Hijab Row: ಉಡುಪಿಯ MGM ಕಾಲೇಜಿನ PUC ಪ್ರಾಯೋಗಿಕ ಪರೀಕ್ಷೆ ಮುಂದೂಡಿಕೆ; ನಿಲ್ಲದ ಹಿಜಾಬ್ ಗೊಂದಲ

ಕಳೆದ ವಾರ ದೊಡ್ಡಮಟ್ಟದ ಸಂಘರ್ಷಕ್ಕೆ ಸಾಕ್ಷಿಯಾಗಿದ್ದ ಉಡುಪಿ (Udupi) ಎಂಜಿಎಂ ಕಾಲೇಜು (MGM College) ಪಿಯುಸಿ ಪ್ರಾಯೋಗಿಕ ಪರೀಕ್ಷೆ ಮುಂದೂಡಿ ಆದೇಶ ಹೊರಡಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಾಜ್ಯದಲ್ಲಿ ಉಂಟಾಗಿರುವ ಹಿಜಾಬ್ (Hijab) ಗೊಂದಲ ಕಡಿಮೆ ಆಗುತ್ತಿಲ್ಲ. ಹೈಕೋರ್ಟ್ (Karnataka High court) ಮಧ್ಯಂತರ ಆದೇಶದ ನಡುವೆಯೂ ವಿದ್ಯಾರ್ಥಿನಿಯರು (Students) ಹಿಜಾಬ್ ಧರಿಸಿಯೇ ಕಾಲೇಜಿಗೆ ಬರುತ್ತಿದ್ದಾರೆ. ಆದ್ರೆ ಸಿಬ್ಬಂದಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರನ್ನ ಕಾಲೇಜು ಪ್ರವೇಶಿಸದಂತೆ ತಡೆಯುತ್ತಿದ್ದಾರೆ. ಇನ್ನು ಕೆಲವೆಡೆ ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಕೆಲವು ಶಾಲಾ- ಕಾಲೇಜುಗಳಿಗೆ ಮತ್ತೆ ರಜೆ ಘೋಷಿಸಲಾಗಿದೆ. ಇನ್ನು ಕಳೆದ ವಾರ ದೊಡ್ಡಮಟ್ಟದ ಸಂಘರ್ಷಕ್ಕೆ ಸಾಕ್ಷಿಯಾಗಿದ್ದ ಉಡುಪಿ (Udupi) ಎಂಜಿಎಂ ಕಾಲೇಜು (MGM College) ಪಿಯುಸಿ ಪ್ರಾಯೋಗಿಕ ಪರೀಕ್ಷೆ ಮುಂದೂಡಿ ಆದೇಶ ಹೊರಡಿಸಿದೆ. ಉಡುಪಿಯ ಜಿ.ಶಂಕರ್ ಸರ್ಕಾರಿ ಮಹಿಳಾ ಪದವಿ ಕಾಲೇಜಿನಲ್ಲಿಯೂ ಹಿಜಾಬ್ ಗೊಂದಲ ಏರ್ಪಟ್ಟಿದೆ.

ಜಿ ಶಂಕರ್ ಸರ್ಕಾರಿ ಮಹಿಳಾ ಪದವಿ ಕಾಲೇಜಿನ ವಿದ್ಯಾರ್ಥಿನಿಯರು ಆನ್ ಲೈನ್ ಕ್ಲಾಸ್ ಮಾಡುವಂತೆ ಪ್ರಾಂಶುಪಾಲರಿಗೆ ಮನವಿ ಮಾಡಿಕೊಂಡಿದ್ದಾರೆ. ನಮ್ಮ ಕ್ಲಾಸ್ ಮಿಸ್ ಆಗುತ್ತಿದೆ. ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಹೈಕೋರ್ಟ್ ತೀರ್ಪು ನಮ್ಮ ಬರಲಿದೆ ಎಂದು ವಿದ್ಯಾರ್ಥಿನಿ  ವಿಶ್ವಾಸ ವ್ಯಕ್ತಪಡಿಸಿದ್ದಾಳೆ.

ಹಿಜಾಬ್ ಸಹಿತ ತರಗತಿಗೆ ಹಾಜರಾಗಲು ಅನುಮತಿ ನೀಡಲು ಸಾಧ್ಯವಿಲ್ಲ. ಹೈಕೋರ್ಟ್ ಆದೇಶ ಇದೆ ವಿ ಆರ್ ಹೆಲ್ಪ್ ಲೆಸ್ ಎಂದು ಪ್ರಾಂಶುಪಾಲ ಭಾಸ್ಕರ್ ಹೇಳಿದರು. ತದನಂತರ ಆನ್ ಲೈನ್ ತರಗತಿಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ ಹಿನ್ನೆಲೆ ಸುಮಾರು 25 ವಿದ್ಯಾರ್ಥಿನಿಯರು ಮನೆಗೆ ತೆರಳಿದ್ದಾರೆ.

ಇದನ್ನೂ ಓದಿ:  ಕಾಂಗ್ರೆಸ್ ಏನೇ ಮಾಡಿದ್ರೂ KS Eshwarappa ವಿರುದ್ಧ ದೇಶದ್ರೋಹದ ಕೇಸ್ ಹಾಕಲ್ಲ: Araga Jnanendra ಹೇಳಿಕೆ

ವಿದ್ಯಾರ್ಥಿನಿಯರ ಪ್ರತಿಕ್ರಿಯೆ

ಈ ವೇಳೆ ನ್ಯೂಸ್‌ ೧೮ ಕನ್ನಡಕ್ಕೆ ವಿದ್ಯಾರ್ಥಿನಿಯರ ತಮ್ಮ ಪ್ರತಿಕ್ರಿಯೆ ನೀಡಿದರು. ಹೈಕೋರ್ಟ್ ತೀರ್ಪು ವಿಳಂಬ ಮಾಡುತ್ತಿದೆ. ತೀರ್ಪು ವಿಳಂಬ ಆದಷ್ಟು ನಮಗೆ ಕ್ಲಾಸ್ ಮಿಸ್ ಆಗ್ತಿದೆ. ಹೀಗಾಗಿ ಬೇಗ ತೀರ್ಪು ನೀಡಬೇಕು. ನಮ್ಮ ಹಕ್ಕನ್ನ ಉಳಿಸುವ ತೀರ್ಪು ನೀಡುತ್ತೆ. ಸರ್ಕಾರ ಕೂಡ ಶೈಕ್ಷಣಿಕ ಭವಿಷ್ಯ ಉಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಸರಕಾರಿ ಸರಕಾರಿ ಬಾಲಕಿಯರ ಪಿಯು ಕಾಲೇಜ್ ಉಪಾಧ್ಯಕ್ಷ ಯಶ್ ಪಾಲ್ ಸುವರ್ಣ ಹೇಳಿಕೆ

ಸರಕಾರಿ ಪದವಿ ಪೂರ್ವ ಕಾಲೇಜು- ಬಾಲಕಿಯರ ಹೈಸ್ಕೂಲ್ ಆರಂಭವಾಗಿದೆ. ಸರಕಾರದ ಆದೇಶ ಮತ್ತು ಕೋರ್ಟಿನ ಮಧ್ಯಂತರ ತೀರ್ಪನ್ನು ಪಾಲಿಸಲಾಗುತ್ತಿದೆ. ಸಂಸ್ಥೆಯಲ್ಲಿ ಯಾವುದೇ ಸಮಸ್ಯೆ ಮತ್ತು ಗೊಂದಲಗಳಿಲ್ಲ. ಆರು ಮಂದಿ ವಿದ್ಯಾರ್ಥಿನಿಯರು ತರಗತಿಗೆ ಹಾಜರಾಗಿಲ್ಲ. ಇಂದು ಅಥವಾ ನಾಳೆ ಕೋರ್ಟಿನ ತೀರ್ಪನ್ನು ನಿರೀಕ್ಷಿಸಲಾಗಿದೆ ಎಂದು ಸರಕಾರಿ ಬಾಲಕಿಯರ ಪಿಯು ಕಾಲೇಜ್ ಉಪಾಧ್ಯಕ್ಷ ಯಶ್ ಪಾಲ್ ಸುವರ್ಣ ಹೇಳಿಕೆ ನೀಡಿದ್ದಾರೆ.



6 ವಿದ್ಯಾರ್ಥಿನಿಯರಿಗೆ  ಶಿಕ್ಷಣದ ಚಿಂತೆ ಇಲ್ಲ

ಉತ್ತರ ಪ್ರದೇಶದ ಚುನಾವಣೆಯ ತನಕ ತೀರ್ಪು ತಡೆ ಹಿಡಿಯಲು ಇವರು ಅರ್ಜಿ ಸಲ್ಲಿಸಿದ್ದಾರೆ. ಆರು ವಿದ್ಯಾರ್ಥಿನಿಯರಿಗೆ ಶಿಕ್ಷಣದ ಆಲೋಚನೆ, ಚಿಂತನೆ ಇದ್ದಂತಿಲ್ಲ. ವಿದ್ಯಾರ್ಥಿನಿಯರು ಪ್ರಕರಣವನ್ನು ಬೇರೆ ಬೇರೆ ದಿಕ್ಕಿಗೆ ಕೊಂಡೊಯ್ಯುತ್ತಿದ್ದಾರೆ.



ಈ ವಿದ್ಯಾರ್ಥಿಗಳು ಮತ್ತು ಪೋಷಕರು ರಾಜ್ಯದ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಚಿಂತಿಸಲಿ. ಆರು ವಿದ್ಯಾರ್ಥಿನಿಯರ ಪೋಷಕರು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿ. ಬೇರೆ ಬೇರೆ ಸಂಘಟನೆಯ ಆಮಿಷಕ್ಕೆ ಒಳಗಾಗಬೇಡಿ. ರಾಜ್ಯದ, ದೇಶದ ವಿದ್ಯಾರ್ಥಿಗಳ ಶಿಕ್ಷಣ ಭವಿಷ್ಯದ ಬಗ್ಗೆ ಸಹಕರಿಸಿ ಎಂದು ಸರಕಾರಿ ಬಾಲಕಿಯರ ಪಿಯು ಕಾಲೇಜ್ ಉಪಾಧ್ಯಕ್ಷ ಯಶ್ ಪಾಲ್ ಸುವರ್ಣ ಹೇಳಿದ್ದಾರೆ.

ಇದನ್ನೂ ಓದಿ:  ಇಲ್ಲಿ Hijab ಗಲಾಟೆ, ಅಲ್ಲಿ ಹಿಂದೂ-ಮುಸ್ಲಿಂ ಭಾಯಿ ಭಾಯಿ! ಮಾದರಿಯಾಯ್ತು ಕೇರಳದ ಈ ಗ್ರಾಮ

ಹಿಜಾಬ್ ಪ್ರಕರಣ, ಕೇಂದ್ರಕ್ಕೆ ಮಾಹಿತಿ

ದೇಶಕ್ಕೆ ಇದೊಂದು ಎಚ್ಚರಿಕೆ ಗಂಟೆಯಾಗಿದೆ. ಇಂತಹ ದುಷ್ಟ ಶಕ್ತಿಗಳನ್ನು ಧಮನ ಮಾಡಿಲ್ಲ ಅಂದ್ರೆ ಮುಂದೆ ದೇಶಕ್ಕೆ ಅಪಾಯವಿದೆ. ತನಿಖಾ ವರದಿಯಲ್ಲಿ ಸಂಘಟನೆಗಳ ಕೈವಾಡದ ಬಗ್ಗೆ ಮಾಹಿತಿ ಇದೆ. ಹೀಗಾಗಿ ಇವರ ವಿರುದ್ಧ ಸೂಕ್ತ ಕ್ರಮಕ್ಕೆ ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ. ಕೇಂದ್ರ ಸರ್ಕಾರಕ್ಕೆ ಅಗತ್ಯ ಮಾಹಿತಿ, ದಾಖಲೆಗಳೊಂದಿಗೆ  ಮಾಹಿತಿ ಕಳುಹಿಸುವ ಕೆಲಸ ಆಗ್ತಿದೆ ಎಂದು  ಗೃಹ ಸಚಿವರು ಅರಗ ಜ್ಞಾನೇಂದ್ರ ಹೇಳಿದ್ದಾರೆ.
Published by:Mahmadrafik K
First published: