ವಿಳಂಬವಾದ ಜನತಾ ದರ್ಶನ: ಕಣ್ಣೀರಿಟ್ಟ ಮಹಿಳೆ, ದಯಾಮರಣ ಕೋರಿದ ಮಂಡ್ಯ ರೈತ

news18
Updated:September 1, 2018, 5:53 PM IST
ವಿಳಂಬವಾದ ಜನತಾ ದರ್ಶನ: ಕಣ್ಣೀರಿಟ್ಟ ಮಹಿಳೆ, ದಯಾಮರಣ ಕೋರಿದ ಮಂಡ್ಯ ರೈತ
news18
Updated: September 1, 2018, 5:53 PM IST
ಜನಾರ್ದನಾ ಹೆಬ್ಬಾರ್​, ನ್ಯೂಸ್​ 18 ಕನ್ನಡ

ಬೆಂಗಳೂರು (ಸೆ.1): ಮೈತ್ರಿ ಸರ್ಕಾರ ನೂರು ದಿನಗಳನ್ನು ಪೂರೈಸಿದ ಸಂದರ್ಭದಲ್ಲಿಯೇ ಅಧಿಕೃತವಾಗಿ ಇಂದಿನಿಂದ ಜನತಾ ದರ್ಶನ ಆರಂಭಿಸಿದ ಸಿಎಂ ಎಚ್​ಡಿ ಕುಮಾರಸ್ವಾಮಿ ಮುಂದೆ ತಮ್ಮ ಅಳಲನ್ನು ಹೇಳಿಕೊಳ್ಳಲು ರಾಜ್ಯದ ನಾನಾ ಮೂಲೆಗಳಿಂದ ಜನಸಾಗರವೇ ಹರಿದುಬಂದಿತ್ತು.

ಸಮಸ್ಯೆ ಹೇಳಿಕೊಳ್ಳಲು ಬಂದ ಜನರಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ಗೃಹ ಕಚೇರಿ ಕೃಷ್ಣಾದಲ್ಲಿ ಪೆಂಡಾಲ್​, ಉಪಹಾರ, ಕುರ್ಚಿ ವ್ಯವಸ್ಥೆ ಜೊತೆಯಲ್ಲಿಯೇ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್​ ವ್ಯವಸ್ಥೆಯನ್ನು ಮಾಡಲಾಗಿತ್ತು.

11 ಗಂಟೆಗೆ ಆರಂಭವಾಗಬೇಕಿದ್ದ ಜನತಾ ದರ್ಶನ ಸಿಎಂ ಕುಮಾರಸ್ವಾಮಿ ಶ್ರಾವಣ ಪೂಜೆ ಹಿನ್ನಲೆಯಲ್ಲಿ ಮಧ್ಯಾಹ್ನ ಒಂದುಗಂಟೆಗೆ ಆರಂಭವಾಯಿತು, ಸಿಎಂಗಾಗಿ ಕಾದು ಕುಳಿತ ಜನ ತಡವಾದ ಹಿನ್ನಲೆ ಬೇಸರ ವ್ಯಕ್ತಪಡಿಸಿದರೂ ತಮ್ಮ ಸಮಸ್ಯೆ ಹೇಳಲು ಕಾಯಲೇ ಬೇಕಾದ ಅನಿವಾರ್ಯ ಎದುರಾಯಿತು.ಜನತಾದರ್ಶನದಲ್ಲಿ ಬಂದಿದ್ದ ಮಂಡ್ಯದ ಕೃಷ್ಣ ಎಂಬುವವರು ತಮಗೆ ದಯಾಮರಣ ಕಲ್ಪಿಸಬೇಕೇಂಬ ಮನವಿಯನ್ನು ಮಾಡಿದರು. ಕೃಷ್ಣ ಅವರಿಗೆ ಸೇರಿದ 4 ಎಕರೆ ಜಮೀನನ್ನು ವೈನ್ ಸ್ಟೋರ್ ಮಾಲೀಕ ಮಂಚಯ್ಯನ ಸುಳ್ಳು ದಾಖಲೆ ಸೃಷ್ಟಿಸಿ ಕಿತ್ತುಕೊಂಡಿದ್ದು, ಇದಕ್ಕೆ ಅಧಿಕಾರಿಗಳ ಕುಮ್ಮಕ್ಕಿದೆ. ಹೀಗಾಗಿ ಭೂಮಿಯಿಂದ ವಂಚಿತನಾದ ನನಗೆ ಜಮೀನು ಕೊಡಿಸಿ ಇಲ್ಲವೇ ದಯಾಮರಣಕ್ಕೆ ಅವಕಾಶ ಕೊಡಿ ಎಂದು ಮನವಿ ಮಾಡಿದರು. ಕೃಷ್ಣ ಅವರ ಸಮಸ್ಯೆ ಆಲಿಸಿದ ಸಿಎಂ ಮಂಡ್ಯ ಡಿಸಿಯಿಂದ ತನಿಖೆ ಮಾಡಿಸಿ ನ್ಯಾಯ ಕೊಡಿಸುವ ಭರವಸೆ  ನೀಡಿದರು.
Loading...

ಕೊಡಗಿನಲ್ಲಿ ಉಂಟಾದ ಪ್ರವಾಹಕ್ಕೆ ಸಹಾಯ ಮಾಡಲು ಹಲವರು ಸಿಎಂ ವಿಪತ್ತು ನಿಧಿಗೆ ಚೆಕ್​  ನೀಡಲು ಬಂದಿದ್ದರು. ಉದ್ಯಮಿ ಬಿ.ಆರ್.ಶೆಟ್ಟಿ ಚೆಕ್​ ಹಸ್ತಾಂತರಿಸಿದರು. ಶೃಂಗೇರಿ ಮಠದಿಂದ 11 ಲಕ್ಷ ರೂ. ನೆರವಿನ ಚೆಕ್​ ನೀಡಿದರು.

 

ತುಮಕೂರು ಜಿಲ್ಲೆಯ ಶಿರಾದ ನಾಗಮಣಿ‌  ಎಂಬ ಮಹಿಳೆ 3 ತಿಂಗಳ ಮಗುವಿವೊಂದಿಗೆ ಬಂದಿದ್ದರು.  ಹೆರಿಗೆ ಸಮಯದಲ್ಲಿ ಹೆಚ್ಚು ಸಾಲಮಾಡಿಕೊಂಡಿದ್ದು, ಸಾಲದ ಸುಳಿಯಲ್ಲಿದ್ದ ದಂಪತಿಯಿಂದ ಸಿಎಂ ಬಳಿ ಸಹಾಯಕ್ಕೆ ಮನವಿ ಮಾಡಿದರು. ಈ ವೇಳೆ ಮಹಿಳೆ ಮನವಿಗೆ ಸ್ಪಂದಿಸಿ ಸ್ಥಳದಲ್ಲೇ 2 ಲಕ್ಷ ರೂ. ಚೆಕ್ ನೀಡಿದರು. 

ಇನ್ನು ವಿಕಲ ಚೇತನರು ಹಾಗೂ ಹಿರಿಯ ನಾಗರಿಕರ ಅಹವಾಲು ಸ್ವೀಕರುತ್ತಿದ್ದಾಗ ಸಿಎಂ ಎದುರು  ಕುಬ್ಜ ಕಾಯದ ಮಹಿಳೆಯೊಬ್ಬರು ಕಣ್ಣೀರಿಟ್ಟರು. ತಾವು ಈ ರೀತಿಯಾಗಿರುವುದರಿಂದ ನಮ್ಮನ್ನು ತುಚ್ಚವಾಗಿ ಕಾಣುತ್ತಾರೆ, ಜೀವನಕ್ಕೆ ಏನಿಲ್ಲ. ಬದುಕಿಗೊಂದು ದಾರಿಮಾಡಿಕೊಡಿ ಎಂದರು.

ಮಾಗಡಿ ತಾಲೂಕಿನ ಕೋಡಿಗೆಹಳ್ಳಿ ಕಾಲೋನಿಯ ಸರಸ್ವತಿ ಎಂಬ ಮಹಿಳೆ ಬಳೆ ವ್ಯಾಪಾರಕ್ಕೆ ಸಹಾಯ ನೀಡುವ ಭರವಸೆ ನೀಡಿದರು.

ಜನತಾ ದರ್ಶನ ವಿಳಂಬ ಚಿತ್ರಸಾಹಿತಿ ಸಿ.ವಿ.ಶಿವಶಂಕರ್ ಮುನಿಸುಕೊಂಡು ಹೋದ ಘಟನೆ ಕೂಡ ನಡೆಯಿತು. ಕುಲವಧು ಚಿತ್ರ ಮರು ಬಿಡುಗಡೆಗೆ ನೆರವು ಕೇಳಿ ಬಂದಿದ್ದ ಶಿವಶಂಕರ್ ಮಧ್ಯಾಹ್ನ 1 ಗಂಟೆಯಾದರೂ ಜನತಾದರ್ಶನ ಆರಂಭವಾಗದ ಹಿನ್ನೆಲೆ ತಾಳ್ಮೆಗೆಟ್ಟು ಹೊರ ನಡೆದರು
First published:September 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...