• Home
  • »
  • News
  • »
  • state
  • »
  • Bharat Jodo Yatra: 5ನೇ ದಿನ ಸೋನಿಯಾ ಮೋಡಿ, ಡಿಕೆಶಿಗೆ ಶಾಕ್, ಸಿದ್ದರಾಮಯ್ಯ ಫುಲ್ ಖುಷ್!

Bharat Jodo Yatra: 5ನೇ ದಿನ ಸೋನಿಯಾ ಮೋಡಿ, ಡಿಕೆಶಿಗೆ ಶಾಕ್, ಸಿದ್ದರಾಮಯ್ಯ ಫುಲ್ ಖುಷ್!

ಕಾಂಗ್ರೆಸ್​ ನಾಯಕರು

ಕಾಂಗ್ರೆಸ್​ ನಾಯಕರು

ಕಾರ್ಯಕರ್ತರ ಹುಮ್ಮಸ್ಸು ನೋಡಿ ಪಾದಯಾತ್ರೆಯಲ್ಲಿ ಹೆಚ್ಚು ಸಮಯ ಭಾಗಿಯಾಗಿದ್ದರು. ಮೂರು ಬಾರಿ ಕಾರಿಂದ ಇಳಿದು ಸ್ವಲ್ಪ ಸ್ವಲ್ಪ ದೂರ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ ಸೋನಿಯಾ ಗಾಂಧಿ, ಭೋಜನ ವಿರಾಮದಲ್ಲಿ ಮಗನಿಗೆ ಶುಭಕೋರಿ ಮೈಸೂರಿನಿಂದ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿದ್ದಾರೆ.

  • Share this:

ಭಾರತ್‌ ಜೋಡೋ ಯಾತ್ರೆ (Bharat Jodo Yatra) ಹೆಸರಿನಲ್ಲಿ ಪಾದಯಾತ್ರೆ ಕೈಗೊಂಡಿರುವ ಪಾದಯಾತ್ರೆಯನ್ನು ಕರ್ನಾಟಕದಲ್ಲೂ ಮುಂದುವರಿಸಲಾಗಿದೆ. ಇಂದು (ಅ.06) ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ರಾಹುಲ್​ ಗಾಂಧಿ (Rahul Gandhi) ಪಾದಯಾತ್ರೆಗೆ ಸಾಥ್ ನೀಡಿದ್ದಾರೆ. ಇದೀಗ ದೆಹಲಿಗೆ ವಾಪಸ್ ಆಗಿದ್ದಾರೆ. 10 ನಿಮಿಷ ಎಂದು ಹೇಳಿ ಬಂದು ಅರ್ಧ ದಿನ ಪಾದಯಾತ್ರೆಯಲ್ಲಿ ಸೋನಿಯಾ ಗಾಂಧಿ (Sonia Gandhi) ಭಾಗಿಯಾಗಿದ್ದರು.


ರಾಹುಲ್​ಗೆ ಶುಭಕೋರಿ ಸೋನಿಯಾ ವಾಪಸ್​


ಕಾರ್ಯಕರ್ತರ ಹುಮ್ಮಸ್ಸು ನೋಡಿ ಪಾದಯಾತ್ರೆಯಲ್ಲಿ ಹೆಚ್ಚು ಸಮಯ ಭಾಗಿಯಾಗಿದ್ದರು. ಮೂರು ಬಾರಿ ಕಾರಿಂದ ಇಳಿದು ಸ್ವಲ್ಪ ಸ್ವಲ್ಪ ದೂರ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ ಸೋನಿಯಾ ಗಾಂಧಿ, ಭೋಜನ ವಿರಾಮದಲ್ಲಿ ಮಗನಿಗೆ ಶುಭಕೋರಿ ಮೈಸೂರಿನಿಂದ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿದ್ದಾರೆ.


ನನ್ನ ಶಕ್ತಿ ಜನರೇ ಎಂದ್ರು ರಾಹುಲ್ ಗಾಂಧಿ!


ಪಾದಯಾತ್ರೆ ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತಾಡಿದ ರಾಹುಲ್ ಗಾಂಧಿ, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ 3500 ಕಿಲೋ ಮೀಟರ್ ಪಾದಯಾತ್ರೆ ನಡೆಸೋದು ಅಷ್ಟೊಂದು ಸುಲಭದ ಮಾತಲ್ಲ, ಪಾದಯಾತ್ರೆ ಪ್ರಾರಂಭ ಮಾಡಿ ಸಂಜೆಯಾಗುವ ವೇಳೆಗೆ ನಮಗೆಲ್ಲಾ ಆಯಾಸ ಆಗಿರುತ್ತದೆ. ಆದರೆ ಈ ಪಾದಯಾತ್ರೆಯಲ್ಲಿ ಒಂದು ವಿಶೇಷತೆ ಕಂಡಿದ್ದೇನೆ.  ಪಾದಯಾತ್ರೆ ಮಾಡಬೇಕಾದ ಸಂದರ್ಭದಲ್ಲಿ ಸಂಜೆ ಆಗ್ತಿದ್ದಂತೆ ನಿಮ್ಮ ಬೆಂಬಲದಿಂದ ನನ್ನ ಶಕ್ತಿ ಹೆಚ್ಚಾಗಿ, ನಾನು ಮತ್ತಷ್ಟು ಚೈತನ್ಯ ದಿಂದ ವೇಗವಾಗಿ ನಡೆದುಕೊಂಡು ಬರ್ತಿದ್ದೇನೆ.


ನಿಮ್ಮೆಲ್ಲರಿಂದ ನನಗೆ ಮತ್ತಷ್ಟು ಶಕ್ತಿ ಹೆಚ್ಚಿದೆ


ಏನಪ್ಪಾ ಬೆಳಿಗ್ಗೆ ಮಾಡಿ ಸಂಜೆ ಮಾಡಿದ್ರು ಆಯಸ್ಸು ಆಗಲ್ಲ ಅಂತ ಯೋಚನೆ ಮಾಡಿದ್ದೇನೆ. ನಾನು ನನ್ನ ಶಕ್ತಿ ಬಳಸುತ್ತಿಲ್ಲ, ರಾಜ್ಯದಲ್ಲಿ ನಿಮ್ಮೆಲ್ಲರ ಶಕ್ತಿಯಿಂದ ನಾನು ನಡೀತ್ತಿದ್ದೇನೆ. ನನಗೆ ಸಂಜೆ ಆಗ್ತಾ ಸುಸ್ತು, ನಿಮ್ಮೆಲ್ಲರಿಂದ ನನಗೆ ಮತ್ತಷ್ಟು ಶಕ್ತಿ ಹೆಚ್ಚಾಗಿದೆ.


ಇದನ್ನೂ ಓದಿ: DK Shivakumar: ಡಿಕೆಶಿ ಮನವಿಯನ್ನು ತಿರಸ್ಕರಿಸಿ ಶಾಕ್ ಕೊಟ್ಟ ED


ಯಾವುದೇ ವಿಷ ಬೀಜ ಇರಬಾರದು


ನಮ್ಮೆಲ್ಲರ ಮಧ್ಯೆ ಯಾವುದೇ ವಿಷ ಬೀಜ ಇರಬಾರದು. ನಾವೆಲ್ಲರೂ ಒಂದೇ ಕುಟುಂಬದಂತೆ ಒಟ್ಟಾಗಿ ಇರಬೇಕು ಎಂಬುದು ನಮಗೆಲ್ಲರಿಗೂ ಗೊತ್ತಿದೆ. ಆದರೆ ಆ ಕುಟುಂಬದಲ್ಲಿ ಜಗಳ ಶುರುವಾದ್ರೆ ಅದು ಯಶಸ್ಸು ಆಗಲ್ಲ. ಅದೇ ರೀತಿ ದೇಶದಲ್ಲಿ ವಿಷ ಬೀಜದಿಂದ‌ ಜಗಳ ಆದರೆ ಯಾವುದೇ ಕಾರಣಕ್ಕೂ ಆ ದೇಶ ಯಶಸ್ಸು ಕಾಣಲ್ಲ. ದ್ವೇಷ ಹರಡುವ ಶಕ್ತಿಯನ್ನು ನಾವು ಎಂದಿಗೂ ಸಹಿಸೋದಿಲ್ಲ.


ಡಿಕೆ ಶಿವಕುಮಾರ್​ಗೆ ಇಡಿ ಶಾಕ್​


ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ (Bharat Jodo Yatra) ವೇಳೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar) ಸಂಕಷ್ಟ ಎದುರಾಗಿದೆ. ವಿಚಾರಣೆಗೆ ನಾಳೆಯೇ ಬರುವಂತೆ ಮತ್ತೆ ED ನೋಟಿಸ್ ಕೊಟ್ಟಿದೆ. 10 ನಿಮಿಷದ ಹಿಂದೆ ನನಗೆ ಮೇಲ್ ಮಾಡಿದ್ದಾರೆ. ನಾನು ನಮ್ಮ ವಕೀಲರ ಜೊತೆ ಮಾತನಾಡ್ತೇನೆ ಎಂದು ಡಿಕೆ ಶಿವಕುಮಾರ್​ ಹೇಳಿದ್ದಾರೆ. ಇಡಿ ವಿಚಾರಣೆಗೆಂದು ಡಿಕೆ ಬ್ರದರ್ಸ್​ ದೆಹಲಿಗೆ ತೆರಳಿದ್ದಾರೆ.


ಇದನ್ನೂ ಓದಿ: Population Control: ಕೋಳಿ ಕೇಳಿ ಮಸಾಲೆ ಅರೆಯಲ್ಲ, ಸಂಜಯ್ ಗಾಂಧಿ ಬ್ರಿಗೇಡ್​ ಮಾದರಿಯಲ್ಲೂ ಜಾರಿಗೆ ತರಲ್ಲ-ಸಿ ಟಿ ರವಿ


ಸಿದ್ದರಾಮಯ್ಯ ಬೆನ್ನು ತಟ್ಟಿದ ರಾಹುಲ್


ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಪಾದಯಾತ್ರೆಗೆ ಸಿದ್ದರಾಮಯ್ಯ ಕೂಡ ಸಾಥ್​ ನೀಡಿದ್ದಾರೆ. ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ ಹಾಗೂ ಸಿದ್ದರಾಮಯ್ಯ ಇಬ್ಬರು ಮಾತಾಡುತ್ತಲೇ ಕೆಲ ಕ್ಷಣ ರನ್ ಮಾಡಿದ್ರು. ರಾಹುಲ್​ಗೆ ಸಮನಾಗಿ ಸಿದ್ದರಾಮಯ್ಯ ಕೂಡ ಓಡಿದ್ದಾರೆ. ಇದಕ್ಕೆ ರಾಹುಲ್ ಗಾಂಧಿ ​ಅವರು ಸಿದ್ದು ಫಿಟ್ನೆಸ್​ ನೋಡಿ ಬೆನ್ನು ತಟ್ಟಿದ್ದಾರೆ. ರಾಜ್ಯದಲ್ಲಿ ಭಾರತ್​ ಜೋಡೋ ಯಾತ್ರೆಯ 5ನೇ ದಿನ ಮುಕ್ತಾಯಗೊಂಡಿದೆ. ನಾಗಮಂಗಲದಲ್ಲಿರುವ ಬ್ರಹ್ಮದೇವನಹಳ್ಳಿಯಲ್ಲೇ ರಾತ್ರಿ ರಾಹುಲ್ ಗಾಂಧಿ ವಾಸ್ತವ್ಯ ಹೂಡಲಿದ್ದಾರೆ.

Published by:ಪಾವನ ಎಚ್ ಎಸ್
First published: