ವಿಜಯಪುರ ಯುವಕನ ಸಾವು ಪ್ರಕರಣ: ಪೊಲೀಸರ ಹಲ್ಲೆಯಿಂದಲೇ ಸಾವನ್ನಪ್ಪಿದ ಸಾಗರ ಛಲವಾದಿ?

ಆದರೀಗ, ಯುವ ಬೈಕ್​​ನಲ್ಲಿ ತನ್ನ ಪಾಡಿಗೆ ತಾನು ಹೋಗುತ್ತಿದ್ದಾಗ ಪೊಲೀಸರೇ ಹಲ್ಲೆ ಮಾಡಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ. ಪೋಷಕರು ಕೂಡ ತನ್ನ ಮಗ ಕಾಪಿ ಚೀಟಿ ನೀಡಲು ಹೋಗಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ ಹೀಗಾಗಿ ಪೊಲೀಸರ ಹಲ್ಲೆಗೆ ಓರ್ವ ಅಮಾಯಕ ಯುವಕ ಬಲಿಯಾದನೇ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ವಿಜಯಪುರ(ಜೂ.27): ಎಸ್​ಎಸ್​ಎಲ್​​ಸಿ ವಿದ್ಯಾರ್ಥಿಗೆ ಕಾಪಿ ಚೀಟಿ ನೀಡಲು ಪರೀಕ್ಷಾ ಕೇಂದ್ರಕ್ಕೆ ಹೋದಾಗ ಯುವಕ ಸಾವನ್ನಪ್ಪಿದ್ದ ಎನ್ನಲಾದ ಪ್ರಕರಣ ತಿರುವು ಪಡೆದುಕೊಂಡಿದೆ. ಸದ್ಯ ಯುವಕ ಸಾಗರ ಛಲವಾದಿ ತನ್ನ ಪಾಡಿಗೆ ಬೈಕ್​​ನಲ್ಲಿ ಪರೀಕ್ಷಾ ಕೇಂದ್ರದ ಮುಂದೆ ಹೋಗುತ್ತಿದ್ದಾಗ ಪೊಲೀಸರೇ ಲಾಠಿಯಿಂದ ಹಲ್ಲೆ ನಡೆಸಿದ್ಧಾರೆ ಎಂದು ಪ್ರತ್ಯಕ್ಷದರ್ಶಿ ಶಿವಪ್ಪ ಎಂಬುವರು ಹೇಳಿಕೆ ನೀಡಿದ್ಧಾರೆ. ಜತೆಗೆ ಮೃತ ಯುವಕನ ಪೋಷಕರು ತನ್ನ ಮಗ ಈ ಕೆಲಸ ಮಾಡುವುದಿಲ್ಲ, ಕಾಪಿ ಚೀಟಿ ನೀಡಲು ಪರೀಕ್ಷಾ ಕೇಂದ್ರಕ್ಕೆ ಹೋಗಿರಲಿಲ್ಲ ಎಂದು ಹೇಳಿರುವುದು ಪೊಲೀಸರಿಂದಲೇ ಸಾಗರ ಛಲವಾದಿ ಸಾವನ್ನಪ್ಪಿರಬಹುದು ಎನ್ನುವುದಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.

  ಇನ್ನು, ಬೈಕ್ ಮೇಲೆ ಪರೀಕ್ಷಾ ಕೇಂದ್ರದ ಎದುರು ಮಠದ ಬಳಿ ಹೊರಟಿದ್ದೆವು. ನಾವೇನೂ ಕಾಪಿ ಕೊಡಲು ಹೊರಟಿರಲಿಲ್ಲ. ಈ ಸಂದರ್ಭದಲ್ಲಿ ಬೈಕ್ ತಡೆದ ಪೊಲೀಸ್ ಈ ಕಡೆ ಯಾಕೆ ಹೊರಟಿದ್ದೀರಿ ಎಂದು ಪ್ರಶ್ನಿಸಿದ. ಆಗ ನಾನು ಈ ಯುವಕನಿಗೆ ಹುಷಾರಿಲ್ಲ ಹೊರಟಿದ್ದೇವೆ ಅಂತ ಹೇಳಿದೆ. ಈ ಕಡೆ ಯಾಕೆ ಹೊರಟಿದ್ದೀರಿ ಎಂದು ಪೊಲೀಸ್ ಪ್ರಶ್ನಿಸಿ ಬೈಕಿನ ಹೆಡಲೈಟ್​ಗೆ ಹೊಡೆದ. ಆಯ್ತು ಸರಿ ಅಂತ ವಾಪಸ್ ಬೈಕ್ ಟರ್ನ್ ಮಾಡುವಾಗ ಮತ್ತೆ ಪೊಲೀಸ್​​ ಯುವಕನ ಬೆನ್ನಿಗೆ ಲಾಠಿಯಿಂದ ಹೊಡೆದ. ಬೈಕಿನಿಂದ ಕೆಳಗೆ ಬಿದ್ದೆವು. ತಕ್ಷಣ ಯುವಕನನ್ನು ಮೊದಲು ಹೂವಿನ ಹಿಪ್ಪರಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದೆವು. ಅಲ್ಲಿನ ವೈದ್ಯರು ತಾಲೂಕಾಸ್ಪತ್ರೆಗೆ ಕರೆದುಕೊಂಡು ಹೋಗಲು ಹೇಳಿದರು. ಬಸವನ ಬಾಗೇವಾಡಿ ತಾಲೂಕಾಸ್ಪತ್ರೆಗೆ ತಂದ ಬಳಿಕ ಯುವಕ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದರು ಎಂದು ಪ್ರತ್ಯಕ್ಷದರ್ಶಿ ಶಿವಪ್ಪ ಹೇಳಿದ್ದಾರೆ.

  ಯುವಕ ಸಾಗರ ಛಲವಾದಿ ಮೃತದೇಹವನ್ನು ಬಸವನ ಬಾಗೇವಾಡಿ ತಾಲೂಕು ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ವಿಜಯಪುರ ಎಸ್​ಪಿ ಅನುಪಮ ಅಗ್ರವಾಲ್​​ ಆಸ್ಪತ್ರೆಗೆ ಭೇಟಿ ನೀಡಿ ಮೃತ ಯುವಕನ ಸಂಭಂದಿಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಅಸಲಿ ಸತ್ಯ ಬೆಳಕಿಗೆ ಬಂದಿದೆ.

  ಇಂದು ಮಧ್ಯಾಹ್ನ ಎಸ್​ಎಸ್​ಎಲ್​​ಸಿ ವಿದ್ಯಾರ್ಥಿಯೋರ್ವನಿಗೆ ಕಾಪಿ ಚೀಟಿ ನೀಡಲು ಪರೀಕ್ಷಾ ಕೇಂದ್ರ ಹೋಗಿದ್ದ ಯುವಕನೋರ್ವ ಸಾವನ್ನಪ್ಪಿದ ಎಂದು ಹೇಲಾಗಿತ್ತು. ಕಾಪಿ ಚೀಟಿ ನೀಡಲು ಹೋಗಿದ್ದ ಈ ಯವಕನ ಮೇಲೆ ಪೊಲೀಸರು ಲಾಠಿ ಬೀಸಿದ್ದಾರೆ. ಆಗ ದಿಢೀರ್​​ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ ಎಂಬ ಆರೋಪ ಕೇಳಿ ಬಂದಿತ್ತು.

  ಇದನ್ನೂ ಓದಿ: ವಿಜಯಪುರ: SSLC ವಿದ್ಯಾರ್ಥಿಗೆ ಕಾಪಿ ಚೀಟಿ ನೀಡಲು ಪರೀಕ್ಷಾ ಕೇಂದ್ರಕ್ಕೆ ಹೋಗಿದ್ದ ಯುವಕ ಸಾವು

  ಇನ್ನು, ವಿಜಯಪುರದ ಬಸವನ ಬಾಗೇವಾಡಿ ತಾಲೂಕಿನ ಹೂವಿನ ಹಿಪ್ಪರಗಿಯಲ್ಲಿರುವ ವಿಶ್ವಚೇತನ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಗಣಿತ ಎಕ್ಸಾಂ ಬರೆಯುತ್ತಿದ್ದ ವಿದ್ಯಾರ್ಥಿಗೆ ಕಾಪಿ ಚೀಟಿ ನೀಡಲು ಯುವಕ ಹೋಗಿದ್ದ. ಈ ವೇಳೆ ಯುವಕನ ಹಿಡಿಯಲು ಬೆನ್ನತ್ತಿದ್ದ ಪೊಲೀಸರು ಲಾಠಿ ಏಟು ಬೀಸಿದ್ಧಾರೆ. ಈ ವೇಳೆ ಯುವಕನ ಪ್ರಾಣ ಹೋಗಿದೆ ಎಂದು ಹೇಳಲಾಗಿತ್ತು.

  ಆದರೀಗ, ಯುವ ಬೈಕ್​​ನಲ್ಲಿ ತನ್ನ ಪಾಡಿಗೆ ತಾನು ಹೋಗುತ್ತಿದ್ದಾಗ ಪೊಲೀಸರೇ ಹಲ್ಲೆ ಮಾಡಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ. ಪೋಷಕರು ಕೂಡ ತನ್ನ ಮಗ ಕಾಪಿ ಚೀಟಿ ನೀಡಲು ಹೋಗಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ ಹೀಗಾಗಿ ಪೊಲೀಸರ ಹಲ್ಲೆಗೆ ಓರ್ವ ಅಮಾಯಕ ಯುವಕ ಬಲಿಯಾದನೇ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
  First published: