• Home
  • »
  • News
  • »
  • state
  • »
  • CET ಪರೀಕ್ಷೆಗೆ ಹಿಜಾಬ್ ಧರಿಸಿ ಬಂದ್ರೆ ನೋ ಎಂಟ್ರಿ; ಎಕ್ಸಾಂ ಸೆಂಟರ್​ನಲ್ಲಿ ಜಾಮರ್ ಅಳವಡಿಕೆ

CET ಪರೀಕ್ಷೆಗೆ ಹಿಜಾಬ್ ಧರಿಸಿ ಬಂದ್ರೆ ನೋ ಎಂಟ್ರಿ; ಎಕ್ಸಾಂ ಸೆಂಟರ್​ನಲ್ಲಿ ಜಾಮರ್ ಅಳವಡಿಕೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿ ಮಾದರಿಯಲ್ಲೇ ಸಿಇಟಿ ಪರೀಕ್ಷೆ ನಡೆಸಲಾಗುವುದು. ಯಾವುದೇ ಧರ್ಮಸೂಚಕ ವಸ್ತ್ರ ಧರಿಸಿ ಬರುವಂತಿಲ್ಲ ಎಂದು ಪ್ರಾಧಿಕಾರ ಖಡಕ್ ಎಚ್ಚರಿಕೆ ನೀಡಿದೆ.

  • Share this:

ಬೆಂಗಳೂರು (ಜೂ.3): ರಾಜ್ಯದಲ್ಲಿ ಇತ್ತೀಚಿಗೆ ಪ್ರಶ್ನೆ ಪತ್ರಿಕೆ (Question Paper) ಸೋರಿಕೆ, ಪರೀಕ್ಷೆಯಲ್ಲಿ ಅಕ್ರಮ ವಿಷಯಗಳು ಭಾರೀ ಚರ್ಚೆಯಾಗುತ್ತಿದೆ. SSLC ಪರೀಕ್ಷೆಯಲ್ಲೂ (Exam) ಅಕ್ರಮ (Scam) ನಡೆದಿದೆ ಅನ್ನೋ ಕೂಗು ಕೇಳಿಬಂದಿತ್ತು. ಇನ್ನೇನು ಕೆಲ ದಿನಗಳಲ್ಲಿ ಪಿಯುಸಿ ಫಲಿತಾಂಶ ಕೂಡ ಪ್ರಕಟಗೊಳ್ಳಲಿದ್ದು, ಈ ನಡುವೆ ಜೂನ್​ 16, 17 ಹಾಗೂ 18ರಂದು ಸಿಇಟಿ ಪರೀಕ್ಷೆ (CET Exam) ನಡೆಯಲಿದ್ದು, ಭಾರೀ ಕಟುನಿಟ್ಟಾಗಿ ಪರೀಕ್ಷೆ ನಡೆಸಲು ಇಲಾಖೆ ಸೂಚನೆ ನೀಡಿದೆ. ಸಿಇಟಿಗೆ ಸಮವಸ್ತ್ರ (Uniform) ಪಾಲನೆಯ ಮಾರ್ಗಸೂಚಿ ಪ್ರಕಟಿಸಲಾಗಿದ್ದು, ಪರೀಕ್ಷೆ ಹಾಜರಾಗುವವರು ಹಿಜಾಬ್​ ಧರಿಸಿ ಕೊಠಡಿ ಪ್ರವೇಶಿಸುವಂತಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆದೇಶ ಹೊರಡಿಸಿದೆ.


ಧರ್ಮಸೂಚಕ ವಸ್ತ್ರ ಧರಿಸಿ ಬರುವಂತಿಲ್ಲ


ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿ ಮಾದರಿಯಲ್ಲೇ ಸಿಇಟಿ ಪರೀಕ್ಷೆ ನಡೆಸಲಾಗುವುದು. ಯಾವುದೇ ಧರ್ಮಸೂಚಕ ವಸ್ತ್ರ ಧರಿಸಿ ಬರುವಂತಿಲ್ಲ ಎಂದು ಪ್ರಾಧಿಕಾರ ಖಡಕ್ ಎಚ್ಚರಿಕೆ ನೀಡಿದೆ. ಜೂನ್​ 16, 17 ಮತ್ತು 18ರಂದು ನಡೆಯಲಿರುವ ಸಿಇಟಿಗೆ ಸಮವಸ್ತ್ರ ಪಾಲನೆಯ ಮಾರ್ಗಸೂಚಿ ಪ್ರಕಟಿಸಲಾಗಿದೆ. ಪಿಎಸ್‍ಐ ಹಾಗೂ ಸಹಾಯಕ ಪ್ರಾಧ್ಯಾಪಕ ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಸಿಇಟಿ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸಲು ತೀರ್ಮಾನಿಸಲಾಗಿದೆ.


ಪರೀಕ್ಷಾ ಪ್ರಾಧಿಕಾರದ ಖಡಕ್ ಎಚ್ಚರಿಕೆ


ವೃತ್ತಿಪರ ಕೋರ್ಸ್​ಗಳ ಪ್ರವೇಶಾತಿಗೆ ನಡೆಯುವ ಸಿಇಟಿ ಪರೀಕ್ಷೆಗೂ ಹಿಜಾಬ್‍ ಧರಿಸುವುದಕ್ಕೆ ನಿಷೇಧ ಹೇರಲಾಗಿದೆ. ಪರೀಕ್ಷಾ ಕೇಂದ್ರ ಪ್ರವೇಶಕ್ಕೂ ಮುನ್ನ ಹಿಜಾಬ್ ತೆಗೆದಿಡಬೇಕು. ಒಂದು ವೇಳೆ ಹಿಜಾಬ್ ಧರಿಸಿ ಬಂದರೆ ಭಾಗವಹಿಸಲು ಅವಕಾಶ ನೀಡುವುದಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.


ಇದನ್ನೂ ಓದಿ: Kalaburagi: ಗೂಡ್ಸ್ ವಾಹನಕ್ಕೆ ಡಿಕ್ಕಿಯಾಗಿ ಸೇತುವೆ ಮೇಲಿಂದ ಬಿದ್ದು ಹೊತ್ತಿ ಉರಿದ 30 ಪ್ರಯಾಣಿಕರಿದ್ದ ಬಸ್


ನೀಟ್ ಪರೀಕ್ಷೆ ಮಾದರಿಯಲ್ಲೇ ಸಿಇಟಿ ಪರೀಕ್ಷೆ


ನೀಟ್ ಪರೀಕ್ಷೆ ಮಾದರಿಯಲ್ಲೇ ಸಿಇಟಿ ನಡೆಸಲಾಗುವುದು. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಮಾಂಗಲ್ಯ ಸರ, ಮೂಗುತಿ, ಓಲೆ, ಸರ, ಬಳೆ ಸೇರಿದಂತೆ ಯಾವುದೇ ರೀತಿಯ ಆಭರಣ ಧರಿಸಿ ಬರುವಂತಿಲ್ಲ. ವಾಚ್, ಕ್ಯಾಲ್ಕುಲೇಟರ್ ಮತ್ತಿತರ ಎಲೆಕ್ಟ್ರಾನಿಕ್ ಉಪಕರಣಗಳನ್ನು ತರುವಂತಿಲ್ಲ. ಮಾತ್ರವಲ್ಲ ಇದೇ ಮೊದಲ ಬಾರಿಗೆ ಪರೀಕ್ಷಾ ಕೇಂದ್ರಗಳಲ್ಲಿ ಜಾಮರ್ ಹಾಗೂ ಮೆಟಲ್ ಡಿಟೆಕ್ಟರ್​​ಗಳನ್ನು ಅಳವಡಿಕೆ ಮಾಡಲಾಗುತ್ತಿದೆ.


ಪರೀಕ್ಷೆ ಬರೆಯಲಿದ್ದಾರೆ 2.11 ಲಕ್ಷ ವಿದ್ಯಾರ್ಥಿಗಳು


ಒಟ್ಟು 2.11 ಲಕ್ಷ ವಿದ್ಯಾರ್ಥಿಗಳು ಸಿಇಟಿಗೆ ನೋಂದಣಿ ಮಾಡಿಸಿದ್ದಾರೆ. ಇದರಲ್ಲಿ 1.4 ಲಕ್ಷ ಪುರುಷರು ಹಾಗೂ 1.7 ಲಕ್ಷ ಮಹಿಳಾ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ ಎಂದು ಪರೀಕ್ಷಾ ಪ್ರಾಧಿಕಾರದ ನಿರ್ದೇಶಕಿ ರಮ್ಯಾ ಮಾಹಿತಿ ನೀಡಿದ್ದಾರೆ.


ಯಾವುದೇ ಅಕ್ರಮ ನಡೆಯದಂತೆ ಬಿಗಿಭದ್ರತೆ


ಸಿಇಟಿಯಲ್ಲಿ ಯಾವುದೇ ಅಕ್ರಮ ನಡೆಯದಂತೆ ಹದ್ದಿನ ಕಣ್ಣಿಡಲಾಗಿದ್ದು, ಪರೀಕ್ಷಾ ಕೇಂದ್ರದ ಸುತ್ತ 144 ಸೆಕ್ಷನ್ ಜಾರಿ ಮಾಡಲಾಗಿದೆ. ಅದೇ ರೀತಿ ಪರೀಕ್ಷೆ ನಡೆಯುವ ದಿನಗಳಲ್ಲಿ ಸುತ್ತಮುತ್ತಲ ಜೆರಾಕ್ಸ್ ಅಂಗಡಿಗಳನ್ನು ತೆರೆಯದಂತೆ ಆದೇಶ ಹೊರಡಿಸಲಾಗಿದೆ ಎಂದು ಪರೀಕ್ಷಾ ಪ್ರಾಧಿಕಾರದ ನಿರ್ದೇಶಕಿ ರಮ್ಯಾ ವಿವರಿಸಿದ್ದಾರೆ.


ಜೂನ್‌ 4ನೇ ವಾರದಲ್ಲಿ 2nd PUC ರಿಸಲ್ಟ್​


ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸಿ. ನಾಗೇಶ್‌ ಟ್ವೀಟ್‌ ಮಾಡಿ ದ್ವಿತೀಯ ಪಿಯುಸಿ ಫಲಿತಾಂಶವನ್ನು ಜೂನ್‌ 3ನೇ ವಾರದಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದ್ದರು. ಆದರೆ ಈಗ ಈ ಫಲಿತಾಂಶವು ಜೂನ್‌ 4ನೇ ವಾರದಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.


ಇದನ್ನೂ ಓದಿ: Rajya Sabha Election: ನಾಮಪತ್ರ ಹಿಂಪಡೆಯೋ ಮಾತೇ ಇಲ್ಲ; ವಿ ವಿಲ್ ನಾಟ್ ವಿಥ್ ಡ್ರಾ ಎಂದ್ರು ಸಿದ್ದರಾಮಯ್ಯ

ಕಳೆದ ವರ್ಷ ಕೊರೊನಾದಿಂದ ದ್ವಿತೀಯ ಪಿಯುಸಿ ಫಲಿತಾಂಶ ಒಂದು ತಿಂಗಳು ತಡವಾಗಿತ್ತು. ಪ್ರತಿ ವರ್ಷ ಮಾರ್ಚ್‌ ಏಪ್ರಿಲ್‌ನಲ್ಲಿ ಪಿಯು ಪರೀಕ್ಷೆ ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಏಪ್ರಿಲ್‌, ಮೇ ತಿಂಗಳಲ್ಲಿ ಪರೀಕ್ಷೆ ನಡೆದಿವೆ. ಹಾಗಾಗಿ ಈ ಬಾರಿ ಪಿಯು ಫಲಿತಾಂಶ ಬೇಗ ನೀಡಲು ಮೌಲ್ಯಮಾಪನ ಕಾರ್ಯವನ್ನು ಬೇಗನೆ ಆರಂಭಿಸಲಾಗಿದೆ.

Published by:Pavana HS
First published: