• Home
 • »
 • News
 • »
 • state
 • »
 • Hijab Row: ರಾಜ್ಯದಲ್ಲಿ ಮತ್ತೆ ಭುಗಿಲೇಳುತ್ತಾ ಹಿಜಾಬ್ ವಿವಾದ; ವರದಿ ಬಿಡುಗಡೆಗೆ ಮುಂದಾದ PUCL

Hijab Row: ರಾಜ್ಯದಲ್ಲಿ ಮತ್ತೆ ಭುಗಿಲೇಳುತ್ತಾ ಹಿಜಾಬ್ ವಿವಾದ; ವರದಿ ಬಿಡುಗಡೆಗೆ ಮುಂದಾದ PUCL

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್​ಗೆ ಹೇರಲಾದ ನಿರ್ಬಂಧಗಳು ರಾಜ್ಯದ ಮುಸ್ಲಿಂ ವಿದ್ಯಾರ್ಥಿಗಳ ಮೇಲೆ ಯಾವ ರೀತಿಯ ಪರಿಣಾಮ ಬೀರಿತು ಎಂಬ ವಿಷಯಗಳು ವರದಿಯಲ್ಲಿರಿವೆ ಎಂದು ಪಿಯುಸಿಎಲ್​ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

 • News18 Kannada
 • 3-MIN READ
 • Last Updated :
 • Bangalore, India
 • Share this:

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Election 2023) ಎರಡ್ಮೂರು ತಿಂಗಳಿರುವ ಹಿನ್ನೆಲೆ ರಾಜ್ಯದಲ್ಲಿ ಉಂಟಾಗಿದ್ದ ಹಳೆ ಕೋಮು ಸಂಘರ್ಷಗಳು (Communal Clash) ನಿಧಾನವಾಗಿ ಮುನ್ನಲೆಗೆ ಬರುತ್ತಿವೆ. ಕಳೆದ ವರ್ಷ ಇಡೀ ದೇಶದಲ್ಲಿ ಸದ್ದು ಮಾಡಿದ್ದ ಹಿಜಾಬ್ ವಿವಾದ (Karnataka Hijab Row) ಮತ್ತೆ ಭುಗಿಲೇಳುತ್ತಾ ಅನ್ನೋ ಅನುಮಾನ ಮೂಡಿದೆ. ಇಂದು ಹಿಜಾಬ್​​ಗೆ ಸಂಬಂಧಪಟ್ಟ ವರದಿ ಬಿಡುಗಡೆ ಕಾರ್ಯಕ್ರಮಕ್ಕೆ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್ (PUCL- People's Union for Civil Liberties)​ ತಯಾರಿ ನಡೆಸಿದೆ. ಮಂಗಳವಾರ ವಯೋಲೇಶನ್ಸ್ ಆಫ್ ರೈಟ್ಸ್ ಆಫ್ ಮುಸ್ಲಿಂ ವುಮೆನ್ ಸ್ಟೂಡೆಂಟ್ಸ್ (Violation of Rights of Musilm Women Students Report) ಎಂಬ ವರದಿ ಬಿಡುಗಡೆ  ಮಾಡಲಾಗಿದ್ದು, ಅದರ ಪೂರ್ವಬಾವಿಯಾಗಿ ಇಂದು ಸಂಜೆ 4 ಗಂಟೆಗೆ ಆನ್​ಲೈನ್​​ ಸುದ್ದಿಗೋಷ್ಠಿ ನಡೆಯಲಿದೆ.


ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್​ಗೆ ಹೇರಲಾದ ನಿರ್ಬಂಧಗಳು ರಾಜ್ಯದ ಮುಸ್ಲಿಂ ವಿದ್ಯಾರ್ಥಿಗಳ ಮೇಲೆ ಯಾವ ರೀತಿಯ ಪರಿಣಾಮ ಬೀರಿತು ಎಂಬ ವಿಷಯಗಳು ವರದಿಯಲ್ಲಿರಿವೆ ಎಂದು ಪಿಯುಸಿಎಲ್​ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.


ವರದಿಯಲ್ಲಿ ಯಾವೆಲ್ಲ ಅಂಶಗಳು ಇರಲಿವೆ?


1.ಮುಸ್ಲಿಂ ವಿದ್ಯಾರ್ಥಿನಿಯರ ಮೂಲಭೂತ ಹಕ್ಕುಗಳ ಉಲ್ಲಂಘನೆಯಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಯಾರೆಲ್ಲ ಭಾಗಿಯಾಗಿದ್ದಾರೆ.


2.ಶಿಕ್ಷಣ ಕ್ಷೇತ್ರದಲ್ಲಿನ ಈ ಪ್ರಮುಖ ಬಿಕ್ಕಟ್ಟನ್ನು ಲಿಂಗ, ಧರ್ಮ ಮತ್ತು ಸಬಲೀಕರಣದ ಬಗೆಗಿನ ಚರ್ಚೆಗಳ ಹಿನ್ನೆಲೆಯಲ್ಲಿರಿಸಿ ಮುಸ್ಲಿಂ ಮಹಿಳೆಯರು ದೂರದೃಷ್ಟಿಯೊಂದಿಗೆ ತಮ್ಮದೇ ಆದ ವಿಶಿಷ್ಟ ಅಸ್ಮಿತೆಯನ್ನು ಕಂಡುಕೊಂಡು ಅದನ್ನು ದೃಢವಾಗಿ ಎದುರಿಸಲು ಕಂಡುಕೊಂಡ ಮಾರ್ಗಗಳು.


3.ಹಿಂದುತ್ವ ಗುಂಪುಗಳು ಶಿಕ್ಷಣ ಸಂಸ್ಥೆಗಳ ಒಳಗೂ ಮತ್ತು ಹೊರಗೂ ನಡೆಸಿದ ದ್ವೇಷದ ಅಭಿಯಾನದ ಮಾಹಿತಿ ಈ ವರದಿಯಲ್ಲಿ ಇರಲಿದೆಯಂತೆ.


ಪಿಯುಸಿಎಲ್ ಹೇಳಿರೋದೇನು?


ರಾಜ್ಯ ಸರ್ಕಾರದ ಗಮನವನ್ನು ವಿದ್ಯಾರ್ಥಿನಿಯರ ಶಿಕ್ಷಣ ಹಕ್ಕುಗಳ ನಿರಂತರ ಉಲ್ಲಂಘಟನೆಯಡೆಗೆ ಪಿಯುಸಿಲ್ ಉದ್ದೇಶಿಸಿದೆ. ಅಲ್ಲದೇ, ಈ ಮುಸ್ಲಿಂ ವಿದ್ಯಾರ್ಥಿನಿಯರ ಶಿಕ್ಷಣದ ಘನತೆಯು ಮತ್ತು ಖಾಸಗಿತನದ ಹಕ್ಕುಗಳನ್ನು ಪುನಃಸ್ಥಾಪಿಸಲು ಸರ್ವೋಚ್ಛ ನ್ಯಾಯಾಲಯವು ಮಧ್ಯ ಪ್ರವೇಶಿಸಬೇಕಾದ ತುರ್ತಿದೆ ಎಂಬುದನ್ನ ಮನದಟ್ಟು ಮಾಡಿಕೊಡಲು ಪಿಯುಸಿಎಲ್​ ಬಯಸುತ್ತದೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ಉಲ್ಲೇಖಿಸಿದೆ.


Hijab Judgement today high alert in bengaluru mrq
ಸಾಂದರ್ಭಿಕ ಚಿತ್ರ


ಇದನ್ನೂ ಓದಿ: Hijab Verdict: ಹಿಜಾಬ್ ತೀರ್ಪು, ಬಿ ಸಿ ನಾಗೇಶ್, ಚಕ್ರವರ್ತಿ ಸೂಲಿಬೆಲೆ, ಮುತಾಲಿಕ್ ಹೇಳಿದ್ದೇನು?


ತೀರ್ಪಿನಲ್ಲಿ ನಾಲ್ಕು ಪ್ರಶ್ನೆಗಳ ಪರಿಗಣನೆ


ಹಿಜಾಬ್ ಪರವಾಗಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ವಜಾಗೊಳಿಸುವ ಮೂಲಕ ಶಾಲಾ-ಕಾಲೇಜುಗಳಲ್ಲಿ ಧರ್ಮವಸ್ತ್ರ ಕಡ್ಡಾಯ ಅಲ್ಲ ಎಂದು ಕರ್ನಾಟಕ ಉಚ್ಛ ನ್ಯಾಯಾಲಯ (Karnataka High court) ಮಹತ್ವದ ತೀರ್ಪನ್ನು ನೀಡಿತ್ತು.


ಸಿಜೆ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್, ನ್ಯಾ.ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರ ಪೂರ್ಣ ಪೀಠ ತೀರ್ಪು ಸರ್ವಸಮ್ಮತವಾಗಿ ತೀರ್ಪನ್ನು ನೀಡಿತ್ತು.


ಸುದೀರ್ಘ ವಾದ- ಪ್ರತಿವಾದ ಆಲಿಸಿದ ನ್ಯಾಯಾಲಯ ನಾಲ್ಕು ಪ್ರಶ್ನೆಗಳನ್ನು ಕೇಳಿಕೊಂಡಿತ್ತು. ಆ ಪ್ರಶ್ನೆಗಳಿಗೆ ಉತ್ತರ ಕಂಡು ಕೊಳ್ಳುವ ಮೂಲಕ ನ್ಯಾಯಾಲಯ ತನ್ನ ತೀರ್ಪು ನೀಡಿದೆ. ಆ ನಾಲ್ಕು ಪ್ರಶ್ನೆಗಳು ಮತ್ತು ನ್ಯಾಯಾಲಯ ಕಂಡುಕೊಂಡುವ ಉತ್ತರ ಇಲ್ಲಿದೆ.


ಸಾಂದರ್ಭಿಕ ಚಿತ್ರ


ಆ ನಾಲ್ಕು ಪ್ರಶ್ನೆಗಳು


ಪ್ರಶ್ನೆ 1.ಹಿಜಾಬ್ & ಹೆಡ್ ಸ್ಕಾರ್ಪ್ ಇಸ್ಲಾಂ ನಂಬಿಕೆಯಲ್ಲಿ ಅತ್ಯಗತ್ಯವೇ?
ಉತ್ತರ: ಮುಸ್ಲಿಂ ಮಹಿಳೆ ಹಿಜಾಬ್​ ಧರಿಸುವುದು ಅತ್ಯಗತ್ಯ ಆಚರಣೆಯಲ್ಲ. ಇಸ್ಲಾಂ ನಂಬಿಕೆಯ ಪ್ರಕಾರ ಹಿಜಾಬ್ ಧಾರ್ಮಿಕ ಆಚರಣೆಯಲ್ಲ.


ಪ್ರಶ್ನೆ 2: ಆರ್ಟಿಕಲ್ 19(1) ರ ಅಡಿ ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯೇ ಇದರ ಅಡಿಯಲ್ಲಿ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತಾ?
ಉತ್ತರ: ಸಿಡಿಸಿ ವಸ್ತ್ರ ಸಂಹಿತೆ ಆದೇಶ ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಲ್ಲ. ಸರ್ಕಾರದ ಸಮವಸ್ತ್ರ ಸಂಹಿತೆ ಕಾನೂನು ಬದ್ಧವಾಗಿಯೇ ಇದೆ. ಇದನ್ನು ವಿದ್ಯಾರ್ಥಿಗಳು ಆಕ್ಷೇಪ ಮಾಡಬಾರದು.


ಪ್ರಶ್ನೆ 3: ಸರ್ಕಾರದ ಫೆ. 5ರ ಆದೇಶ ಆರ್ಟಿಕಲ್ 14 ಮತ್ತು 15ರ ಉಲ್ಲಂಘನೆಯೇ?
ಉತ್ತರ: ಸರ್ಕಾರ ಫೆ.5 ರ ಆದೇಶ ಕಾನೂನು ಬದ್ದವಾಗಿಯೇ ಇದೆ. ಸಂವಿಧಾನದಲ್ಲಿ ಸರ್ಕಾರಕ್ಕೆ ಈ ನಿರ್ಧಾರ ತೆಗೆದುಕೊಳ್ಳಲು ಅವಕಾಶವಿದೆ.


ಪ್ರಶ್ನೆ 4: ಉಡುಪಿ ಕಾಲೇಜಿನ ವಿರುದ್ದ ಶಿಸ್ತು ಕ್ರಮಕ್ಕೆ ಆದೇಶ ಮಾಡಬೇಕೇ?
ಉತ್ತರ: ಉಡುಪಿ ಕಾಲೇಜಿನ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವ ವಿಚಾರಕ್ಕೆ ಸಂಬಂಧಿಸಿದ ಈ ಅರ್ಜಿಗಳು ಇಲ್ಲಿ ಉರ್ಜಿತವಾಗುವುದಿಲ್ಲ

Published by:Mahmadrafik K
First published: