಂಧಿ ಅವರು ಕ್ಷಮೆ ಕೇಳಬೇಕು. ಅವರಿಗೆ ದೇಶದ ಧರ್ಮ, ಸಂಸ್ಕೃತಿ ಮತ್ತು ಪರಂಪರೆಗಳ ಬಗ್ಗೆ ಗೊತ್ತಿಲ್ಲ. ನಮ್ಮದು ಕೇಸರಿ ಪರಂಪರೆ ಎಂದು ಹೇಳಿದರಲ್ಲದೆ. ಬಿಜೆಪಿ ರಾಜಕೀಯವನ್ನು ಕೇಸರೀಕರಣ ಮಾಡುತ್ತದೆ. ಶಿಕ್ಷಣ ಕ್ಷೇತ್ರವನ್ನು ಕೇಸರಿಕರಣ ಮಾಡುತ್ತಿಲ್ಲ' ಎಂದು ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದರು.

ಇದನ್ನೂ ಓದಿ: Hijab Controversy: ಹೈಕೋರ್ಟ್​ನಲ್ಲಿ ಹಿಜಾಬ್ ಪ್ರಕರಣ ವಿಚಾರಣೆ, ಇಂದೇ ತೀರ್ಪು ಪ್ರಕಟ ಸಾಧ್ಯತೆ

ರೇಣುಕಾಚಾರ್ಯ ಕ್ಷಮೆಯಾಚನೆ

ರೇಣುಕಾಚಾರ್ಯ ಅವರ ಹೇಳಿಕೆ ನೀಡಿದ ಕೆಲವೇ ಕ್ಷಣಗಳಲ್ಲಿ ರಾಜ್ಯಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಯಿತು. ಆದುದರಿಂದ ಸ್ಪಷ್ಟೀಕರಣ ನೀಡಿದ ರೇಣುಕಾಚಾರ್ಯ ಅವರು 'ನಾನು ಪ್ರಿಯಾಂಕಾ ಗಾಂಧಿ ಅವರ ಹೇಳಿಕೆ ವಿಚಾರವಾಗಿ ಮಾತನಾಡಿದ್ದೆ. ಡ್ರೆಸ್​ ಕೋಡ್ ಮೂಲಭೂತ ಹಕ್ಕು ಎಂಬುದು ಒಪ್ಪಿಕೊಳ್ಳುವಂತಹ ವಿಚಾರ. ಆದರೆ ಕರ್ನಾಟಕದಲ್ಲಿ ಸೃಷ್ಟಿಯಾಗಿರುವ ಸಂಘರ್ಷದಿಂದ ವಿದ್ಯಾರ್ಥಿನಿಯರು ಶಿಕ್ಷಣದಿಂದ ವಂಚಿತರಾಗುತ್ತಾರೆ. ಹೀಗಾಗಿ ಇಂತಹ ಪ್ರತಿಕ್ರಿಯೆ ನೀಡಬಾರದು ಎಂದು ಹೇಳಿಕೆ ನೀಡಿದ್ದೇನೆ. ತಾಯಿ, ಭುವನೇಶ್ವರಿ ಮಾತೆ, ಭಾರತ ಮಾತೆ‌ ಎಂದು ಗೌರವಿಸುವವರು ನಾವು. ಮಹಿಳೆಯರನ್ನು ಗೌರವದಿಂದ ಕಾಣಬೇಕು. ಮಹಿಳೆಯರು ಮೈತುಂಬ ಬಟ್ಟೆ ಹಾಕಬೇಕು ಎಂದು ಹೇಳಿದ್ದೇನೆ. ನಾನು ಮಹಿಳೆಯರನ್ನು ಅವಮಾನಿಸಿಲ್ಲ. ನನ್ನ ಹೇಳಿಕೆಯಿಂದ ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ' ಎಂದರು.
Published by:Latha CG
First published: