• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Hijab Controversy: ನ್ಯಾಯಾಧೀಶರ ಆರೋಗ್ಯ ಸರಿಯಿಲ್ಲದ ಕಾರಣ ಹಿಜಾಬ್ ಪ್ರಕರಣ ಪಟ್ಟಿ ವಿಳಂಬ; ಶೀಘ್ರದಲ್ಲೇ ಹೊಸ ನ್ಯಾಯ ಪೀಠ ರಚನೆ

Hijab Controversy: ನ್ಯಾಯಾಧೀಶರ ಆರೋಗ್ಯ ಸರಿಯಿಲ್ಲದ ಕಾರಣ ಹಿಜಾಬ್ ಪ್ರಕರಣ ಪಟ್ಟಿ ವಿಳಂಬ; ಶೀಘ್ರದಲ್ಲೇ ಹೊಸ ನ್ಯಾಯ ಪೀಠ ರಚನೆ

ಕರ್ನಾಟಕದ ಶಾಲಾ ಕಾಲೇಜುಗಳಲ್ಲಿ ಕೆಲವು ಮುಸ್ಲಿಂ ಮಹಿಳೆಯರು ಧರಿಸುವ ಹಿಜಾಬ್​​ಗೆ ನಿಷೇಧ ಹೇರಿದ್ದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ತೀರ್ಪನ್ನು ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ದ್ವಿ ಸದಸ್ಯ ಪೀಠ ಪ್ರಕಟಿಸಲಿದೆ. (ಸಾಂದರ್ಭಿಕ ಚಿತ್ರ)

ಕರ್ನಾಟಕದ ಶಾಲಾ ಕಾಲೇಜುಗಳಲ್ಲಿ ಕೆಲವು ಮುಸ್ಲಿಂ ಮಹಿಳೆಯರು ಧರಿಸುವ ಹಿಜಾಬ್​​ಗೆ ನಿಷೇಧ ಹೇರಿದ್ದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ತೀರ್ಪನ್ನು ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ದ್ವಿ ಸದಸ್ಯ ಪೀಠ ಪ್ರಕಟಿಸಲಿದೆ. (ಸಾಂದರ್ಭಿಕ ಚಿತ್ರ)

ಹಿಜಾಬ್ ಪ್ರಕರಣವನ್ನು ತುರ್ತು ಪಟ್ಟಿಗಾಗಿ ಭಾರತದ ಮುಖ್ಯ ನ್ಯಾಯಾಧೀಶರ ಮುಂದೆ ಮತ್ತೆ ಪ್ರಸ್ತಾಪಿಸಲಾಯಿತು. ಪ್ರಸ್ತಾಪಕ್ಕಾಗಿ ಅಲ್ಲಿದ್ದ ಹಿರಿಯ ವಕೀಲೆ ಮೀನಾಕ್ಷಿ ಅರೋರಾ ಅವರು ನ್ಯಾಯಾಧೀಶರ ಮುಂದೆ ವಿಚಾರ ಪ್ರಸ್ತಾಪಿಸಿದರು. ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಾಧೀಶರಾದ ಎನ್‌. ವಿ. ರಮಣ, ಅವರು “ ಶೀಘ್ರ ವಿಚಾರಣೆ ನಡಸುವ ಸಲುವಾಗಿ ಒಂದು ಹೊಸ ನ್ಯಾಯ ಪೀಠವನ್ನು ರಚನೆ ಮಾಡುತ್ತೇವೆ. ನಮ್ಮ ಮುಖ್ಯ ನ್ಯಾಯಾಧೀಶರಲ್ಲಿ ಒಬ್ಬ ನ್ಯಾಯಾಧೀಶರಿಗೆ ಆರೋಗ್ಯ ಸರಿಯಿರಲಿಲ್ಲ” ಎಂದು ಹೇಳಿದರು.

ಮುಂದೆ ಓದಿ ...
 • News18 Kannada
 • 2-MIN READ
 • Last Updated :
 • Karnataka
 • Share this:

ಶಿಕ್ಷಣ ಸಂಸ್ಥೆಗಳಲ್ಲಿ (Educational institution) ಮುಸ್ಲಿಂ ವಿದ್ಯಾರ್ಥಿನಿಯರ ಶಿರವಸ್ತ್ರ ನಿಷೇಧವನ್ನು ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಯನ್ನು ಮುಂದಿನ ವಾರ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ (Supreme Court) ಒಪ್ಪಿಕೊಂಡಿದೆ. ಹಿಜಾಬ್ ಪ್ರಕರಣವನ್ನು (Hijab case) ತುರ್ತು ಪಟ್ಟಿಗಾಗಿ ಭಾರತದ ಮುಖ್ಯ ನ್ಯಾಯಾಧೀಶರ ಮುಂದೆ ಮತ್ತೆ ಪ್ರಸ್ತಾಪಿಸಲಾಯಿತು. ಪ್ರಸ್ತಾಪಕ್ಕಾಗಿ ಅಲ್ಲಿದ್ದ ಹಿರಿಯ ವಕೀಲೆ ಮೀನಾಕ್ಷಿ ಅರೋರಾ ಅವರು ನ್ಯಾಯಾಧೀಶರ (Judge) ಮುಂದೆ ವಿಚಾರ ಪ್ರಸ್ತಾಪಿಸಿದರು. ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಾಧೀಶರಾದ ಎನ್‌. ವಿ. ರಮಣ, ಅವರು “ ಶೀಘ್ರ ವಿಚಾರಣೆ ನಡಸುವ ಸಲುವಾಗಿ ಒಂದು ಹೊಸ ನ್ಯಾಯ ಪೀಠವನ್ನು ರಚನೆ ಮಾಡುತ್ತೇವೆ. ನಮ್ಮ ಮುಖ್ಯ ನ್ಯಾಯಾಧೀಶರಲ್ಲಿ ಒಬ್ಬ ನ್ಯಾಯಾಧೀಶರಿಗೆ ಆರೋಗ್ಯ ಸರಿಯಿರಲಿಲ್ಲ” ಎಂದು ಹೇಳಿದರು.


ನ್ಯಾಯ ಪೀಠದ ನ್ಯಾಯಧೀಶರ ಆರೋಗ್ಯ ಸುಧಾರಿಸಿದ ಕೂಡಲೇ ಹಿಜಾಬ್‌ ವಿಚಾರಣೆ ಶುರು 
ಆದರೆ ಇದಕ್ಕೆ ವಕೀಲೆ ಮೀನಾಕ್ಷಿ ಅರೋರಾ ಅವರು “ ಮಾರ್ಚ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಲಾಗಿದೆ. ಆಗಿನಿಂದ ಇಂದಿನವರೆಗೆ ಕಾಯುತ್ತಲೇ ಇದ್ದೇವೆ. ಒಂದು ಸೂಕ್ತ ದಿನಾಂಕವನ್ನು ಆದರೂ ನೀಡಿ” ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯ ನ್ಯಾಯಾಧೀಶರು “ ಸ್ವಲ್ಪ ಸಮಯ ತಾಳ್ಮೆಯಿಂದ ಕಾಯಿರಿ. ನಮ್ಮ ನ್ಯಾಯ ಪೀಠದ ನ್ಯಾಯಧೀಶರ ಆರೋಗ್ಯ ಸುಧಾರಿಸಿದ ಕೂಡಲೇ ಈ ಹಿಜಾಬ್‌ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಾಗುವುದು” ಎಂದು ಹೇಳಿದ್ದಾರೆ.


ತುರ್ತು ಪಟ್ಟಿಗಾಗಿ ಹಿಜಾಬ್‌ ವಿಷಯ ಪ್ರಸ್ಥಾಪನೆ 
ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿ ಮಾರ್ಚ್ 15ರಂದು ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಅರ್ಜಿಗಳನ್ನು ಸಲ್ಲಿಸಲಾಗಿದೆ. ಎರಡು ವಾರಗಳ ಹಿಂದೆ, ಅಂದರೆ ಜುಲೈ 13 ರಂದು, ವಕೀಲ ಪ್ರಶಾಂತ್ ಭೂಷಣ್ ಅವರು “ತುರ್ತು ಪಟ್ಟಿಗಾಗಿ ಈ ಹಿಜಾಬ್‌ ವಿಷಯವನ್ನು ಪ್ರಸ್ತಾಪಿಸಲಾಗಿದೆ. ಏಕೆಂದರೆ ಹಿಜಾಬ್‌ ವಿಷಯವನ್ನು ಮಾರ್ಚ್‌ನಲ್ಲಿಯೇ ಪ್ರಸ್ತಾಪ ಮಾಡಲಾಗಿದೆ. ಆದರೂ ಇನ್ನು ಅದನ್ನು ಮುಖ್ಯ ಪಟ್ಟಿಗೆ ಸೇರಿಸಿಲ್ಲ. ಇದರಿಂದ ವಿದ್ಯಾರ್ಥಿಗಳು ತೊಂದರೆಗಳನ್ನು ಎದುರಿಸುತ್ತಿದ್ದಾರೆ” ಎಂದು ಹೇಳಿದರು.


ಇವರ ಮಾತಿಗೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಾಧೀಶರು “ಎರಡು ನ್ಯಾಯ ಪೀಠಗಳು ಕಾರ್ಯನಿರ್ವಹಿಸುತ್ತಿಲ್ಲ. ಆದ್ದರಿಂದ ನಾವು ಮರು-ವಿತರಣೆ ಮಾಡಬೇಕಾಯಿತು. ಸ್ವಲ್ಪ ಸಮಯ ನೋಡೋಣ. ಮುಂದಿನ ವಾರವೇ ಹಿಜಾಬ್‌ ಪ್ರಕರಣವನ್ನು ತುರ್ತು ಪಟ್ಟಿ ಮಾಡಲು ಒಪ್ಪಿಕೊಂಡಿದ್ದೇವೆ” ಎಂದು ಮುಖ್ಯ ನ್ಯಾಯಾಧೀಶ ಎನ್‌.ವಿ. ರಮಣ ಉತ್ತರಿಸಿದ್ದಾರೆ.


ಇದನ್ನೂ ಓದಿ:  Coffee Nadu Chandu: ಅಂದು ಸೋಶಿಯಲ್ ವರ್ಕರ್, ಇಂದು ಪೇಯ್ಡ್ ಪ್ರಮೋಟರ್ ಅಂತೆ; ಫೇಮಸ್ ಆದ್ಮೇಲೆ ಚಂದು ವರಸೆ ಚೇಂಜ್


ಮಾರ್ಚ್‌ನಲ್ಲಿ, ಹಿರಿಯ ವಕೀಲ ದೇವದತ್ತ್ ಕಾಮತ್ ಅವರು ಈ ವಿಷಯವನ್ನು ತುರ್ತು ಪಟ್ಟಿ ಮಾಡುವಂತೆ ಮಾಡಿದ ಮನವಿಯನ್ನು ಮುಖ್ಯ ನ್ಯಾಯಾಧೀಶರು ತಿರಸ್ಕರಿಸಿದ್ದರು. ಹಿಜಾಬ್ ವಿಚಾರಕ್ಕೂ ಆ ಮಕ್ಕಳ ಪರೀಕ್ಷೆಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು. ಏಪ್ರಿಲ್ 26 ರಂದು, ಮತ್ತೊಂದು ಸಲ ಪ್ರಸ್ತಾಪವನ್ನು ಮುಂದಿಟ್ಟಿದ್ದರು. ಆ ಪ್ರಸ್ತಾಪಕ್ಕೆ ಉತ್ತರಿಸಿರುವ ಮುಖ್ಯ ನ್ಯಾಯಾಧೀಶರು ಈ ವಿಷಯವನ್ನು 2-3 ದಿನಗಳಲ್ಲಿ ಪಟ್ಟಿ ಮಾಡಲಾಗುವುದು ಎಂದು ವಕೀಲೆ ಮೀನಾಕ್ಷಿ ಅರೋರಾ ಅವರ ಪ್ರಸ್ತಾಪಕ್ಕೆ ಉತ್ತರಿಸಿದ್ದರು.


ಕರ್ನಾಟಕ ಹೈಕೋರ್ಟ್‌ ನೀಡಿದ ತೀರ್ಪಿನಲ್ಲಿ ಏನಿತ್ತು
ಕರ್ನಾಟಕ ಹೈಕೋರ್ಟ್ ಮಾರ್ಚ್ 15ರಂದು ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರ ಶಿರವಸ್ತ್ರ ನಿಷೇಧವನ್ನು ಎತ್ತಿಹಿಡಿದಿತ್ತು, ಕರ್ನಾಟಕ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿಯನ್ನು ನಂತರ ಸಲ್ಲಿಸಲಾಗಿತ್ತು.


ಅರ್ಜಿದಾರರು ಮತ್ತು ಇತರ ಮುಸ್ಲಿಂ ವಿದ್ಯಾರ್ಥಿನಿಯರು ತಮ್ಮ ಪ್ರಿ-ಯೂನಿವರ್ಸಿಟಿ ಕಾಲೇಜುಗಳಲ್ಲಿ ಹಿಜಾಬ್‌ ಧರಿಸುವುದನ್ನು ಪರಿಣಾಮಕಾರಿಯಾಗಿ ನಿಷೇಧಿಸಿದೆ. ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಮತ್ತು ನ್ಯಾಯಮೂರ್ತಿ ಜೆಎಂ ಖಾಜಿ ಅವರನ್ನೊಳಗೊಂಡ ಹೈಕೋರ್ಟ್‌ನ ನ್ಯಾಯ ಪೀಠವು ಮಹಿಳೆಯರು ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಅಗತ್ಯ ಧಾರ್ಮಿಕ ಆಚರಣೆಯಲ್ಲ ಎಂದು ಅಭಿಪ್ರಾಯಪಟ್ಟಿದೆ.


ಇದನ್ನೂ ಓದಿ:  Helava ಸಮುದಾಯದ ಮಕ್ಕಳನ್ನ ಶಾಲೆಗೆ ಕರೆ ತಂದ ಶಿಕ್ಷಕ; ಯಾರು ಈ ಹೆಳವರು? ಎಲ್ಲಿರ್ತಾರೆ?


ಶಿಕ್ಷಣ ಸಂಸ್ಥೆಗಳಲ್ಲಿ ಏಕರೂಪದ ಡ್ರೆಸ್ ಕೋಡ್ ಅನ್ನು ಸೂಚಿಸಿರುವುದು ಅರ್ಜಿದಾರರ ಮೂಲಭೂತ ಹಕ್ಕುಗಳ ಉಲ್ಲಂಘನೆಯಲ್ಲ ಎಂದು ಪೀಠವು ಅಭಿಪ್ರಾಯ ಪಟ್ಟಿತ್ತು. ಮುಸ್ಲಿಂ ವಿದ್ಯಾರ್ಥಿನಿಯರ ಮೂಲಭೂತ ಹಕ್ಕುಗಳಾದ ಶಿರವಸ್ತ್ರ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನಿಲುವೇನು ಎಂಬುವುದು ಮುಂದಿನ ವಾರ ಸ್ಪಷ್ಟವಾಗಲಿದೆ.

top videos
  First published: