Hijab Controversy: ವಿಧಾನಸಭೆಯಲ್ಲಿ ಹಿಜಾಬ್​ ವಿವಾದದ ಗದ್ದಲ, ಜಮೀರ್​ ಹಾಗೂ JDS ಶಾಸಕರ ನಡುವೆ ವಾಗ್ವಾದ  

ನಿಲುವಳಿ ಸೂಚನೆ ಮಂಡಿಸಿ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ವಿವಾದದಿಂದ ಸಮಸ್ಯೆ ಉಂಟಾಗಿದೆ. ಚರ್ಚೆಗೆ ಅವಕಾಶ ಕೊಡಬೇಕೆಂದು ಮನವಿ ಮಾಡಿದರು.

ವಿಧಾನಸಭೆ

ವಿಧಾನಸಭೆ

  • Share this:
ಬೆಂಗಳೂರು : ಸಮವಸ್ತ್ರ ವಿವಾದದಿಂದ ಶಿಕ್ಷಣ ಕ್ಷೇತ್ರದ ಮೇಲೆ ಆಗಿರುವ ಪರಿಣಾಮದ ಬಗ್ಗೆ ಚರ್ಚಿಸಲು ಅವಕಾಶ ಕೋರಿ ಮಾಜಿ ಮುಖ್ಯಮಂತ್ರಿ, ಜೆಡಿಎಸ್‍ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ (H.D Kumaraswamy) ಅವರು ನಿಲುವಳಿ ಸೂಚನೆ ಮಂಡಿಸಿದ ವೇಳೆ ವಿಧಾನಸಭೆಯಲ್ಲಿ (Assembly) ವಾಗ್ವಾದವೇ ನಡೆದು ಹೋಗಿದೆ. ರಾಷ್ಟ್ರಕವಿ ಕುವೆಂಪು  ಅವರು ಸರ್ವ ಜನಾಂಗದ ಶಾಂತಿಯ ತೋಟ ಎಂದು ಕರೆದಿದ್ದಾರೆ. ಆದರೆ, ಅವರ ತವರು ಜಿಲ್ಲೆ ಶಿವಮೊಗ್ಗದಲ್ಲೇ (Shivamogga)  ಹಿಂಸಾಚಾರವಾಗಿದೆ. ಶಿಕ್ಷಣ ಕ್ಷೇತ್ರ, ಮಕ್ಕಳ ವಿದ್ಯಾಭ್ಯಾಸದ ಮೇಲೆ ಸಮಸ್ಯೆ ಉಂಟಾಗಿದೆ. ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರಿದೆ. ಇದು ಸಾಮರಸ್ಯ (Harmony) ಮೂಡಿಸುವ ವಿಚಾರವಾಗಿದೆ. ಚರ್ಚೆಗೆ ಅವಕಾಶ ಕೊಡಬೇಕೆಂದು HDK ಮನವಿ ಮಾಡಿದರು

ಚರ್ಚೆಗೆ ಅವಕಾಶ ಕೇಳಿದ ಕುಮಾರಸ್ವಾಮಿ

ನಿಲುವಳಿ ಸೂಚನೆ ಮಂಡಿಸಿ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ವಿವಾದದಿಂದ ಸಮಸ್ಯೆ ಉಂಟಾಗಿದೆ. ಕೆಲವೆಡೆ ಅಹಿತಕರ ಘಟನೆಯೂ ನಡೆದು ಸಾಮರಸ್ಯಕ್ಕೆ ಭಂಗ ತಂದಿವೆ. ಕೋವಿಡ್​ನಿಂದ ಎರಡು ವರ್ಷ ಶಾಲಾ-ಕಾಲೇಜುಗಳು ಸಾಕಷ್ಟು ಸಮಸ್ಯೆ ಎದುರಿಸಿದವು.ರಾಷ್ಟ್ರಕವಿ ಕುವೆಂಪು ಅವರು ಸರ್ವ ಜನಾಂಗದ ಶಾಂತಿಯ ತೋಟ ಎಂದು ಕರೆದಿದ್ದಾರೆ. ಆದರೆ, ಅವರ ತವರು ಜಿಲ್ಲೆ ಶಿವಮೊಗ್ಗದಲ್ಲೇ ಹಿಂಸಾಚಾರವಾಗಿದೆ. ಶಿಕ್ಷಣ ಕ್ಷೇತ್ರ, ಮಕ್ಕಳ ವಿದ್ಯಾಭ್ಯಾಸದ ಮೇಲೆ ಸಮಸ್ಯೆ ಉಂಟಾಗಿದೆ. ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರಿದೆ. ಇದು ಸಾಮರಸ್ಯ ಮೂಡಿಸುವ ವಿಚಾರವಾಗಿದೆ. ಚರ್ಚೆಗೆ ಅವಕಾಶ ಕೊಡಬೇಕೆಂದು ಮನವಿ ಮಾಡಿದರು.

ಜಮೀರ್ ಹಾಗೂ ಜೆಡಿಎಸ್​ ಶಾಸಕರ ನಡುವೆ ವಾಗ್ವಾದ

ಈ ವೇಳೆ ಮಧ್ಯಪ್ರವೇಶಿಸಿದ ಶಾಸಕ ಜಮೀರ್ ಅಹ್ಮದ್ ಖಾನ್, ಕುಮಾರಸ್ವಾಮಿ ಅವರು ಹಿಜಾಬ್, ಗಿಜಾಬ್ ಏನೂ ಬೇಡ ಎನ್ನುತ್ತಿದ್ದರು. ಒಂದೂವರೆ ತಿಂಗಳ ನಂತರ ಈಗ ದಿಢೀರನೇ ಪ್ರಸ್ತಾಪ ಮಾಡುತ್ತಿದ್ದಾರೆ ಎಂದರು. ಆಗ ಜೆಡಿಎಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಜಮೀರ್ ಮತ್ತು ಜೆಡಿಎಸ್​ ಶಾಸಕರ ನಡುವೆ ಮಾತಿನ ವಾಗ್ವಾದ ನಡೆಯಿತು.ಮತ್ತೆ ಮಾತು ಮುಂದುವರೆಸಿದ ಕುಮಾರಸ್ವಾಮಿ, ಜಂಟಿ ಅಧಿವೇಶನದ ಸಂದರ್ಭದಲ್ಲಿ ನಿಲುವಳಿ ಸೂಚನೆ ಕೊಟ್ಟಿದ್ದೆವು. ಆಗ ಅವಕಾಶ ಸಿಗಲಿಲ್ಲ. ಇದು ಸೂಕ್ಷ್ಮ ವಿಚಾರ. ರಾಜ್ಯದಲ್ಲಿ ಸಾಮರಸ್ಯವಿರಬೇಕು. ಕಳೆದ ಎರಡು ತಿಂಗಳಿನಿಂದ ಶಿಕ್ಷಣ ಕ್ಷೇತ್ರದ ಮೇಲೆ ಹಲವು ರೀತಿಯ ದುಷ್ಪರಿಣಾಮವಾಗಿದೆ ಎಂದರು.

ಇದನ್ನೂ ಓದಿ: HDK v/s Yogeshwar: ರಾಸಲೀಲೆ ಮಾಡಲು ಅಲ್ಲ ರೆಸ್ಟ್ ಮಾಡಲು ಹೋಗ್ತಿದ್ದೆ, ಅವನು ಗುಡಿಸಲಲ್ಲಿ ಇದ್ನಾ? ಚರ್ಚೆಗೆ ರೆಡಿ ಎಂದ್ರು HDK

ನಾಳೆಗೆ ಚರ್ಚೆಗೆ ಅವಕಾಶ ನೀಡಿದ ಸ್ಪೀಕರ್​

ಆಗ ಕುಮಾರಸ್ವಾಮಿ ನ್ಯಾಯಾಲಯದಲ್ಲಿರುವ ವಿಚಾರ ಹೊರತುಪಡಿಸಿ ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದು ಸ್ಪೀಕರ್ ಅವರನ್ನು ಕೋರಿದರು. ಇದಕ್ಕೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ನಿಲುವಳಿ ಸೂಚನೆಯಡಿ ಈ ವಿಚಾರ ಬರುವುದಿಲ್ಲ. ಹಾಗಾಗಿ, ನಿಯಮ 69ರಡಿ ನಾಳೆ ಚರ್ಚೆಗೆ ಅವಕಾಶ ಕೊಡುವುದಾಗಿ ಹೇಳಿದರು.

ಯು.ಟಿ ಖಾದರ್​ರಿಂದ ಹಿಜಾಬ್​ ಪ್ರಸ್ತಾಪ

ಕಾಂಗ್ರೆಸ್ ನಾಯಕ ಯು.ಟಿ ಖಾದರ್​ ಸದನದಲ್ಲಿ ಹಿಜಾಬ್ ವಿವಾದ ಪ್ರಸ್ತಾಪ ಮಾಡಿದ್ರು. ಶಾಲಾ ಮಕ್ಕಳ ನಡುವೆ ಸಮಸ್ಯೆ ಸೃಷ್ಟಿಯಾಗಿದೆ. ಪರೀಕ್ಷೆ ಬರೆಯಲು ವಿದ್ಯಾರ್ಥಿನಿಯರಿಗೆ ಸಾಧ್ಯವಾಗುತ್ತಿಲ್ಲ. ಎಲ್ಲವನ್ನು ನ್ಯಾಯಾಲಯಕ್ಕೆ ಬಿಡುವ ಬದಲು ಸರ್ಕಾರ ಮುಂದೆ ನಿಂತು ಸಮಸ್ಯೆ ಬಗೆಹರಿಸಬೇಕು. ಆದ್ರೆ ಸರ್ಕಾರಕ್ಕೆ ಈ ಬಗ್ಗೆ ಆಸಕ್ತಿ ಇಲ್ಲ?. ಕೋಮುವಾದದ ಪರಿಸ್ಥಿತಿಯಲ್ಲಿ ಮೌನವಾಗಿ ಆನಂದಿಸುವ ಕೆಲಸ ಏಕೆ ಮಾಡುತ್ತಿದೆ.

ಇದನ್ನೂ ಓದಿ: Hubballi: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮನೆಗೆ ವಿಜಯೇಂದ್ರ ಭೇಟಿ, ಗುಪ್ತ್-ಗುಪ್ತ್ ಮೀಟಿಂಗ್

ಶಾಲಾ ಕಾಲೇಜಿನಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡುವ ಜವಾಬ್ದಾರಿ ಸರ್ಕಾರದ್ದು, ಮಧ್ಯಂತರ ಆದೇಶವನ್ನು ತಪ್ಪಾಗಿ ಆರ್ಥೈಸಿ ತಳಮಟ್ಟದಲ್ಲಿ ಸಮಸ್ಯೆಗೆ ಕಾರಣವಾಗುತ್ತಿದೆ. ಇದನ್ನು ಸರ್ಕಾರ ನಿಭಾಯಿಸುವ ಕೆಲಸ ಮಾಡಬೇಕು. ನ್ಯಾಯಾಲಯ ಶಾಲಾ ಆಡಳಿತ ಮಂಡಳಿ ತೀರ್ಮಾನ ಮಾಡಲಿ ಎಂದಿದೆ. ಆದರೆ ಶಾಲಾ ಆಡಳಿತ ಮಂಡಲಿ ತೀರ್ಮಾನ ಮಾಡಿದರೂ ಶಿಕ್ಷಣ ಇಲಾಖೆಯ ಜಂಟಿ ಆಯುಕ್ತರು ಮಾನ್ಯತೆ ಕೊಡುತ್ತಿಲ್ಲ. ಆ ಮಕ್ಕಳ ಜಾಗದಲ್ಲಿ ನಮ್ಮ ಮಕ್ಕಳಿದ್ದಾರೆಂದು ಭಾವಿಸಿ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಖಾದರ್ ಮನವಿ
Published by:Pavana HS
First published: