ನಟ ಯಶ್​ ಬಾಡಿಗೆ ಮನೆ ಗಲಾಟೆ; ಹೈಕೋರ್ಟ್​ನಲ್ಲೂ ರಾಕಿಂಗ್​ಸ್ಟಾರ್​ಗೆ ಹಿನ್ನಡೆ

news18
Updated:September 6, 2018, 9:18 AM IST
ನಟ ಯಶ್​ ಬಾಡಿಗೆ ಮನೆ ಗಲಾಟೆ; ಹೈಕೋರ್ಟ್​ನಲ್ಲೂ ರಾಕಿಂಗ್​ಸ್ಟಾರ್​ಗೆ ಹಿನ್ನಡೆ
  • Advertorial
  • Last Updated: September 6, 2018, 9:18 AM IST
  • Share this:
ನ್ಯೂಸ್​18 ಕನ್ನಡ

ಬೆಂಗಳೂರು (ಸೆ. 6): ನಟ ರಾಕಿಂಗ್​ ಸ್ಟಾರ್​ ಯಶ್​ ಅವರ ಬಾಡಿಗೆಮನೆ ವಿಚಾರವಾಗಿ ಸಿಟಿ ಸಿವಿಲ್​ ಕೋರ್ಟ್​ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಯಶ್​ ಅವರ ತಾಯಿ ಪುಷ್ಪಾ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು. ಅಲ್ಲಿಯೂ ಅವರಿಗೆ ಹಿನ್ನಡೆಯಾಗಿದ್ದು, ಡಿಸೆಂಬರ್​ ಒಳಗೆ ಮನೆ ಖಾಲಿ ಮಾಡಬೇಕು ಎಂದು ಆದೇಶ ನೀಡಿದೆ.

ಪುಷ್ಪಾ ಅವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ಕುರಿತು ನಿನ್ನೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬೋಪಣ್ಣ ಮತ್ತು ಶ್ರೀನಿವಾಸ್​ ಹರೀಶ್​ಕುಮಾರ್​ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಸಿಟಿ ಸಿವಿಲ್​ ಕೋರ್ಟ್​ನ ಆದೇಶವನ್ನು ಎತ್ತಿಹಿಡಿದಿದೆ. ಡಿಸೆಂಬರ್​ ಒಳಗೆ ಮನೆಯ ಬಾಡಿಗೆ ಕಟ್ಟಿ ಅಥವಾ ಮನೆ ಖಾಲಿ ಮಾಡಿ ಎಂದು ಸೂಚಿಸಿದೆ.

ಏನಿದು ಪ್ರಕರಣ?

ಕತ್ರಿಗುಪ್ಪೆಯಲ್ಲಿರುವ ಮುನಿ ಪ್ರಸಾದ್​ ಹಾಗೂ ಡಾ. ವನಜಾ ಅವರಿಗೆ ಸೇರಿದ ಮನೆಯಲ್ಲಿ ಈ ಹಿಂದೆ ನಟ ಯಶ್​ ಅವರ ಕುಟುಂಬ ಬಾಡಿಗೆಗಿತ್ತು. ಆ ಮನೆಯಲ್ಲಿ ವಾಸವಾಗಿದ್ದಾಗ ನಟಿಸಿದ ಸಿನಿಮಾಗಳು ಸಾಕಷ್ಟು ಯಶಸ್ಸನ್ನು ತಂದುಕೊಟ್ಟಿದ್ದರಿಂದ ಅದನ್ನು ಅದೃಷ್ಟದ ಮನೆ ಎಂಬ ಕಾರಣಕ್ಕೆ ಸ್ವಂತ ಮನೆಗೆ ಹೋದಮೇಲೂ ಆ ಮನೆ ಖಾಲಿ ಮಾಡಲು ನಿರಾಕರಿಸಿದ್ದರು.

ಈ ಸಂಬಂಧ ಮನೆಯ ಬಾಡಿಗೆ ಕಟ್ಟದೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಮನೆ ಮಾಲೀಕರು ಗಿರಿನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಸಿಟಿ ಸಿವಿಲ್​ ಕೋರ್ಟ್​ ನಟ ಯಶ್​ ಅವರ ತಾಯಿ ಪುಷ್ಪಾ ಅವರಿಗೆ 3 ತಿಂಗಳೊಳಗೆ ಮನೆ ಖಾಲಿ ಮಾಡಬೇಕು ಮತ್ತು 9 ಲಕ್ಷ 60 ಸಾವಿರ ರೂ. ಬಾಡಿಗೆ ಪಾವತಿ ಮಾಡಬೇಕು ಎಂದು ಆದೇಶಿಸಿತ್ತು. ಆದರೆ, ಪುಷ್ಪಾ ಅವರು ಹೈಕೋರ್ಟ್​ ಮೆಟ್ಟಿಲೇರಿದ್ದರು.

ಇದೀಗ, ಯಶ್​ ತಾಯಿ ಪುಷ್ಪಾ ಅವರಿಗೆ ಬಾಕಿ ಉಳಿಸಿಕೊಂಡಿರುವ  23.27 ಲಕ್ಷ ರೂ. ಬಾಡಿಗೆ ಪಾವತಿಸುವಂತೆ ಸೂಚನೆ ನೀಡಿರುವ ಹೈಕೋರ್ಟ್ ತಕ್ಷಣ ಪಾವತಿ ಮಾಡಿದರೆ ಮುಂದಿನ ಮಾರ್ಚ್​ವರೆಗೆ ಮನೆ ಖಾಲಿ ಮಾಡದಿರಲು ಅವಕಾಶ ನೀಡಲಾಗುತ್ತದೆ. ಇಲ್ಲವಾದರೆ,​ ಡಿಸೆಂಬರ್​ ಒಳಗೆ ಬಾಡಿಗೆ ಕಟ್ಟದಿದ್ದರೆ ಮನೆ ಖಾಲಿ ಮಾಡುವಂತೆ ಆದೇಶಿಸಿದೆ.
First published:September 6, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ