Hijab Controversy: ಶಾಲಾ ಕಾಲೇಜುಗಳ ಸುತ್ತ ಮುಂದುವರೆದ ನಿಷೇಧಾಜ್ಞೆ, ನಿಲ್ಲದ ವಿದ್ಯಾರ್ಥಿನಿಯರ ಪರ-ವಿರೋಧ ನಿಲುವು

ಉಡುಪಿಯಲ್ಲಿ ಫೆಬ್ರವರಿ 19ರವರೆಗೂ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಉಡುಪಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಹೆಚ್ಚುವರಿ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು(ಫೆ.16): ಹಿಜಾಬ್​ ವಿವಾದ (Hijab Controversy) ಹೆಚ್ಚು ಕಾವು ಪಡೆದಿರುವ ಬೆಂಗಳೂರು, ತುಮಕೂರು, ಕೊಪ್ಪಳ, ದಾವಣಗೆರೆ ಮತ್ತು ರಾಮನಗರ ಜಿಲ್ಲೆಗಳಲ್ಲಿ ಸೆಕ್ಷನ್ 144 ಜಾರಿ ಮಾಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ರಾಜಧಾನಿ ಬೆಂಗಳೂರಿನಲ್ಲಿ (Bengaluru) ನಿಷೇಧಾಜ್ಞೆ (Prohibition) ಹೊರಡಿಸಲಾಗಿದೆ. ಶಾಲಾ-ಕಾಲೇಜುಗಳ 200 ಮೀಟರ್ ಸುತ್ತ ಫೆಬ್ರವರಿ 22ರವರೆಗೆ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಕೊಪ್ಪಳದಲ್ಲಿ ಫೆಬ್ರವರಿ 20ರವರೆಗೆ ನಿಷೇಧಾಜ್ಞೆ ಇರಲಿದೆ. ದಾವಣೆಗೆರೆಯಲ್ಲಿ ಫೆಬ್ರವರಿ 19ರವರೆಗೆ ಸೆಕ್ಷನ್ 144 ಜಾರಿ ಮಾಡಲಾಗಿದೆ. ಇನ್ನು, ರಾಮನಗರದಲ್ಲಿ ಎಲ್ಲಾ ಶಾಲಾ-ಕಾಲೇಜುಗಳ 100 ಮೀಟರ್ ಸುತ್ತಲೂ ನಿಷೇಧಾಜ್ಞೆ ಹೇರಲಾಗಿದೆ.

ಮಂಡ್ಯ, ಚಾಮರಾಜನಗರ ಮತ್ತು ಕಲಬುರ್ಗಿ ಜಿಲ್ಲೆಗಳಲ್ಲೂ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ತುಮಕೂರಿನಲ್ಲಿ ಇಂದು ಬೆಳಗ್ಗೆ 6 ಗಂಟೆಯವರೆಗೂ ನಿಷೇಧಾಜ್ಞೆ ಜಾರಿಯಲ್ಲಿತ್ತು. ತುಮಕೂರಿನ ಡೆಪ್ಯುಟಿ ಕಮಿಷನರ್ ವೈ.ಎಸ್.ಪಾಟೀಲ್​​ ಈ ಬಗ್ಗೆ ಮಾತನಾಡಿ, ಪಿಯು, ಡಿಗ್ರಿ ಮತ್ತು ಇತರೆ ಕಾಲೇಜುಗಳ ಸುತ್ತಲೂ 200 ಮೀಟರ್​ವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದು ಹೇಳಿದ್ದರು.

ಮೈಸೂರಿನಲ್ಲಿ ಈಗಾಗಲೇ ನಿಷೇಧಾಜ್ಞೆ ಜಾರಿಯಲ್ಲಿದೆ. ಉಡುಪಿಯಲ್ಲಿ ಫೆಬ್ರವರಿ 19ರವರೆಗೂ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಉಡುಪಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಹೆಚ್ಚುವರಿ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ನಿನ್ನೆ ಮಧ್ಯಾಹ್ನ 2.45ಕ್ಕೆ ಹೈಕೋರ್ಟ್​​ನಲ್ಲಿ ಹಿಜಾಬ್​ ವಿಚಾರಣೆ ಮುಂದುವರೆಯಿತು. ವಾದ-ವಿವಾದಗಳ ಬಳಿಕ ಇಂದು ಮಧ್ಯಾಹ್ನಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ.

ಇದನ್ನೂ ಓದಿ: Hijab Row: ಇಂದಿನಿಂದ ಪಿಯು-ಡಿಗ್ರಿ ಕಾಲೇಜುಗಳು ಆರಂಭ, ಎಲ್ಲೆಡೆ ಕಟ್ಟೆಚ್ಚರ-144 ಸೆಕ್ಷನ್ ಜಾರಿ

ಇವತ್ತಿನಿಂದ ಒಂದೆಡೆ ಪಿಯು ಡಿಗ್ರಿ ಕಾಲೇಜುಗಳು ಪ್ರಾರಂಭವಾಗಲಿವೆ, ಇನ್ನೊಂದೆಡೆ ಹೈಕೋರ್ಟ್​​ನಲ್ಲಿಂದು ಹಿಜಾಬ್​​ ವಿವಾದದ ವಿಚಾರಣೆ ನಡೆಯಲಿದೆ. ಹಿಜಾಬ್ ವಿಚಾರವಾಗಿ ರಾಜಧಾನಿಯಲ್ಲಿ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ. ಶಾಲಾ-ಕಾಲೇಜುಗಳ ಸುತ್ತ 200 ಮೀಟರ್ 144 ಸೆಕ್ಷನ್ ಜಾರಿಗೊಳಿಸಿದ್ದಾರೆ. ಸೂಕ್ಷ್ಮ ಪ್ರದೇಶದಲ್ಲಿನ ಕಾಲೇಜುಗಳ ಬಳಿ ಹೆಚ್ಚಿನ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಯಾವುದೇ ಪ್ರತಿಭಟನೆಗಳಿಗೆ ಆಸ್ಪದ ನೀಡದಂತೆ ಎಚ್ಚರಿಕೆ ವಹಿಸಲು ಕಮಿಷನರ್ ಸೂಚನೆ ನೀಡಿದ್ದಾರೆ.

ಶಾಲಾ-ಕಾಲೇಜುಗಳ ಬಳಿ ನಿಗಾ

ಆಯಾ ವಿಭಾಗದ ಡಿಸಿಪಿಗಳಿಂದಲೂ ಹೆಚ್ಚಿನ ನಿಗಾ ಹಾಗೂ ಶಾಲಾ ಕಾಲೇಜುಗಳ ಬಳಿ ಖುದ್ದು ಇನ್ಸ್ ಪೆಕ್ಟರ್ ಸೇರಿ ಸಿಬ್ಬಂದಿಗಳು ರೌಂಡ್ಸ್ ಮಾಡಬೇಕೆಂದು ಸೂಚನೆ ನೀಡಿದ್ದಾರೆ. ಈಗಾಗಲೇ ಆಯಾ ವಿಭಾಗದಲ್ಲಿ ಇನ್ಸ್ ಪೆಕ್ಟರ್ ಗಳಿಂದ ಶಾಲಾ ಕಾಲೇಜಿನ ಆಡಳಿತ ಮಂಡಳಿ ಜೊತೆಯೂ ಸಭೆ ನಡೆಸಲಾಗಿದೆ. ವಿಭಾಗದಲ್ಲಿ ಪರಿಸ್ಥಿತಿಯ ಬಗ್ಗೆ ಆಯಾ ವಿಭಾಗದ ಡಿಸಿಪಿ ಮಾಹಿತಿ ಪಡೆಯುತ್ತಿರಬೇಕು. ಶಾಂತಿಯುತವಾಗಿ ನಗರದಲ್ಲಿ ವ್ಯವಸ್ಥೆ ಇರಬೇಕೆಂದು ಕಮಿಷನರ್ ಸಲಹೆ ನೀಡದ್ದಾರೆ.

ಈಗಾಗಲೇ ವಿದ್ಯಾಸಾಗರ್ ಶಾಲೆಯಲ್ಲಿ ನಡೆದ ಘಟನೆಯನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಹೀಗಾಗಿ ಕಾಲೇಜುಗಳ ಬಳಿಯೇ ಹೊಯ್ಸಳ ಚೀತಾ ಸಿಬ್ಬಂದಿ ಬಂದೋಬಸ್ತ್ ವಹಿಸಿದ್ದಾರೆ.

ಇದನ್ನೂ ಓದಿ: Morning Digest: ಖ್ಯಾತ ಗಾಯಕ ಬಪ್ಪಿ ಲಹಿರಿ ನಿಧನ, ಇಂದಿನಿಂದ ಕಾಲೇಜುಗಳು ಆರಂಭ, ಅಪಘಾತದಲ್ಲಿ 4 ವಿದ್ಯಾರ್ಥಿಗಳ ಸಾವು; ಬೆಳಗಿನ ಟಾಪ್ ನ್ಯೂಸ್

ತೀರ್ಪು ಬರುವವರೆಗೂ ಸಂಯಮದಿಂದ ಕಾಯಿರಿ

ಹಿಜಾಬ್​ ವಿವಾದ ಕುರಿತು ಮಾತನಾಡಿದ ಸಿಎಂ ಬಸವರಾಜ್​ ಬೊಮ್ಮಾಯಿ,  ಇಂದಿನಿಂದ ಕಾಲೇಜುಗಳು ಆರಂಭವಾಗ್ತಿವೆ.  ಕೋರ್ಟ್ ಆದೇಶವನ್ನು ನಾವೆಲ್ಲರೂ ಪಾಲನೆ ಮಾಡಬೇಕು. ಅಂತಿಮ ತೀರ್ಪು ಬರುವವರೆಗೂ ನಾವೆಲ್ಲರೂ ಸಂಯಮದಿಂದ ಕಾಯಬೇಕು. ಏನೇ ಗೊಂದಲ ಇದ್ರೂ ನಿವಾರಣೆ ಮಾಡಿ, ಶಾಲೆ, ಕಾಲೇಜುಗಳ ಆಡಳಿತ ಮಂಡಳಿ, ಪೋಷಕರು ಪರಸ್ಪರ ಗೊಂದಲ ಬಗೆಹರಿಸಿಕೊಂಡು ಸೌಹಾರ್ದ ವಾತಾವರಣ ನಿರ್ಮಿಸಬೇಕು.  ಮಕ್ಕಳ ವಿದ್ಯಾಭ್ಯಾಸಕ್ಕೆ ಆ ಮೂಲಕ‌ ಅವಕಾಶ ಮಾಡಿಕೊಡಬೇಕು ಎಂದು ಹೇಳಿದ್ದಾರೆ.

ಕೆಲವೆಡೆ ವಿದ್ಯಾರ್ಥಿನಿಯರು ಹಿಜಾಬ್​ ಧರಿಸದೆ ತರಗತಿಗಳಿಗೆ ಹಾಜರಾದರೆ, ಇನ್ನೂ ಹಲವೆಡೆ ಹಿಜಾಬ್​ ಧರಿಸಿಯೇ ತರಗತಿಗಳಿಗೆ ಬರುತ್ತಿದ್ದಾರೆ. ಹಿಜಾಬ್​ ಕುರಿತಾಗಿ ಇನ್ನೂ ಸಹ ವಿದ್ಯಾರ್ಥಿನಿಯರ ನಡುವೆ ಪರ-ವಿರೋಧ ನಿಲುವುಗಳು ಮುಂದುವರೆದಿವೆ. ಇಂದಿನ ಹೈಕೋರ್ಟ್​ ವಿಚಾರಣೆ ಬಳಿಕ ಈ ವಿವಾದ ಯಾವ ರೂಪ ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.
Published by:Latha CG
First published: